ರೊಮ್ಯಾಂಟಿಕ್ ಮೂಡ್‌ನಲ್ಲಿ ಸತ್ಯಾ; ಕಾರ್ತಿಕ್‌ಗೆ ಸಿಹಿ ಮುತ್ತು!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್‌ಗೆ ರೊಮ್ಯಾನ್ಸ್ ಮಾಡುವುದಕ್ಕೇ ಬರುವುದಿಲ್ಲ. ದಿವ್ಯಾಕ್ಕ ಹೇಳಿದಂತೆ ನನ್ನ ಗಂಡ ವೇಸ್ಟ್ ಎಂದು ಸತ್ಯ ರೇಗಿಸುತ್ತಿರುತ್ತಾಳೆ. ಬೇಕಂತಲೇ ಕಾರ್ತಿಕ್‌ನನ್ನು ಕೆಣಕಲು ಸತ್ಯ ಪ್ರಯತ್ನಿಸುತ್ತಿರುತ್ತಾಳೆ.

ಆದರೆ ಕಾರ್ತಿಕ್ ನಾನು ತುಂಬಾ ರೊಮ್ಯಾಂಟಿಕ್ ಮನುಷ್ಯ. ಬಾಲನ ಥರ ಪ್ರೀತಿಗಾಗಿ ಸುಳ್ಳು ಹೇಳೋದಿಲ್ಲ ಎನ್ನುತ್ತಾನೆ. ಇದಕ್ಕೂ ಸತ್ಯ ಸುಳ್ಳು ಹೇಳಿಯಾದರೂ ಅಕ್ಕನನ್ನು ನಂಬಿಸಿದ್ದಾನಲ್ಲ. ಅವನು ಅಷ್ಟು ಪ್ರೀತಿಸುತ್ತಾನೆ ಎಂದು ಕೌಂಟರ್ ಕೊಡುತ್ತಾಳೆ.

ಇತ್ತ ಮನೆಯಲ್ಲಿ ಮಲಗಲು ಸಪರೇಟ್ ಬೆಡ್ ರೂಮ್ ಬೇಕು ಎಂದು ದಿವ್ಯಾ ಜಗಳವಾಡುತ್ತಿರುತ್ತಾಳೆ. ಜಾನಕಿ ಅಂತೂ ದಿವ್ಯಾಗೆ ಬೈಯುತ್ತಿರುತ್ತಾಳೆ. ಇದೇ ವೇಳೆಗೆ ದಿವ್ಯಾ ದೊಡ್ಡಪ್ಪ ಎಂಟ್ರಿ ಕೊಟ್ಟಿದ್ದಾನೆ. ಬಾಲನನ್ನು ಎಲ್ಲೋ ನೋಡಿದ ಹಾಗೆ ಮಾತನಾಡುತ್ತಿದ್ದಾನೆ.

ಕೊನೆಗೂ ರೂಮ್ ದಕ್ಕಿಸಿಕೊಂಡ ಜೋಡಿ

ಕೊನೆಗೂ ರೂಮ್ ದಕ್ಕಿಸಿಕೊಂಡ ಜೋಡಿ

ಆದರೆ ಬಾಲ ದಿವ್ಯಾ ದೊಡ್ಡಪ್ಪನ ಕಾಲಿಗೆ ಬಿದ್ದು, ಅವನನ್ನು ಮಂಗ ಮಾಡಿದ್ದಾನೆ. ನಾನು ಕೋಟ್ಯಾಧೀಶ್ವರ. ಪ್ರೀತಿಸಿ ದಿವ್ಯಾಳನ್ನು ಮದುವೆಯಾಗಿದ್ದು ಎಂದೆಲ್ಲಾ ಕೊಚ್ಚಿಕೊಳ್ಳುತ್ತಿದ್ದಾನೆ. ದಿವ್ಯಾ ದೊಡ್ಡಪ್ಪ ಮೊದಮೊದಲು ಬಾಲನ ಮಾತನ್ನು ನಂಬುವುದೇ ಇಲ್ಲ. ಆದರೆ ದಿವ್ಯಾ ಕೂಡ ಬಾಲನ ಜೊತೆ ಸೇರಿ ಸುಳ್ಳು ಹೇಳುತ್ತಾಳೆ. ನನ್ನ ಗಂಡನನ್ನು ಹೀಯಾಳಿಸಬೇಡಿ. ಅವರು ಶ್ರೀಮಂತರು. ಆದರೂ ಕೂಡ ಸಿಂಪಲ್ ಆಗಿ ಬದುಕಲು ಬಯಸುತ್ತಾರೆ. ತಮ್ಮ ಕಾರನ್ನು ರಾಜಹುಲಿ ಏರಿಯಾ ಎಂಟ್ರೆನ್ಸ್ ನಲ್ಲೇ ನಿಲ್ಲಿಸಿದ್ದೀವಿ ಎಂದು ಬೊಗಳೆ ಬಿಡುತ್ತಾಳೆ. ಆಗ ನಂಬುವ ಅವರ ದೊಡ್ಡಪ್ಪ ಅವರ ರೂಮಿನ ಕೀ ಅನ್ನು ದಿವ್ಯಾಗೆ ಕೊಡುತ್ತಾನೆ.

ಸತ್ಯ ಮನೆಗೆ ಹೋಗಲು ಒಪ್ಪಿದ ಸೀತಾ

ಸತ್ಯ ಮನೆಗೆ ಹೋಗಲು ಒಪ್ಪಿದ ಸೀತಾ

ರಿತುಗೆ ರಾಕೇಶ್ ಮೇಲೆ ಲವ್ ಆಗಿದೆ. ಹೇಗಾದರೂ ಮಾಡಿ ರಾಕೇಶ್ ನನ್ನು ಮದುವೆಯಾಗಬೇಕು ಎಂದು ಯೋಚಿಸುತ್ತಿದ್ದಾಳೆ. ಆದರೆ ರಾಕೇಶ್‌ಗೆ ಹತ್ತಿರವಾಗುವ ಸಲುವಾಗಿ ಸಾಕಷ್ಟು ಪ್ರಯತ್ನಗಳನ್ನೂ ಪಡುತ್ತಿರುತ್ತಾಳೆ. ಸತ್ಯ ಅವರ ಮನೆಗೆ ಹೋಗುವಾಗಲೇ ನಾನು ಬರುತ್ತೀನಿ ಎಂದಿದ್ದಳು. ಆದರೆ ಅವಕಾಶವಾಗಿರಲಿಲ್ಲ. ಇದೀಗ ಊರ್ಮಿಳಾ ಬಳಿ ಸತ್ಯ ಮನೆಗೆ ಹೋಗಲು ಪರ್ಮಿಶನ್ ಕೇಳುತ್ತಿದ್ದಾಳೆ. ಇದೇ ವೇಳೆಗೆ ಬಂದ ಸೀತಾ, ರಿತು ಜೊತೆಗೆ ಮಾತನಾಡಿ ಕೊನೆಗೆ ಸತ್ಯ ಮನೆಗೆ ಹೋಗಲು ಒಪ್ಪಿಕೊಳ್ಳುತ್ತಾಳೆ. ಇದರಿಂದ ರಿತು ಫುಲ್ ಖುಷ್ ಆಗುತ್ತಾಳೆ.

ದೊಡ್ಡ ಪ್ಲಾನ್ ಮಾಡಿರುವ ಕೀರ್ತನಾ

ದೊಡ್ಡ ಪ್ಲಾನ್ ಮಾಡಿರುವ ಕೀರ್ತನಾ

ಇನ್ನು ಕೀರ್ತನಾ ಮೆಡಿಟೇಶನ್ ಮಾಡುತ್ತಿರುತ್ತಾಳೆ. ಇದನ್ನು ನೋಡಿದ ಸುಹಾಸ್ ಹೆದರಿಕೊಳ್ಳುತ್ತಾನೆ. ಯಾಕೆ ಎಂದು ಕೇಳಿದ್ದಕ್ಕೆ, ನನಗೀಗ ತಾಳ್ಮೆ ಬೇಕು, ವುಮೆನ್ ವೆಲ್ ಫೇರ್ ಅಸೋಸಿಯೇಶನ್‌ನಿಂದ ಮಹತಿ ಬರುತ್ತಿದ್ದಾಳೆ, ಅವಳು ಅಮ್ಮನ ಬಳಿ ತನ್ನ ಗೋಳು ಹೇಳಿಕೊಳ್ಳುತ್ತಾಳೆ, ಆಗ ಸತ್ಯಗೆ ಗ್ರಹಚಾರ ಎಂದೆಲ್ಲಾ ಹೇಳುತ್ತಾಳೆ. ಇದು ಸುಹಾಸ್ ಗೆ ಅಷ್ಟಾಗಿ ಅರ್ಥವಾಗುವುದಿಲ್ಲ. ಆದರೆ ಕೀರ್ತನಾ ಸೀತಾ ವಿರುದ್ಧ ಯಾವುದೋ ದೊಡ್ಡ ಪ್ಲಾನ್ ಅನ್ನೇ ಮಾಡಿದ್ದಾಳೆ. ಅದು ಏನು ಎಂಬುದು ಇನ್ನು ಎಲ್ಲೂ ಹೇಳಿಲ್ಲ. ಇದರಿಂದ ಸತ್ಯ ಮೇಲೆ ಪರಿಣಾಮ ಬೀಳುವುದಂತೂ ಪಕ್ಕಾ ಆಗಿದೆ.

ರೊಮ್ಯಾಂಟಿಕ್ ಮೂಡ್‌ನಲ್ಲಿ ಸತ್ಯ

ರೊಮ್ಯಾಂಟಿಕ್ ಮೂಡ್‌ನಲ್ಲಿ ಸತ್ಯ

ಇನ್ನು ಕಾರ್ತಿಕ್ ಮಲಗಿರುತ್ತಾನೆ. ಈ ವೇಳೆ ಸತ್ಯ ಕಾರ್ತಿಕ್ ನನ್ನು ನೋಡಿ ಸ್ವಲ್ಪ ರೊಮ್ಯಾಂಟಿಕ್ ಆಗುತ್ತಾಳೆ. ಹಾಗಾಗಿ ತನ್ನ ಪಾಡಿಗೆ ತಾನು ಮಾತನಾಡುತ್ತಿರುತ್ತಾಳೆ. ಹಾಗೆ ಮಾತನಾಡುತ್ತಾ ಸತ್ಯ ಕಾರ್ತಿಕ್ ಹಣೆಗೆ ಮುತ್ತು ಕೊಡುತ್ತಾಳೆ. ತನ್ನ ಪ್ರೀತಿ ಬಗ್ಗೆ ಮಾತನಾಡಿಕೊಳ್ಳುತ್ತಾಳೆ. ವಾಪಸ್ ಹೋಗುವಾಗ ಅವಳ ಸೀರೆಯ ಸೆರಗು ಸಿಕ್ಕಿ ಹಾಕಿಕೊಂಡಿರುತ್ತದೆ. ಅದು ಕಾರ್ತಿಕ್ ಹಿಡಿದಿದ್ದಾನೆ ಎಂದು ನಂಬುವ ಸತ್ಯಗೆ ಮುಂದಿನ ಸಂಚಿಕೆಯಲ್ಲಿ ಶಾಕ್ ಆಗುತ್ತದೆ. ಇನ್ನು ಕೀರ್ತನಾ ಪ್ಲಾನ್ ನಿಂದ ಏನೇನು ಅವಾಂತರವಾಗುತ್ತದೋ ಗೊತ್ತಿಲ್ಲ.

More from Filmibeat

English summary
Divya tries to convince her uncle and takes room key and Keerthana planned new thing against sathya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X