Sathya: ಸತ್ಯಗೆ ವಿಶ್ ಮಾಡಿದ ರಾಯರು: ಕೋಪಗೊಂಡ ಸೀತಾ

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ರಿತು ,ರಾಕೇಶ್‌ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ. ರಿತು ನಡವಳಿಕೆಯಿಂದ ಬೇಸತ್ತ ರಾಕಿ ಏನೇನೋ ಬೈದ ಎಂದು ಮನಸ್ಸಿಗೆ ಹಾಕಿಕೊಂಡಿದ್ದಾಳೆ.

ಹಣ ಸಂಪಾದಿಸಬೇಕು, ಜೀವನದಲ್ಲಿ ಅನುಭವ ಬೇಕು ಎಂದು ರಿತು ಸೇಲ್ಸ್ ಗರ್ಲ್ ಆಗಿ ಕೆಲಸವನ್ನು ಮಾಡುತ್ತಿದ್ದಾಳೆ. ಇದರಿಂದ ಬೇಸರಗೊಂಡ ರಾಕಿ, ರಿತುಗೆ ಮತ್ತೆ ಬುದ್ಧಿ ಹೇಳಿದ್ದಾನೆ.

ಆದರೆ, ಇದ್ಯಾವುದನ್ನೂ ಒಪ್ಪದ ರಿತು, ರಾಕಿ ಪ್ರೀತಿಗಾಗಿ ಏನೇನೋ ಸರ್ಕಸ್ ಮಾಡುತ್ತಿದ್ದಾಳೆ. ಇಬ್ಬರೂ ಯಾವಾಗಲು ಕಿತ್ತಾಡಿಕೊಳ್ಳುತ್ತಿರುತ್ತಾರೆ. ರಾಕಿಗೆ ರಿತು ಬಳಿ ಏನನ್ನೂ ಹೇಳಲಾಗದೇ ಒದ್ದಾಡುತ್ತಿದ್ದಾನೆ.

ಮಜಾ ತೆಗೆದುಕೊಳ್ಳುತ್ತಿರುವ ಕಾರ್ತಿಕ್

ಮಜಾ ತೆಗೆದುಕೊಳ್ಳುತ್ತಿರುವ ಕಾರ್ತಿಕ್

ಇತ್ತ ಕೀರ್ತನಾ ಮನೆಗೆ ಬಂದು ಕಾರ್ತಿಕ್ ಮೇಲೆ ಹಾರಾಡುತ್ತಿದ್ದಾಳೆ. ಕಾರ್ತಿಕ್ ನಮ್ಮ ಕಂಪನಿಗೆ ಮೋಸ ಮಾಡಿದ ಎಂದು ಮನೆಯಲ್ಲಿ ದೂರು ಹೇಳುತ್ತಾಳೆ. ಆದರೆ, ಕಾರ್ತಿಕ್ ಪ್ರಾಜೆಕ್ಟ್ ಸೆಲೆಕ್ಟ್ ಆಗಿರುವುದಕ್ಕೆ ಖುಷಿ ಪಡುತ್ತಾರೆ. ನಮ್ಮ ಕಾರ್ತಿಕ್ ಪ್ರಾಜೆಕ್ಟ್ ಸೆಲೆಕ್ಟ್ ಆಯ್ತಲ್ಲ. ನೀನ್ಯಾಕೆ ಕೂಗಾಡುತ್ತಿದ್ದೀಯಾ ಎಂದು ಕೇಳುತ್ತಾರೆ. ಅದಕ್ಕೆ ಕೀರ್ತನಾ, ಕಾರ್ತಿಕ್ ಮಾಡಿದ್ದು ಮೋಸ. ಅವನ್ಯಾಕೆ ಸಪರೇಟ್ ಆಗಿ ಪ್ರಾಜೆಕ್ಟ್ ಕಳಿಸಬೇಕಿತ್ತು ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ, ಮನೆಯವರೆಲ್ಲಾ ಕಾರ್ತಿಕ್ ಅನ್ನು ಹೊಗಳುತ್ತಾರೆ. ಕಾರ್ತಿಕ್, ಕೀರ್ತನಾಳನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿರುತ್ತಾನೆ.

ಸತ್ಯಗೆ ಡಬಲ್ ವಿಶ್ ಮಾಡಿದ ಮಾವ

ಸತ್ಯಗೆ ಡಬಲ್ ವಿಶ್ ಮಾಡಿದ ಮಾವ

ರಾಮಚಂದ್ರ ರಾಯರು, ಕೀರ್ತನಾಗೆ ಬುದ್ಧಿ ಹೇಳುತ್ತಾರೆ. ನಾವು ನಮ್ಮ ಮನೆ ಮಗನ ಟ್ಯಾಲೆಂಟ್ ಅನ್ನು ಗುರುತಿಸಲಿಲ್ಲ. ಅದಕ್ಕೆ ಅವನು ಸಪರೇಟ್ ಆಗಿ ಪ್ರಾಜೆಕ್ಟ್ ಕಳಿಸಿದ್ದಾನೆ. ಅದು ಸೆಲೆಕ್ಟ್ ಆಗಿರುವುದಕ್ಕೆ ಖುಷಿ ಪಡಬೇಕು ಎಂದು ಬುದ್ಧಿ ಹೇಳುತ್ತಾರೆ. ಬಳಿಕ ಕಾರ್ತಿಕ್‌ಗೆ ವಿಶ್ ಮಾಡುತ್ತಾರೆ. ಆಗ ಕಾರ್ತಿಕ್ ಇದೆಲ್ಲಾ ಸತ್ಯ ಮಾಡಿದ್ದು, ಸತ್ಯ ಇರದಿದ್ದರೆ, ನಾನು ಇವತ್ತು ಈ ಪ್ರಾಜೆಕ್ಟ್ ಅಲ್ಲಿ ಗೆಲ್ಲಲು ಆಗುತ್ತಿರಲಿಲ್ಲ ಎಂದು ಹೇಳುತ್ತಾನೆ. ಆಗ ರಾಮಚಂದ್ರರಾಯರು ಸತ್ಯಗೆ ಡಬಲ್ ವಿಶ್ ಮಾಡುತ್ತಾನೆ. ನಿಮ್ಮ ಪ್ರಾಜೆಕ್ಟ್ ಸೆಲೆಕ್ಟ್ ಆಗಲಿ ಎಂದು ಹೇಳುತ್ತಾರೆ.

ದಿವ್ಯಾಗೆ ಹತಾಶೆ ಆಗಿದೆಯಂತೆ

ದಿವ್ಯಾಗೆ ಹತಾಶೆ ಆಗಿದೆಯಂತೆ

ದಿವ್ಯಾ ಸೀದಾ ಬಾಲನ ಬಳಿ ಹೋಗುತ್ತಾಳೆ. ಬಾಲನ ಕೈ ಹಿಡಿದು ಸಮಾಧಾನ ಮಾಡುತ್ತಾಳೆ. ಬಾಲ ಕೂಡ ಇದನ್ನೇ ಬಯಸಿದ್ದು. ದಿವ್ಯಾ ಜೊತೆಗೆ ಪ್ರೀತಿಯಿಂದ ಮಾತನಾಡುತ್ತಾನೆ. ಬಾಲ,ದಿವ್ಯಾಳನ್ನು ಯಾಕೆ ನನ್ನ ಬಿಟ್ಟು ಹೋಗುವ ನಿರ್ಧಾರ ಮಾಡಿದೆ ಎಂದು ಕೇಳುತ್ತಾನೆ. ಇದಕ್ಕೆ ದಿವ್ಯಾ ಹತಾಶೆ, ಸ್ಟ್ರೆಸ್ ಎಂದು ಕಾರಣ ಕೊಡುತ್ತಾಳೆ. ಬಾಲ ಹಾಗೂ ದಿವ್ಯಾ ಇಬ್ಬರೂ ಈಗ ಒಂದಾಗಿದ್ದಾರೆ. ಬಾಲ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾನೆ.

ಸತ್ಯ ಮೇಲೆ ಮತ್ತೆ ಸೀತಾಗೆ ಕೋಪ

ಸತ್ಯ ಮೇಲೆ ಮತ್ತೆ ಸೀತಾಗೆ ಕೋಪ

ಅದು ಹೇಗೆ ಸತ್ಯ ಈ ಕೆಲಸ ಮಾಳು ಎಂದು ಸೀತಾ ಪ್ರಶ್ನಿಸುತ್ತಾಳೆ. ಅವಳು ಗ್ಯಾರೇಜ್‌ನಲ್ಲಿ ಕೆಲಸ ಮಾಡಿದ ಕಾರಣ ಆಟೋಮೋಬೈಲ್ಸ್ ಬಗ್ಗೆ ಮಾಹಿತಿ ಇತ್ತು. ಹಾಗಾಗಿ ಈ ಪ್ರಾಜೆಕ್ಟ್ ಮಾಡಲು ಸಿದ್ಧ ಮಾಡಿಕೊಟ್ಟಳು ಎಂದು ಕಾರ್ತಿಕ್ ಹೇಳುತ್ತಾನೆ. ಈ ಮಾತನ್ನು ನಂಬದ ಸೀತಾ, ರಾಮಚಂದ್ರ ರಾಯರ ಬಳಿ ಮಾತನಾಡುತ್ತಾಳೆ. ಇಬ್ಬರೇ ಇರುವಾಗ ನೀವು ಸದಾ ಸತ್ಯಳನ್ನ ಸಪೋರ್ಟ್ ಮಾಡುತ್ತೀರಾ..? ಅವಳು ಮಾಡಿದ್ದು ಸರಿನಾ ಎಂದು ಪ್ರಶ್ನೆ ಮಾಡುತ್ತಾಳೆ. ಸೀತಾ ಮನದಲ್ಲಿ ಸತ್ಯಳಿಂದ ಮನೆ ಒಡೆಯುತ್ತಿದೆ. ಅಕ್ಕ ತಮ್ಮನ ನಡುವೆ ವೈಮನಸ್ಸು ಉಂಟಾಗುತ್ತಿದೆ ಎಂಬ ನೆಗೆಟಿವ್ ಯೋಚನೆಗಳೇ ತುಂಬಿಕೊಂಡಿವೆ. ಈಗ ಈ ಪ್ರಾಜೆಕ್ಟ್ ವಿಚಾರಕ್ಕೂ ಸೀತಾ, ಸತ್ಯಗೆ ಬೈಯುತ್ತಾಳಾ ಕಾದು ನೋಡಬೇಕಿದೆ.

More from Filmibeat

English summary
Sathya Serial 27th February Episode Written Update. karthik says that sathya helped for project, rayaru feels happy but seethe gets angry. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X