Sathya Serial: ಚಿಕ್ಕ ಮಾವನ ಮೇಲೆ ಸತ್ಯಗೆ ಹೆಚ್ಚಿದ ಕಾಳಜಿ: ಕೋಪ ಮಾಡಿಕೊಂಡ ಲಕ್ಷ್ಮಣ

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಅತ್ತೆ ಸೊಸೆ ಇಬ್ಬರೂ ಜೊತೆಯಾಗಿ ಜಾನಕಿ ಮನೆಗೆ ಬಂದಿದ್ದಾರೆ. ಸತ್ಯಳನ್ನು ನೋಡಿದ ಗಿರಿಜಮ್ಮ ಹಾಗೂ ಜಾನಕಿಗೆ ಬಹಳ ಖುಷಿಯಾಗಿದೆ. ಆದರೆ ಸತ್ಯ ಬಂದಿರುವುದಕ್ಕೆ ದಿವ್ಯಾ ಉರಿದುಕೊಳ್ಳುತ್ತಿದ್ದಾಳೆ. ಅದರಲ್ಲೂ ಸತ್ಯ ಮೈ ತುಂಬಾ ಕಣ್ಣು ಕುಕ್ಕುವಂತೆ ಒಡವೆಗಳನ್ನು ಹಾಕಿಕೊಂಡು ಬಂದಿದ್ದಾಳೆ.

ಸತ್ಯ ಒಡವೆ ಎಲ್ಲಾ ನೋಡಿ ದಿವ್ಯಾ ಮತ್ತಷ್ಟು ಉರಿದುಕೊಳ್ಳುವಂತೆ ಆಗಿದೆ. ಇನ್ನು ಬಾಲ ಕೂಡ ಕೆಲಸ ಮುಗಿಸಿ ಮನೆಗೆ ಬರುತ್ತಾನೆ. ಸೀತಾ ಕಾಲಿಗೆ ಬಿದ್ದು, ಆಶೀರ್ವಾದ ಪಡೆದುಕೊಳ್ಳುತ್ತಾನೆ.

ಸೀತಮ್ಮ ಬಾಲನನ್ನು ಎಷ್ಟು ದಿನ ಆಯ್ತು ಬಂದು, ಏನು ಕೆಲಸ ಮಾಡುತ್ತಿದ್ದೀಯಾ ಎಂದು ವಿಚಾರಿಸುತ್ತಾಳೆ. ಆಗ ಜಾನಕಿ ಸುಳ್ಳು ಹೇಳುತ್ತಾಳೆ. ಆದರೆ, ಬಾಲ ನನ್ನ ಬಗ್ಗೆ ಸುಳ್ಳು ಹೇಳಬೇಡಿ ಎಂದು ಮದುವೆ ತಡೆದು ದಿವ್ಯಾ ಜೊತೆಗೆ ಓಡಿ ಹೋಗಿದ್ದು. ತಾನು ಶ್ರೀಮಂತ ಎಂದು ಸುಳ್ಳು ಹೇಳಿಕೊಂಡು ಬದುಕಿದ್ದು ಎಲ್ಲಾ ಸತ್ಯವನ್ನು ಮುಚ್ಚಿಡದೇ ಹೇಳುತ್ತಾನೆ.

Sathya-Kannada-serial

ಕ್ಷಮೆ ಕೇಳಿದ ಬಾಲ

ಬಾಲ ಆಡಿದ ಮಾತುಗಳನ್ನು ಕೇಳಿದ ಮೇಲೆ ಸೀತಾಳಿಗೆ ಎಷ್ಟು ಒಳ್ಳೆಯ ಹುಡುಗ ಎಂದು ಅನಿಸುತ್ತದೆ. ನಿನಗೆ ಎಲ್ಲವೂ ಒಳ್ಳೆಯದೇ ಆಗುತ್ತೆ ಆಗಿದ್ದನ್ನೆಲ್ಲಾ ಮರೆತು ಬಿಡು ಎಂದು ಹೇಳುತ್ತಾಳೆ. ಬಾಲನಿಗೂ ಸತ್ಯ ಹೇಳಿದ ಮೇಲೆ ಮನಸ್ಸು ಹಗುರವಾಗುತ್ತದೆ. ಸತ್ಯ ಮತ್ತು ಸೀತಾ ಬಳಿ ತಾನು ಮಾಡಿದ ತಪ್ಪಿಗೆ ಕ್ಷಮೆಯನ್ನು ಕೇಳುತ್ತಾನೆ. ಬಾಲ ನಡೆದುಕೊಂಡ ರೀತಿ ಕಂಡು ಸತ್ಯಳಿಗೂ ಬಾಲ ಒಳ್ಳೆಯವನಾಗಿದ್ದಾನೆ ಎಂದು ಸ್ಪಷ್ಟವಾಗುತ್ತದೆ.

ದಿವ್ಯಾಳಿಗೆ ಹೆಚ್ಚಾಯ್ತು ಸಂಕಟ

ಬಾಲ ಎಲ್ಲಾ ಸತ್ಯವನ್ನು ತಂಗಿ ಹಾಗೂ ಸೀತಾ ಎದುರಿಗೆ ಹೇಳಿದ್ದಕ್ಕೆ ಸಂಕಟ ಹೆಚ್ಚಾಗುತ್ತದೆ. ಸತ್ಯ ಹಾಗೂ ಸೀತಾ ಎದುರಿಗೆ ತಾನು ರಾಣಿಯಂತೆ ಇರುವಂತೆ ನಟಿಸುತ್ತಿರುತ್ತಾಳೆ. ಆದರೆ, ಇನ್ಮುಂದೆ ಅದಕ್ಕೂ ಕಲ್ಲು ಬಿತ್ತು ಎಂದು ಬೇಸರ ಮಾಡಿಕೊಳ್ಳುತ್ತಾಳೆ. ರೂಮ್‌ನಲ್ಲಿ ಬಾಲನಿಗೆ ಬೈಯುತ್ತಿರುತ್ತಾಳೆ. ಬಾಯಿ ಮುಚ್ಚಿಕೊಂಡು ಇರುವ ಬದಲು ಎಲ್ಲಾ ಸತ್ಯ ಯಾಕೆ ಹೇಳಬೇಕಿತ್ತು. ನನ್ನ ಮಾನ ಮರ್ಯಾದೆಯನ್ನು ಹರಾಜು ಹಾಕಿದೆ ಎಂದು ಸಿಟ್ಟು ಮಾಡಿಕೊಳ್ಳುತ್ತಾಳೆ.

Sathya-Kannada-serial

ಓವರ್ ಆಯ್ತು ಸತ್ಯ ಕಾಳಜಿ

ಇನ್ನು ಸತ್ಯಳಿಗೆ ಲಕ್ಷ್ಮಣನದ್ದೇ ಯೋಚನೆಯಾಗಿದೆ. ಸತ್ಯ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ಲಕ್ಷ್ಮಣನನ್ನು ಸಂಪೂರ್ಣವಾಗಿ ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಳೆ. ಹೀಗಾಗಿ ಊರ್ಮಿಳಾಗೆ ಫೊನ್ ಮಾಡುತ್ತಾಳೆ. ಚಿಕ್ಕ ಮಾವ ಮನೆಯಿಂದ ಹೊರಗೇನಾದರೂ ಹೋಗಿದ್ದಾರಾ ಇಲ್ಲ, ಮನೆಯಲ್ಲೇ ಇದ್ದಾರಾ ಎಂದು ಕೇಳಿ ತಿಳಿದುಕೊಳ್ಳುತ್ತಾಳೆ. ಜೊತೆಗೆ ಕಾರ್ತಿಕ್‌ಗೂ ಕೆಲಸ ಕೊಟ್ಟಿರುತ್ತಾಳೆ. ಚಿಕ್ಕಮಾವ ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳಲು ತಿಳಿಸಿರುತ್ತಾಳೆ. ಈಗ ಅವಳೂ ಕೂಡ ಲಕ್ಷ್ಮಣನಿಗೆ ಫೋನ್ ಮಾಡುತ್ತಾಳೆ. ಮನೆಯಲ್ಲೇ ಇದ್ದೀರಾ..? ಆಫೀಸ್ ಕಾಲ್ ಬಂತಾ ಎಂದು ವ್ಯಂಗ್ಯವಾಗಿ ಮಾತನಾಡಿಸುತ್ತಾಳೆ. ಇದು ಲಕ್ಷ್ಮಣನಿಗೆ ಸಿಟ್ಟು ತರಿಸುತ್ತದೆ.

ಸತ್ಯಗೆ ಕ್ಲಾಸ್ ತೆಗೆದುಕೊಂಡ ಲಕ್ಷ್ಮಣ

ಲಕ್ಷ್ಮಣನ ಕೋಪ ನೆತ್ತಿಗೇರಿರುತ್ತದೆ. ಹೀಗಾಗಿ ಸತ್ಯಳಿಗೆ ಬೈಯುವಂತೆ ಮಾತನಾಡುತ್ತಾನೆ. ನಿನ್ನ ನೀನು ಏನು ಅಂದುಕೊಂಡಿದ್ದೀಯಾ ಸತ್ಯ. ನಿನ್ನ ಮೊನ್ನೆ ಬಂದು ನಾನು ಏನು ಮಾಡಬೇಕು ಏನು ಬಿಡಬೇಕು ಎಂದು ನಿನಗೆ ಹೇಳಿ ಮಾಡಬೇಕಾ..? ಯಾಕೆ ಇತ್ತೀಚೆಗೆ ನನ್ನನ್ನು ಎಲ್ಲೂ ಹೋಗುವುದಕ್ಕೆ ಬಿಡುವುದಿಲ್ಲ. ನೀನು ಮತ್ತು ನಿನ್ನ ಗಂಡ ನನ್ನ ಯಾಕೆ ಎಲ್ಲಿಗೂ ಹೋಗುವುದಕ್ಕೆ ಬಿಡುವುದಿಲ್ಲ ಎಂದು ಕ್ಲಾಸ್ ತೆಗೆದುಕೊಳ್ಳುತ್ತಾನೆ. ಆದರೆ, ಸತ್ಯ ಈಗ ಯಾವ ವಿಚಾರವನ್ನು ಹೇಳಲಾಗದೇ ಕೂಲ್ ಆಗಿಯೇ ರೆಸ್ಪಾನ್ಸ್ ಮಾಡುತ್ತಾಳೆ.

More from Filmibeat

English summary
Sathya Kannada Serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X