Sathya: ಪ್ರೇಮಿಗಳನ್ನು ಒಂದು ಮಾಡಲು ಹೋಗಿ ಕಾರ್ತಿಕ್ - ಸತ್ಯ ಪ್ರೀತಿಯಲ್ಲಿ ಬಿದ್ದಾಯ್ತು

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ದಿವ್ಯಾಳಿಗೆ ಇನ್ನೂ ಸತ್ಯದ ಅರಿವಾಗಿಲ್ಲ. ಆದಷ್ಟು ಬೇಗನೇ ಹೇಗಾದರೂ ಮಾಆಡಿ ತನ್ನ ಗಂಡನ ಅರಮನೆಗೆ ಹೋಗಬೇಕು ಎಂದು ಬಯಸುತ್ತಲೇ ಇದ್ದಾಳೆ. ಆದರೆ ಬಾಲ ಮಾತ್ರ ದಿವ್ಯಾಳ ಕನಸನ್ನು ಎಂದಾದರೂ ಒಂದು ದಿನ ನುಚ್ಚುನೂರು ಮಾಡುವುದು ಪಕ್ಕಾ ಆಗಿದೆ. ಆದರೆ ಬಾಲನ ಸುಳ್ಳಿನ ಗೋಪುರ ಯಾವಾಗ ಕಳಚಿ ಬೀಳುತ್ತದೋ ಗೊತ್ತಿಲ್ಲ.

ಪ್ರತಿ ಬಾರಿಯೂ ದಿವ್ಯಾಳಿಗೆ ಇನ್ನೇನು ಸತ್ಯ ಗೊತ್ತಾಗುತ್ತದೆ ಎಂಬ ಸಮಯದಲ್ಲೇ ಬಾಲ ಮತ್ತೇನಾದರೂ ಸುಳ್ಳಿನ ಕಥೆಯನ್ನು ಕಟ್ಟಿ ಯಾಮಾರಿಸುತ್ತಿದ್ದಾನೆ. ಈಗಲೂ ಕೂಡ ದಿವ್ಯಾ, ಬಾಲ ನಿಜವಾಗಿಯೂ ದೊಡ್ಡ ಶ್ರೀಮಂತ. ನಾವಿಬ್ಬರು ಮನೆಯವರ ವಿರೋಧದಿಂದ ಮದುವೆಯಾಗಿರುವುದಕ್ಕೆ ಈ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದೇವೆ ಎಂಬುದನ್ನೇ ನಂಬಿಕೊಂಡಿದ್ದಾಳೆ.

Sathya Serial 28th April episode written update

ಇದೇ ಕಾರಣಕ್ಕೆ ಕಲಾವಿದರಿಗೆ ಹಣ ಕೊಟ್ಟು ತಂದೆ ಎಂದು ಈ ಹಿಂದೆ ಬಾಲ ಪರಿಚಯಿಸಿದ್ದ ಅದೇ ವ್ಯಕ್ತಿ ಈಗ ಶೂಟಿಂಗ್‌ಗೆಂದು ದಿವ್ಯಾ ಇರುವ ಹಳ್ಳಿಯ ಬಳಿ ಬಂದಿರುವುದನ್ನು ನೋಡಿ, ದಿವ್ಯಾ ಅವರ ಕಾಲಿಡಿದು ಕೇಳಿಕೊಂಡಿದ್ದಾಳೆ. ತಮ್ಮನ್ನು ಕ್ಷಮಿಸುವಂತೆ ಹೇಳಿದ್ದಾಳೆ. ಆತನಿಗೆ ದಿವ್ಯಾಳ ನೆನಪಿಲ್ಲದ ಕಾರಣ ನಿನ್ನ ಗಂಡನನ್ನು ಕರೆದುಕೊಂಡು ಬಾ. ಆಗ ನಿನ್ನ ಸಮಸ್ಯೆ ಅನ್ನು ಬಗೆಹರಿಸುತ್ತೀನಿ ಎಂದಿದ್ದಾನೆ.

ದಿವ್ಯಾ ಈಗ ಬಾಲ ಹಾಗೂ ಅವರ ತಾತನನ್ನು ತನ್ನ ಮಾವನ ಬಳಿ ಕರೆದುಕೊಂಡು ಹೋಗಲು ಮುಂದಾಗಿದ್ದಾಳೆ. ಅದಕ್ಕೋಸ್ಕರ ಸೂಟ್ ಧರಿಸುವಂತೆ ಬಾಲನಿಗೆ ಹೇಳಿದ್ದು, ಬಟ್ಟೆ ಖರೀದಿಸಲು ಹಣವನ್ನು ಕೂಡ ಕೊಟ್ಟಿದ್ದಾಳೆ. ಇತ್ತ ರಿತು ಮತ್ತು ರಾಕಿಯ ಪ್ರೀತಿಗೆ ಕಾರ್ತಿಕ್ ಸಪೋರ್ಟ್ ಮಾಡುತ್ತಿದ್ದಾನೆ.

ರಿತುಗೆ ಮದುವೆ ಮಾಡಿಸಲು ಮನೆಯವರು ತಯಾರಿ ನಡೆಸಿದ್ದರೆ, ಸತ್ಯ ಹಾಗೂ ಕಾರ್ತಿಕ್ ಪ್ರೇಮಿಗಳನ್ನು ಒಂದು ಮಾಡಲು ಮುಂದಾಗಿದ್ದಾರೆ. ರಿತು ಕೂಡ ಕಾರ್ತಿಕ್ ಹಾಗೂ ಸತ್ಯ ತನ್ನ ಪರ ಇರುವುದಕ್ಕೆ ಖುಷಿ ಪಟ್ಟಿದ್ದಾಳೆ. ಕಾರ್ತಿಕ್ ಮತ್ತು ಸತ್ಯ ಇಬ್ಬರೂ ಈಗ ಈ ಮದುವೆಯನ್ನು ನಿಲ್ಲಿಸುವುದು ಹೇಗೆ? ರಾಕಿ ಹಾಗೂ ರಿತು ಅನ್ನು ಒಂದು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ.

Sathya Serial 28th April episode written update

ಅಷ್ಟೇ ಅಲ್ಲದೇ, ಕಾರ್ತಿಕ್‌ಗೆ ರಾಕಿ ಸಿಗಲಿಲ್ಲ ಎಂದರೆ ರಿತು ಏನು ಮಾಡಿಕೊಳ್ಳುತ್ತಾಳೋ. ಚಿಕ್ಕವಯಸ್ಸಿನಲ್ಲೇ ತಾನಿಷ್ಟಪಟ್ಟಿದ್ದನ್ನು ಕೊಡಿಸಲಿಲ್ಲ ಎಂಬ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿದ್ದಳು, ಈಗ ಯಾವ ಅನಾಹುತ ಮಾಡಿಕೊಳ್ಳುತ್ತಾಳೋ ಎಂಬ ಆತಂಕದಲ್ಲಿದ್ದಾನೆ. ಪ್ರೇಮಿಗಳನ್ನು ಒಂದು ಮಾಡವ ಭರದಲ್ಲಿ ಕಾರ್ತಿಕ್ ಹಾಗೂ ಸತ್ಯ ಒಬ್ಬರನ್ನೊಬ್ಬರು ಹೆಚ್ಚಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಬದುಕು ಇನ್ನು ಮುಂದೆಯಾದರೂ ಚೆನ್ನಾಗಿರಬೇಕು ಎಂದು ಬಯಸುತ್ತಿದ್ದಾರೆ.

ಕಾರ್ತಿಕ್ ಕೂಡ ತನಗೇ ತಿಳಿಯದಂತೆ ಸತ್ಯಳನ್ನು ಪ್ರೀತಿಸಲು ಶುರು ಮಾಡಿದ್ದಾನೆ. ಇದರ ಸೂಕ್ಷ್ಮಅರ್ಥ ಮಾಡಿಕೊಂಡ ಸತ್ಯಳಿಗೆ ದುಪ್ಪಟ್ಟು ಖುಷಿಯಾಗಿದೆ. ಗಿರಿಜಮ್ಮ ಹಾಗೂ ಜಾನಕಿ ಅಮ್ಮನಿಗೆ ಸತ್ಯ ಫೋನ್ ಮಾಡಿ ತನ್ನ ಖುಷಿಯ ಸಮಾಚಾರವನ್ನು ಹೇಳಿಕೊಂಡಿದ್ದಾಳೆ. ಮೊಮ್ಮಗಳ ಬದುಕು ಸರಿಯಾಗುತ್ತಿರುವುದನ್ನು ಕೇಳಿದ ಗಿರಿಜಮ್ಮನಿಗೆ ಖುಷಿಯಾಗಿದೆ. ಆದಷ್ಟು ಬೇಗ ಕಾರ್ತಿಕ್ ಹಾಗೂ ಸತ್ಯ ಒಂದಾಗಿ ಸುಖ ಜೀವನವನ್ನು ನಡೆಸಲಿ ಎಂದು ಬಯಸಿದ್ದಾಳೆ.

ಜಾನಕಿ ಕೂಡ ಮಗಳಿಗೆ ಮದುವಯೇ ಆಗಲ್ಲ ಎಂದುಕೊಂಡಿದ್ದಳು. ಆದರೆ ಈಗ ಮದುವೆಯಾಗಿದ್ದು, ಸತ್ಯ ಹಾಗೂ ಕಾರ್ತಿಕ್ ಒಬ್ಬರಿಗೊಬರು ಹೊಂದಿಕೊಂಡು ಬಾಳುವುದಕ್ಕೆ ಶುರು ಮಾಡಿರುವುದಕ್ಕೆ ಸಂತಸಗೊಂಡಿದ್ದಾಳೆ. ಆದರೆ ಈ ಸಂತಸವನ್ನು ಕೀರ್ತನಾ ಹೀಗೆ ಇರಲು ಬಿಡುತ್ತಾಳೋ ಇಲ್ಲವೇ ಸತ್ಯಳಿಗೆ ಆ ಡಿವೋರ್ಸ್ ಪೇಪರ್ಸ್ ಉರುಳಾಗುತ್ತದೋ ಗೊತ್ತಿಲ್ಲ.

More from Filmibeat

English summary
Sathya Serial 28th April episode written update. Here is Details about karthik and sathya fell in love, while trying to support ritu and rakesh love. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X