ಮಹತಿ ಹೇಳಿದ ಸುಳ್ಳಿನಿಂದ ಸತ್ಯ ಬಗ್ಗೆ ಅಪಾರ್ಥ ಮಾಡಿಕೊಂಡಳಾ ಸೀತಾ?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಬಾಲ ಜಗನ್ನಾಥನಿಗೆ ಖಾಲಿ ಚೆಕ್ ಅನ್ನು ಕೊಟ್ಟಿದ್ದಾನೆ. ಹಣ ಬರೆದರೆ ನಿಮನ್ಮ ಮುಂದೆ ನಾನು ಸಣ್ಣವನಾಗುತ್ತೇನೆ. ನಿಮಗೆ ಬೆಲೆಕಟ್ಟಲಾಗದು ಎಂದು ಡೈಲಾಗ್ ಬೇರೆ ಹೊಡೆದಿದ್ದಾನೆ. ಜಗನ್ನಾಥ ಬಾಲನ ಮಾತುಗಳನ್ನು ನಂಬಿ, ಖುಷಿಯಾಗಿದ್ದಾನೆ.

ಖಾಲಿ ಚೆಕ್ ಅನ್ನು ಮನೆಯವರಿಗೆಲ್ಲಾ ತೋರಿಸಿ, ಮನೆ ಅಳಿಯ ಎಂದರೆ ಹೀಗಿರಬೇಕು. ಮನೆಯನ್ನು ಉದ್ಧಾರ ಮಾಡಬೇಕು. ಸುಮ್ಮನೆ ಬಂದು ಹೋಗುವುದಲ್ಲ ಎಂದು ಕೊಚ್ಚಿಕೊಂಡಿದ್ದಾನೆ. ಕಾರ್ತಿಕ್ ಹಾಗೂ ಸತ್ಯಗೆ ಚುಚ್ಚುವಂತೆ ಮಾತನಾಡಿದ್ದಾನೆ.

ಇನ್ನು ಕಾರ್ತಿಕ್ ಸತ್ಯ ಬಳಿ ತಾನೂ ಕೂಡ ರೊಮ್ಯಾಂಟಿಕ್ ಎಂಬುದನ್ನು ತೋರಿಸಲು ಯತ್ನಿಸುತ್ತಿದ್ದಾನೆ. ಸತ್ಯಗೋಸ್ಕರ ಬೆಳಗ್ಗೆ ಬೆಳಗ್ಗೆ ಕಾಫಿ ತಂದುಕೊಟ್ಟಿದ್ದಾನೆ. ಸತ್ಯ ಈಗ ತನ್ನ ಪ್ಲಾನ್ ವರ್ಕೌಟ್ ಆಗ್ತಿದೆ ಎಂದು ಖುಷಿಪಟ್ಟಿದ್ದಾಳೆ.

ಸತ್ಯಳನ್ನು ಎತ್ತಿಕೊಂಡ ಕಾರ್ತಿಕ್

ಸತ್ಯಳನ್ನು ಎತ್ತಿಕೊಂಡ ಕಾರ್ತಿಕ್

ಇನ್ನು ಸತ್ಯ, ಕಾರ್ತಿಕ್ ಮತ್ತು ಹುಡುಗರು ಸೇರಿ ಗ್ಯಾರೇಜ್ ನಲ್ಲಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಗ್ಯಾರೇಜ್ ನಲ್ಲಿ ಈ ಬಾರಿ ಅದ್ಧೂರಿಯಾಗಿ ಹಬ್ಬ ಆಚರಿಸಲಿದ್ದಾರೆ. ಹಾಗಾಗಿ ಗ್ಯಾರೇಜ್ ಗೆ ಹೂವು ಮತ್ತು ಲೈಟ್ಸ್ ಗಳಿಂದ ಅಲಂಕಾರ ಮಾಡುತ್ತಿದ್ದಾರೆ. ಕಾರ್ತಿಕ್ ಇದು ತನ್ನ ಗ್ಯಾರೇಜ್ ಎಂಬಷ್ಟೇ ಪ್ರೀತಿಯಿಂದ ಲೈಟಿಂಗ್ ಮಾಡುತ್ತಿದ್ದಾನೆ. ಕಾರ್ತಿಕ್ ಕೆಲಸವನ್ನು ನೋಡಿ ಹುಡುಗರು, ನೀವು ಕುಳಿತುಕೊಳ್ಳಿ ಎಂದು ಹೇಳಿದರೂ, ಕೇಳದೆ ಕೆಲಸ ಮಾಡುತ್ತಿರುತ್ತಾನೆ. ಇದನ್ನು ನೋಡಿದ ಸತ್ಯ ನಿಂತಲ್ಲೇ ಹೊಟ್ಟೆ ಉರಿದುಕೊಳ್ಳುತ್ತಿರುತ್ತಾಳೆ. ಹುಡುಗರಿಗೆ ಕಾರ್ತಿಕ್ ಸಹಾಯ ಮಾಡುವುದನ್ನು ನೋಡಿ, ಸತ್ಯ ತನಗೂ ಸಹಾಯ ಮಾಡಬಾರದ, ವೇಸ್ಟ್ ಗಂಡ ತನಗೆ ತಾನೇ ಹೇಳಿಕೊಳ್ಳುತ್ತಾಳೆ. ಹೂವನ್ನು ಮೇಲೆ ಇಳೆ ಬಿಡಲು ಪ್ರಯತ್ನಿಸುತ್ತಿರುತ್ತಾಳೆ. ಆದರೆ ಅವಳಿಗೆ ಎಟಕುವುದಿಲ್ಲ. ಆಗ ಕಾರ್ತಿಕ್ ಬಂದು ಸತ್ಯಳನ್ನು ಎತ್ತಿಕೊಳ್ಳುತ್ತಾನೆ. ಇದನ್ನು ನೋಡಿದ ಹುಡುಗರು ಫುಲ್ ಖುಷಿಯಾಗುತ್ತಾರೆ. ಇನ್ನು ಸತ್ಯ ಕಾರ್ತಿಕ್ ತನ್ನನ್ನು ಎತ್ತಿದ್ದಕ್ಕೆ ಒಳಗೆ ಖುಷಿಯಾದರೂ, ಆ ಕ್ಷಣಕ್ಕೆ ಶಾಕ್ ಆಗುತ್ತಾಳೆ.

ಇನ್ಮುಂದೆ ನಾನು ಬಡ್ಡಿ ಜಗನ್ನಾಥ

ಇನ್ಮುಂದೆ ನಾನು ಬಡ್ಡಿ ಜಗನ್ನಾಥ

ಬಾಲನಿಂದ ಖಾಲಿ ಚೆಕ್ ಪಡೆದು ಜಗನ್ನಾಥ ತೇಲಾಡುತ್ತಿದ್ದಾನೆ. ತನಗೆ ಬೇಕಾದಷ್ಟು ಹಣವನ್ನು ಆ ಚೆಕ್ ನಲ್ಲಿ ಬರೆದುಕೊಂಡು ಆ ಹಣವನ್ನು ಪಡೆಯಬೇಕು. ಅದರಿಂದ ದೊಡ್ಡ ಬಿಸಿನೆಸ್ ಅನ್ನು ಮಾಡಬೇಕು. ಆಗ ತಾನೂ ಕೂಡ ಇತರರಂತೆ ದೊಡ್ಡ ಶ್ರೀಮಂತನಾಗಬಹುದು ಎಂದು ಅಂದುಕೊಂಡಿದ್ದಾನೆ. ತನಗೆ ಸಿಕ್ಕಿರುವ ಖಾಲಿ ಚೆಕ್ ಬಗ್ಗೆ ಇಡೀ ಊರಿಗೆಲ್ಲಾ ಹೇಳಬೇಕು ಎಂದರೆ ಈ ಹಾಳಾದ ಮಳೆ ಹಿಡಿದುಕೊಂಡಿದೆ ಎಂದು ಬೈದುಕೊಳ್ಳುತ್ತಿರುತ್ತಾನೆ. ಅಷ್ಟರಲ್ಲಿ ಯಾರೋ ಒಬ್ಬರು ಅವರ ಮನೆ ಬಳಿ ಬರುತ್ತಾರೆ. ಅವರನ್ನು ಜಗನ್ನಾಥ ತಡೆದು, ತನಗೆ ಖಾಲಿ ಚೆಕ್ ಸಿಕ್ಕಿದೆ. ಇದರಿಂದ ಹಣ ತೆಗೆದುಕೊಂಡು, ಬಡ್ಡಿಗೆ ಸಾಲ ಕೊಡ್ತೀನಿ. ಹೀಗೆ ಹಣ ಸಂಪಾದಿಸಿ ದೊಡ್ಡ ಮನುಷ್ಯನಾಗುತ್ತೀನಿ. ನಾನು ಇನ್ಮೇಲಿಂದ ಬರೀ ಜಗನ್ನಾಥ ಅಲ್ಲ. ಬಡ್ಡಿ ಜಗನ್ನಾಥ. ನನ್ನ ನೀನೂ ಹಾಗೇ ಕರೆಯಬೇಕು ಎಂದು ಹೇಳುತ್ತಾನೆ. ಇದೇ ವೇಳೆಗೆ ಗಿರಿಜಮ್ಮ ಬಂದು ಬೈದು ಕಳಿಸುತ್ತಾಳೆ.

ಸತ್ಯ ಬಗ್ಗೆ ಇನ್ನಷ್ಟು ಅಪಾರ್ಥ

ಸತ್ಯ ಬಗ್ಗೆ ಇನ್ನಷ್ಟು ಅಪಾರ್ಥ

ಮಹತಿ ಸೀತಾ ಮನೆಗೆ ಬಂದಿದ್ದಾಳೆ. ತನ್ನ ಮಗನಿಗೆ ಎರಡನೇ ಮದುವೆ ಮಾಡಿದ್ದು, ಅದಕ್ಕೆ ಮೊದಲ ಹೆಂಡತಿ ಕಾರಣ. ಅದಕ್ಕೆ ನಾವು ಪ್ಲಾನ್ ಮಾಡಿ, ಆಕೆಯನ್ನು ಓಡಿಸಿ ಮದುವೆ ಮಾಡಿದ್ವಿ. ನಮ್ಮ ಜೊತೆಗೆ ಹೊಂದಿಕೊಂಡಂತೆ ನಾಟಕ ಮಾಡಿ, ಮನೆಯನ್ನು ಒಡೆಯುವ ಕೆಲಸ ಮಾಡಿದಳು. ಮಗನ ಮೊದಲ ಹೆಂಡತಿಯಿಂದ ನಾವು ತುಂಬಾ ಕಷ್ಟ ಪಡಬೇಕಾಯ್ತು. ಅದಕ್ಕೆ ನಾವು ನೋಡಿದ ಹುಡುಗಿಯನ್ನು ಸೊಸೆ ಮಾಡಿಕೊಳ್ಳುವುದೇ ಸರಿ. ಈ ಕಾಲದ ಹುಡುಗಿಯರನ್ನು ನಂಬಲು ಆಗೋದಿಲ್ಲ ಎಂದು ಹೇಳುತ್ತಾಳೆ. ಇದನ್ನೆಲ್ಲಾ ನಂಬುವ ಸೀತಾ ತನ್ನ ಸೊಸೆ ಸತ್ಯ ಬಗ್ಗೆ ಯೋಚಿಸುತ್ತಾಳೆ.

ರಾಕಿ ಮೇಲೆ ಸುಳ್ಳು ಹೇಳಿದ ರಿತು

ರಾಕಿ ಮೇಲೆ ಸುಳ್ಳು ಹೇಳಿದ ರಿತು

ಇನ್ನು ಸತ್ಯಳನ್ನು ಕಾರ್ತಿಕ್ ಎತ್ತಿಕೊಂಡಿರುವಾಗಲೇ ರಿತು ಗ್ಯಾರೇಜ್ ಗೆ ಬರುತ್ತಾಳೆ. ಕಾರ್ತಿಕ್ ರಿತುನನ್ನು ನೋಡಿ, ನೀನ್ಯಾಕೆ ಬಂದೆ ಅಂತ ಕೇಳುತ್ತಾನೆ. ಅದಕ್ಕೆ ರಿತು ಅತ್ತಿಗೆನೇ ಬಾ ಎಂದು ಹೇಳಿದರು. ಹಾಗಂತ ರಾಕಿ ಫೋನ್ ಮಾಡಿ ಹೇಳಿದ, ಅದಕ್ಕೆ ನಾನು ಬಂದೆ ಎಂದು ಸುಳ್ಳು ಹೇಳುತ್ತಾಳೆ. ಈ ಮಾತನ್ನು ಕೇಳಿ ಸತ್ಯ ಮತ್ತು ರಾಕಿ ಇಬ್ಬರೂ ಶಾಕ್ ಆಗುತ್ತಾರೆ. ಆದರೆ ರಿತು ಸುಳ್ಳು ಹೇಳಿದ್ದು ಕಾರ್ತಿಕ್ ಗೆ ಗೊತ್ತಾಗುತ್ತಾ..? ಇಲ್ಲ ಸತ್ಯಗೆ ರಿತು ಗ್ಯಾರೇಜ್ ಗೆ ಬಂದ ಕಾರಣ ತಿಳಿಯುತ್ತಾ ಎಂದು ಕಾದು ನೋಡಬೇಕಿದೆ.

More from Filmibeat

English summary
mahati comes to seetha house and says about daughter in law story. This makes seetha to think about sathya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X