Sathya: ಕೀರ್ತನಾ ಜುಟ್ಟು ದಿವ್ಯಾ ಕೈಗೆ ಸಿಕ್ಕಿದ್ದು ಹೇಗೆ..?
ಸತ್ಯ ಧಾರಾವಾಹಿಯಲ್ಲಿ ಒಂದು ಕಡೆ ರಿತು ಮತ್ತು ರಾಕಿ ಇಬ್ಬರೂ ತಮ್ಮ ತಮ್ಮ ಓದಿನ ಬಗ್ಗೆ ಮುಂದಿನ ಭವಿಷ್ಯದ ಬಗ್ಗೆ ಕಾಳಜಿ ವಹಿಸಿದ್ದು, ಬ್ಯುಸಿಯಾಗಿದ್ದಾರೆ. ಇತ್ತ ಸತ್ಯ ಹಾಗೂ ಕಾರ್ತಿಕ್ ನಡುವೆ ಪ್ರೀತಿ ಚಿಗುರಿದೆ. ಸತ್ಯಗೆ ಪ್ರಪೋಸ್ ಮಾಡಬೇಕು ಎಂಬ ಹುಚ್ಚು ಕಾರ್ತಿಕ್‌ಗೆ ಹಿಡಿದಿದೆ. ಅದಕ್ಕಾಗಿ ಒಳ್ಳೆಯ ಸಮಯಕ್ಕಾಗಿ ಆತ ಎದುರು ನೋಡುತ್ತಿದ್ದಾನೆ.
ಇನ್ನು ದಿವ್ಯಾ ಹಾಗೂ ಬಾಲನ ಕಥೆ ಹೀನಾಯ ಸ್ಥಿತಿಯಲ್ಲಿದೆ. ದಿವ್ಯಾಳಿಗೆ ಈಗ ಮಜಾ ಮಾಡುವಂತಹ ಬದುಕು ಬೇಕು. ಅದಕ್ಕೆ ಹಣ ಬೇಕು. ಹಾಗಾಗಿ ತನ್ನ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಈಗ ಉಪಾಯವನ್ನು ಮಾಡಿದ್ದಾಳೆ. ದಿವ್ಯಾ, ಬಾಲ ಎಲ್ಲಿಂದ ಹಣ ತರುತ್ತಿದ್ದಾನೆ ಎಂಬುದನ್ನು ತಿಳಿಯುವ ಸಲುವಾಗಿಯೇ ಒಂದೂವರೆ ಲಕ್ಷದ ಮೊಬೈಲ್ ಅನ್ನು ಕೇಳಿದ್ದಾಳೆ. ಇದರಿಂದ ಬಾಲನಿಗೆ ಈಗ ಫುಲ್ ಟೆನ್ಷನ್ ಆಗಿದೆ. ಕೆಟ್ಟ ಕೆಲಸವನ್ನು ಮಾಡಬಾರದು. ಒಳ್ಳೆಯ ರೀತಿಯಲ್ಲಿ ಬದುಕಬೇಕು ಎಂದುಕೊಂಡಿರುವ ಬಾಲ ಈಗ ಪುನಃ ಹಣಕ್ಕಾಗಿ ಏನು ಮಾಡುವುದು ಎಂಬುದು ಅರ್ಥವಾಗುತ್ತಿಲ್ಲ.

ಬಾಲ, ಕೀರ್ತನಾಳಿಗೆ ಫೋನ್ ಮಾಡಿ ಪುನಃ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಒಂದೂವರೆ ಲಕ್ಷ ಹಣ ಕೊಡದಿದ್ದರೆ, ವೀಡಿಯೋ ಲೀಕ್ ಮಾಡುವುದಾಗಿ ಹೇಳಿದ್ದಾನೆ. ಇದರಿಂದ ಕೀರ್ತನಾ ಪುನಃ ಭಯಗೊಂಡು ಹಣ ಕೊಡಲು ಒಪ್ಪಿದ್ದಾಳೆ. ಆದರೆ ಈ ಬಾರಿ ಬಾಲನನ್ನು ಭೇಟಿಯಾಗಿ ಕೈಗೆ ಹಣ ಕೊಡಬೇಕು ಎಂದುಕೊಂಡಿದ್ದಾಳೆ.
ಬಾಲನ ಆಟಕ್ಕೆ ಶಾಕ್ ಕೊಟ್ಟ ಕೀರ್ತನಾ
ಬಾಲನಿಗೆ ಮೀಟ್ ಮಾಡಲು ಹೇಳುವ ಕೀರ್ತನಾ ಒಳ್ಳೆಯ ಗೇಮ್ ಆಡಿದ್ದಾಳೆ. ಹಣದ ಸೂಟ್ ಕೇಸ್ ಅನ್ನು ಹಿಡಿದು ತರುವ ಕೀರ್ತನಾ ಬಾಲನಿಗೆ ಮೊದಲು ವೀಡಿಯೋವನ್ನು ಡಿಲೀಟ್ ಮಾಡುವಂತೆ ಹೇಳುತ್ತಾಳೆ. ಬಾಲ ಯಾಮಾರಿಸಲು ಪ್ರಯತ್ನಿಸಿದರೂ ಕೇಳುವುದಿಲ್ಲ. ಮೊದಲು ವೀಡಿಯೋವನ್ನು ಡಿಲೀಟ್ ಮಾಡಿದರೆ ಮಾತ್ರವೇ ಹಣವನ್ನು ಕೊಡುವುದಾಗಿ ಹೇಳುತ್ತಾಳೆ. ಬಾಲ ಬೇರೆ ದಾರಿ ಇಲ್ಲದೇ ವೀಡಿಯೋವನ್ನು ಡಿಲೀಟ್ ಮಾಡುತ್ತಾನೆ.
ಖಾಲಿ ಸೂಟ್‌ಕೇಸ್ ಕೊಟ್ಟ ಕೀರ್ತನಾ
ದಿವ್ಯಾ ಕೂಡ ಬಾಲನನ್ನು ಫಾಲೋ ಮಾಡಿಕೊಂಡು ಬಂದಿದ್ದು, ಕೀರ್ತನಾಳನ್ನು ಬ್ಲ್ಯಾಕ್ ಮೇಲೆ ಮಾಡಿ ಹಣ ಪಡೆಯುತ್ತಿದ್ದ ಸತ್ಯ ಅರ್ಥ ಮಾಡಿಕೊಂಡಿದ್ದಾಳೆ. ಬಾಲ ವೀಡಿಯೋ ಡಿಲೀಟ್ ಮಾಡುತ್ತಿದ್ದಂತೆ ಖಾಲಿ ಸೂಟ್‌ಕೇಸ್ ಅನ್ನು ಕೀರ್ತನಾ ಕೊಟ್ಟಿದ್ದಾಳೆ. ಬಾಲ ಎಷ್ಟು ಕೇಳಿಕೊಂಡರೂ ಕೀರ್ತನಾ ಕೇಳುವುದಿಲ್ಲ. ಇಷ್ಟು ದಿನ ಆ ವೀಡಿಯೋ ಇಟ್ಟುಕೊಂಡು ಇಷ್ಟೆಲ್ಲಾ ಆಟ ಆಡಿಸಿದ್ದೀಯಾ ಎಂದು ಹೇಳಿ ಹೊರಟು ಹೋಗುತ್ತಾಳೆ.

ಸತ್ಯ ಮೇಲೆ ಕಾರ್ತಿಕ್‌ಗೆ ಪ್ರೀತಿ ಹೆಚ್ಚಾಗಿದೆ
ಇತ್ತ ಕಾರ್ತಿಕ್‌ಗೆ ಸತ್ಯಳ ಮೇಲಿನ ಪ್ರೀತಿ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಆದಷ್ಟು ಬೇಗ ತನ್ನ ಪ್ರೀತಿಯ ವಿಚಾರವನ್ನು ಸತ್ಯ ಬಳಿ ಹೇಳಿಕೊಳ್ಳಬೇಕು ಎಂದು ಕಾತುರಗೊಂಡಿದ್ದಾನೆ. ಆಗಾಗ ಸತ್ಯಳನ್ನು ತಬ್ಬಿಕೊಳ್ಳಲು ಅವಳಿಗೆ ಮುತ್ತು ಕೊಡಲು ಪ್ರಯತ್ನಿಸುತ್ತಿರುತ್ತಾನೆ. ಆದರೆ, ಪ್ರತಿ ಬಾರಿಯೂ ಸತ್ಯಳ ಬಳಿ ಸಿಕ್ಕಿ ಹಾಕಿಕೊಳ್ಳುತ್ತಿರುತ್ತಾನೆ. ಇವತ್ತೂ ಕೂಡ ಮಲಗಿರುವ ಸತ್ಯಳಿಗೆ ಮುತ್ತು ಕೊಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಸತ್ಯ ಇದನ್ನು ದೊಡ್ಡ ವಿಚಾರ ಎಂದು ಕಾರ್ತಿಕ್ ಬಳಿ ಗಲಾಟೆ ಮಾಡಿದ್ದಾನೆ.
ಕೀರ್ತನಾಳಿಗೆ ಗ್ರಹಚಾರ ಶುರುವಾಯ್ತಾ..?
ಬಾಲ ಈಗ ಹಣ ಸಿಗದೇ ಒದ್ದಾಡುತ್ತಿದ್ದಾನೆ. ಮೊಬೈಲ್ ಕೊಡಿಸದಿದ್ದರೆ, ದಿವ್ಯಾ ಏನು ಮಾಡುತ್ತಾಳೋ ಎಂಬ ಭಯದಲ್ಲಿದ್ದಾನೆ. ಆದರೆ, ದಿವ್ಯಾ ಮೊಬೈಲ್ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಹೇಳಿದ್ದಾಳೆ. ನಿನ್ನನ್ನು ನಾನು ಫಾಲೋ ಮಾಡಿ ನಿನಗೆ ಹಣವನ್ನು ಕೊಡುತ್ತಿದ್ದದ್ದನ್ನು ತಿಳಿದುಕೊಂಡೆ. ಇನ್ನು ಮುಂದೆ ನಾನು ಕೀರ್ತನಾಳನ್ನು ಆಟ ಆಡಿಸುತ್ತೇನೆ ಎಂದು ಹೇಳುತ್ತಾಳೆ. ಆದರೆ ಬಾಲ ಬೇಡ. ನಾವು ಇನ್ನು ಮುಂದೆ ನ್ಯಾಯವಾಗಿ ಬದುಕೋಣ ಎಂದರೂ ದಿವ್ಯಾ ಕೇಳುವುದಿಲ್ಲ.


Click it and Unblock the Notifications











