Sathya: ಸೀತಾಳಿಗೆ ತನ್ನ ತಪ್ಪಿನ ಅರಿವಾಯ್ತು: ಸತ್ಯಳಿಗೆ ಅತ್ತೆಯನ್ನು ಗೆದ್ದ ಖುಷಿ
ಸತ್ಯ ಧಾರಾವಾಹಿಯಲ್ಲಿ ಲಕ್ಷ್ಮಣನಿಗೆ ಈಗ ಬೇಸರವಾಗಿದೆ. ಆತುರದಲ್ಲಿ ತಾನು ಮಾಡಿದ ತಪ್ಪನ್ನು ಅರ್ಥ ಮಾಡಿಕೊಂಡಿದ್ದಾನೆ. ತನ್ನ ದುಡುಕಿನ ನಿರ್ಧಾರದಿಂದ ಆದ ಅನಾಹುತದ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾನೆ. ಈ ಬಗ್ಗೆ ಕ್ಷಮೆ ಕೇಳಲು ರಾಮಚಂದ್ರ ರಾಯರ ಬಳಿ ಬರುತ್ತಾನೆ. ರಾಯರು ಕೂಡ ತಮ್ಮನನ್ನು ಕ್ಷಮಿಸಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ನಡೆದದ್ದೆಲ್ಲವನ್ನೂ ಮರೆತು ಬಿಡು ಎಂದು ಹೇಳುತ್ತಾರೆ.
ರಾಯರು ಕೂಡ ಲಕ್ಷ್ಮಣನಿಗೆ ಸಮಾಧಾನದ ಮಾತುಗಳನ್ನು ಹೇಳುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಹೀಗೆಲ್ಲಾ ಆಗುತ್ತದೆ. ಹೀಗಾಗದಲೇ ಸಂಬಂಧಗಳು ಹೆಚ್ಚು ಗಟ್ಟಿಯಾಗುತ್ತವೆ ಎಂದು ಹೇಳುತ್ತಾರೆ. ಸತ್ಯ ತುಂಬಾ ಖುಷಿಯಾಗಿರುತ್ತಾಳೆ. ರಿತುಳನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ರಾಯರು, ಸೀತಾ ಇಬ್ಬರು ಹೊಗಳುತ್ತಾರೆ. ಸೀತಮ್ಮ ತನ್ನನ್ನು ಒಪ್ಪಿಕೊಂಡಳು ಎಂದು ಖುಷಿಯಲ್ಲಿ ಇರುತ್ತಾಳೆ.

6 ತಿಂಗಳ ಒಳಗೆ ಮನೆಯವರನ್ನು ಒಲಿಸಿಕೊಳ್ಳದಿದ್ದರೆ ನಿನಗೆ ಈ ಮನೆಯಲ್ಲಿ ಜಾಗವಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಳು. ಡಿವೋರ್ಸ್ ಪೇಪರ್ಸ್ ಗಳ ಮೇಲೆ ಸಹಿ ಕೂಡ ಮಾಡಿಸಿಕೊಂಡಿದ್ದಳು. ಇದರಿಂದ ಸತ್ಯಳಲ್ಲಿ ಆತಂಕವಿತ್ತು. ಕಾರ್ತಿಕ್ ಏನೋ ನಿಧಾನವಾಗಿ ಸತ್ಯಳನ್ನು ಒಪ್ಪಿಕೊಂಡಿದ್ದ. ಆದರೆ, ರಿತು ವಿಚಾರವಾಗಿ ಮನೆಯವರೆಲ್ಲಾ ಸತ್ಯಳಿಂದ ದೂರ ಉಳಿದಿದ್ದರು. ಈಗ ರಿತುಳನ್ನು ಮನೆಗೆ ವಾಪಸ್ ಕರೆದುಕೊಂಡು ಬಂದದ್ದಕ್ಕೆ ಎಲ್ಲರೂ ಸತ್ಯಳನ್ನು ಹೊಗಳಿದ್ದಾಳೆ.
ಸೀತಾ ಕೂಡ ಒಳ್ಳೆಯ ಕೆಲಸವನ್ನೇ ಮಾಡಿದೆ ಎಂದು ಹೇಳಿದ್ದಾರೆ. ಇದು ಸತ್ಯಳಿಗೆ ಖುಷಿ ತಂದಿದೆ. ಈ ವಿಚಾರವನ್ನು ಸತ್ಯ, ಕಾರ್ತಿಕ್ ಬಳಿ ಶೇರ್ ಮಾಡಿದ್ದಕ್ಕೆ, ಅವನು ಕೂಡ ಅಮ್ಮ ನಿನ್ನನ್ನು ಆದಷ್ಟು ಬೇಗ ಒಪ್ಪಿಕೊಳ್ಳುತ್ತಾರೆ ಎಂದು ಹೇಳುತ್ತಾನೆ.
ಬೇಸರದಲ್ಲಿರುವ ಸೀತಾ
ಸೀತಾ ಅಡುಗೆ ಮನೆಯಲ್ಲಿ ಒಲೆಯ ಮೇಲೆ ಹಾಲನ್ನು ಇಟ್ಟಿರುತ್ತಾಳೆ. ಪಕ್ಕದಲ್ಲೇ ಇದ್ದರೂ ಏನೋ ಯೋಚಿಸುತ್ತಿರುತ್ತಾಳೆ. ಹಾಲು ಉಕ್ಕಿ ಹೋದರೂ ತಿಳಿಯುವುದಿಲ್ಲ. ಇದನ್ನು ನೋಡಿದ ಊರ್ಮಿಳಾ ಬಂದು ಸೀತಾಳನ್ನು ಎಚ್ಚರಿಸುತ್ತಾಳೆ. ಆಗ ಸೀತಾ ತನ್ನಲ್ಲಿನ ಬೇಸರವನ್ನು ಹೇಳಿಕೊಳ್ಳುತ್ತಾಳೆ. ನಾನು ಕೂಡ ರಿತು ಬಗ್ಗೆ ಯೋಚಿಸುತ್ತಾ ಗುರುಗಳು ಹೇಳಿದ ಮಾತನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ ಎನ್ನುತ್ತಾಳೆ.

ಲಕ್ಷ್ಮಣ ಹಾಗೂ ನಾನು ಆತುರ ಪಟ್ಟು ರಿತು ಎಂಗೇಜ್‌ಮೆಂಟ್ ಮಾಡಲು ಮುಂದಾದೆವು. ಇದರಿಂದ ಕೋಟೆ ಮನೆ ಮರ್ಯಾದೆಗೆ ಚ್ಯುತಿ ಬಂತು ಎಂದು ಹೇಳುತ್ತಾಳೆ. ಆಗ ಊರ್ಮಿಳಾ ಅಣ್ಣ ತಮ್ಮ ಇಬ್ಬರೂ ಕೂಡ ನಗು ನಗುತಾ ಆರಾಮವಾಗಿ ಇದ್ದಾರೆ ಎಂದು ಹೇಳುತ್ತಾಳೆ.
ಲಕ್ಷ್ಣಣ ಸತ್ಯ ಮಾತು
ಲಕ್ಷ್ಮಣ ನಾಚಿಕೆಯಿಂದ ಸತ್ಯ ರೂಮಿಗೆ ಬರುತ್ತಾನೆ. ಸತ್ಯ ಬಳಿ ತಾನು ಮಾಡಿದ್ದಕ್ಕೆ ಕ್ಷಮೆ ಅನ್ನು ಕೇಳುತ್ತಾನೆ. ಸತ್ಯ ಇದೆಲ್ಲಾ ಬೇಡ ಚಿಕ್ಕ ಮಾವ, ಎಂದು ಖುಷಿಯಿಂದ ಮಾತನಾಡುತ್ತಾಳೆ. ರಾಯರು ಕೂಡ ಲಕ್ಷ್ಮಣನಿಗೆ ಸಮಾಧಾನವನ್ನು ಮಾಡುತ್ತಾರೆ. ಇಂತಹ ಸೊಸೆ ಇರುವುದು ನಮ್ಮ ಪುಣ್ಯ ಎಂದು ಇಬ್ಬರೂ ಮಾತನಾಡುತ್ತಾರೆ. ಇದರಿಂದ ಸತ್ಯಳ ಖುಷಿ ಇನ್ನಷ್ಟು ಹೆಚ್ಚಾಗುತ್ತದೆ.
ಸತ್ಯ ಮೇಲೆ ಹಗೆ ಸಾಧಿಸುತ್ತಿರುವ ಕೀರ್ತನಾ
ಇತ್ತ ಕೀರ್ತನಾ ಹೊಟೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಏನೇ ಪ್ಲಾನ್ ಮಾಡಿದರೂ ಅದೆಲ್ಲವೂ ಸತ್ಯ ಪರವಾಗುತ್ತಿದೆ. ತಮ್ಮ ಪ್ಲಾನ್ ಎಲ್ಲಾ ಉಲ್ಟಾ ಆಗುತ್ತಿದೆ ಎಂದು ಬೇಸರವಾಗಿರುತ್ತಾಳೆ. ಇವತ್ತು ನನ್ನನ್ನು ನೋಡಿ ನಕ್ಕವರೆಲ್ಲಾ ಸತ್ಯಳನ್ನು ನೋಡಿ ನಗಬೇಕು. ಆ ರೀತಿಯಲ್ಲಿ ಏನಾದರೂ ಪ್ಲಾನ್ ಮಾಡಬೇಕು ಎಂದು ಕೀರ್ತನಾ ಆಲೋಚಿಸುತ್ತಾಳೆ. ಕೀರ್ತನಾಳ ತಾಳಕ್ಕೆ ಸುಹಾಸ್ ಕೂಡ ಕುಣಿಯುತ್ತಿದ್ದಾನೆ. ಆದರೆ, ಮುಂದೆಯೂ ಸತ್ಯಳೇ ಗೆಲ್ಲುತ್ತಾಳೆ ಎಂಬುದು ಕೀರ್ತನಾಳಿಗೆ ಅರ್ಥವಾಗುತ್ತದೆ.


Click it and Unblock the Notifications











