ಮತ್ತೆ ರೌಡಿ ಬೇಬಿ ಗೆಟಪ್‌ನಲ್ಲಿ ಸತ್ಯ: ಕೀರ್ತನಾ ಹೊಸ ಪ್ಲ್ಯಾನ್ ಏನು?
ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪ್ರಾಜೆಕ್ಟ್ ಸೆಲೆಕ್ಟ್ ಆಗಿರುವುದಕ್ಕೆ ಕೀರ್ತನಾ ಹೊಟ್ಟೆ ಉರಿದುಕೊಂಡಿದ್ದಾಳೆ. ಹೀಗಾಗಿ ಸತ್ಯ ಮತ್ತು ಕಾರ್ತಿಕ್ ಮೇಲೆ ಇನ್ನಷ್ಟು ಕತ್ತಿ ಮಸೆಯುತ್ತಿದ್ದಾಳೆ.
ಇತ್ತ ರಾಮಚಂದ್ರ ರಾಯರು ಮಗ ಹಾಗೂ ಸೊಸೆ ಇನ್ನಷ್ಟು ಹತ್ತಿರವಾಗಲಿ ಎಂದು ಪ್ಲ್ಯಾನ್ ಮಾಡುತ್ತಿದ್ದಾನೆ. ಇದಕ್ಕಾಗಿ ಇಬ್ಬರೂ ಒಟ್ಟಿಗೆ ಅವಾರ್ಡ್ ಪ್ರೊಗ್ರಾಮ್‌ಗೆ ಹೋಗಲಿ ಎಂದು ಬಯಸಿದ್ದಾನೆ.
ಆದರೆ, ಸತ್ಯ ಹೋಗಲು ಇಷ್ಟ ಪಡುತ್ತಿಲ್ಲ. ಸೀತಾ ಕೂಡ ಸತ್ಯಗೆ ಏನೂ ಅರ್ಥವಾಗಲ್ಲ. ಓದೋಕೆ ಬರೆಯೋಕೆ ಬರಲ್ಲ ಎಂದು ಹೇಳುತ್ತಿದ್ದರೆ ಇದಕ್ಕೆ ಕೀರ್ತನಾ ತುಪ್ಪ ಸುರಿದಿದ್ದಾಳೆ.

ಮತ್ತೆ ರೌಡಿ ಗೆಟಪ್‌ನಲ್ಲಿ ಸತ್ಯ
ಸತ್ಯ ಅವಾರ್ಡ್ ಪ್ರೋಗ್ರಾಮ್‌ಗೆ ಹೋಗಲು ಸುತಾರಾಂ ಒಪ್ಪುತ್ತಿಲ್ಲ. ಆದರೆ ಕಾರ್ತಿಕ್ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದಾನೆ. ರಾಮಚಂದ್ರ ರಾಯರು ಕೂಡ, ಇಬ್ಬರೂ ಹೋಗಿ ಬನ್ನಿ. ಹಾಗೆ ಹನಿಮೂನ್ ಕೂಡ ನಡೆಯಲಿ ಎಂದು ಎರಡು ದಿನ ಮುಂಚಿತವಾಗಿಯೇ ಕಳಿಸುತ್ತಿದ್ದಾನೆ. ಕಾರ್ತಿಕ್ ಅಂತೂ ಸತ್ಯ ಜೊತೆಗೆ ಹೋಗಲು ಫುಲ್ ಖುಷಿಯಾಗಿದ್ದಾನೆ. ಸ್ವಲ್ಪ ದೂರ ಮಾತ್ರವೇ ಹೋಗಿದ್ದ, ಕಾರ್ತಿಕ್ ಬೈಕ್‌ನಲ್ಲಿ ಹೋಗಲು ಪ್ಲ್ಯಾನ್ ಮಾಡಿದ್ದಾನೆ. ಇದಕ್ಕಾಗಿ ಸತ್ಯ ಕೂಡ ತನ್ನ ಗೆಟಪ್ ಅನ್ನು ಬದಲಾಯಿಸಿದ್ದಾಳೆ. ಮತ್ತೆ ಹಳೆ ರೌಡಿ ಬೇಬಿಯಂತೆ ಪ್ಯಾಂಟ್-ಟಿ-ಶರ್ಟ್ ಧರಿಸಿ ರೆಡಿಯಾಗಿದ್ದಾಳೆ. ಬೈಕ್ ಅನ್ನು ಕೂಡ ಸತ್ಯಾಳೇ ಓಡಿಸಿದ್ದಾಳೆ.

ಹೊಸ ಪ್ಲ್ಯಾನ್ ಮಾಡಿದ ಕೀರ್ತನಾ
ಕಾರ್ತಿಕ್ ಮತ್ತು ಸತ್ಯ ಹೊರಟಿರುವ ಕೆಲಸಕ್ಕೆ ಕಲ್ಲು ಹಾಕಲು ಕೀರ್ತನಾ ಮುಂದಾಗಿದ್ದಾಳೆ. ಇದಕ್ಕಾಗಿ ಕೀರ್ತನಾ ಹೊಸ ಪ್ಲ್ಯಾನ್ ಅನ್ನು ಮಾಡಿದ್ದಾಳೆ. ಇದಕ್ಕೋಸ್ಕರ ಕೀರ್ತನಾ, ಸುಹಾಸ್‌ಗು ಕೂಡ ಕಾರ್ತಿಕ್ ಅವರು ಹೋಗುವ ಜಾಗಕ್ಕೆ ಹೋಗುವಂತೆ ತಿಳಿಸಿದ್ದಾಳೆ. ಸುಹಾಸ್ ಕೂಡ ಹೊರಟಿದ್ದು ಕಾರ್ತಿಕ್ ಮತ್ತು ಸತ್ಯ, ಬಾಲದಂತೆ ಸುಹಾಸ್ ಹೊರಟಿದ್ದಾನೆ. ಅಲ್ಲದೇ ಸತ್ಯ ಗೆಟಪ್ ಬದಲಾಗಿದ್ದನ್ನು ಕೀರ್ತನಾಗೆ ತಿಳಿಸಿ ಫೋಟೋ ಕೂಡ ಕಳಿಸಿದ್ದಾನೆ.

ದಿವ್ಯಾ ಜೊತೆ ಟ್ರಿಪ್ ಹೊರಟ ಬಾಲ
ಅಲ್ಲದೇ, ಕೀರ್ತನಾ ಇಷ್ಟಕ್ಕೆ ಸುಮ್ಮನಾಗದೇ ಬಾಲನನ್ನು ಸಂಪರ್ಕಿಸಿದ್ದಾಳೆ. ಬಾಲನಿಗೆ ಕೆಲಸವೊಂದನ್ನು ಕೊಟ್ಟಿದ್ದಾಳೆ. ಬಾಲ ಬೇರೆ ದಿವ್ಯಾ ಬೇಸರಗೊಂಡಿದ್ದಾಳೆ. ಎಲ್ಲಾದರೂ ಹೊರಗಡೆ ಕರೆದುಕೊಂಡು ಹೋಗಬೇಕು. ಆದರೆ ದುಡ್ಡಿಲ್ಲ ಎಂದು ಯೋಚಿಸುತ್ತಿದ್ದ. ಇದೇ ವೇಳೆಗೆ ಕೀರ್ತನಾ ಕೊಟ್ಟಿರುವ ಕೆಲಸದಿಂದ ಬಾಲ ಜಾಕ್ ಪಾಟ್ ಹೊರೆದಿದ್ದಾನೆ. ದಿವ್ಯಾಳನ್ನು ತನ್ನ ಕೆಲಸದ ನಿಮಿತ್ತ ಟ್ರಿಪ್‌ಗೆ ಕರೆದುಕಂಡು ಹೋಗಲು ಮುಂದಾಗಿದ್ದಾನೆ. ಈ ಮೂಲಕ ಬಾಲ ಸ್ವ ಕಾರ್ಯ ಹಾಗೂ ಸ್ವಾಮಿ ಕಾರ್ಯಕ್ಕೆ ಮುಂದಾಗಿದ್ದಾನೆ.

ಅಕ್ಕ-ತಂಗಿ ಎದುರಾಗುತ್ತಾರಾ..?
ದಿವ್ಯಾಗೆ ಟ್ರಿಪ್ ಹೋಗುತ್ತಿರುವುದು ತುಂಬಾ ಖುಷಿಯಾಗಿದೆ. ಕನೆಗೂ ಈ ಹಳ್ಳಿಯಿಂದ ದೂರ ಹೋಗುವಂತಾಯ್ತಲ್ಲ ಎಂದು ಖುಷಿ ಪಟ್ಟಿದ್ದಾಳೆ. ಬಾಲ ಇದೇ ಟ್ರಿಪ್‌ನಲ್ಲಿ ಹನಿಮೂನ್ ಅನ್ನು ಕೂಡ ಮುಗಿಸಲು ಯೋಚಿಸಿದ್ದಾನೆ. ಆಗ ದಿವ್ಯಾ ಹೇಳಿದ್ದ ಸುಳ್ಳನ್ನು ಸತ್ಯ ಮಾಡಬಹುದು ಎಂದು ಅಂದುಕೊಂಡಿದ್ದಾನೆ. ಇದು ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೇ, ಸಮುದ್ರದ ಬಳಿ ಹೋಗುತ್ತಿದ್ದು, ದಿವ್ಯಾ ಮತ್ತು ಸತ್ಯ ಇಬ್ಬರು ಎದುರಾಗುತ್ತಾರಾ ಎಂಬ ಕುತೂಹಲವೂ ಮೂಡಿದೆ.


Click it and Unblock the Notifications











