Sathya: ಸರ್‌ಪ್ರೈಸ್ ಆಗಿ ಸತ್ಯಳಿಗೆ ಪ್ರಪೋಸ್ ಮಾಡಲು ಮುಂದಾದ ಕಾರ್ತಿಕ್
'ಸತ್ಯ' ಧಾರಾವಾಹಿಯಲ್ಲಿ ದಿವ್ಯಾಳಿಗೆ ಈಗ ಬಾಲ ಹೇಗೆ ಬದುಕುತ್ತಾನೆ. ಅವನ ಜೊತೆಗಿನ ತನ್ನ ಸಂಬಂಧದ ಬಗ್ಗೆ ಕೊಂಚವೂ ಯೋಚನೆಯಿಲ್ಲ. ಬದಲಿಗೆ ತಾನು ಈಗ ಹಣ ಮಾಡಬೇಕು, ಶ್ರೀಮಂತೆ ಆಗಬೇಕು ಎಂಬ ದುರಾಸೆಯೇ ತುಂಬಿದೆ. ಬಾಲ, ಕೀರ್ತನಾಳನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆಯುತ್ತಿದ್ದ ಬಗ್ಗೆ ತಿಳಿದ ದಿವ್ಯಾ ಈಗ ಅದೇ ದಾರಿಯನ್ನು ಆರಿಸಿಕೊಂಡಿದ್ದಾಳೆ.
ಬಾಲ ಒಳ್ಳೆಯ ದಾರಿಯಲ್ಲಿ ನಡೆಯೋಣ ಎಂದರೂ ದಿವ್ಯಾ ಕೇಳುತ್ತಿಲ್ಲ. ಕೀರ್ತನಾಳನ್ನು ಹೆದರಿಸಿ, ಬೆದರಿಸಿ ಆದರೂ ಹಣ ಮಾಡಬೇಕು. ಸತ್ಯಳ ಹೆಸರನ್ನು ಮುಂದಿಟ್ಟುಕೊಂಡು ತನ್ನ ಕೆಲಸಗಳನ್ನು ಸಾಧಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದಾಳೆ. ಕೀರ್ತನಾಳಿಗೆ ವೀಡಿಯೋ ಕಳಿಸಿ ಬೆದರಿಕೆ ಹಾಕಿದ ದಿವ್ಯಾ ಯಾರಿಗೂ ತಿಳಿಯದಂತೆ ಭೇಟಿ ಮಾಡಿದ್ದಾಳೆ. ಕೀರ್ತನಾ, ದಿವ್ಯಾಳಿಗೆ ಜೋರು ಮಾಡುತ್ತಾಳೆ. ನೀನು ನನ್ನ ಬ್ಲ್ಯಾಕ್ ಮೇಲ್ ಮಾಡಲು ಹೊರಟರೆ, ನನಗೇನೂ ಸಮಸ್ಯೆ ಇಲ್ಲ. ಬದಲಿಗೆ ನಿನಗೇ ತೊಂದರೆಯಾಗುವುದು ಎಂದು ಹೇಳುತ್ತಾಳೆ.

ಕೀರ್ತನಾ ಮಾತಿಗೆ ದಿವ್ಯಾ ನನಗೆ ತೊಂದರೆ ಆಗುತ್ತೆ ಅನ್ನುವುದಕ್ಕಿಂತ, ಮದುವೆ ದಿನ ನಾನು ಓಡಿ ಹೋಗಲು ನೀನೇ ಕಾರ್ಣ ಎಂಬುದು ಸತ್ಯಳಿಗೆ ಗೊತ್ತಾದರೆ ಏನಾಗುತ್ತೆ ಎಂಬುದನ್ನು ಮೊದಲು ಅರಿತುಕೊ ಎಂದು ಹೇಳುತ್ತಾಳೆ. ಸತ್ಯಳಿಗೆ ಒಳಗೊಳಗೆ ಹೆದರುವ ಕೀರ್ತನಾ, ದಿವ್ಯಾ ಹೇಳಿದ್ದಕ್ಕೆಲ್ಲಾ ತಲೆಯಾಡಿಸಲು ಮುಂದಾಗಿದ್ದಾಳೆ. ದಿವ್ಯಾ ತನ್ನ ಅಕೌಂಟ್‌ಗೆ ಒಂದೂವರೆ ಲಕ್ಷ ರೂಪಾಯಿ ಹಣವನ್ನು ಪೀಕುತ್ತಾಳೆ.

ದಿವ್ಯಾ ಈಗ ಗರ್ಭಿಣಿನಾ..?
ಇದಿಷ್ಟೇ ಅಲ್ಲ. ಮತ್ತೆ ಮತ್ತೆ ಹಣವನ್ನು ಕೇಳುತ್ತೇನೆ ಎಂದು ಹೇಳುತ್ತಾಳೆ. ಕೀರ್ತನಾ ಮತ್ತು ಸುಹಾಸ್ ದಿವ್ಯಾಳನ್ನು ಹೀಗೆ ಬಿಟ್ಟರೆ, ನಮಗೆ ಉಳಿಗಾಲವಿಲ್ಲ. ಹೇಗಾದರೂ ಮಾಡಿ ನಾವು ಅವಳ ಕಾಟದಿಂದ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಾರೆ.
ಕೆಲಸಕ್ಕೆ ಹೋಗಲು ಮುಂದಾದ ಬಾಲ
ಇತ್ತ ದಿವ್ಯಾ ಮನೆಯಲ್ಲಿ ವಾಂತಿ ಮಾಡಿಕೊಳ್ಳುತ್ತಾಳೆ. ಇದನ್ನು ನೋಡಿದ ಗಿರಿಜಮ್ಮ, ದಿವ್ಯಾ ಗರ್ಭಿಣಿ ಆಗಿರಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಆದರೆ, ದಿವ್ಯಾ ಕೋಪ ಮಾಡಿಕೊಂಡು ಹಾಗೆಲ್ಲಾ ಏನೂ ಇಲ್ಲ ಎನ್ನುತ್ತಾಳೆ. ಜೊತೆಗೆ ಬಾಲನಿಗೆ ತನ್ನನ್ನು ಸಾಕುವುದೇ ಹೆಚ್ಚು ಇನ್ನು ಮಗು ಬೇರೆ ಬೇಕಾ ಎಂದು ಬೈಯುತ್ತಾಳೆ. ಬಾಲನಿಗೆ ದಿವ್ಯಾ ಹೇಳಿದ್ದು ಸರಿ ಎಂದು ಅನಿಸುತ್ತದೆ. ತಾನು ಯಾವುದಾದರೂ ಕೆಲಸಕ್ಕೆ ಹೋಗಬೇಕು ಎಂದು ಹಲವು ಕಡೆ ಪ್ರಯತ್ನ ಪಡುತ್ತಿರುತ್ತಾನೆ.
ಕೆಲಸ ಕೊಟ್ಟ ಸೀತಮ್ಮ
ಇನ್ನು ಸತ್ಯಳಿಗೆ ಸರ್ಪ್ರೈಸ್ ಕೊಡಬೇಕೆಂದು ಕಾರ್ತಿಕ್ ಹೊರಗೆ ಹೋಗಲು ತಯಾರಾಗಿರುತ್ತಾನೆ. ಸತ್ಯಳನ್ನು ಕಾರ್ತಿಕ್ ಜೊತೆಗೆ ಕಳಿಸುವುದು ಇಷ್ಟವಿಲ್ಲದ ಕಾರಣ ಸೀತಮ್ಮ ಒಂದಾದ ಮೇಲೆ ಒಂದು ಕೆಲಸಗಳನ್ನು ಕೊಡುತ್ತಿರುತ್ತಾಳೆ. ಮೊದಲು ಬೈದು ಮಾವಿನಕಾಯಿ ಅನ್ನು ಹೆಚ್ಚಲು ಹೇಳುತ್ತಾಳೆ. ನಂತರ ಹಪ್ಪಳವನ್ನು ಒಣಗಿ ಹಾಕಲು ಹೇಳುತ್ತಾಳೆ. ಆ ಕೆಲಸವೂ ಆದ ಮೇಲೆ ದೀಪಗಳನ್ನು ತೊಳೆದು ಎತ್ತಿಡಲು ಹೇಳುತ್ತಾಳೆ.
ಸೀತಮ್ಮಗೆ ಬೈದ ರಾಯರು
ಸೀತಮ್ಮ, ಸತ್ಯಳಿಗೆ ಬೈದು ಬೈದು ಕೆಲಸ ಹೇಳುತ್ತಿರುವುದನ್ನು ಗಮನಿಸಿದ ರಾಮಚಂದ್ರ ರಾಯರು, ಸೀತಾಳಿಗೆ ಬೈಯುತ್ತಾರೆ. ನೀನು ಮಾಡುತ್ತಿರುವುದು ಸರಿಯಲ್ಲಿ ಸತ್ಯಳನ್ನು ಕಳಿಸು ಎಂದು ಹೇಳುತ್ತಾನೆ. ಆಗ ಬೇರೆ ದಾರಿ ಇಲ್ಲದೇ ಸೀತಮ್ಮ ,ಸತ್ಯಳನ್ನು ಹೋಗಲು ಬಿಡುತ್ತಾಳೆ.
ಸರ್ಪ್ರೈಸ್ ನೀಡಿದ ಕಾರ್ತಿಕ್
ಕಾರ್ತಿಕ್, ಸತ್ಯಳಿಗಾಗಿ ಕಾದು ಕಾದು ಸುಸ್ತಾಗಿರುತ್ತಾನೆ. ಇದರಿಂದ ಕಾರ್ತಿಕ್‌ಗೆ ಬೇಸರ ವಾಗುತ್ತದೆ. ಕೊನೆಗೆ ಸತ್ಯ ರೆಡಿಯಾಗಿ ಬಂದ ಮೇಲೆ ಖುಷಿಯಿಂದ ಹೊರಗಡೆ ಕರೆದುಕೊಂಡು ಹೋಗುತ್ತಾನೆ. ಆದರೆ, ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಮೊದಲು ಹೇಳುವುದಿಲ್ಲ. ಬಳಿಕ ಸರ್ಪ್ರೈಸ್ ಜಾಗಕ್ಕೆ ಹೋದಾಗ ಸತ್ಯಳಿಗೆ ಬಹಳ ಖುಷಿಯಾಗುತ್ತದೆ. ಈಗ ಕಾರ್ತಿಕ್ ಹೇಗೆ ಪ್ರಪೋಸ್ ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











