Sathya: ದುರಹಂಕಾರ ಹೆಚ್ಚಿಸಿಕೊಂಡ ದಿವ್ಯಾಳಿಂದ ಬಾಲ ಹಾಗೂ ಮನೆಯವರಿಗೆ ಬೇಸರ

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಇತ್ತೀಚೆಗೆ ಸೀತಾ ಮನೆಯ ವಿಚಾರಗಳೆಲ್ಲವೂ ಕೊಂಚ ಬೋರ್ ಆಗುತ್ತಿದೆ. ಸೀತಾ, ಸತ್ಯಳನ್ನು ಪ್ರೀತಿಸುವ ರೀತಿ ಅತೀ ಆಯಿತೇನೋ ಎನಿಸುತ್ತಿದೆ.

ಸತ್ಯ ಮನೆಯಲ್ಲಿ ನಡೆಯುವ ಕಥೆ ಸ್ವಲ್ಪ ರಬ್ಬರ್ ಎಳೆದಂತೆ ಡ್ರಾಗ್ ಮಾಡಲಾಗುತ್ತಿದೆ. ಸತ್ಯ ಪರೀಕ್ಷೆ ಬರೆಯುವುದು ಬೇಡ ಎಂದಿದ್ದು, ಪದ್ಮಾ ವಿಚಾರವನ್ನು ಒಂದೇ ಮನೆಯಲ್ಲಿ ಸೀಕ್ರೆಟ್ ಆಗಿಟ್ಟಿರುವುದು. ಆದರೆ, ದಿವ್ಯಾ ಹಾಗೂ ಬಾಲನ ವಿಚಾರವನ್ನು ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ.

Sathya Serial 30th November episode written update

ದಿವ್ಯಾ ಗುಗ್ಗು ರೀತಿ ನಡೆದುಕೊಂಡು ಹಳ್ಳಕ್ಕೆ ಬೀಳುತ್ತಿದ್ದಾಳೆ. ಬಾಲ ಒಳ್ಳೆಯವನಾಗಿ ಮನೆಯನ್ನು ನಡೆಸುತ್ತಿದ್ದಾನೆ.

ಸೊಸೆಗೆ ಓದಲು ಸಹಕರಿಸುತ್ತಿರುವ ಅತ್ತೆ

ಸತ್ಯ ಪರೀಕ್ಷೆ ಬರೆದು, ರೌಡಿಯಂತೆ ಪೊಲೀಸ್ ಕೆಲಸಕ್ಕೆ ಬೇಡ ಎಂದಿದ್ದ ಸೀತಾಳನ್ನು ಕಾರ್ತಿಕ್ ಮಾತನಾಡಿಸಿ ಒಪ್ಪಿಸಿದ್ದಾನೆ. ಈಗ ಸೀತಾ, ಸತ್ಯಳ ಓದಿಗೆ ಸಹಕರಿಸುತ್ತಿದ್ದಾಳೆ. ಸತ್ಯ ಮನೆಯಲ್ಲಿ ಯಾವ ಕೆಲಸವನ್ನೂ ಮಾಡುವುದು ಬೇಡ. ಅವಳು ಓದಿಕೊಳ್ಳಲಿ ಎಂದಿದ್ದಾಳೆ. ಸತ್ಯ ಓದುವುದು ಬಿಟ್ಟು ಬೇರೆ ಕೆಲಸ ಮಾಡುವುದನ್ನು ನೋಡಿದರೂ ಬೈಯುತ್ತಿದ್ದಾಳೆ. ಸತ್ಯ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಪಾಸ್ ಆಗಲೀ ಎನ್ನುವುದು ಸೀತಾ ಆಸೆಯಾಗಿದೆ. ಇನ್ನು ಕೀರ್ತನಾಳಿಗೆ ಈಗ ಸತ್ಯ ಓದುತ್ತಿರುವುದು ಸಂಕಷ್ಟ ತಂದಿದೆ. ನಾಳೆ ದಿನ ಸತ್ಯ ಪೊಲೀಸ್ ಆದರೆ ತನ್ನ ಕೆಲಸಗಳಿಗೆ ಅಡ್ಡಿಯಾಗುತ್ತಾಳೆ ಎಂದು ಹೆದರಿದ್ದಾಳೆ. ಹೀಗಾಗಿ ಸತ್ಯ ಪರೀಕ್ಷೆಯನ್ನೇ ಬರೆಯದಂತೆ ಮಾಡಬೇಕು ಎಂದು ಪ್ಲಾನ್ ಮಾಡುತ್ತಿದ್ದಾಳೆ. ಕೀರ್ತನಾಳ ಈ ಪ್ಲಾನ್ ಆದರೂ ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Sathya Serial 30th November episode written update

ದಿವ್ಯಾಳ ಸೊಕ್ಕಿಗೆ ಪುಷ್ಠಿ ಕೊಟ್ಟ ಕೆಲಸ

ದಿವ್ಯಾಳಿಗೆ ಮೊದಲಿನಿಂದಲೂ ದುರಹಂಕಾರ. ತಾನೇ ಶ್ರೇಷ್ಠ. ತನ್ನ ನಿರ್ಧಾರಗಳೇ ಸರಿ ಎಂದು ಆಲೋಚಿಸುವವಳು. ಅಷ್ಟೇ ಅಲ್ಲದೇ, ತಾನು ಹೇಳಿದ್ದೇ ನಡೆಯಬೇಕು. ತನಗೆ ಶ್ರೀಮಂತಿಕೆ ಬೇಕು ಎಂದು ಆಸೆ ಪಡುವವಳು. ದುಡ್ಡಿಗೆ ಆಸೆ ಬಿದ್ದು, ಬಾಲನ ಮೋಸದ ಬಲೆಯಲ್ಲಿ ಸಿಲುಕಿದಳು. ಈಗ ಬಾಲನ ಬಳಿ ಶ್ರೀಮಂತಿಕೆ ಇಲ್ಲ ಎಂಬ ಕಾರಣಕ್ಕೆ ಆತನನ್ನು ತಿರಸ್ಕರಿಸಿರುವುದಲ್ಲದೇ, ಹೊಸ ಕೆಲಸ ನೋಡಿಕೊಂಡಿದ್ದಾಳೆ. ಕಂಪನಿಯ ಬಾಸ್ ಬೇರೆ ದಿವ್ಯಾಳ ಅಂದಕ್ಕೆ ಫಿದಾ ಆಗಿದ್ದಾನೆ. ಇದು ಮನೆಯಲ್ಲಿ ದಿವ್ಯಾ ತೋರುವ ಸೊಕ್ಕಿಗೆ ಪುಷ್ಠಿ ಸಿಕ್ಕಂತಾಗಿದೆ.

ದಿವ್ಯಾ ದುರಹಂಕಾರಕ್ಕೆ ಮಿತಿಯೇ ಇಲ್ಲ

ಆಫೀಸಿನಲ್ಲಿ ಬಾಸ್ ದಿವ್ಯಾಳಿಗೆ ಸ್ಪೆಷಲ್ ಟ್ರೀಟ್‌ಮೆಂಟ್ ನೀಡುತ್ತಿದ್ದಾನೆ. ದಿವ್ಯಾಳಿಗೆ ಮದುವೆಯಾಗಿಲ್ಲ ಎಂದು ತಿಳಿದಿದ್ದಾನೆ. ಸ್ಟೈಲ್ ಆಗಿ ಬರುವ ದಿವ್ಯಾಳನ್ನು ಕಂಡು ಫಿದಾ ಆಗಿದ್ದಾನೆ. ಇದನ್ನೇ ಈ ಬಂಡವಾಳ ಮಾಡಿಕೊಂಡಿರುವ ದಿವ್ಯಾ, ಆತನಿಂದ ಹಣ ಗಳಿಸಬೇಕು ಎಂದು ಮನದಲ್ಲೇ ಸ್ಕೆಚ್ ಹಾಕಿದ್ದಾಳೆ. ಇದರಿಂದ ದಿವ್ಯಾ ಮನೆಯಲ್ಲಿ ಬಹಳ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾಳೆ. ಬಾಲನಿಗೆ ಕೊಂಚವೂ ಬೆಲೆ ಕೊಡುತ್ತಿಲ್ಲ. ತಾಳಿ ಹಾಕಿಕೊಂಡು ಆಫೀಸಿಗೆ ಹೋದರೆ, ತನ್ನ ಇಮೇಜ್‌ಗೆ ತೊಂದರೆಯಾಗುತ್ತೆ ಎಂದು ಭಾವಿಸಿ ಮನೆಯಲ್ಲೇ ಬಿಚ್ಚಿಟ್ಟು ಹೋಗಿದ್ದಾಳೆ.

ಮನೆಯವರಿಗೆಲ್ಲಾ ನೋವು ಕೊಟ್ಟ ದಿವ್ಯಾ

ದಿವ್ಯಾ ತಾಳಿಯನ್ನು ನೋಡಿದ ಗಿರಿಜಮ್ಮನಿಗೆ ಬಹಳ ಕೋಪ ಬಂದಿದೆ. ತಾಳಿಯ ಮಹತ್ವ ತಿಳಿಯದೇ ದಿವ್ಯಾ ಎಂತಹ ಕೆಲಸ ಮಾಡಿದ್ದಾಳೆ ಎಂದು ಬೇಸರಗೊಂಡಿದ್ದಾಳೆ. ದಿವ್ಯಾ ಮನೆಗೆ ಬರುತ್ತಿದ್ದಂತೆ ಅವಳ ಕೆನ್ನೆಗೆ ಬಾರಿಸಿ, ತಾಳಿ ಧರಿಸಲು ಹೇಳಿದ್ದಾಳೆ. ಆದರೆ, ದಿವ್ಯಾ ದುರಹಂಕಾರದಿಂದ ಇನ್ಯಾವುದೇ ಕಾರಣಕ್ಕೂ ತಾಳಿ ಹಾಕಿಕೊಳ್ಳಲ್ಲ. ನನಗೆ ಅದರ ಅಗತ್ಯವಿಲ್ಲ. ಬಾಲನನ್ನು ನನ್ನ ಗಂಡ ಎಂದು ಒಪ್ಪುವುದಿಲ್ಲ ಎಂದಿದ್ದಾಳೆ. ಇದು ಬಾಲನಿಗೆ ನೋವುಂಟು ಮಾಡಿದೆ. ದಿವ್ಯಾಳ ನಡೆಯಿಂದ ಮನೆಯವರೆಲ್ಲಾ ಬೇಸರಗೊಂಡಿದ್ದಾರೆ.

More from Filmibeat

English summary
Sathya Serial today episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X