Sathya: ಸುಳ್ಳಿನ ಗೋಪುರ ಸಾಗರದ ಅಲೆಯಲ್ಲಿ ಕೊಚ್ಚಿ ಹೋಗುತ್ತಾ ಇಲ್ಲವೇ 2 ಜೋಡಿ ನಡುವೆ ಪ್ರೀತಿ ಚಿಗುರುತ್ತಾ..?
ಸತ್ಯ ಧಾರಾವಾಹಿಯಲ್ಲಿ ಕೀರ್ತನಾ ಹೊಸ ಪ್ಲ್ಯಾನ್ ಮಾಡಿದ್ದಾಳೆ. ಕಾರ್ತಿಕ್ ಹಾಗೂ ಸತ್ಯಳನ್ನು ಬೇರೆ ಮಾಡಲೇಬೇಕು ಎಂದು ಇವರ ಹಿಂದೆ ತನ್ನ ಪತಿಯನ್ನು ಬಿಟ್ಟಿದ್ದಾಳೆ.
ಸತ್ಯ ಪ್ಯಾಂಟ್ ಜಾಕೆಟ್ ಧರಿಸಿ ಬೈಕ್ ರೈಡ್‌ಗೆ ಮುಂದಾಗಿದ್ದಾಳೆ. ಇವರಿಬ್ಬರನ್ನು ಫಾಲೋ ಮಾಡುತ್ತಿರುವ ಕೀರ್ತನಾ ಗಂಡ ಸುಹಾಸ್ ಇದನ್ನೆಲ್ಲಾ ಫೋಟೋ ತೆಗೆದು ಕಳಿಸಿದ್ದಾನೆ.
ಫೋಟೋ ನೋಡಿದ ಕೀರ್ತನಾ ಸಿಕ್ಕಿದ್ದೇ ಚಾನ್ಸ್ ಎಂದು ಸೀತಾಳಿಗೆ ಫೋಟೋವನ್ನು ತೋರಿಸಿ, ನಿನ್ನ ಸೊಸೆ ಮನೆಯಲ್ಲಿ ಇರೋದೆ ಒಂದು ರೀತಿ ಹೊರಗಡೆ ಹೋದರೆ ಇರೋದೇ ರೌಡಿಯಂತೆ ಎಂದು ಪಿನ್ ಇಟ್ಟಿದ್ದಾಳೆ. ಇದನ್ನು ನೋಡಿ ಸೀತಾ ಇನ್ನಷ್ಟು ಕೋಪ ಮಾಡಿಕೊಂಡಿದ್ದಾಳೆ.

ಮಂಗಳೂರಿನ ಬೀಚ್ ನಲ್ಲಿ ಮಸ್ತ್ ಮಜಾ
ಕಾರ್ತಿಕ್‌ಗೆ ಇಷ್ಟ ಎಂದು ಪ್ಯಾಂಟ್ ಟಿ-ಶರ್ಟ್ ಧರಿಸಿದ ಸತ್ಯ ಬೈಕ್ ಏರಿ ಜಾಲಿ ರೈಡ್ ಹೋಗಿದ್ದಾಳೆ. ಕಾರ್ತಿಕ್ ಜೊತೆಗೆ ಸಲುಗೆಯಿಂದ ಇದ್ದು, ಇಬ್ಬರು ತಮಗೆ ಗೊತ್ತಿಲ್ಲದಂತೆಯೇ ಹತ್ತಿರವಾಗುತ್ತಿದ್ದಾರೆ. ಬೈಕ್‌ನಲ್ಲಿ ಮಂಗಳೂರು ಬೀಚ್ ತಲುಪಿ ಎಂಜಾಯ್ ಮಾಡಲು ಮುಂದಾಗಿದ್ದಾರೆ. ಮದುವೆಯಾದ ಮೇಲೆ ಸತ್ಯ ಮತ್ತು ಕಾರ್ತಿಕ್ ಇದೇ ಮೊದಲ ಬಾರಿಗೆ ಹೊರಗಡೆ ಬಂದಿದ್ದು, ಇದೇ ಇವರ ಹನಿಮೂನ್ ಟ್ರಿಪ್ ಕೂಡ ಆಗಿದೆ. ಸತ್ಯ ಅಂತೂ ಈ ಟ್ರಿಪ್ ಅನ್ನು ಮಸ್ತ್ ಮಜಾ ಮಾಡುತ್ತಿದ್ದಾಳೆ.

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
ಸತ್ಯ ಹಾಗೂ ಕಾರ್ತಿಕ್ ಜೋಡಿ ರೆಸಾರ್ಟ್ ಬುಕ್ ಮಾಡಲು ಹೋಗಿದ್ದಾರೆ. ಆದರೆ, ರೂಮ್‌ಗಳನ್ನೆಲ್ಲಾ ಯಾರೋ ಒಬ್ಬರೇ ಬುಕ್ ಮಾಡಿರುವುದನ್ನು ತಿಳಿದು ಸಿಂಗಲ್ ಬೆಡ್ ಇರುವ ರೂಮ್ ಅನ್ನು ಸತ್ಯ ಬುಕ್ ಮಾಡಿದ್ದಾಳೆ. ಇದು ಈಗ ಕಾರ್ತಿಕ್‌ಗೆ ಪ್ರಾಣ ಸಂಕಟವನ್ನು ತಂದಿಟ್ಟಿದ್ದರೆ, ಸತ್ಯಗೆ ಫುಲ್ ಖುಷಿಯಾಗಿದೆ. ಒಂದೇ ಬೆಡ್‌ನಲ್ಲಿ ಪತಿ ಕಾರ್ತಿಕ್ ಜೊತೆಗೆ ಇದ್ದರೆ, ರಾಮಚಂದ್ರ ರಾಯರು ಹೇಳಿದಂತೆ ಹನಿಮೂನ್ ಕೂಡ ಆಗುತ್ತದೆ. ಕಾರ್ತಿಕ್ ತನ್ನನ್ನು ಹೆಂಡತಿಯನ್ನಾಗಿ ಸ್ವೀಕರಿಸುತ್ತಾನೆ ಎಂಬುದು ಸತ್ಯ ಆಲೋಚನೆ. ಆದರೆ, ಕಾರ್ತಿಕ್‌ಗೆ ಸತ್ಯ ಸ್ನೇಹಿತೆಯಂತೆಯೇ ಇದ್ದು, ಆಕೆಯನ್ನು ಹೆಂಡತಿ ಎಂದು ಒಪ್ಪಿಕೊಳ್ಳಲು ತಯಾರಿಲ್ಲ.

ಮತ್ತೊಂದು ಸುಳ್ಳನ್ನು ನಂಬಿದ ದಿವ್ಯಾ
ಇತ್ತ ಅದೇ ರೆಸಾರ್ಟ್‌ಗೆ ದಿವ್ಯಾ ಹಾಗೂ ಬಾಲ ಕೂಡ ಬಂದಿದ್ದಾರೆ. ಕೀರ್ತನಾ ಏನು ಪ್ಲ್ಯಾನ್ ಮಾಡಿದ್ದಾಳೋ ಗೊತ್ತಿಲ್ಲ. ಆದರೆ, ಬಾಲನಿಗೆ ಹಣ ಕೊಟ್ಟು ಕಾರ್ತಿಕ್ ಹೋಗುವ ಜಾಗಕ್ಕೆ ಕಳಿಸಿದ್ದಾಳೆ. ಹೀಗಾಗಿ ಬಾಲ ಮತ್ತು ದಿವ್ಯಾ ಇಬ್ಬರೂ ಹನಿಮೂನ್ ನೆಪದಲ್ಲಿ ಮಂಗಳೂರಿಗೆ ಬಂದಿದ್ದಾರೆ. ಕೀರ್ತನಾ ಕೊಟ್ಟಿರುವ ಹಣದಲ್ಲಿ ಬಾಲ ಫುಲ್ ಮಜಾ ಮಾಡುತ್ತಿದ್ದಾನೆ. ಇಡೀ ರೆಸಾರ್ಟ್‌ನಲ್ಲಿರುವ ರೂಮ್‌ಗಳನ್ನೆಲ್ಲಾ ಬಾಲ ಒಬ್ಬನೇ ಬುಕ್ ಮಾಡಿದ್ದಾನೆ. ಅಲ್ಲದೇ, ದಿವ್ಯಾಗೆ ಈ ರೆಸಾರ್ಟ್ ತನ್ನದೇ ಎಂದು ಕೂಡ ಸುಳ್ಳು ಹೇಳಿದ್ದಾನೆ. ದಿವ್ಯಾ ದಡ್ಡಿಯಂತೆ ಪದೇ ಪದೇ ಬಾಲನ ಸುಳ್ಳಿನ ಬಾವಿಗೆ ಬೀಳುತ್ತಲೇ ಇದ್ದಾಳೆ.

ಕೀರ್ತನಾ ಪ್ಲಾನ್ ಉಲ್ಟಾ ಆಗುತ್ತಾ..?
ಹೇಗಾದರೂ ಮಾಡಿ ಸೀತಾಳ ವೀಕ್‌ನೆಸ್ ಅನ್ನು ಬಳಸಿಕೊಂಡು ಸತ್ಯಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂದುಕೊಂಡಿರುವ ಕೀರ್ತನಾ ಪದೇ ಪದೇ ತಮ್ಮನ ಹಾಗೂ ಸತ್ಯ ಮೇಲೆ ಕತ್ತಿ ಮಸಿಯುತ್ತಲೇ ಇರುತ್ತಾಳೆ. ಆದರೆ, ಸತ್ಯ ನಡೆದುಕೊಳ್ಳುತ್ತಿರುವ ರೀತಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸೀತಾ ಆಕೆಯನ್ನು ಸೊಸೆ ಎಂದು ಒಪ್ಪಿಕೊಳ್ಳುತ್ತಿದ್ದಾಳೆ. ಈಗ ಕೀರ್ತನಾ ಮಾಡಿರುವ ಪ್ಲ್ಯಾನ್ ಆಕೆಗೆ ತಿರುಮಂತ್ರವಾಗುತ್ತಾ ಎಂಬ ಕುತೂಹಲ ಮೂಡಿದೆ. ಇನ್ನು ಸತ್ಯ, ಕಾರ್ತಿಕ್, ದಿವ್ಯಾ ಹಾಗೂ ಬಾಲ ಒಂದೇ ಬೀಚ್‌ಗೆ ಬಂದಿದ್ದು, ಬಾಲ ಕಟ್ಟಿರುವ ಸುಳ್ಳಿನ ಅರಮನೆ ಸಮುದ್ರದ ಅಲೆಯಲ್ಲಿ ತೋಯ್ದು ಕರಗಿ ಹೋಗುತ್ತಾ..?


Click it and Unblock the Notifications











