For Quick Alerts
  ALLOW NOTIFICATIONS  
  For Daily Alerts

  ಕೀರ್ತನಾಗೆ ಕಪಾಳಮೋಕ್ಷ ಮಾಡಿದ ಸೀತಾ: ಇನ್ನಾದರೂ ಸತ್ಯಾಳನ್ನು ನಂಬುತ್ತಾಳಾ..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಮತ್ತೊಂದು ರಾದ್ಧಾಂತವೇ ನಡೆದಿದೆ. ಕೀರ್ತನಾ ಪಾರ್ಟಿ ಅರೇಂಜ್ ಮಾಡಿ ಕಾರ್ತಿಕ್‌ಗೆ ಮತ್ತು ಬರುವ ತೆಂಗಿನ ಹಾಲನ್ನು ಕೊಟ್ಟಿದ್ದಾಳೆ. ಇದರಿಂದ ಕುಡಿದಂತೆ ನಡೆದುಕೊಳ್ಳುತ್ತಿದ್ದ ಕಾರ್ತಿಕ್‌ನ ಕಂಡು ಸೀತಾ ಸಿಟ್ಟಾಗಿದ್ದಾಳೆ.

  ಕೀರ್ತನಾ ಮಾಡಿದ ಕೆಲಸದಿಂದ ಈಗ ಸೀತಾ ಎದುರಿಗೆ ಸತ್ಯ ತಪ್ಪಿತಸ್ಥ ಸ್ಥಾನದಲ್ಲಿ ಕುಳಿತಿದ್ದಾಳೆ. ಸತ್ಯ ಯಾಕಾದರೂ ಈ ಮನೆಗೆ ಸೊಸೆಯಾಗಿ ಬಂದಳೋ ಎಂದು ಬೈದುಕೊಳ್ಳುತ್ತಾಳೆ. ಸತ್ಯ ಕೊಟ್ಟ ಜೂಸ್‌ನಿಂದಲೇ ಹೀಗಾಗಿದೆ ಎಂದರೆ ಅದು ಬೇಕಂತಲೇ ಸತ್ಯ ಹೀಗೆ ಮಾಡಿದ್ದಾಳೆ ಎಂದು ಸೀತಾ ಗರಂ ಆಗಿದ್ದಾಳೆ.

  ಆಸ್ಪತ್ರೆಗೆ ಒಬ್ಬೊಂಟಿಯಾಗಿ ಹೊರಟ ಸಂಜು: ಮುಂದೇನಾಗುತ್ತದೋ..?ಆಸ್ಪತ್ರೆಗೆ ಒಬ್ಬೊಂಟಿಯಾಗಿ ಹೊರಟ ಸಂಜು: ಮುಂದೇನಾಗುತ್ತದೋ..?

  ಈ ಬಗ್ಗೆ ಸೀತಾ, ಸತ್ಯ ಜೊತೆಗೆ ಜಗಳವಾಡುವುದೊಂದು ಬಾಕಿ ಇದೆ. ಸೀತಾಳನ್ನು ಕಂಡ ಊರ್ಮಿಳಾ ಸಮಾಧಾನ ಮಾಡುತ್ತಿದ್ದಾಳೆ. ಸುಖಾ ಸುಮ್ಮನೆ ಸತ್ಯ ಮೇಲೆ ಕೋಪ ಮಾಡಿಕೊಳ್ಳಬೇಡಿ ಅಕ್ಕ, ಸತ್ಯ ಈ ಮನೆಗೆ ಹೊಂದಿಕೊಳ್ಳುತ್ತಿದ್ದಾಳೆ. ಅವಳು ಈ ಕೆಲಸವನ್ನೆಲ್ಲಾ ಮಾಡಿಲ್ಲ ಎನ್ನುತ್ತಾಳೆ.

   ಕೀರ್ತನಾಗೆ ಕಪಾಳಮೋಕ್ಷ ಮಾಡಿದ ಸೀತಾ

  ಕೀರ್ತನಾಗೆ ಕಪಾಳಮೋಕ್ಷ ಮಾಡಿದ ಸೀತಾ

  ಸೀತಾ, ಸತ್ಯಳ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಅವಳಿಗೆ ಏನು ಮಾಡಬೇಕು..? ಕೋಟೆ ಮನೆಯಲ್ಲಿ ಪಾರ್ಟಿ ಮಾಡಿದ್ದಾಳೆ. ನನ್ನ ಮಗನ ಜೀವನವನ್ನು ಹಾಳು ಮಾಡಲು ಹೊರಟಿದ್ದಾಳೆ ಎಂದು ಕೂಗಾಡುತ್ತಾಳೆ. ಆಗ ಊರ್ಮಿಳಾ ಸಮಾಧಾನವಾಗಿ ಆ ಪಾರ್ಟಿ ಅರೇಂಜ್ ಮಾಡಿದ್ದು, ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿಯನ್ನು ಹಾಕಿದ್ದು ಎರಡೂ ಕೂಡ ಕೀರ್ತನಾ ಎಂದು ಹೇಳುತ್ತಾಳೆ. ಆಗ ಕೋಪಗೊಂಡ ಸೀತಾ ಸೀದಾ ಕೀರ್ತನಾ ರೂಮಿಗೆ ಹೋಗುತ್ತಾಳೆ. ಕೀರ್ತನಾಳಿಗೆ ಕಪಾಳಕ್ಕೆ ಬಾರಿಸಿ ಬೈಯುತ್ತಾಳೆ. ಒಳ್ಳೆಯ ಬುದ್ಧಿ ಕಲಿ, ನಿನ್ನಿಂದ ಮನೆ ಮಾನ-ಮರ್ಯಾದೆ ಹೋಗುತ್ತಿದೆ ಎಂದು ಹೇಳುತ್ತಾಳೆ.

   ಸತ್ಯ ಬಗ್ಗೆ ಮತ್ತೆ ಚಾಡಿ ಹೇಳಿದ ಕೀರ್ತನಾ

  ಸತ್ಯ ಬಗ್ಗೆ ಮತ್ತೆ ಚಾಡಿ ಹೇಳಿದ ಕೀರ್ತನಾ

  ಕೀರ್ತನಾ ತನ್ನ ಮೇಲೆ ಅಮ್ಮ ಕೈ ಮಾಡಿದ್ದಕ್ಕೆ ಮತ್ತೆ ಸತ್ಯಳ ಮೇಲೆ ಕೋಪ ಮಾಡಿಕೊಂಡು ಅವಳ ಮೇಲೆ ಇನ್ನಷ್ಟು ಚಾಡಿ ಹೇಳುತ್ತಾಳೆ. ಅವಳ ಮಾತನ್ನು ನಂಬಿ ನನಗೆ ಹೊಡೆಯುತ್ತಿದ್ದೀರಾ..? ನಿಮ್ಮ ಮಾತನ್ನು ಮೀರಿ ದೇವರ ಮನೆಗೆ, ಅಡುಗೆ ಮನೆಗೆ ಬರುತ್ತಾಳೆ. ಸ್ವಲ್ಪ ದಿನ ಕಳೆದರೆ ಮನೆಯನ್ನು ಗ್ಯಾರೇಜ್ ಮಾಡಿ ಬಿಡುತ್ತಾಳೆ ಎಂದು ಹೇಳುತ್ತಾಳೆ. ಆಗ ಸೀತಾ ಅವಳ ಬಗ್ಗೆ ಬಿಡು., ನೀನು ಸರಿಯಾಗು ಈ ಮನೆಯಲ್ಲಿ ಇನ್ನಾರು ತಿಂಗಳಷ್ಟೇ ಸತ್ಯ ಇರೋದು ಎನ್ನುತ್ತಾಳೆ. ಡೈವೋರ್ಸ್ ಪೇಪರ್‌ಗಳಿಗೆ ಸಹಿ ಹಾಕಿ ಆಗಿದೆ. ಆರು ತಿಂಗಳ ಒಳಗೆ ಸತ್ಯ ಈ ಮನೆಗೆ ಹೊಂದಿಕೊಳ್ಳದೇ ಹೋದರೆ ಅವಳು ಈ ಮನೆ ಬಿಟ್ಟು ಹೋಗುತ್ತಾಳೆ ಎಂದು ಸತ್ಯವನ್ನೆಲ್ಲಾ ಸೀತಾ ಹೇಳುತ್ತಾಳೆ. ಆ ಮಾತನ್ನು ಕೇಳಿ ಕೀರ್ತನಾ ಸತ್ಯವನ್ನು ಕೇಳಿ ಫುಲ್ ಖುಷಿಯಾಗಿದ್ದಾಳೆ.

   ಸತ್ಯಗೆ ಗಿಫ್ಟ್ ಕೊಡುತ್ತಾನಾ ಕಾರ್ತಿಕ್..?

  ಸತ್ಯಗೆ ಗಿಫ್ಟ್ ಕೊಡುತ್ತಾನಾ ಕಾರ್ತಿಕ್..?

  ಇತ್ತ ರಾಮಚಂದ್ರ ರಾಯರು ಕಾರ್ತಿಕ್ ಜೊತೆ ಮಾತನಾಡುವಾಗ, ಸತ್ಯಳನ್ನು ಚೆನ್ನಾಗಿ ನೋಡಿಕೋ. ಅವಳು ನಿನ್ನನ್ನು ಪ್ರೀತಿಸುತ್ತಾಳೆ. ನೀವಿಬ್ಬರು ಚೆನ್ನಾಗಿದ್ದರೆ, ನಾನು ಚೆನ್ನಾಗಿರುತ್ತೇನೆ ಎಂದು ಹೇಳುತ್ತಾನೆ. ಅಪ್ಪನ ಮಾತು ಕೇಳಿದ ಕಾರ್ತಿಕ್, ಸತ್ಯಳ ಮೇಲೆ ಒಲವು ತೋರಲು ಮುಂದಾಗುತ್ತಾನೆ. ಹೀಗಾಗಿ ಸತ್ಯಗೆ ಏನಾದರೂ ಉಡುಗೊರೆ ಕೊಡಬೇಕು ಎಂದು ಗೂಗಲ್ ಮಾಡುತ್ತಿರುತ್ತಾನೆ.

   ಮತ್ತೆ ಬಾಲನ ಬಿಟ್ಟು ಬಂದಳಾ ದಿವ್ಯಾ..?

  ಮತ್ತೆ ಬಾಲನ ಬಿಟ್ಟು ಬಂದಳಾ ದಿವ್ಯಾ..?

  ದಿವ್ಯಾಗೆ ಆ ಹಳ್ಳಿ ಜೀವನ ಸಾಕಾಗಿ ಹೋಗಿದೆ. ಬಾಲನ ಮಾತು ಕೇಳಿಕೊಂಡು ತಪ್ಪು ಮಾಡಿದೆ ಎಂದು ಪ್ರತಿ ಸಲ ಅನಿಸಿದರೂ, ಸಿರಿವಂತಿಕೆ ಜೀವನಕ್ಕಾಗಿ ಏನೇನು ಕನಸು ಕಾಣುತ್ತಿರುತ್ತಾಳೆ. ಆದರೆ ಆ ಹಳ್ಳಿಯಲ್ಲಿ ಇರುವುದು, ಕೆಲಸ ಮಾಡುವುದು ದಿವ್ಯಾ ಕೈಯಲ್ಲಿ ಆಗುತ್ತಿರುವುದಿಲ್ಲ. ಹಾಗಾಗಿ ದಿವ್ಯ ಮತ್ತೆ ಪತ್ರ ಬರೆದಿಟ್ಟು ವಾಪಸ್ ಅವರ ತಾಯಿ ಮನೆಗೆ ಬಂದಿದ್ದಾಳೆ. ಆದರೆ ಅವರ ತಾಯಿ ಸೇರಿಸುತ್ತಾಳಾ ಮುಂದಿನ ಸಂಚಿಕೆಯಲ್ಲಿ ತಿಳಿಯುತ್ತದೆ.

   ಬಿಗ್‌ ಬಾಸ್‌ ಸೀಸನ್‌ 9ರಲ್ಲಿ ಇವರಿಬ್ಬರು ನನಗಿಷ್ಟ: ಬ್ರೋ ಗೌಡ ಬಿಗ್‌ ಬಾಸ್‌ ಸೀಸನ್‌ 9ರಲ್ಲಿ ಇವರಿಬ್ಬರು ನನಗಿಷ್ಟ: ಬ್ರೋ ಗೌಡ

  English summary
  sathya serial 4th october Episode Written Update. seetha believes because of Sathya karthik life is spoiling. But when seethe comes no that culprit is keertha she slaps her.
  Wednesday, October 5, 2022, 20:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X