Sathya: ಬಾಲನನ್ನು ಪೇಚಿಗೆ ಸಿಲುಕಿಸಿರುವ ದಿವ್ಯಾ: ರಾಕಿ-ರಿತು ಬಗ್ಗೆ ಸತ್ಯಾಗೆ ಟೆನ್ಷನ್‌!

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಕಾರ್ತಿಕ್ ಕೆಲಸ ಕಲಿಯಲು ಆಫೀಸಿಗೆ ಹೋಗುತ್ತಿದ್ದಾನೆ. ಆದರೆ ಆಫೀಸಿನಲ್ಲಿ ಎಲ್ಲರೂ ಕಾರ್ತಿಕ್ ನನ್ನು ತುಂಬಾನೇ ಕೀಳಾಗಿ ಕಾಣುತ್ತಿದ್ದಾರೆ.

ಈಗ ಕಾರ್ತಿಕ್ ಗೆ ಕೀರ್ತನಾನೇ ಬಾಸ್. ಕೀರ್ತನಾ ಕೂಡ ಬೇಕಂತಲೇ ಕಾರ್ತಿಕ್‌ನನ್ನು ಬೈಯುತ್ತಿರುತ್ತಾಳೆ. ಎಲ್ಲರ ಮುಂದೆ ಕಾರ್ತಿಕ್‌ಗೆ ಚಿಕ್ಕ ಪುಟ್ಟ ವಿಚಾರಕ್ಕೂ ಅವಮಾನ ಮಾಡುತ್ತಾಳೆ.

ಇದೆಲ್ಲವೂ ಕಾರ್ತಿಕ್‌ಗೆ ಬೇಸರವನ್ನು ತರುತ್ತದೆ. ಆದರೆ, ಸತ್ಯ ಸದಾ ಕಾರ್ತಿಕ್‌ಗೆ ಸಮಾಧಾನ ಹೇಳುತ್ತಿರುತ್ತಾಳೆ. ಕಾರ್ತಿಕ್‌ನನ್ನು ಕೆಲಸ ಮಾಡಲು ಹುರಿಸುಂಬಿಸುತ್ತಿರುತ್ತಾಳೆ.

ಕಾರ್ತಿಕ್‌ಗೆ ಬೆಲೆ ಕೊಡದ ಕೀರ್ತನಾ

ಕಾರ್ತಿಕ್‌ಗೆ ಬೆಲೆ ಕೊಡದ ಕೀರ್ತನಾ

ಆಫೀಸಿನಲ್ಲಿ ಕಾರ್ತಿಕ್ ಕೆಲ ಪ್ರಾಜೆಕ್ಟ್‌ಗಳ ಐಡಿಯಾ ಕೊಡುತ್ತಾನೆ. ಆದರೆ, ಎಲ್ಲರೂ ರಿಜೆಕ್ಟ್ ಮಾಡುತ್ತಾರೆ. ಆಗ ಸತ್ಯ ಗಾಡಿಯ ಮೈಲೇಜ್ ಅನ್ನು ಹೆಚ್ಚಿಸುವ ಬಗ್ಗೆ ಐಡಿಯಾ ಕೊಡುತ್ತಾಳೆ. ಈ ಪ್ರಾಜೆಕ್ಟ್ ಬಗ್ಗೆ ಕಾರ್ತಿಕ್ ಪೇಪರ್ಸ್‌ ರೆಡಿ ಮಾಡಿಕೊಂಡು ಕೀರ್ತನಾ ಬಳಿ ಹೋಗುತ್ತಾನೆ. ಆದರೆ, ಕೀರ್ತನಾ ಪ್ರಾಜೆಕ್ಟ್ ಏನು ಎಂಬುದನ್ನು ವಿಚಾರಿಸಿದ ರಿಜೆಕ್ಟ್ ಮಾಡುತ್ತಾಳೆ. ಆಗ ಕಾರ್ತಿಕ್ ತಂದೆಯ ಬಳಿ ಹೋಗುತ್ತಾನೆ. ಪ್ರಾಜೆಕ್ಟ್ ಅನ್ನು ರಾಮಚಂದ್ರ ರಾಯರು ಒಪ್ಪುತ್ತಾರೆ. ಆದರೆ, ಸದ್ಯ ಇದೆಲ್ಲಾ ಬೇಡ. ನೀನು ಕೆಲಸವನ್ನು ಕಲಿತುಕೋ ಎಂದು ಬುದ್ಧಿ ಹೇಳುತ್ತಾರೆ. ಕೀರ್ತನಾ ಪ್ರಾಜೆಕ್ಟ್ ಅನ್ನು ಓಕೆ ಮಾಡುತ್ತಾರೆ. ಇದರಿಂದ ಬೇಸರವಾಗಿರುವ ಕಾರ್ತಿಕ್‌ಗೆ ಹೊಸ ಐಡಿಯಾ ಕೊಡುತ್ತಾಳೆ ಸತ್ಯ. ಅದನ್ನು ಸ್ವಂತವಾಗಿ ಶುರು ಮಾಡಲು ಹೇಳಿಕೊಡುತ್ತಾಳೆ. ಇದರಿಂದ ಕಾರ್ತಿಕ್ ಖುಷಿ ಪಡುತ್ತಾನೆ.

ಅಜ್ಜಿಗೆ ಕಾಲ್ ಮಾಡಿದ ಸತ್ಯ

ಅಜ್ಜಿಗೆ ಕಾಲ್ ಮಾಡಿದ ಸತ್ಯ

ಇತ್ತ ರಿತು, ರಾಕೇಶ್‌ನನ್ನು ಪ್ರೀತಿಸುತ್ತಿರುವುದು ಗೊತ್ತಿದೆ. ಆದರೆ, ರಾಕಿ ಕೂಡ ಮನದಲ್ಲಿ ರಿತು ಇದ್ದರೂ, ನಾಟಕವಾಡುತ್ತಿದ್ದಾನೆ. ಇನ್ನು ಯಾವ ಕಾರಣಕ್ಕಾಗಿ ರಿತು ನಡವಳಿಕೆ ಬದಲಾಗಿದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಆದರೆ, ರಿತು ಮತ್ತು ರಾಕಿ ಮಾತನಾಡುತ್ತಿರುವುದನ್ನು ನೋಡಿದ ಸತ್ಯ ಮರೆಯಲ್ಲಿ ನಿಂತಿರುತ್ತಾಳೆ. ರಿತು, ರಾಕಿಯನ್ನು ಅಪ್ಪಿಕೊಂಡಾಗ ಸತ್ಯ ನೋಡುತ್ತಾಳೆ. ಇದರಿಂದ ಗಾಬರಿಯಾಗಿ ಗಿರಿಜಮ್ಮನಿಗೆ ಫೋನ್ ಮಾಡುತ್ತಾಳೆ. ಗಿರಿಜಮ್ಮ, ಸತ್ಯಗೆ ಸಮಾಧಾನ ಮಾಡಿ, ದಾರಿ ಹುಡುಕೋಣ ಎನ್ನುತ್ತಾಳೆ.

ಪೇಚಿಗೆ ಸಿಲುಕಿರುವ ಬಾಲ

ಪೇಚಿಗೆ ಸಿಲುಕಿರುವ ಬಾಲ

ದಿವ್ಯಾ ಹಳ್ಳಿಯಿಂದ ಎಸ್ಕೇಪ್ ಆಗಲು ತಾನು ಗರ್ಭಿಣಿ ಎಂದು ನಾಟಕ ಮಾಡುತ್ತಿದ್ದಾಳೆ. ಇದರಿಂದ ಬಾಲ ಪೇಚಿಗೆ ಸಿಲುಕಿದ್ದಾನೆ. ದಿವ್ಯಾ ಸುಳ್ಳು ಹೇಳುತ್ತಿದ್ದಾಳೆ ಎಂಬುದು ಗೊತ್ತಿದ್ದರೂ, ಏನೂ ಮಾಡಲಾಗದೆ ಇದ್ದಾನೆ. ದಿವ್ಯಾ ಬಾಲನ ಕೈಯಲ್ಲಿ ಅವರ ಡುಪ್ಲಿಕೇಟ್ ತಾಯಿ ಗೀತಾಳಿಗೆ ಫೋನ್ ಮಾಡಿಸುತ್ತಾಳೆ. ತಾನು ಗರ್ಭಿಣಿ ಆಗಿದ್ದು, ಮಾವನಿಗೆ ಸತ್ಯ ಹೇಳಿ. ನಮ್ಮನ್ನು ಇಲ್ಲಿಂದ ಕರೆಸಿಕೊಳ್ಳುವಂತೆ ಮಾಡಿ ಎಂದು ಹೇಳುತ್ತಾಳೆ. ಗೀತಾ ಏನೋ ಒಂದು ಹೇಳಿ ಬಚಾವ್ ಆಗುತ್ತಾಳೆ.

ದಿವ್ಯಾ ಪ್ಲ್ಯಾನ್‌ನಿಂದ ಮುಂದೇನಾಗಬಹುದು?

ದಿವ್ಯಾ ಪ್ಲ್ಯಾನ್‌ನಿಂದ ಮುಂದೇನಾಗಬಹುದು?

ನಮ್ಮಿಬ್ಬರ ನಡುವೆ ಏನೂ ನಡೆದಿಲ್ಲವೆಂದರೂ ದಿವ್ಯಾ ಗರ್ಭಿಣಿ ಆಗಿದ್ದಾಳೆ. ಮುಂದೆ ನನ್ನ ಪರಿಸ್ಥಿತಿ ಹೇಗೆ.? ದಿವ್ಯಾ ಸುಳ್ಳು ಹೇಳುವುದಕ್ಕೆ ಕಾರಣವೇನು ಎಂದು ಯೋಚಿಸುತ್ತಿದ್ದಾನೆ. ಬಾಲನ ಈ ಚಿಂತೆ ಬೇಗ ಕೊನೆಗೊಳ್ಳುತ್ತಾ..? ಇಲ್ಲವೇ ದಿವ್ಯಾ ಪ್ಲ್ಯಾನ್‌ನಿಂದ ಬಾಲನ ಬಣ್ಣ ಬಯಲಾಗುತ್ತಾ ಎಂಬ ಕುತೂಹಲ ಮೂಡಿದೆ.

More from Filmibeat

English summary
Sathya serial 9th February Episode Written Update. Sathya comes to know about rithu and rakhi love. This makes her worry a lot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X