ಯುಗಾದಿಯಂದು ಮನೆಗೆ ಮಹಾಲಕ್ಷ್ಮೀಯನ್ನು ಬರ ಮಾಡಿಕೊಂಡ ಸಾಗರ್ ಬಿಳಿಗೌಡ-ಸಿರಿ ರಾಜು

By ಪ್ರಿಯಾ ದೊರೆ

ಭಾರತೀಯರಿಗೆ ಇಂದು ಹೊಸ ವರ್ಷದ ಮೊದಲ ದಿನ. ಮನೆ ಮನೆಗಳಲ್ಲೂ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ.ಇನ್ನು ಕನ್ನಡ ಕಿರುತೆರೆಯ ಹಲವು ಕಲಾವಿದರಿಗೆ ಮದುವೆಯಾದ ಬಳಿಕ ಮೊದಲ ಯುಗಾದಿ ಹಬ್ಬ ಇದಾಗಿದ್ದು, ಕೆಲವರು ತಂದೆ-ತಾಯಿ ಆಗಿ ಬಡ್ತಿ ಪಡೆದ ಬಳಿಕ ಆಚರಿಸುತ್ತಿರುವ ಚೊಚ್ಚಲ ಹಬ್ಬವೂ ಹೌದು. ಸತ್ಯ ಧಾರಾವಾಹಿಯ ನಟ ಸಾಗರ್ ಬಿಳಿ ಗೌಡ ಹಾಗೂ ನಟಿ ಸಿರಿ ರಾಜು ಯುಗಾದಿ ಹಬ್ಬದಂದು ತಮ್ಮ ಕುಟುಂಬಕ್ಕೆ ಹೊಸ ಅಥಿತಿಯನ್ನು ಸ್ವಾಗತ ಮಾಡಿ ಸಂಭ್ರಮಿಸಿದ್ದಾರೆ.

ಹೆಣ್ಣು ಮಗುವನ್ನು ಸ್ವಾಗತಿಸಿದ ಕಪಲ್ಸ್

ಕಿರುತೆರೆ ನಟಿಯರಾದ ತೇಜಸ್ವಿನಿ, ಕಾವ್ಯಾ ಗೌಡ ಸೇರಿದಂತೆ ಹಲವರು ತಮ್ಮ ಮಗುವಿನ ಜೊತೆಗೆ ಮೊದಲ ಯುಗಾದಿ ಹಬ್ಬವನ್ನು ಇಂದು ಆಚರಿಸಿದ್ದಾರೆ. ನಟಿ ಅದಿತಿ ಪ್ರಭುದೇವ ಕೂಡ ಕಳೆದ ವಾರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇಂದು ಸಿಹಿ ಸುದ್ದಿಯನ್ನು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದೀಗ ಕಿರುತೆರೆ ನಟಿ ಸಿರಿ ರಾಜು ಅವರು ಹಬ್ಬದ ದಿನವೇ ಮಹಾಲಕ್ಷ್ಮೀಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ನಟ ಸಾಗರ್ ಬಿಳಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಗೆಳೆಯರು ಎಲ್ಲರೂ ವಿಶ್ ಮಾಡಿದ್ದಾರೆ.

Sathya serial actor Sagar bili gouda blessed with baby girl

ಪೋಷಕರಾಗಿ ಬಡ್ತಿ ಪಡೆದ ನಟ-ನಟಿ

ನಟ ಸಾಗರ್ ಬಿಳಿ ಗೌಡ ಹಾಗೂ ಸಿರಿ ರಾಜು ಯುಗಾದಿ ಹಬ್ಬದ ದಿನವೇ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಇಬ್ಬರ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಇದೀಗ ನಟ ಸಾಗರ್ ಅವರು ಹೆಣ್ಣು ಮಗುವಿನ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಕಳೆದ ತಿಂಗಳಷ್ಟೇ ಸಿರಿ ರಾಜು ಅವರ ಸೀಮಂತವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಸಾಗರ್ ಅವರ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ. ಸಾಗರ್ ಹಾಗೂ ಸಿರಿ ಎರಡೂ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಪ್ರೀತಿಸಿ ಮದುವೆಯಾದ ಜೋಡಿ

ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದರು. ಸಾಗರ್ ಬಿಳಿಗೌಡ ಅವರು ಸಿರಿ ರಾಜು ಅವರ ಜೊತೆ 2023 ಜನವರಿ 26 ರಂದು ಸಪ್ತಪದಿ ತುಳಿದಿದ್ದರು. ಮದುವೆಯಾದ ವರ್ಷವೇ ಗರ್ಭಿಣಿಯಾದ ಸಿರಿ ಅವರು ಈಗ ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ನಟಿ ಸಿರಿ ರಾಜು ಅವರು ಕೂಡ ಧಾರಾವಾಹಿಗಳಲ್ಲಿ ನಟಿಸಿದ್ದು, ಮದುವೆಯಾದ ಬಳಿಕ ಶೂಟಿಂಗ್ ಗಳಿಗೆ ಬ್ರೇಕ್ ಕೊಟ್ಟಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಮಿಸ್ ಮಾಡದೇ ಆಗಾಗ ತಮ್ಮ ಬಗ್ಗೆ ಅಪ್ ಡೇಟ್ಸ್ ಗಳನ್ನು ನೀಡುತ್ತಿರುತ್ತಾರೆ.

Sathya serial actor Sagar bili gouda blessed with baby girl

ಸಾಗರ್ ಅವರ ನಟನಾ ಹಾದಿ

ಕಿರುತೆರೆಯಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚಿದ ಸಾಗರ್ ಬಿಳಿ ಗೌಡ ಅವರಿಗೆ ಸತ್ಯ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿದೆ. ಸಾಗರ್ ಬಿಳಿ ಗೌಡ ಅವರು ಕಾರ್ತಿಕ್ ಅಂದರೆ, ಅಮೂಲ್ ಬೇಬಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಗರ್ ಬಿಳಿ ಗೌಡ ಅವರಿಗೆ ನಟಿಸುವುದು ಎಂದರೆ ತುಂಬಾನೇ ಇಷ್ಟ. ನಟನಾಗುವ ಆಸೆಯಿಂದ ಕೆಲ ತರಬೇತಿಗಳನ್ನು ಕೂಡ ಫಾರಿನ್ ನಲ್ಲಿ ಪಡೆದವರು ಸಾಗರ್. ಇನ್ನು ಸಾಗರ್ ಅವರು ಲಂಡನ್ ನಲ್ಲಿ ಎಂಬಿಎ ಓದಿ, ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಮಾಡಿಕೊಂಡಿದ್ದಾರೆ. ಕಂಪನಿ ಕೆಲಸವನ್ನು ಬಿಟ್ಟು ಕಿರುತೆರೆಗೆ ಬಂದು ನಟನೆಯನ್ನೇ ವೃತ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

More from Filmibeat

English summary
Sagar bili gouda and siri raju got promoted as parents. blessed with baby girl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X