ಪತ್ನಿ 'ಸಿರಿ' ಸೀಮಂತವನ್ನು ಅದ್ಧೂರಿಯಾಗಿ ನೆರವೇರಿಸಿದ ಪತಿ 'ಸಾಗರ್ ಬಿಳಿಗೌಡ' ..
ನಟ ಸಾಗರ್ ಬಿಳಿ ಗೌಡ ಅವರ ಮನೆ ಹಾಗೂ ಮನದಲ್ಲಿ ಸಂಭ್ರಮ ತುಂಬಿ ತುಳುಕುತ್ತಿದೆ. ಸತ್ಯ ಧಾರವಾಹಿ ಖ್ಯಾತಿಯ ಸಾಗರ್ ಬಿಳಿ ಗೌಡ ಹಾಗೂ ಸಿರಿ ರಾಜು ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಅದರ ಮುಂದಿನ ಭಾಗವೆಂಬಂತೆ ಸೀಮಂತ ಶಾಸ್ತ್ರ ನೆರವೇರಿದೆ.
ನಟ ಸಾಗರ್ ಬಿಳಿ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದ ಜೋಡಿ ಕಳೆದ ವರ್ಷ ಮದುವೆಯಾಗಿ ಎಲ್ಲರಿಗೂ ಸಿಹಿ ಸುದ್ದಿ ನೀಡಿದ್ದರು. ಇದೀಗ ಸಿರಿ ಅವರು ತುಂಬು ಗರ್ಭಿಣಿ ಆಗಿದ್ದು, ಸೀಮಂತ ಕಾರ್ಯಕ್ರಮ ನೆರವೇರಿದೆ.

ಕಳೆದ ವರ್ಷ ವಿವಾಹ
ಸಾಗರ್ ಬಿಳಿಗೌಡ ಅವರು ಸಿರಿ ರಾಜು ಅವರ ಜೊತೆ 2023 ಜನವರಿ 26 ರಂದು ಸಪ್ತಪದಿ ತುಳಿದಿದ್ದರು. ಕಿರುತೆರೆಯಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚಿದ ಸಾಗರ್ ಬಿಳಿ ಗೌಡ ಅವರಿಗೆ ಸತ್ಯ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿದೆ.
ಸಾಗರ್ ಬಿಳಿ ಗೌಡ ಅವರು ಕಾರ್ತಿಕ್ ಅಂದರೆ, ಅಮುಲ್ ಬೇಬಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಗರ್ ಬಿಳಿ ಗೌಡ ಅವರಿಗೆ ನಟಿಸುವುದು ಎಂದರೆ ತುಂಬಾನೇ ಇಷ್ಟ. ನಟನಾಗುವ ಆಸೆಯಿಂದ ಕೆಲ ತರಬೇತಿಗಳನ್ನು ಕೂಡ ಫಾರಿನ್ ನಲ್ಲಿ ಪಡೆದವರು ಸಾಗರ್.
ಇನ್ನು ಸಾಗರ್ ಅವರು ಲಂಡನ್ ನಲ್ಲಿ ಎಂಬಿಎ ಓದಿ, ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಮಾಡಿಕೊಂಡಿದ್ದಾರೆ. ಕಂಪನಿ ಕೆಲಸವನ್ನು ಬಿಟ್ಟು ಕಿರುತೆರೆಗೆ ಬಂದು ನಟನೆಯನ್ನೇ ವೃತ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ಸತ್ಯಳ ಅಮುಲ್ ಬೇಬಿ ಸಾಗರ್
ವಿದೇಶದಲ್ಲಿ ಆರು ತಿಂಗಳ ಕಾಲ ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಮಾಡಿದ್ದಾರೆ. ನೂರಾರು ಆಡಿಷನ್ ಗಳನ್ನು ಕೊಟ್ಟು ಈಗ ತೆಲುಗು ಹಾಗೂ ಕನ್ನಡ ಎರಡೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು.
ಇದರಲ್ಲಿ ಮನೆ ಕೆಲಸದವನ ಪಾತ್ರ ಮಾಡಿದ್ದರು. ಉದಯ ಟಿವಿಯಲ್ಲಿ ಮೂಡಿ ಬಂದ ಮನಸಾರೆ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಸತ್ಯ ಧಾರಾವಾಹಿಯಲ್ಲಿ ನಾಯಕ ನಟನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಸುಮಾರು ಮೂರು ವರ್ಷಗಳಿಂದ ಮೂಡಿ ಬರುತ್ತಿರುವ ಸತ್ಯ ಧಾರಾವಾಹಿಯಲ್ಲಿ ಸಾಗರ್ ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಸಿನಿಮಾ ಹಾಗೂ ಕಿರುತೆರೆಯಲ್ಲಿದ್ದ ಸಿರಿ
ಮಾಡೆಲ್ ಕಮ್ ಕಿರುತೆರೆ ನಟಿಯಾಗಿರುವ ಸಿರಿ ರಾಜು ಅವರು ಕೂಡ ಬಣ್ಣದ ಲೋಕದವರೇ. ಸ್ವಂತ ಬಿಸಿನೆಸ್ ಅನ್ನು ಕೂಡ ಹೊಂದಿರುವ ಸಿರಿ ರಾಜು ಸಿಮಾಗಳಲ್ಲೂ ನಟಿಸಿದ್ದಾರೆ. ವಿಜಯ್ ರಾಘವೇಂದ್ರ ಅವರೊಂದಿಗೆ ಎಫ್ಐಆರ್ 6ಟು6 ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನು ನಾಲ್ಕು ವರ್ಷಗಳ ಹಿಂದೆಯೇ ಇದಂ ಪ್ರೇಮಂ ಜೀವನಂ ಎಂಬ ಸಿನಿಮಾದಲ್ಲೂ ನಟಿಸಿದ್ದರು. ಇನ್ನು ಕೆಲ ಧಾರಾವಾಹಿ ಹಾಗೂ ವೆಬ್ ಸೀರೀಸ್ ಗಳಲ್ಲಿ ಸಿರಿ ರಾಜು ಅವರು ಆಕ್ಟಿಂಗ್ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಿರಿ ರಾಜು ಮತ್ತು ಸಾಗರ್ ಬಿಳಿ ಗೌಡ ಪ್ರೀತಿಸಿ ಮದುವೆಯಾದರು.
ನೂತನ ಸದಸ್ಯನಿಗಾಗಿ ಕಾಯುತ್ತಿರುವ ಕುಟುಂಬ
ಸದ್ಯ ಸಿರಿ ಅವರು ತುಂಬು ಗರ್ಭೀಣಿ ಆಗಿದ್ದು, ಚೊಚ್ಚಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಸಿರಿ ಅವರ ಸೀಮಂತಕ್ಕೆ ನಟಿ ಭವ್ಯ ಗೌಡ ಕೂಡ ಆಗಮಿಸಿ ಶುಭ ಕೋರಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಾಗರ್ ಅವರ ಮನೆಗೆ ಹೊಸ ಸದಸ್ಯನ ಆಗಮನವಾಗಲಿದೆ. ಸಾಗರ್ ಹಾಗೂ ಸಿರಿ ಎರಡೂ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.


Click it and Unblock the Notifications











