ಸತ್ಯ ಧಾರಾವಾಹಿ ನಟನ ಪ್ರೇಯಸಿ ಹೆಸರು ರಿವೀಲ್: ಇವಳೇ ಸಾಗರ್ ಬಿಳಿಗೌಡ ಮದುವೆಯಾಗುವ ಹುಡುಗಿ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕಿರುತೆರೆಯಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚಿದ ಸಾಗರ್ ಬಿಳಿ ಗೌಡ ಅವರಿಗೆ ಸತ್ಯ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿದೆ. ಸಾಗರ್ ಬಿಳಿ ಗೌಡ ಅವರು ಕಾರ್ತಿಕ್ ಅಂದರೆ, ಅಮುಲ್ ಬೇಬಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಾಗರ್ ಬಿಳಿ ಗೌಡ ಅವರಿಗೆ ನಟಿಸುವುದು ಎಂದರೆ ತುಂಬಾನೇ ಇಷ್ಟ. ನಟನಾಗುವ ಆಸೆಯಿಂದ ಕೆಲ ತರಬೇರಿಗಳನ್ನು ಕೂಡ ವಿದೇಶದಲ್ಲಿ ಪಡೆದವರು. ಇನ್ನು ಸಾಗರ್ ಅವರು ಲಂಡನ್ ನಲ್ಲಿ ಎಂಬಿಎ ಓದಿ, ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಮಾಡಿಕೊಂಡಿದ್ದಾರೆ.

ಇಷ್ಟೆಲ್ಲಾ ಓದಿದ ಮೇಲೂ ಮನಸೆಲ್ಲಾ ಇದ್ದದ್ದು ಮಾತ್ರ ಅಭಿನಯರಂಗದಲ್ಲಿ. ಹಾಗಾಗಿ ಸಾಗರ್ ಅವರು ಅಭಿನಯ ತರಬೇತಿ ಕೇಂದ್ರಕ್ಕೆ ಸೇರಿಕೊಂಡರು. ನಟನಾ ಶಾಲೆಗೆ ಸೇರಿಕೊಂಡರು. ಬಳಿಕ ವಿದೇಶಕ್ಕೆ ತೆರಳಿ ಆರು ತಿಂಗಳ ಕಾಲ ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಮಾಡಿದ್ದಾರೆ.

ಸತ್ಯ ಧಾರಾವಾಹಿಯಲ್ಲಿ ಅಮುಲ್ ಬೇಬಿ

ಸತ್ಯ ಧಾರಾವಾಹಿಯಲ್ಲಿ ಅಮುಲ್ ಬೇಬಿ

ಆಕ್ಟಿಂಗ್ ಕೋರ್ಸ್ ಎಲ್ಲಾ ಮುಗಿದ ಮೇಲೆ ಸಾಗರ್ ಅವರು ಕಿರುತೆರೆಗೂ ಎಂಟ್ರಿ ಕೊಟ್ಟರು. ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಮನೆ ಕೆಲಸದವನ ಪಾತ್ರ ಮಾಡಿದ್ದರು. ನಂತರ ಸಾಗರ್ ಅವರಿಗೆ ಉದಯ ಟಿವಿಯಲ್ಲಿ ಮೂಡಿ ಬಂದ ಮನಸಾರೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಇದರಲ್ಲಿ ಸಾಗರ್ ತಲೆಹರಟೆ, ತುಂಟಾಟ, ತಮಾಷೆ ಮಾಡಿಕೊಂಡು ನಟಿಸಿದ್ದರು. ಬಳಿಕ ಸತ್ಯ ಧಾರಾವಾಹಿಯಲ್ಲಿ ನಾಯಕ ನಟನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಸುಮಾರು ಎರಡು ವರ್ಷಗಳಿಂದ ಮೂಡಿ ಬರುತ್ತಿರುವ ಸತ್ಯ ಧಾರಾವಾಹಿಯಲ್ಲಿ ಸಾಗರ್ ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಸಿರಿ ರಾಜು ಜೊತೆಗೆ ಜೀವನ ನಡೆಸಲಿರುವ ಸಾಗರ್

ಸಿರಿ ರಾಜು ಜೊತೆಗೆ ಜೀವನ ನಡೆಸಲಿರುವ ಸಾಗರ್

ಇನ್ನು ಸಾಗರ್ ಬಿಳಿ ಗೌಡ ಅವರು ತಮ್ಮ ಜೀವನದ ಮುಖ್ಯ ಹಂತವನ್ನು ತಲುಪಿದ್ದಾರೆ. ಅದೇನೆಂದರೆ, ಕಿರುತೆರೆಯ ಜೋಡಿಗಳ ಸಾಲಿಗೆ ಸಾಗರ್ ಕೂಡ ಸೇರಲಿದ್ದಾರೆ. ಕಳೆದ ವರ್ಷ ನಡೆದ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಸಾಗರ್ ಅವರು ತಮಗೆ ಬೈಕ್, ಕಾರುಗಳೆಂದರೆ ಪ್ರೀತಿ. ಅದು ಬಿಟ್ಟು ಯಾವುದೇ ಹುಡುಗಿಯ ಮೇಲೂ ಲವ್ ಇಲ್ಲ ಎಂದಿದ್ದರು. ಆದರೆ ಈಗ ಕಿರುತೆರೆ ನಟಿಯೊಂದಿಗೆ ಉಂಗುರ ಬದಲಾಯಿಸಿಕೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಪ್ರೇಯಸಿಯನ್ನು ಅಭಿಮಾನಿಗಳಿಗೆ ಪರಿಚಯಿಸಿ ಶಾಕ್ ಕೊಟ್ಟಿದ್ದಾರೆ. ಅದು ಬೇರೆ ಯಾರೂ ಅಲ್ಲ. ಎಲ್ಲರಿಗೂ ಗೊತ್ತಿರುವ ನಟಿ ಸಿರಿ ರಾಜು ಅವರು.

ಸ್ಯಾಂಡಲ್ ವುಡ್ ನಲ್ಲೂ ನಟನೆ

ಸ್ಯಾಂಡಲ್ ವುಡ್ ನಲ್ಲೂ ನಟನೆ

ಮಾಡೆಲ್ ಕಮ್ ಕಿರುತೆರೆ ನಟಿಯಾಗಿರುವ ಸಿರಿ ರಾಜು ಅವರು ಕೂಡ ಬಣ್ಣದ ಲೋಕದವರೇ. ಈಗಾಗಲೇ ಕೆಲ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಅವರೊಂದಿಗೆ ಎಫ್ಐಆರ್ 6ಟು6 ಎಂಬ ಸಿನಿಮಾದಲ್ಲಿ ನಟಿಸಿದ್ದರೆ. ಇನ್ನು ನಾಲ್ಕು ವರ್ಷಗಳ ಹಿಂದೆಯೇ ಇದಂ ಪ್ರೇಮಂ ಜೀವನಂ ಎಂಬ ಸಿನಿಮಾದಲ್ಲೂ ನಟಿಸಿದ್ದರು. ಇನ್ನು ಕೆಲ ಧಾರಾವಾಹಿ ಹಾಗೂ ವೆಬ್ ಸೀರೀಸ್ ಗಳಲ್ಲಿ ಸಿರಿ ರಾಜು ಅವರು ನಟಿಸಿದ್ದಾರೆ.

ನಿಶ್ಚಿತಾರ್ಥಕ್ಕೆ ಸಜ್ಜಾದ ಜೋಡಿಗಳು

ನಿಶ್ಚಿತಾರ್ಥಕ್ಕೆ ಸಜ್ಜಾದ ಜೋಡಿಗಳು

ಸದ್ಯ ಸಿರಿ ರಾಜು ಮತ್ತು ಸಾಗರ್ ಬಿಳಿಗೌಡ ಈಗ ಪ್ರೇಮ ಲೋಕದಲ್ಲಿದ್ದಾರೆ. ಇಬ್ಬರೂ ಪ್ರೀತಿಸಿ ಈಗ ಮದುವೆಯಾಗುವ ಹಂತವನ್ನೂ ತಲುಪಿದ್ದಾರೆ. ಇಷ್ಟರಲ್ಲೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಈ ಸಂತಸದ ಸುದ್ದಿಯನ್ನು ಸಿರಿ ರಾಜು ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಬದುಕಿನ ಅತ್ಯತ್ತಮ ವ್ಯಕ್ತಿ ಎಂದು ಪರಿಚಯಿಸಿದ್ದಾರೆ. ಇನ್ನು ಸಾಗರ್ ಬಿಳಿಗೌಡ ಅವರು ಕೂಡ ಇಬ್ಬರ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

More from Filmibeat

English summary
Sagar bili gowda introduced his girl friend in social media. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X