Rocky-Rithu marriage: ರಾಕಿ-ರಿತು ಮದುವೆ ವಿಡಿಯೋ ವೈರಲ್: ಆಕ್ಟರ್-ಡೈರೆಕ್ಟರ್ ಗಳ ನಡುವೆ ಮಕ್ಕಳ ವಿಚಾರ ಚರ್ಚೆ..!

By ಎಸ್ ಸುಮಂತ್

ಧಾರಾವಾಹಿ, ಸಿನಿಮಾಗಳಲ್ಲಿ ಮದುವೆ ಸನ್ನಿವೇಶ ಸಹಜ. ಅದೇ ಜೋಡಿ ಮತ್ತೊಂದು ಧಾರಾವಾಹಿಯಲ್ಲಿ ಬೇರೆ ಬೇರೆ ಜೋಡಿಗಳನ್ನು ಮದುವೆಯಾಗುತ್ತಾರೆ. ಇದೆಲ್ಲ ಹೇಳುವುದಕ್ಕೆ ಕಾರಣ ರಿತು-ರಾಕಿ ಮದುವೆ ವಿಡಿಯೋ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಫನ್ನಿ ಟಾಕ್ ಶುರುವಾಗಿದೆ‌.

'ಸತ್ಯ' ಧಾರಾವಾಹಿ ನೋಡುತ್ತಿರುವವರಿಗೆ ರಿತು - ರಾಕಿಯ ಪರಿಚಯ ಇದ್ದೇ ಇರುತ್ತದೆ. ಸತ್ಯ ನಾದಿನಿ ರಿತು.. ಸತ್ಯಳ ಕ್ಲೋಸ್ ಫ್ರೆಂಡ್ ರಾಕಿ. ಬಡತನದ ಕುಟುಂಬದಲ್ಲಿರುವ ರಾಕಿಗೆ ಓದುವುದರಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಸೆ. ಈಗ ರಿತು-ರಾಕಿ ಪ್ರೀತಿ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಆದರೆ ಮೊದಲು ಓದು, ಕೆಲಸ.. ಆಮೇಲೆ ಮದುವೆ ಎಂದು ಮನೆಯವರೆಲ್ಲಾ ತೀರ್ಮಾನ ಮಾಡಿ ಆಗಿದೆ. ಆದರೆ ರಿತು ರಾಕಿ ಮದುವೆ ಆಗಿ ಹೋಗಿದೆ.

Sathya serial actors rocky- rithu marriage scene video

ರಿತು-ರಾಕಿ ಮದುವೆ ಆಯ್ತಾ?

ರಾಕಿ ಓದುವುದಕ್ಕೆ ಅಂತ ಬೇರೆ ಕಡೆಗೆ ಹೋಗಿದ್ದಾನೆ. ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ. ತಾನೂ ಶ್ರೀಮಂತೆ ಎಂಬ ಅಹಂ ಇಲ್ಲದವಳು ರಿತು. ರಾಕಿಗೋಸ್ಕರ ತಾನೇ ಮಧ್ಯಮ ವರ್ಗದ ಲೈಫ್ ಲೀಡ್ ಮಾಡುವುದನ್ನು ರೂಢಿಸಿಕೊಂಡಿದ್ದ ರಿತು. ಹೀಗಾಗಿ ಪ್ರೇಕ್ಷಕರ ಹೃದಯ ಗೆದ್ದಿದ್ದ ರಿತು. ಆದಷ್ಟು ಬೇಗ ಇಬ್ಬರ ಮದುವೆ ಆಗಲಿ ಎಂದು ಬಯಸಿದ್ದರು. 'ರಿತು-ರಾಕಿ ಮದುವೆ ಯಾವಾಗ ಎಂದು ಕೇಳುತ್ತಿದ್ದವರಿಗೆ ಈ ವಿಡಿಯೋ. ನಾವೂ ಬಹಳ ಹಿಂದೆಯೇ ಮದುವೆಯಾಗಿದೆ. ರಾಕಿ ಯಾವತ್ತಿಗೂ ಕೈಬಿಡಲ್ಲ' ಎಂದು ಕ್ಯಾಪ್ಶನ್ ಹಾಕಿದ್ದಾರೆ.

ಶ್ರಾವಣಿ ಕಥೆ ಏನು ಅಂತಿದ್ದಾರೆ ಪ್ರೇಕ್ಷಕರು

'ಸತ್ಯ' ಧಾರಾವಾಹಿಯಲ್ಲಿ ರಾಕಿ ಓದುವುದಕ್ಕೆ ಅಂತ ಹೋದರೆ, 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ ಸುಬ್ಬು ಪಾತ್ರ ನಿರ್ವಹಿಸುತ್ತಿದ್ದಾರೆ. ಇಲ್ಲಿ ಶ್ರಾವಣಿ ಬೆಸ್ಟ್ ಫ್ರೆಂಡ್. ಶ್ರಾವಣಿ ತನ್ನಲ್ಲಿರುವ ಎಲ್ಲಾ ನೋವುಗಳು, ಸಂಕಷ್ಟಗಳನ್ನು ಸುಬ್ಬು ಬಳಿ ಮಾತ್ರ ಹೇಳಿಕೊಳ್ಳುವುದು. ಮುಂದೊಂದು ದಿನ ಇಬ್ಬರಿಗೂ ಲವ್ ಆಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ರಾಕಿ-ರಿತು ಮದುವೆ ವಿಡಿಯೋ ನೋಡಿ, ಶ್ರಾವಣಿ ಕಥೆ ಏನು ಅಂತ ಪ್ರಶ್ನೆ ಮಾಡುತ್ತಿದ್ದಾರೆ.

Sathya serial actors rocky- rithu marriage scene video

ಇನ್ನು ಮಕ್ಕಳಾಗಿಲ್ವಾ ಎಂದ ಡೈರೆಕ್ಟರ್

ಇತ್ತ ಸೋಷಿಯಲ್ ಮೀಡಿಯಾದಲ್ಲಿ ರಕ್ಷ ಈ ವಿಡಿಯೋ ಹಂಚಿಕೊಂಡು ಹಾಕಿರುವ ಕ್ಯಾಪ್ಶನ್‌ಗೆ ನಿರ್ದೇಶಕ ಸಂಪೃಥ್ವಿ ಫನ್ನಿ ಪ್ರಶ್ನೆ ಕೇಳಿದ್ದಾರೆ. ನಿಮ್ಮಿಬ್ಬರಿಗೂ ಇನ್ನು ಮದುವೆ ಆಗಿಲ್ವಾ ಅಂತ. ಅದಕ್ಕೆ ರಾಕಿ, ನೀವೂ 'ಹೂ ಮಳೆ' ಭಾಗ-2 ತೆಗೆದರೆ ಮೊದಲ ಎಪಿಸೋಡ್ ಅದೇ ಇರಬಹುದೇನೋ ಎಂದು ರಿಪ್ಲೇ‌ ಮಾಡಿದ್ದಾರೆ.

ಆಕ್ಟರ್-ಡೈರೆಕ್ಟರ್ ಫನ್ನಿ ಟಾಕ್

ಈ ವಿಡಿಯೋಗೆ ಹೆಚ್ಚು ಪ್ರತಿಕ್ರಿಯೆಗಳು ಬಂದಿರುವುದು ಆಕ್ಟರ್ ಹಾಗೂ ಡೈರೆಕ್ಟರ್‌ ಇಂದ. ಅಂದು ತಾಳಿ ಕಟ್ಟುವಾಗಲೂ ತಾಳಿ ಕಟ್ಟೋ ಬೇಗ ಅಂತ ಹೇಳಿದ ಡೈಲಾಗ್ ಕೂಡ ನೆನಪಿದೆ. ಮಕ್ಕಳ ಬಗ್ಗೆ ಹೀರೋ ಹೇಳಿದ ಕೂಡಲೇ, ಆಹಾಹ ಆಸೆ ನೋಡು ಛೀ ಕಳ್ಳ ಅಂತ ನಿರ್ದೇಶಕರು ರೇಗಿಸಿದ್ದಾರೆ. ಇವರುಗಳ ಫನ್ ರಿಪ್ಲೇಗಳನ್ನು ಫ್ಯಾನ್ಸ್ ಎಂಜಾಯ್ ಮಾಡಿದ್ದಾರೆ. ಡೈರೆಕ್ಟರ್ ಹಾಗೂ ಆಕ್ಟರ್ ನಡುವೆ ಇರಬೇಕಾದ ಬಾಂಧವ್ಯ ಇದೆ ಎಂದು ಹೊಗಳುತ್ತಿದ್ದಾರೆ.

More from Filmibeat

English summary
Sathya serial Fame rocky and rithu marriage video goes viral;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X