Rose Day: ʻಸತ್ಯʼಳಿಗೆ ಫುಲ್ ಡಿಮ್ಯಾಂಡ್ : ರೋಸ್ ಕೊಡಲು ಮುಂದಾದ ಫ್ಯಾನ್ಸ್

By ಎಸ್ ಸುಮಂತ್

ಜೀ ಕನ್ನಡದಲ್ಲಿ ಸತ್ಯ ಧಾರಾವಾಹಿ ಎಲ್ಲರ ಅಚ್ಚು ಮೆಚ್ಚಾಗಿದೆ. ಮೊದಲಿಗೆ ರೌಡಿ ಬೇಬಿಯಾಗಿದ್ದ ಸತ್ಯ ಈಗ ಪಕ್ಕಾ ಗೃಹಿಣಿಯಾಗಿದ್ದಾಳೆ. ಸಂಪ್ರದಾಯ - ಸಂಸ್ಕೃತಿಯನ್ನು ತಿಳಿದುಕೊಂಡು, ಅತ್ತೆಗೆ ತಕ್ಕ ಸೊಸಸೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ ಬದಲಾಗಿದ್ದಾಳೆ. ಸತ್ಯಳನ್ನು ಫಾಲೋ ಮಾಡುವ ಹೆಂಗಳೆಯರು ಸಿಕ್ಕಾಪಟ್ಟೆ ಮಂದಿ ಇದ್ದಾರೆ.

ಟಾಮ್ ಬಾಯ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದ ಸತ್ಯ ಅದೆಷ್ಟು ಹೆಣ್ಣು ಮಕ್ಕಳ ಮನಸ್ಸನ್ನು ಕದ್ದರೋ ಏನೋ. ಸಾಕಷ್ಟು ಜನ ಸತ್ಯಳಿಂದ ಪ್ರೇರಣೆ ಹೊಂದಿ ಟಾಮ್ ಬಾಯ್ ರೀತಿಯೇ ತಮ್ಮ ವೇಷ ಭೂಷಣ ಚೆಂಜ್ ಮಾಡಿಕೊಂಡಿದ್ದರು. ಸತ್ಯ ರೀತಿಯೇ ಅವಾಜ್ ಹಾಕುವುದಕ್ಕೆ ಶುರು ಮಾಡಿದ್ದರು. ಈಗಲೂ ಸತ್ಯಾಳ ಡಿಮ್ಯಾಂಡ್ ಏನು ಕಡಿಮೆಯಾಗಿಲ್ಲ.

ರೋಸ್ ಡೇಗೆ ಹೇಗಿದೆ..?

ರೋಸ್ ಡೇಗೆ ಹೇಗಿದೆ..?

ಇದು ಫೆಬ್ರವರಿ ತಿಂಗಳು.. ಫೆಬ್ರವರಿ ಅಂದ್ರೆ ಏನು ನೆನಪಿರುತ್ತೋ ಇಲ್ವೋ ಪ್ರೇಮಿಗಳ ದಿನ ಮಾತ್ರ ನೆನಪಾಗದೆ ಇರುವುದಿಲ್ಲ. ಹಾಗೇ ಪ್ರೇಮಿಗಳ ದಿನಕ್ಕಾಗಿ ಸಿಕ್ಕಾಪಟ್ಟೆ ಸಮಯ ಕೊಟ್ಟು ಪ್ಲ್ಯಾನ್ ಮಾಡಿಕೊಳ್ಳುವವರು ಸಾಕಷ್ಟು ಮಂದಿ ಇರುತ್ತಾರೆ. ತಮ್ಮ ಪ್ರೇಮಿಗಾಗಿ ಗಿಫ್ಟ್ ಕಲೆಕ್ಟ್ ಮಾಡುವುದು, ಸಪ್ರೈಸ್ ನೀಡುವುದು ಅಬ್ಬಬ್ಬಾ.. ಒಂದಾ ಎರಡಾ ಸಿಕ್ಕಾಪಟ್ಟೆ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಾರೆ. ಹಾಗೇ ಪ್ರೇಮಿಗಳ ದಿನ ಒಂದೇ ದಿನವಾದರೂ ವಾರವಿಡಿ ಅದರ ಸೆಲೆಬ್ರೇಷನ್ ಇರುತ್ತೆ. ಇಂದಿನಿಂದ ಆ ಸೆಲೆಬ್ರೇಷನ್ ಶುರುವಾಗಿದೆ. ಅದುವೇ ರೋಸ್ ಡೇಯಿಂದ ಆರಂಭವಾಗಿದೆ.

ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದ ಜೀ ಕನ್ನಡ

ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದ ಜೀ ಕನ್ನಡ

ಜೀ ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ದಿನಗಳಿಗಾಗಿ ಪೋಸ್ಟರ್ ಹಾಕುತ್ತಾರೆ. ಅದು ಮಹಿಳಾ ದಿನವಾಗಿರಬಹುದು, ತಾಯಂದಿರ ದಿನ ಹೀಗೆ ಯಾವೆಲ್ಲಾ ಸ್ಪೆಷಲ್ ಡೇಗಳು ಇರುತ್ತವೋ ಆ ದಿನಗಳಿಗೆ ವಿಶೇಷ ಪೋಸ್ಟರ್ ಮಾಡಿ ಹಾಕುತ್ತಾರೆ. ಹೇಳಿ ಕೇಳಿ ಜೀ ಕನ್ನಡದ ಧಾರಾವಾಹಿಯ ನಟಿ ಮಣಿಯರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಹೀಗಾಗಿ ಜೀ ಕನ್ನಡ ಎಲ್ಲಾ ಧಾರಾವಾಹಿಯ ನಟಿಯರು ಅಂದ್ರೆ, ಪಾರು, ಲೀಲಾ, ಸ್ನೇಹಾ, ಶಿವಾನಿ, ಅಮೂಲ್ಯ, ಸಿರಿ, ಅನು ಸಿರಿಮನೆ, ಸತ್ಯ ಫೋಟೋಗಳನ್ನು ಕೊಲ್ಯಾಜ್ ಮಾಡಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಸತ್ಯಳಿಗೆ ರೋಸ್ ಕೊಡಲು ಮುಂದಾದ ಫ್ಯಾನ್ಸ್

ಸತ್ಯಳಿಗೆ ರೋಸ್ ಕೊಡಲು ಮುಂದಾದ ಫ್ಯಾನ್ಸ್

ಜೀ ಕನ್ನಡದಲ್ಲಿ ಬರುವ ಎಲ್ಲಾ ನಟಿಯರು ಎಲ್ಲರಿಗೂ ಅಚ್ಚುಮೆಚ್ಚು. ಅವರವರ ಫ್ಯಾನ್ಸ್ ಒಂದೊಂದು ಫ್ಯಾನ್ ಪೇಜ್ ಗಳನ್ನೇ ಕ್ರಿಯೇಟ್ ಮಾಡಿ, ಪ್ರಮೋಟ್ ಮಾಡುತ್ತಾರೆ. ಈಗ ಜೀ ಕನ್ನಡ ಎಲ್ಲಾ ನಟಿಯರು ಇರುವ ಪೋಸ್ಟರ್ ಹಾಕಿ, ಅದಕ್ಕೆ ನೀವೂ ರೋಸ್ ಅನ್ನು ಯಾವ ನಟಿಗೆ ಕೊಡುತ್ತೀರಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಪೋಸ್ಟರ್ ಗೆ ಸಿಕ್ಕಾಪಟ್ಟೆ ಜನ ಸತ್ಯ ಹೆಸರನ್ನೇ ತೆಗೆದುಕೊಂಡಿದ್ದಾರೆ. ಇನ್ನುಳಿದಂತೆ ಅಮೂಲ್ಯ ಹಾಗೂ ಶಿವಾನಿಯ ಹೆಸರು ಕೂಡ ಹೆಚ್ಚಿನ ಚಾಲ್ತಿಯಲ್ಲಿದೆ.

ಈ ಪೋಸ್ಟರ್‌ಗೆ ಸಿಕ್ಕ ರೆಸ್ಪಾನ್ಸ್ ಏನು..?

ಈ ಪೋಸ್ಟರ್‌ಗೆ ಸಿಕ್ಕ ರೆಸ್ಪಾನ್ಸ್ ಏನು..?

ಈ ಪೋಸ್ಟರ್ ನಲ್ಲಿ ಎಲ್ಲಾ ನಟಿಮಣಿಯರನ್ನು ಒನ್ ಫ್ರೇಮ್ ನಲ್ಲಿ ಹಾಕಿದ್ದಾರೆ. ವ್ಯಾಲೆಂಟೈನ್ಸ್ ಡೇಗಾಗಿ ಈ ಪೋಸ್ಟರ್ ಹಾಕಿದ ಎರಡೇ ಗಂಟೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಈ ಮೂಲಕ ನೆಚ್ಚಿನ ನಟಿ ಮಣಿಗೆ ತಮ್ಮ ಶುಭಾಶಯ ತಿಳಿಸಿದ್ದಾರೆ.

More from Filmibeat

English summary
Sathya Serial Actress Fans Celebrated Rose day Special. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X