Gouthami Jadhav: ಪತಿ ಜೊತೆ ಬನಶಂಕರಿ ಜಾತ್ರೆ ಸುತ್ತುತ್ತಿರೋ 'ಸತ್ಯ' ಧಾರಾವಾಹಿಯ ಗೌತಮಿ ಜಾದವ್!

By ಎಸ್ ಸುಮಂತ್

'ಸತ್ಯ' ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ಗೌತಮಿ ಜಾದವ್, ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿ ಬದಲಾಗಿದ್ದಾರೆ. ಸತ್ಯ ಧಾರಾವಾಹಿ ಆರಂಭವಾದಾಗ ಅದೆಷ್ಟು ಮಕ್ಕಳು ಟಾಮ್ ಬಾಯ್ ರೀತಿ ವೇಷ ಬದಲಿಸಿಕೊಂಡಿದ್ದರು. ಅದೆಷ್ಟೋ ಹುಡುಗಿಯರು ಸತ್ಯರಂತೆ ಗಟ್ಟಿಯಾಗಬೇಕೆಂದು ಪಣತೊಟ್ಟಿದ್ದಾರೆ.

ಸದ್ಯ ಧಾರಾವಾಹಿಯಲ್ಲಿ ನಾನಾ ತಿರುವುಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿ ಸತ್ಯ ಮದುವೆಯಾಗಿದೆ. ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾಳೆ. ಅತ್ತೆಯ ಮನಸ್ಸನ್ನು ಗೆಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾಳೆ. ಜೊತೆಗೆ ಕಾರ್ತಿಕ್ ಜೊತೆಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಧಾರಾವಾಹಿಯ ಮಾತಾದರೆ, ರಿಯಲ್ ಲೈಫ್ ಬೇರೆಯದ್ದೆ ಆಗಿದೆ.

ಬನಶಂಕರಿಯಲ್ಲಿ ಸತ್ಯ ಸುತ್ತಾಟ

ಬನಶಂಕರಿಯಲ್ಲಿ ಸತ್ಯ ಸುತ್ತಾಟ

ಟಿಆರ್‌ಪಿ ಇರುವಂತ ಧಾರಾವಾಹಿಯಲ್ಲಿ ಗ್ಯಾಪ್ ಸಿಗುವುದೇ ಹೆಚ್ಚು. ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಅಂತ ನಡೆಯುತ್ತಲೇ ಇರುತ್ತದೆ. ಶೂಟಿಂಗ್ ಸಮಯದಲ್ಲಿ ಬಿಡುವು ಸಿಕ್ಕರೆ ರೆಸ್ಟ್ ಮಾಡಿದರೆ ಸಾಕಪ್ಪ ಎನ್ನುವಂತೆ ಆಗಿರುತ್ತದೆ. ಅದರ ಜೊತೆಗೆ ಫ್ಯಾಮಿಲಿಗೂ ಸಮಯ ಕೊಡಲೇಬೇಕಾಗಿರುತ್ತದೆ. ಸತ್ಯ ಅಲಿಯಾಸ್ ಗೌತಮಿ ಜಾದವ್ ಕೂಡ ಸ್ವಲ್ಪ ಗ್ಯಾಪ್ ಸಿಕ್ಕಿದರೂ ಫ್ಯಾಮಿಲಿಗಾಗಿ ಸಮಯ ಮೀಸಲಿಡುತ್ತಾರೆ.

ಪತಿಯ ಜೊತೆಗೆ ಸುತ್ತಾಟ..

ಪತಿಯ ಜೊತೆಗೆ ಸುತ್ತಾಟ..

ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಹೆಂಡತಿಯಾಗಿರುವ ಸತ್ಯ ತಮ್ಮ ವಿಭಿನ್ನ ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದಾರೆ. ಈ ಗ್ಯಾಪ್‌ನಲ್ಲಿ ತನ್ನ ಪತಿ ಜೊತೆಗೆ ಒಂದು ಟ್ರಿಪ್ ಹೋಗಿದ್ದಾರೆ. ಅಭಿಷೇಕ್ ಕಾಸರಗೋಡು ಜೊತೆಗೆ ಬನಶಂಕರಿಯಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಜಾತ್ರೆಯಲ್ಲೆಲ್ಲಾ ಓಡಾಡಿ, ಅಲ್ಲಿನ ಆಟಗಳನ್ನು ಎಂಜಾಯ್ ಮಾಡಿದ್ದಾರೆ. ಜಾತ್ರೆಯಲ್ಲಿ ಇರುವ ವಿಶೇಷತೆಗಳ ಬಗ್ಗೆ ಎಲ್ಲಾ ವಿಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಭಿಷೇಕ್ ಮಾಡಿದ ವಿಡಿಯೋ ಹೇಗಿದೆ..?

ಅಭಿಷೇಕ್ ಮಾಡಿದ ವಿಡಿಯೋ ಹೇಗಿದೆ..?

ಶೂಟಿಂಗ್ ಬ್ಯುಸಿಯಲ್ಲಿರುವಾಗ ಫ್ಯಾಮಿಲಿಗೆ ಅಂತ ಸಮಯ ಕೊಡುವುದೇ ಹೆಚ್ಚಾಗಿರುತ್ತದೆ. ಹಾಗಂತ ಬರೀ ಸಿನಿಮಾ, ಸೀರಿಯಲ್ ಅಂತಾನು ಸಮಯ ಕಳೆಯುವುದಕ್ಕೆ ಆಗುವುದಿಲ್ಲ. ಸತ್ಯ ಅಲಿಯಾಸ್ ಗೌತಮಿ ಜಾದವ್ ಎರಡನ್ನು ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ. ಧಾರಾವಾಹಿಯಲ್ಲಿ ಎಷ್ಟೇ ಬ್ಯುಸಿ ಇದ್ದರು, ಕುಟುಂಬದ ಜೊತೆಗೆ ಕಳೆಯುವ ಅತ್ಯಮೂಲ್ಯ ಕ್ಷಣವನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಬನಶಂಕರಿ, ಬಾದಾಮಿ ಅಂತ ತಿರುಗಾಡುತ್ತಿರುವ ಗೌತಮಿ ಜಾದವ್ ಗೆ ಪತಿ ಅಭಿಷೇಕ್ ಕಾಸರಗೋಡು, ಫುಲ್ ಟೈಮ್ ಕ್ಯಾಮೆರಾ ಮೆನ್ ಆಗಿದ್ದಾರೆ. ಹೆಂಡತಿಯ ಸ್ಪೆಷಲ್ ಮೂಮೆಂಟ್ ಕ್ಯಾಚ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಪತಿ ಶೂಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ಗೌತಮಿ, ಧನ್ಯವಾದಗಳನ್ನು ತಿಳಿಸಿದ್ದಾರೆ.

More from Filmibeat

English summary
Sathya Serial Actress Gowthami Jadhav With Husband In Banashankari Fair. Here is the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X