ನೀಲ ಮೇಘ ಶಾಮ ಹಾಡಿಗೆ 'ಸತ್ಯ' ಧಾರಾವಾಹಿ ನಟಿಯ ರೀಲ್ಸ್; ಊರ್ಮಿಳಾ-ಪದ್ಮಾ ನಟನೆಗೆ ಫಿದಾ

By ಎಸ್ ಸುಮಂತ್

80-90 ದಶಕಗಳಲ್ಲಿ ಬಂದಂತ ಅದೆಷ್ಟೋ ಸಿನಿಮಾಗಳು ಜನರ ಜೀವನಾಡಿಯಲ್ಲಿಯೇ ಬೆರೆತು ಹೋಗಿದ್ದವು. ಕಥೆಗಳ ಜನರ ಮನಸ್ಸಲ್ಲಿ ಆಳವಾಗಿ ಉಳಿದು ಬಿಡುತ್ತಿದ್ದವು. ಪಾತ್ರಗಳು ಅದೆಷ್ಟೋ ಜನರ ಜೀವನ ಕಹಿ ಘಟನೆಯನ್ನು ಸಾರುತ್ತಿದ್ದವು. ಅಣ್ಣಾವ್ರ ಸಿನಿಮಾಗಳ ಸಂದೇಶವನ್ನು ಜೀವನಕ್ಕೆ ಅಳವಡಿಸಿಕೊಂಡವರೆ ಹೆಚ್ಚು. ಇದೀಗ ಊರ್ಮಿಳಾ ಮತ್ತು ಪದ್ಮಾ ಈ ಹಾಡಿಗೆ ನಟಿಸಿದ್ದಾರೆ.

ಜೀ ಕನ್ನಡದಲ್ಲಿ 'ಸತ್ಯ' ಧಾರಾವಾಹಿ ಸುಮಾರು ವರ್ಷಗಳಿಂದ ಪ್ರಸಾರವಾಗುತ್ತಿದೆ. ತುಂಬಿದ‌ ಸಂಸಾರದಲ್ಲಿ ಯಾವುದಕ್ಕೆಲ್ಲಾ ಪ್ರಾಮುಖ್ಯತೆ ಇರಲಿದೆ ಎಂಬುದು ಈ ಧಾರಾವಾಹಿಯ ಮೂಲಕ ತಿಳಿಸಿ ಕೊಡುತ್ತಿದ್ದಾರೆ. ಶಾಸ್ತ್ರ-ಸಂಪ್ರದಾಯಗಳು ಹೇಗಿರಬೇಕು ಎಂಬುದನ್ನು ತಿಳಿಸಿ ಕೊಡಲಾಗುತ್ತಿದೆ. ಇದೀಗ ಮನೆ ತನಕ ಬಂದಿರುವ ಎರಡನೇ ಸಂಬಂಧದಿಂದ ಮನೆ ಮಂದಿ ಬೇಸರಗೊಂಡಿದ್ದಾರೆ. ಇದೇ ಬೇಸರದಲ್ಲಿಯೇ ಪದ್ಮಾ ಹಾಗೂ ಊರ್ಮಿಳಾ ರೀಲ್ಸ್ ಮಾಡಿದ್ದಾರೆ.

Sathya serial actress Shalini Rao reels goes viral

ಲಕ್ಷ್ಮಣನ ಸಂಬಂಧ ಅನಾವರಣ

ಲಕ್ಷ್ಮಣನ ಎರಡನೇ ಹೆಂಡತಿ ಪದ್ಮಾ ಮನೆಯಲ್ಲಿಯೇ ಇದ್ದರೂ ಊರ್ಮಿಳಾಗೆ ಸತ್ಯ ಗೊತ್ತಾಗಬಾರದೆಂದೆ ಮನೆಯವರೆಲ್ಲಾ ಪ್ರಯತ್ನ ಮಾಡಿದರು. ಆದರೆ, ಸ್ವಾಮೀಜಿಯ ಆಗಮನದಿಂದ ಮುಚ್ಚಿಟ್ಟ ಸತ್ಯ ಊರ್ಮಿಳಾ ಮುಂದೆಯೂ ಬಯಲಾಗಿ ಹೋಯ್ತು. ಆರಂಭದಲ್ಲಿ ಅದನ್ನು ನಂಬುವುದಕ್ಕೆ ಸಾಧ್ಯವೇ ಆಗಲಿಲ್ಲ. ಆದರೆ ನಚ್ಚಿಯ ಮಾತಿನಿಂದ ಊರ್ಮಿಳಾಗೆ ಶಾಕ್ ಆಗಿತ್ತು. ಗಂಡ ಶ್ರೀರಾಮಚಂದ್ರ ಎಂದುಕೊಂಡಿದ್ದ ಊರ್ಮಿಳಾ ದಿಗ್ಭ್ರಾಂತಳಾಗಿದ್ದಳು.

ಪದ್ಮಾಳ ಪರವಾಗಿ ನಿಂತ ಊರ್ಮಿಳಾ

ಊರ್ಮಿಳಾಗೆ ಸತ್ಯ ಗೊತ್ತಾಗದಂತೆ ಮನೆಯವರು ತಡೆದರು. ಸತ್ಯಗೆ ಗೊತ್ತಾಗುತ್ತಿದ್ದಂತೆ, ಪದ್ಮಾಳನ್ನು ಮನೆಯಿಂದ ಹೊರ ಹಾಕುವುದಕ್ಕೆ ಪ್ರಯತ್ನ ಪಟ್ಟರು. ಆದರೆ, ಅದಕ್ಕೆ ಊರ್ಮಿಳಾ ಅವಕಾಶ ನೀಡಲಿಲ್ಲ. ಇದರಲ್ಲಿ ತಪ್ಪು ಇಬ್ಬರದ್ದು ಇದೆ. ಪದ್ಮಾಳನ್ನು ಹೊರ ಹಾಕುವುದಾದರೆ ಲಕ್ಷ್ಮಣನನ್ನು ಹೊರ ಹಾಕಬೇಕೆಂಬ ಷರತ್ತು ಹಾಕಿದಳು. ಇದು ಸಾಧ್ಯವಾಗದೆ ಇದ್ದಾಗ, ಒಂದಷ್ಟು ಮನ:ಸ್ತಾಪದ ನಡುವೆ ಕಡೆಗೂ ಊರ್ಮಿಳಾ, ಪದ್ಮಾಳನ್ನು ಒಂದೇ ಮನೆಯಲ್ಲಿ ಉಳಿಯುವಂತೆ ಮಾಡಿದಳು. ಒಂದು ನಚ್ಚಿ ಹಾಗೂ ಮಗಳು ನೀತೂ ಭವಿಷ್ಯದ‌ ದೃಷ್ಟಿಯಿಂದ.

ಧಾರಾವಾಹಿಯಲ್ಲಿರುವ ಪರಿಸ್ಥಿತಿಗೆ ರೀಲ್ಸ್

ಲಕ್ಷ್ಮಣನಿಗೆ ಊರ್ಮಿಳಾ ಹಾಗೂ ಪದ್ಮಾ ಇಬ್ಬರು ಹೆಂಡತಿಯರು. ಇದು ಧಾರಾವಾಹಿಯಲ್ಲಿ. ಆದರೆ ಊರ್ಮಿಳಾ ಪಾತ್ರಧಾರಿ ಶಾಲಿನಿ ರಾವ್ ಇದನ್ನು ರಿಯಲ್ ಲೈಪ್‌ನಲ್ಲೂ ಫೀಲ್ ಮಾಡಿಸಿದ್ದಾರೆ. ಅಂದರೆ, ಪದ್ಮಾಳ ಜೊತೆಗೂಡಿ ಆ ಸಂಬಂಧಕ್ಕೆ ಹೊಂದುವಂತಹ ಹಾಡಿಗೆ ರೀಲ್ಸ್ ಮಾಡಿದ್ದಾರೆ. 'ಎರಡು ರೇಖೆಗಳು' ಸಿನಿಮಾದ ನೀಲ ಮೇಘ ಶಾಮ ನಿತ್ಯಾನಂದ ಧಾಮ. ರುಕ್ಮಿಣಿಗಾಗೇ ಈ ರುಕ್ಮಿಣಿಗಾಗೆ ಎಂಬ ಹಾಡಿಗೆ ನಟನೆ ಮಾಡಿದ್ದಾರೆ. ಧಾರಾವಾಹಿಯಲ್ಲಿ ಈಗ ಇಬ್ಬರ ಪರಿಸ್ಥಿತಿಯೂ ಅದೇ ರೀತಿ ಇದೆ. ಹೀಗಾಗಿ ಇಂಥದ್ದೊಂದು ಹಾಡು ರಿಯಾಲಿಟಿಯನ್ನು ತೋರಿಸುತ್ತಿದೆ.

ನೆಟ್ಟಿಗರು ಫಿದಾ ಆಗೋದ್ರು

1984ರಲ್ಲಿ ರಿಲೀಸ್ ಆಗಿದ್ದ "ಎರಡು ರೇಖೆಗಳು: ಸಿನಿಮಾದ ಹಾಡು ಇದಾಗಿದೆ. ಈ ಹಾಡಿನಲ್ಲಿ ಸರಿತಾ ಹಾಗೂ ಗೀತಾ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಈಗ ಇದೇ ಹಾಡಿಗೆ ಪದ್ಮಾ ಹಾಗೂ ಊರ್ಮಿಳಾ ನಟಿಸಿರುವುದು ನೆಟ್ಟಿಗರನ್ನು ಆಶ್ಚರ್ಯಕ್ಕೆ ದೂಡಿದೆ. 'ಸರಿತಾ ಹಾಗೂ ಗೀತಾ ಅವರ ಅಭಿನಯವನ್ನೇ ನೋಡಿದಂತೆ ಆಗಿದೆ. ಎರಡು ರೇಖೆಗಳು ಸಿನಿಮಾವನ್ನು ನೀವೂ ರೀ ಕ್ರಿಯೇಟ್ ಮಾಡಿದಂತೆ ಆಗಿದೆ. ನಿಮ್ಮ ನಟನೆ ಬೆಂಕಿ, ನಿಮ್ಮ ನಟನೆಗೆ ನಾವೂ ಸೋತು ಹೋದೆವು" ಅಂತೆಲ್ಲಾ ಕಮೆಂಟ್ಸ್ ಬರುತ್ತಿವೆ. ಈ ರೀಲ್ಸ್ ಕೂಡ ಹೆಚ್ಚು ಮನಸ್ಸುಗಳನ್ನು ರೀಚ್ ಆಗುತ್ತಿದೆ‌.

More from Filmibeat

English summary
Sathya serial actress Shalini Rao reels goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X