Sathya Serial: ದಿವ್ಯಾಳನ್ನು ಕಾಪಾಡಲು ಬಂದ ಸತ್ಯಗೆ ಬಾಲಾ ಸಾಥ್; ಅಂತಹದ್ದೇನಾಯ್ತು?
ಇನ್ನೇನು 'ಸತ್ಯ' ಧಾರಾವಾಹಿ ಮುಕ್ತಾಯ ಹಂತ ಬಂದು ತಲುಪಿದೆ. ಇದೀಗ ದಿವ್ಯಾಳನ್ನು ಕೀರ್ತನ ಕಿಡ್ನಾಪ್ ಮಾಡಿದ್ದಾಳೆ. ದಿವ್ಯಾ ಕೀರ್ತನ ಮುಂದೆ ಒಂದು ಥರ ಆಡುತ್ತಿದ್ದರೆ, ಸತ್ಯ ಜೊತೆ ಇನ್ನೊಂದು ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಳು. ಆದರೆ, ಈ ವಿಚಾರ ಸತ್ಯಗೆ ತಿಳಿದಿರುತ್ತದೆ. ದಿವ್ಯಾ ಯಾವ ಕಾರಣಕ್ಕೆ ಹೀಗೆ ನಡೆದುಕೊಳ್ಳುತ್ತಿದ್ದಾಳೆ ಎನ್ನುವುದು ಮಾತ್ರ ಸತ್ಯಗೆ ತಿಳಿಯಬೇಕಿತ್ತು. ಆದರೂ ತನ್ನ ಸ್ವಂತ ಅಕ್ಕ ನನ್ನ ವಿರುದ್ದ ನಿಂತಾಗ ಮಾತ್ರ ಆಕೆಗೆ ಬಹಳ ನೋವು ಆಗುತ್ತದೆ.
ಎಲ್ಲರೂ ಎನಿಸಿದ ಹಾಗೆ ಕೀರ್ತನ ಒಳ್ಳೆಯವಳು ಆಗಿರುವುದಿಲ್ಲ. ಕೀರ್ತನಾಗೆ ಸತ್ಯ ಮೇಲೆ ಬಹಳ ಸಿಟ್ಟಿರುತ್ತದೆ. ಹಾಗೆಯೇ ಹೇಗಾದರೂ ಮಾಡಿ ಕೋಟೆ ಮನೆಯ ಆಸ್ತಿಯನ್ನು ತನ್ನ ಕೈ ವಶ ಮಾಡಿಕೊಳ್ಳಬೇಕು ಎಂದು ಮನದಲ್ಲಿಯೇ ಅಂದು ಕೊಳ್ಳುತ್ತಿರುತ್ತಾರೆ. ಹಾಗೆಯೇ ಅದಕ್ಕಾಗಿ ದಿವ್ಯಾಳನ್ನು ಕಿಡ್ನಾಪ್ ಮಾಡುತ್ತಾಳೆ. ಮನೆಯಲ್ಲಿ ದಿವ್ಯಾ ಕಾಣಿಸದೆ ಇರುವುದನ್ನು ಕಂಡ ಸತ್ಯಗೆ ಆತಂಕ ಆಗುತ್ತದೆ.

ಆದರೆ, ಇದೀಗ ಸಡನ್ ಆಗಿ ಆಕೆ ನಮ್ಮ ಜೊತೆ ಇಲ್ಲ. ಹಾಗಾದರೆ, ಅಕ್ಕ ಹೋಗಿದ್ದು ಎಲ್ಲಿಗೆ? ಎಂದು ಆಲೋಚನೆ ಮಾಡುತ್ತಾಳೆ. ಹಾಗೆಯೇ ಎಲ್ಲಾ ಪೊಲೀಸ್ ಸಿಬ್ಬಂದಿಗೆ ತಿಳಿಸುತ್ತಾಳೆ. ದಿವ್ಯಾ ಮನೆಯಲ್ಲಿ ಕಾಣದೆ ಇರುವುದನ್ನು ಕಂಡ ಮನೆ ಮಂದಿ ಆತಂಕ ವ್ಯಕ್ತ ಪಡಿಸುತ್ತಾರೆ. ಆಗ ಕಾರ್ತಿಕ್ ಕೂಡ ಅಮ್ಮನ ಬಳಿಗೆ ಬಂದು ಸ್ವಲ್ಪ ಜೋರಾಗಿಯೇ ಮಾತನಾಡುತ್ತಾನೆ. ಎಲ್ಲರೂ ಅಂದುಕೊಂಡ ಹಾಗೆ ಅಲ್ಲ. ಆಕೆ ಸ್ವಲ್ಪ ಕೂಡ ಬದಲಾಗಿಲ್ಲ. ಆಕೆಯನ್ನು ನಾವು ಎಲ್ಲರೂ ಬದಲಾಗಿದ್ದಾಳೆ ಎಂದು ಅಂದುಕೊಂಡಿದ್ದೆವು. ಆದರೆ ಆಕೆ ನಮ್ಮೆಲ್ಲರ ಕಣ್ಣಿಗೆ ಮಣ್ಣೆರಚಿದ್ದಾಳೆ ಎನ್ನುತ್ತಾನೆ.
ಕಾರ್ತಿಕ್ ಮಾತು ಕೇಳಿ ಸೀತಮ್ಮ ಶಾಕ್
ಆಕೆಗೆ ನಾನೇ ಮೊದಲಿರಬೇಕು. ನಾನು ಹೇಳಿದ ಹಾಗೆ ಎಲ್ಲವೂ ನಡೆಯಬೇಕು ಎನ್ನುವ ಮದ. ಅದಕ್ಕಾಗಿ ಇದೀಗ ದಿವ್ಯಾಳನ್ನು ಕಿಡ್ನಾಪ್ ಮಾಡಿದ್ದಾಳೆ ಎಂದು ಕೋಪದಿಂದ ಕಾರ್ತಿಕ್ ಹೇಳಿದಾಗ ಸೀತಾಗೆ ಬಹಳ ಬೇಸರ ಆಗುತ್ತದೆ. ಎಂತಹ ಮಗಳಿಗೆ ನಾನು ಜನ್ಮ ಕೊಟ್ಟೆ ದೇವರೇ. ಅವಳಿಗೆ ಯಾಕೆ ಈ ರೀತಿ ಬುದ್ದಿ ಕೊಟ್ಟೆ ಎಂದು ಮನದಲ್ಲಿ ನೆನೆದು ಜೋರಾಗಿ ಅಳುತ್ತಾಳೆ.

ಹೆಂಡತಿಯನ್ನು ಕಾಪಾಡಲು ಹೊರಟ ಬಾಲ
ಇನ್ನೂ ಬಾಲಗೆ ಮಾತ್ರ ಬಹಳ ಟೆನ್ಶನ್ ಆಗುತ್ತದೆ. ಏನು ಮಾಡಬೇಕು ಅನ್ನೋದೇ ತಿಳಿಯುವುದಿಲ್ಲ. ಆಗ ಸತ್ಯಗೆ ಒಂದು ಕರೆ ಬರುತ್ತದೆ. ಕೂಡಲೇ ಆಕೆ ಹೊರಟು ನಿಲ್ಲುತ್ತಾಳೆ. "ಈಗ ನಾನು ಏನು ಮಾತನಾಡದೆ ಕುಳಿತರೆ ಮುಂದೆಂದಿಗೂ ನನ್ನ ಅಕ್ಕನ ಜೊತೆ ನನಗೆ ಮಾತನಾಡುವ ಅವಕಾಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲ" ಎಂದು ಅಲ್ಲಿಂದ ಹೊರಟು ಹೋಗುತ್ತಾಳೆ. ಆಗ ಸೀತಾಗೆ ಇನ್ನೂ ಆತಂಕ ಹೆಚ್ಚಾಗುತ್ತದೆ.
ಆತಂಕದಲ್ಲಿರುವ ಸೀತಾ
"ಗರ್ಭಿಣಿ ಹೆಂಗಸು ಹೀಗೆ ಏಕಾ ಏಕಿ ಹೋದರೆ ಹೇಗೆ? ಆಕೆಗೆ ಏನಾದರು ಹೆಚ್ಚು ಕಮ್ಮಿ ಆದರೆ ಏನು ಗತಿ?" ಎಂದುಕೊಂಡು ಸತ್ಯ ಹಿಂದೆಯೇ ಮನೆಯವರೆಲ್ಲ ಹೋಗುತ್ತಾರೆ. ಸತ್ಯ ಜೊತೆ ಬಾಲ ಕೂಡ ಇರುತ್ತಾನೆ. ಕೀರ್ತನಾ ಕಟ್ಟಿರುವ ಕೋಟೆಯನ್ನು ಕೆಡವಲು ಸತ್ಯ ಬಂದಿದ್ದಾಳೆ. ಬಂಧಿಯಾಗಿದ್ದ ಅಕ್ಕನನ್ನು ಹೇಗಾದರೂ ಮಾಡಿ ಬಿಡಿಸಿಕೊಳ್ಳಬೇಕು ಎಂದು ಹರಸಾಹಸ ಪಡುತ್ತಿದ್ದಾಳೆ. ಹಾಗೆಯೇ ಸತ್ಯಗೆ ಬಾಲ ಸಾಥ್ ನೀಡುತ್ತಿದ್ದಾನೆ.


Click it and Unblock the Notifications











