Anu Janardhan: ಕಾಳೀ ಅವತಾರದಲ್ಲಿ ಹುಬ್ಬೇರಿಸಿದ ಅನು ಜನಾರ್ಧನ್
ಮಾರ್ಡನ್ ವಿಲನ್ ನಟಿಯರ ಪೈಕಿ ಫೇಮಸ್ ಎಂದರೆ, ಅದು ಅನು ಜನಾರ್ಧನ್. ಆಕೆಯ ಫ್ಯಾಷನ್, ಸ್ಟೈಲ್‌ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ.
ಸೀರೆ ಕಲೆಕ್ಷನ್‌ನಲ್ಲೂ ಅನು ಜನಾರ್ಧನ್ ಬಹಳ ಚ್ಯೂಸಿ ಆಗಿರುತ್ತಾರೆ. ಫ್ಯಾಷನ್ ವಿಚಾರಕ್ಕೆ ಬಂದರೆ ಆಕೆಯನ್ನು ಫಾಲೋ ಮಾಡಲೇಬೇಕು ಎನ್ನುವಷ್ಟು ಕ್ಯೂಟ್ ಆಗಿ ಡ್ರೆಸ್, ಮೇಕಪ್ ಮಾಡಿಕೊಳ್ಳುತ್ತಾರೆ.

ಕುಟುಂಬಸ್ಥರು ಮಾನವೀಯತೆಗೆ ಬೆಲೆ ಕೊಟ್ಟರು, ಕೀರ್ತನಾ ಮಾತ್ರ ಹಣ, ಅಂತಸ್ತಿಗೆ ಮಾತ್ರ ಬೆಲೆ ಕೊಡುತ್ತಾರೆ. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣುವ ಕೀರ್ತನಾ ಅಲಿಯಾಸ್ ಅನು ಜನಾರ್ಧನ್ ದಸರಾ ಸ್ಪೆಷಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಗಿನ್ನಿಸ್ ರೆಕಾರ್ಡ್ ಮಾಡಿರುವ ಅನು
ಮೂಲತಃ ಸಕ್ಕರೆ ನಾಡು ಮಂಡ್ಯದವರು. ತೆರೆಮೇಲೆ ತುಂಬಾ ಸ್ಟೈಲ್ ಆಗಿ ಮಾತನಾಡುವ ಅನು ಜನಾರ್ಧನ್, ಸ್ಟೈಲ್ ಐಕಾನ್ ಕೂಡ ಹೌದು. ಚಿಕ್ಕವರಿದ್ದಾಗಿನಿಂದಲೂ ಡ್ಯಾನ್ಸರ್ ಆಗಬೇಕೆಂದು ಕನಸು ಕಾಣುತ್ತಿದ್ದರು. ನಟನೆಗೆ ಬರುವ ಮುನ್ನ ಅನು ಜನಾರ್ಧನ್ ಪೂಮಾ ಸ್ಪೋರ್ಟ್ಸ್ ಕಂಪನಿಯಲ್ಲಿ ಹೆಚ್ ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅನು ಗಿನ್ನಿಸ್ ರೆಕಾರ್ಡ್ ಕೂಡ ಮಾಡಿದ್ದಾರೆ. ಅದೇನೆಂದರೆ, ಮಹಿಳೆಯರಿಗಾಗಿ ಡುಯು ಕ್ಯಾಂಪೇನ್ ಮಾಡಿದ್ದರು. ಇದಕ್ಕೆ ಅನು ಜನಾರ್ಧನ್ ಗಿನ್ನಿಸ್ ಅವಾರ್ಡನ್ನು ತಮ್ಮದಾಗಿಸಿಕೊಂಡಿದ್ದರು. ಅನುಗೆ ಕೊಂಚ ಬಿಡುವು ಸಿಕ್ಕರೂ ಸಾಕು ಅಡ್ವೆಂಚರ್ ಮಾಡಲು ಹೊರಟು ಬಿಡುತ್ತಾರೆ. ಟ್ರಾವೆಲ್ ಮಾಡುವುದನ್ನು ಹೆಚ್ಚು ಇಷ್ಟಪಡುವ ಅನು ಆಗಾಗ ಪ್ರವಾಸ ತೆರಳುತ್ತಿರುತ್ತಾರೆ. ಕಳೆದ ತಿಂಗಳು ಕೂಡ ಸ್ನೇಹಿತರ ಜೊತೆ ಗೋವಾ ಟ್ರಿಪ್ ಹೋಗಿ ಸಖತ್ ಎಂಜಾಯ್ ಮಾಡಿದ್ದರು.
ಫೀಟ್ ಆಗಿರುವ ಸ್ಟೈಲಿಷ್ ವಿಲನ್
ಅನು ಜನಾರ್ಧನ್ ಸದಾ ಫಿಟ್ ಆಗಿರಲು ಬಯಸುತ್ತಾರೆ. ಈ ಹಿಂದೆ ಗುಂಡು ಗುಂಡಗಾಗಿದ್ದ ಅನು ಸಣ್ಣಗಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಬಿಫೋರ್ ಅಂಡ್ ಆಫ್ಟರ್ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ ಅನು ಜನಾರ್ಧನ್ ಅನಗತ್ಯ ಕ್ಯಾಲರಿ ಇರುವ ಆಹಾರಗಳಿಗೆ ಗುಡ್ ಬೈ ಹೇಳಿ ಹದಿನೈದು ವರ್ಷ ಆಗಿದ್ಯಂತೆ. ಕಟ್ಟು ನಿಟ್ಟಾಗಿ ಡಯಟ್ ಮಾಡುವ ಆಕೆ ಡ್ಯಾನ್ಸ್ ಮಾಡಿ ತಮ್ಮ ದೇಹದ ಅರ್ಧದಷ್ಟು ತೂಕ ಇಳಿಸಿಕೊಂಡಿದ್ದಾರೆ. ಈಗ ನೋಡಲು ಬಳುಕುವ ಬಳ್ಳಿಯಂತೆ ಕಾಣುವ ಅನು ಸ್ಟೈಲಿಷ್ ಆಗಿ ಡ್ರೆಸ್ ಮಾಡಿಕೊಳ್ಳುತ್ತಾರೆ.

ಹಲವು ಧಾರಾವಾಹಿಗಳಲ್ಲಿ ನಟನೆ
ಅನು ಜನಾರ್ಧನ್ ಶಾಸ್ತ್ರೀಯ ನೃತ್ಯವನ್ನು ಕಲಿತಿದ್ದಾರೆ. 'ಮಹಾಕಾಳಿ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನು ಸ್ಟೈಲಿಷ್ ವಿಲನ್ ಕೂಡ ಹೌದು. 'ಬ್ರಹ್ಮಗಂಟು', 'ಜೈ ಹನುಮಾನ್', 'ಶ್ರೀವಿಷ್ಣು ದಶಾವತಾರ', 'ರಂಗನಾಯಕಿ' ಧಾರಾವಾಹಿಗಳಲ್ಲಿ ಅನು ಮಿಂಚಿದ್ದಾರೆ. ರಂಗನಾಯಕಿಯಲ್ಲಿ ಖಡಕ್ ವಿಲನ್ ಲುಕ್‌ನಲ್ಲಿ ಕಾಣಿಸಿಕೊಂಡ ಅನು ಪೌರಾಣಿಕ ಹಾಗೂ ಸಾಮಾಜಿಕ ಪಾತ್ರ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದ್ಯ 'ಸತ್ಯ' ಧಾರಾವಾಹಿಯಲ್ಲಿ ಕೀರ್ತನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಳಿಯೂ-ಶಿವಶಕ್ತಿಯೂ ಆದ ಅನು
ನಾಡಿನಲ್ಲಿ ದಸರಾ ಸಂಭ್ರಮ ಜೋರಾಗಿದೆ. ದೀಪಾವಳಿ ಹಬ್ಬಕ್ಕಾಗಿ ಕಾಯುತ್ತಿದ್ದಾರೆ. ಇಂತಹ ವೇಳೆಗೆ ಅನು ಕಾಳಿ ಅವತಾರದಲ್ಲಿಯೂ ಶಿವಶಕ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಎರಡೂ ಶೇಡ್‌ನಲ್ಲಿ ಮೇಕಪ್ ಮಾಡಿಕೊಂಡಿರುವ ಆಕೆ ಫೋಟೊ ಕ್ಲಿಕ್ಕಿಸಿ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೊಸ ಲುಕ್ ಅನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ.


Click it and Unblock the Notifications











