ಬಾಲ್ಯದಿಂದಲೂ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಟಿ ಶಾಲಿನಿ ರಾವ್ ಬಗ್ಗೆ ನಿಮಗೆಷ್ಟು ಗೊತ್ತು?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಊರ್ಮಿಳಾ ಆಗಿ ನಟಿಸುತ್ತಿರುವವರನ್ನು ನೀವು ಎಲ್ಲೋ ನೋಡಿರುವ ನೆನಪಾಗಬಹುದು. ಆದರೆ ಎಲ್ಲಿ ಎಂಬುದು ತಿಳಿಯುತ್ತಿಲ್ಲ ಅಲ್ವಾ..? ಇನ್ನು ಈಗೀಗ ಧಾರಾವಾಹಿಗಳನ್ನು ನೋಡುತ್ತಿರುವವರಿಗೆ ಹೊಸ ನಟಿ ಎಂದು ಕೂಡ ಅನಿಸಬಹುದು. ಆದರೆ, ಇವರು ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿದ್ದಾರೆ.

ಆಶ್ಚರ್ಯ ಆಯ್ತಾ..? ಮುಂದೆ ಓದಿ ಯಾರೀಕೆ ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಈ ನಟಿ ಒಂದು ಮೆಗಾ ಧಾರಾವಾಹಿಯಲ್ಲಿ ನಟಿಸಿದವರು. 'ಸತ್ಯ' ಧಾರಾವಾಹಿಯಲ್ಲಿ ಊರ್ಮಿಳಾ, 'ಬ್ರಾಹ್ಮಿನ್ಸ್ ಕೆಫೆ'ಯಲ್ಲಿ ಯಶೋಧಾ ಆಗಿ ನಟಿಸುತ್ತಿದ್ದಾರೆ.

Sathya Serial Fame Actress Shalini S Rao Biography and Career

ಇವರ ಹೆಸರು ಶಾಲಿನಿ ಎಸ್. ರಾವ್. ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲೇ. ಆದರೆ, ಇತ್ತೀಚೆಗೆ ಇವರ ಕುಟುಂಬ ಅರಸೀಕೆರೆಗೆ ಶಿಫ್ಟ್ ಆಗಿದೆಯಂತೆ. ಫ್ಯಾಶನ್ ಡಿಸೈನರ್ ಆಗಿರುವ ಶಾಲಿನಿ ಅವರು ಮೊದಲು ಬಣ್ಣ ಹಚ್ಚಿದ್ದು ದೂರದರ್ಶನದಲ್ಲಿ ಮೂಡಿ ಬಂದ 'ಥ್ಯಾಂಕ್ಯೂ ಸರು' ಎಂಬ ಧಾರಾವಾಹಿಗೆ. ಇದರಲ್ಲಿ ತಾರಾ ಅವರ ಮಗಳ ಪಾತ್ರದಲ್ಲಿ ಶಾಲಿನಿ ಅವರು ನಟಿಸಿದ್ದರಂತೆ. ಆಗ ಶಾಲಿನಿ ಅವರು ಐದನೇ ತರಗತಿಯಲ್ಲಿ ಓದುತ್ತಿದ್ದರಂತೆ. ಶಾಲಿನಿ ಕಿರುತೆರೆಗೆ ಬರಲು ಇವರ ತಾಯಿ ಕಾರಣ. ಡ್ಯಾನ್ಸ್, ಸಂಗೀತ ಎಲ್ಲದರಲ್ಲೂ ಮುಂದಿದ್ದ ಶಾಲಿನಿ ಅವರನ್ನು ತಾಯಿ ಇಂಡಸ್ಟ್ರಿಗೆ ಕರೆದುಕೊಂಡು ಬಂದರಂತೆ.

30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟನೆ

ಏಳನೇ ತರಗತಿಗೆ ಬಂದಾಗ 'ವಠಾರ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರಂತೆ. ಇದು ಮೆಗಾ ಧಾರಾವಾಹಿಯಾಗಿದ್ದು, ಅವರು 10ನೇ ತರಗತಿ ಮುಗಿಯುವವರೆಗೂ ಮೂಡಿ ಬಂದಿತ್ತಂತೆ. ಇಂದಿಗೂ ಜನ ಶಾಲಿನಿ ಅವರನ್ನು ವಠಾರ ಧಾರಾವಾಹ ಮೂಲಕವೇ ಗುರುತಿಸುತ್ತಾರಂತೆ. ವಠಾರ, ಕಸ್ತೂರಿ, ಸುಕನ್ಯ, ಆಕಾಂಕ್ಷಾ, ನೀ ನಡೆದ ದಾರಿಯಲ್ಲಿ, ಪುಣ್ಯಕೋಟಿ, ಮನೆಯೊಂದು ಮೂರು ಬಾಗಿಲು, ಮಹಾತಾಯಿ, ಒಲವೇ ಜೀವನ ಸೇರಿದಂತೆ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಸತತವಾಗಿ ಹತ್ತು ವರ್ಷಕ್ಕೂ ಅಧಿಕ ಕಾಲ ಧಾರಾವಾಹಿಗಳಲ್ಲಿ ನಟಿಸಿದ ಶಾಲಿನಿ ಬಳಿಕ ಬಹಳ ದೊಡ್ಡ ಬ್ರೇಕ್ ಪಡೆದುಕೊಂಡು 'ಮಮತೆಯ ಕರೆಯೋಲೆ' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದರು. ಬಳಿಕ ಸತ್ಯ ಧಾರಾವಾಹಿಯಲ್ಲಿ ಈಗ ಕಳೆದ ಒಂದು ವರ್ಷದಿಂದ ಊರ್ಮಿಳಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Sathya Serial Fame Actress Shalini S Rao Biography and Career

ಯಶೋಧಾ ಪಾತ್ರದಲ್ಲಿ ಶಾಲಿನಿ

ಇದೀಗ 'ಬ್ರಾಹ್ಮಿನ್ಸ್ ಕೆಫೆ' ಎಂಬ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಸಿರಿ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಗಾಯತ್ರಿ ಸೆಲ್ವಂ ಹಾಗೂ ಸೆಲ್ವಂ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದು, ಸಂಜೀವ್ ತಗಡೂರು ನಿರ್ದೇಶನ ಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ಶ್ರೀನಾಥ್ ವಸಿಷ್ಠ, ಪ್ರಥಮ ಪ್ರಸಾದ್, ಶಿವು, ರಾಮಸ್ವಾಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಶಾಲಿನಿ ಅವರು ಯಶೋಧಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಶಾಲಿನಿ ಅವರ ಇಷ್ಟ-ಕಷ್ಟ

ಇನ್ನು ಮಲೆನಾಡು ಪ್ರದೇಶವನ್ನು ಹೆಚ್ಚು ಇಷ್ಟಪಡುವ ಶಾಲಿನಿ ಅವರಿಗೆ ನೆಗೆಟಿವ್ ರೋಲ್‌ಗಳಲ್ಲಿ ನಟಿಸುವ ಆಸೆ ಇದೆಯಂತೆ. ಆದರೆ, ಎಲ್ಲರೂ ಪಾಸಿಟಿವ್ ಪಾತ್ರವನ್ನು ಕೊಡುತ್ತಾರೆ ಎಂಬ ಬೇಸರ ಇದೆ. ಇದರ ಜೊತೆಗೆ ಶಾಲಿನಿ ಅವರಿಗೆ ಸಿನಿಮಾಗಳಲ್ಲೂ ನಟಿಸುವ ಒಲವಿದೆ. ಶಾಲಿನಿ ಅವರು ಕಲಾವಿದೆ ಆಗಿರದಿದ್ದರೆ, ತಮ್ಮದೇ ಆದ ಬೂಟಿಕ್ ತೆರೆಯುವ ಆಸೆ ಇತ್ತಂತೆ. ಈಗಲೂ ಕೂಡ ಶಾಲಿನಿ ಅವರು ತಮ್ಮ ಬ್ಲೌಸ್‌ಗಳನ್ನು ತಾವೇ ಸ್ಟಿಚ್ ಮಾಡಿಕೊಳ್ಳುತ್ತಾರೆ. ಡಿಸೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರಂತೆ.

More from Filmibeat

English summary
Sathya Serial Fame Actress Shalini S Rao Biography and Career. here is details about her serials. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X