ನಯನತಾರಾ ಮದುವೆ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ಸತ್ಯ ಧಾರಾವಾಹಿಯ ನಟಿ!
ಬಹಳ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಜೋಡಿ ನಯನತಾರಾ ಮತ್ತು ವಿಘ್ನೇಶ್ ಇತ್ತೀಚೆಗಷ್ಟೇ ಅಧಿಕೃತವಾಗಿ ಮದುವೆಯಾಗಿದ್ದಾರೆ. ಆಪ್ತರ ವಲಯ, ಕುಟುಂಬಸ್ಥರಿಗೆ ಮಾತ್ರ ಈ ಮದುವೆಗೆ ಆಹ್ವಾನವಿತ್ತು. ಇವರ ಮದುವೆ ನೋಡಬೇಕೆಂದರೂ ಅಭಿಮಾನಿಗಳಿಗೆ ಏನೇನು ಸಿಗಲಿಲ್ಲ. ಮದುವೆಯ ದಿನ ನಟನೆಗೆ ನಯನತಾರಾ ಮತ್ತು ವಿಘ್ನೇಶ್ ಹೇಗೆ ರೆಡಿಯಾಗಿದ್ದರು ಎಂಬುದರ ಕೆಲವು ಫೋಟೊಗಳಲ್ಲಷ್ಟೇ ನೋಡುವಂತಾಯಿತು. ಆದರೆ ಸಿಕ್ಕ ಅಲ್ಪಸ್ವಲ್ಪ ಫೋಟೊದಲ್ಲಿ ಎಲ್ಲರ ಗಮನ ಸೆಳೆದಿದ್ದು ನಯನತಾರಾ ಸೀರೆ. ಇದೀಗ ಮದುವೆ ಕಳೆದು ಹಲವು ದಿನಗಳಾದರೂ ಆ ಸೀರೆಯ ಬಗ್ಗೆ ಸುದ್ದಿಯಾಗುತ್ತಿದೆ.
ಸತ್ಯ ಧಾರಾವಾಹಿ ಇತ್ತೀಚೆಗಂತೂ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಗಂಡು ಬೀರಿಯಂತಿದ್ದ ಸತ್ಯ ಈಗ ಕಂಪ್ಲೀಟ್ ಗೃಹಿಣಿಯಾಗಿದ್ದಾಳೆ. ಗಂಡು ಮಕ್ಕಳಿಗಿಂತ ಹೆಚ್ಚಾಗಿಯೇ ನಿಂತು ಮನೆಯ ಜವಾಬ್ದಾರಿಯನ್ನೆಲ್ಲಾ ತೆಗೆದುಕೊಂಡಿದ್ದಳು.
ಇದೀಗ ಒಂದು ಸಂಸಾರದಲ್ಲಿ ಗೃಹಿಣಿಯಾಗಿ ಹೇಗೆಲ್ಲಾ ಇರಬೇಕು ಎಂಬುದನ್ನು ಕಲಿಯುತ್ತಿದ್ದಾಳೆ ಸತ್ಯ. ಈ ಮಧ್ಯೆ ಹೊಸ ಫೋಟೊ ಒಂದನ್ನು ಹಾಕಿದ್ದು, ಅದು ಎಲ್ಲರ ಗಮನ ಸೆಳೆಯುತ್ತಿದೆ.

ಆ ಸೀರೆ ಹಾಕಿದ್ದೇಕೆ ಗೌತಮಿ?
ನಟಿ ನಯನತಾರಾ ಅವರ ಮದುವೆಯಲ್ಲಿ ಕಡು ಕೆಂಪು ಸೀರೆಯನ್ನುಂಟು, ಅದಕ್ಕೆ ಹಸಿರು ಬಣ್ಣದ ಜ್ಯುವೆಲ್ಲರಿ ಹಾಕಿ ಮಿಂಚಿದ್ದರು. ನಟಿಯರ ಮದುವೆ ಎಂದಾಕ್ಷಣಾ ಮೊದಲು ಗಮನ ಹೋಗುವುದೇ ಅವರ ಕಾಸ್ಟ್ಯೂಮ್ ಮೇಲೆ ಅದರಂತೆ ನಯನತಾರಾ ಸೀರೆ ಮೇಲೂ ಎಲ್ಲರ ಚಿತ್ತ ಇತ್ತು. ಒಂದೇ ಬಣ್ಣದ ಸೀರೆಯನ್ನುಟ್ಟಿದ್ದ ಕಾರಣ ಅದರ ಸ್ಪೆಷಾಲಿಟಿ ಬಗ್ಗೆಯೇ ಎಲ್ಲರ ಗಮನ ಹೋಗಿತ್ತು. ಅದರಂತೆಯೇ ಸೀರೆಯ ಸ್ಪೆಷಾಲಿಟಿ ಏನಿರಬಹುದು ಎಂದು ಸರ್ಚ್ ಮಾಡಿದ್ದರು. ಆಗ ಸಿಕ್ಕಿದ್ದೆ ಅದರ ಹಿಂದೆ ಏನೆಲ್ಲಾ ವಿಶೇಷತೆ ಇದೆ ಎಂಬುದು. ಸೀರೆಗೆ ಹೊಯ್ಸಳ ಹೊಳಪು ನೀಡಲಾಗಿತ್ತು. ಅಷ್ಟೇ ಅಲ್ಲ ಗಂಡನ ಹೆಸರನ್ನು ಕೆತ್ತಲಾಗಿತ್ತು. ಇದೇ ಕಾರಣಕ್ಕೆ ಸಾಕಷ್ಟು ವಿಶೇಷತೆಯನ್ನು ಹೊಂದಿತ್ತು. ಇದೀಗ ಇದೇ ರೀತಿಯ ಸೀರೆಯನ್ನು ಗೌತಮಿ ಜಾದವ್ ಹಾಕಿಕೊಂಡು ಪೋಸ್ ನೀಡಿದ್ದಾರೆ.

ಸತ್ಯಾಳ ಫೇವರಿಟ್ ನಯನಾತಾರಾ
ಸದ್ಯ ಗೌತಮಿ ಜಾದವ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವಂತ ನಟಿ. ಇತ್ತೀಚೆಗೆ ಸಾಕಷ್ಟು ಫೋಟೊಶೂಟ್‌ಗಳನ್ನು ಮಾಡಿಸುತ್ತಿದ್ದಾರೆ. ವೆರೈಟಿ ವೆರೈಟಿ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಡಾರ್ಕ್ ರೆಡ್ ಸೀರೆಯಲ್ಲಿ, ಹಸಿರು ಬಣ್ಣದ ಜ್ಯುವೆಲ್ಲರಿ ಹಾಕಿ ಹೊಸ ಫೋಟೊಶೂಟ್ ಮಾಡಿಸಿದ್ದಾರೆ. ಒಂದು ಕ್ಷಣ ಈ ಫೋಟೊಗಳನ್ನು ನೋಡಿದರೆ ಇದು ಗೌತಮಿ ಜಾದವ್ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ. ಥೇಟ್ ನಯನತಾರಾ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ.

ಗೌತಮಿ ಲುಕ್‌ಗೆ ಫ್ಯಾನ್ಸ್ ಫಿದಾ
ನಯನಾತಾರಾ ಮದುವೆಯಲ್ಲಿ ಮಾಡಿಕೊಂಡ ರೀತಿಯಲ್ಲಿಯೇ ಗೌತಮಿ ರೆಡಿಯಾಗಿದ್ದಾರೆ. ಸೀರೆ, ಜ್ಯುವೆಲ್ಲರಿ, ಹೇರ್ ಸ್ಟೈಲ್, ಮೇಕಪ್ ಹೀಗೆ ಎಲ್ಲಾ ಥರದಲ್ಲೂ ನಯನಾತಾರಾ ರೀತಿಯಲ್ಲಿಯೇ ಕಾಣಿಸುತ್ತಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ. ಸೂಪರ್ ಆಗಿ ಕಾಣುತ್ತಿದ್ದೀರಾ ಅಂತ ಹೊಗಳು, ಹೊಗಳಿ ಹಾರ್ಟ್ ಸಿಂಬಲ್ ನೀಡುತ್ತಿದ್ದಾರೆ. ಸತ್ಯಾಗೆ ಹೇಳಿ ಕೇಳಿ ನಯನಾತಾರಾ ಎಂದರೆ ಬಲು ಇಷ್ಟ. ಹೀಗಾಗಿಯೇ ಅವರ ಮದುವೆಯ ಉಡುಗೆಯಲ್ಲಿ ಮಿಂಚಿರುವ ಸತ್ಯಾಗೆ ವಿಶೇಷ ಕಳೆ ಬಂದಿದ್ದು ಅದ್ಭುತವಾಗಿ ಕಾಣುತ್ತಿದ್ದಾರೆ.
ಬೆಂಗಳೂರಲ್ಲಿ ಇದನ್ನು ಸಿದ್ಧಪಡಿಸಿದವರು ಯಾರು?
ಸ್ಟಾರ್ ನಟಿಯರು ನಾರ್ಮಲ್ ಆಗಿ ಹಾಕುವ ಡ್ರೆಸ್‌ಗಳೇ ಸಾಮಾನ್ಯರ ಕೈಗೆಟಕದಷ್ಟು ದುಬಾರಿಯಾಗಿರುತ್ತದೆ. ಇನ್ನು ಮದುವೆ, ಸಭೆ, ಸಮಾರಂಭಕ್ಕೆ ಹಾಕುವ ಡ್ರೆಸ್ ಬಗ್ಗೆ ಕೇಳಬೇಕಾ. ಅದರಲ್ಲೂ ನಟಿಯರು ಮದುವೆಗೆ ಹಾಕಿದ ಡ್ರೆಸ್‌ಗಳನ್ನು ರೀ-ಕ್ರಿಯೆಟ್ ಮಾಡುವುದು ಅಪರೂಪವೇ. ಆದರೆ ನಯನಾತಾರಾ ಮದುವೆಯ ಸೀರೆಯನ್ನು ರೆಂಟಲ್ ಔಟ್ ಫಿಟ್ ಅವರು ರೀ-ಕ್ರಿಯೇಟ್ ಮಾಡಿದ್ದಾರೆ. ರೆಂಟಲ್ ಜ್ಯುವೆಲ್ಲರಿ ಅವರು ಈ ಆಭರಣಗಳನ್ನು ಒದಗಿಸಿದ್ದಾರೆ. ಈ ಡ್ರೆಸ್‌ನಲ್ಲಿ ಸತ್ಯಾ ಅಲಿಯಾಸ್ ಗೌತಮಿ ಜಾದವ್ ಅಂತು ಅದ್ಭುತವಾಗಿ ಕಾಣುತ್ತಿದ್ದಾರೆ.


Click it and Unblock the Notifications











