Sathya Serial: ಅಗ್ರಿಮೆಂಟ್ ಕಥೆಗೆ ಬ್ರೇಕ್ ಬಿತ್ತು.. ಕೀರ್ತನಾಳಿಗೆ ಶಿಕ್ಷೆಯೂ ಆಯ್ತು

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಕೀರ್ತನಾ ಮನೆಯಲ್ಲಿ ಅಗ್ರಿಮೆಂಟ್ ವಿಚಾರವನ್ನು ಹೇಳಿ ಅವಾಂತರ ಸೃಷ್ಟಿಸಿದ್ದಾಳೆ. ಮನೆಯಲ್ಲಿ ಎಲ್ಲರೂ ಗಾಬರಿಯಾಗಿ ಸೀತಾಳನ್ನು ಪ್ರಶ್ನೆ ಮಾಡುತ್ತಾರೆ.

ಸೀತಾ ಅದೊಂದು ಆಟದ ಅಗ್ರಿಮೆಂಟ್. ನನ್ನ ಸೊಸೆಯನ್ನು ಕೋಟೆ ಮನೆಗೆ ತಕ್ಕಂತೆ ಸಿದ್ಧ ಮಾಡಲು ನಾನು ಹಾಕಿದ ರೂಲ್ಸ್ ಅವು ಎಂದು ಹೇಳುತ್ತಾಳೆ.

Sathya Serial October 26th episode: Seetha tears on agreement papers

ಸತ್ಯ ಈ ಮನೆಗೆ ತಕ್ಕ ಸೊಸೆಯಾಗಿದ್ದಾಳೆ. ಇನ್ನು ಈ ಅಗ್ರಿಮೆಂಟ್‌ಗೆ ಜಾಗವಿಲ್ಲ. ನಾನು ಸತ್ಯಳನ್ನು ನಮ್ಮ ಮನೆಯ ಸೊಸೆ ಎಂದು ಒಪ್ಪಿಕೊಂಡಿದ್ದೇನೆ ಎಂದು ಹೇಳುತ್ತಾಳೆ.

ಕೀರ್ತನಾಳಿಗೆ ಶಿಕ್ಷೆ ಕೊಟ್ಟ ಸೀತಾ

ಸತ್ಯ ಈ ಮನೆಯಲ್ಲೇ ಇರುತ್ತಾಳೆ ಎಂದು ಸೀತಾ ಹೇಳುತ್ತಾಳೆ. ಆಗ ಕೀರ್ತನಾ ಅಮ್ಮ ಈ ಮಾತುಗಳನ್ನು ನೀನು ಹೇಳುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾಳೆ. ಆಗ ಸೀತಾ ಕೀರ್ತನಾಳನ್ನು ಬೈಯ್ಯಲು ಶುರು ಮಾಡುತ್ತಾಳೆ. "ನನ್ನ ಬಳಿ ಇದ್ದ ಅಗ್ರಿಮೆಂಟ್ ಪೇಪರ್‌ಗಳನ್ನು ಕದ್ದು ತಂದಿದ್ದೀಯಾ. ಒಳ್ಳೆಯ ಕೆಲಸಕ್ಕೆ ಬಳಸಿದ್ದರೆ ಖುಷಿಯಾಗುತ್ತಿತ್ತು. ಆದರೆ, ನೀನು ಮನೆಹಾಳು ಕೆಲಸ ಮಾಡುತ್ತಿದ್ದೀಯಾ. ನಾನಾಗಿರುವುದಕ್ಕೆ ಸುಮ್ಮನಿದ್ದೀನಿ, ಸತ್ಯ ಮನಸ್ಸು ಮಾಡಿದರೆ ನಿನ್ನ ಮನೆಯಿಂದ ಹೊರಗೆ ಕಳಿಸುತ್ತಾಳೆ. ಆದರೆ, ಅವಳು ಒಳ್ಳೆಯವಳು" ಎಂದು ಹೇಳುತ್ತಾಳೆ. ಕೀರ್ತನಾಳಿಗೆ ಈ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಿರಲು ಆಗುವುದಿಲ್ಲ. ಆದರೆ, ಏನೂ ಮಾತನಾಡದೇ ಸುಮ್ಮನಿರುತ್ತಾಳೆ. ಆಗ ಸೀತಾ ನೀನು ಮಾಡಿದ ತಪ್ಪಿಗೆ ಶಿಕ್ಷೆಯಾಗಲೇ ಬೇಕು. ಸುಮ್ಮನೆ ಬಿಟ್ಟರೆ, ಇನ್ನೂ ನಿನ್ನ ಆಟ ಹೆಚ್ಚಾಗುತ್ತದೆ. ಇನ್ಮುಂದೆ ನೀನು ಮನೆಯಿಂದ ಎಲ್ಲಿಗೂ ಹೋಗುವಂತಿಲ್ಲ. ಆಫೀಸ್ ಕೆಲಸವನ್ನು ಮಾಡುವ ಹಾಗಿಲ್ಲ. ಮನೆಯಲ್ಲೇ ಇದ್ದು, ಮನೆ ಕೆಲಸ ಮಾಡು ಅದೇ, ನಿನಗೆ ನಾನು ಕೊಡುವ ಶಿಕ್ಷೆ. ಇಲ್ಲದಿದ್ದರೆ, ಗಂಟು ಮೂಟೆ ಕಟ್ಟಿಕೊಂಡು ನಿನ್ನ ಗಂಡನ ಜೊತೆಗೆ ಈ ಮನೆ ಬಿಟ್ಟು ಹೋಗುತ್ತಿರು ಎಂದು ವಾರ್ನಿಂಗ್ ಕೊಡುತ್ತಾಳೆ.

ಸೀತಾಳನ್ನು ಹೊಗಳಿದ ಮನೆಯವರು

ಸೀತಾ, ಕೀರ್ತನಾಳಿಗೆ ಅವಮಾನವಾಗುತ್ತದೆ. ಆದರೆ, ಸೀತಾ ನಿರ್ಧಾರವನ್ನು ಕೇಳಿದ ಮನೆಯವರೆಲ್ಲರೂ ಖುಷಿ ಪಡುತ್ತಾರೆ. ಎಲ್ಲರೂ ಸೀತಾಳ ಕೆಲಸವನ್ನು ಮೆಚ್ಚಿಕೊಂಡು ಹೊಗಳುತ್ತಾರೆ. ರಾಯರು, "ಸೀತಾ ನೀನು ಮಾಡಿದ ಕೆಲಸ ನನಗೆ ಖುಷಿ ಕೊಡ್ತು ಎಂದು ಹೇಳುತ್ತಾನೆ. ಸತ್ಯ ಅತ್ತೆಯ ಬಳಿ ಕೊನೆಗೂ ನನ್ನ ಸೊಸೆ ಅಂತ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ ಎನ್ನುತ್ತಾಳೆ. ಸೀತಾ ನಿನ್ನನ್ನು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ? ನಿನ್ನಲ್ಲಿ ಎಲ್ಲಾ ಒಳ್ಳೆಯ ಗುಣಗಳು ಇದೆ ಕಣೇ ಹುಡುಗಿ" ಎಂದು ಹೇಳುತ್ತಾರೆ.

Sathya Serial October 26th episode: Seetha tears on agreement papers

ಸತ್ಯ ಮೇಲೆ ಕಾರ್ತಿಕ್‌ಗೆ ಕೋಪ

ಇತ್ತ ಸತ್ಯ ಮೇಲೆ ಕಾರ್ತಿಕ್ ಕೋಪ ಮಾಡಿಕೊಂಡಿರುತ್ತಾನೆ. ತನಗೆ ಒಂದು ದಿನವೂ ಈ ಸತ್ಯವನ್ನು ಹೇಳಿಲ್ಲ ಎಂದು ಕೋಪ ಮಾಡಿಕೊಂಡಿರುತ್ತಾನೆ. ಸತ್ಯ ಸಮಾಧಾನ ಮಾಡುತ್ತಾಳೆ. ಆದರೆ, ಕಾರ್ತಿಕ್ ಅಗ್ರಿಮೆಂಟ್ ಮಾಡಿಕೊಂಡ ದೊಡ್ಡು ವಿಚಾರವನ್ನೇ ಮುಚ್ಚಿಟ್ಟಿದ್ದೆ. ಇದು ಒಂದು ರೀತಿಯಲ್ಲಿ ನನ್ನ ಪ್ರೀತಿಯನ್ನೇ ಅಡವಿಟ್ಟಂತೆ. ನಿನಗೆ ಹೇಗೆ ಮನಸ್ಸು ಬಂತು ಅಗ್ರಿಮೆಂಟ್‌ಗೆ ಸೈನ್ ಮಾಡಲು ಎಂದಾಗ ಸತ್ಯ ಆಗ ನನ್ನ ಪರಿಸ್ಥಿತಿ ಹಾಗಿತ್ತು. ಇನ್ಮುಂದೆ ಅಂತಹ ಸಂದರ್ಭ ಬರೋದಿಲ್ಲ ಎಂದು ಹೇಳಿ ಮನಸ್ಸು ಒಲಿಸುತ್ತಾಳೆ.

ಬೀಗರಿಗೆ ಸಮಾಧಾನ ಹೇಳಿದ ಸೀತಾ

ಇತ್ತ ಜಾನಕಿ ಮತ್ತು ಗಿರಿಜಾ ಇಬ್ಬರೂ ಕೂಡ ದಿವ್ಯಾ ಕೊಟ್ಟ ಅಗ್ರಿಮೆಂಟ್ ಡೋಸ್‌ಗೆ ಹೆದರಿಕೊಂಡಿರುತ್ತಾರೆ. ಅಲ್ಲಿ ಸತ್ಯ ಪರಿಸ್ಥಿತಿ ಹೇಗಿದೆಯೋ ಎಂದು ತಿಳಿದುಕೊಳ್ಳಲು ಸೀತಾಳಿಗೆ ಫೋನ್ ಮಾಡುತ್ತಾರೆ. ಸೀತಾ ಜಾನಕಿ ಅವರ ಬಳಿ ಮಾತನಾಡುತ್ತಾರೆ. ಅದಕ್ಕೆಲ್ಲಾ ನೀವು ಹೆದರಬೇಡಿ. ಅದು ಮುಗಿದು ಹೋದ ಕಥೆ. ನಿಮ್ಮ ಸೊಸೆ ನಮ್ಮ ಮನೆಯಲ್ಲಿ ಅರಾಮಾಗಿದ್ದಾಳೆ ಎಂದು ಸಮಾಧಾನ ಹೇಳುತ್ತಾರೆ. ಅಲ್ಲಿಗೆ ಅಗ್ರಿಮೆಂಟ್ ವಿಚಾರ ಕ್ಲೋಸ್ ಆಗಿದೆ.

More from Filmibeat

English summary
Sathya Serial October 26th episode: Sathya tears on agreement papers and gives punishment for her daughter Keerthana
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X