ಸೊಸೆ ಸತ್ಯ ಮೇಲೆ ಹೆಚ್ಚಿದ ಅತ್ತೆ ಸೀತಾಳ ಕಾಳಜಿ : ಲಕ್ಷ್ಮಣನಿಗೆ ಗೊತ್ತಾಯ್ತು ಎಲ್ಲಾ ಸಂಗತಿ!
ಸತ್ಯ ಧಾರಾವಾಹಿಯಲ್ಲಿ ದಿವ್ಯಾ ದುರಹಂಕಾರಕ್ಕೆ ಕೊನೆಯೇ ಇಲ್ಲ. ಮಾತು ಮಾತಿಗೂ ಬಾಲನನ್ನು ಆಡಿಕೊಳ್ಳುತ್ತಿರುತ್ತಾಳೆ. ಯೋಗ್ಯತೆ ಇಲ್ಲದವನನ್ನು ಮದುವೆಯಾದೆ ಎಂದು ಹೇಳುತ್ತಿರುತ್ತಾಳೆ. ದಿವ್ಯಾ ಆಡುವ ಮಾತುಗಳು, ಅವಳ ನಡವಳಿಕೆ ಎಲ್ಲವೂ ಜಾನಕಿ ಮತ್ತು ಗಿರಿಜಮ್ಮನಿಗೆ ನೋಡಿ ನೋಡಿ ಸಾಕಾಗಿ ಹೋಗಿರುತ್ತದೆ. ಎಷ್ಟು ಬೈದರೂ ದಿವ್ಯಾಳಿಗೆ ಬುದ್ಧಿ ಬರೋದಿಲ್ಲ ಎಂಬುದು ಕನ್ಫರ್ಮ್ ಆಗಿರುತ್ತದೆ.
ಕೀರ್ತನಾ ಬೇರೆ ದಾರಿ ಇಲ್ಲದೇ, ದಿವ್ಯಾ ಹೇಳಿದಂತೆ ಕೇಳುತ್ತಿದ್ದಾಳೆ. ದಿವ್ಯಾ ಹೇಳಿದ್ದಾಳೆಂದು ಕೀರ್ತನಾ ಡೈಮೆಂಡ್ ನೆಕ್ಲೇಸ್ ಅನ್ನು ಕೂಡ ಖರೀದಿ ಮಾಡುತ್ತಾಳೆ.

ಸತ್ಯ ಮನೆಗೆ ಹೋಗಲು ದಿವ್ಯಾ ತಯಾರಿ
ಡೈಮೆಂಡ್ ನೆಕ್ಲೇಸ್ ಬಂದ ಖುಷಿಯಲ್ಲಿ ದಿವ್ಯಾ ಹಿಗ್ಗಿರುತ್ತಾಳೆ. ಮನೆಯಲ್ಲಿ ಎಲ್ಲರಿಗೂ ಡೈಮೆಂಡ್ ನೆಕ್ಲೇಸ್ ತೋರಿಸಿ ಜಂಬ ಕೊಚ್ಚಿಕೊಳ್ಳುತ್ತಿರುತ್ತಾಳೆ. ಆದರೆ, ದಿವ್ಯಾಳ ನಡವಳಿಕೆ ಬಾಲನಿಗೆ ದಿನ ದಿನಕ್ಕೂ ಆತಂಕವನ್ನು ಹೆಚ್ಚಿಸಿದೆ. ನೆಕ್ಲೇಸ್ ಬಂದ ಖುಷಿಯಲ್ಲಿ ದಿವ್ಯಾ ದೇವಸ್ಥಾನಕ್ಕೆ ಹೋಗುವುದಾಗಿ ಜಾನಕಿಗೆ ಹೇಳುತ್ತಾಳೆ. ಜಾನಕಿ ದಿವ್ಯಾಳಿಗೆ ಸತ್ಯಳನ್ನು ಹೋಲಿಸಿ ಬೈಯುತ್ತಾಳೆ. ಆಗ ಗಿರಿಜಮ್ಮ ನಿನಗೆ ಒಳ್ಳೆಯ ಬುದ್ಧೀ ಬರಲಿ ಎಂದು ದೇವರ ಬಳಿ ಕೇಳಿಕೋ ಎಂದು ಹೇಳಿಕೊಡುತ್ತಾಳೆ. ಆದರೆ, ದಿವ್ಯಾ ಇಲ್ಲ ನಾನು ಸತ್ಯ ಮನೆಗೆ ಹೋಗುವಂತೆಯೂ, ಸತ್ಯ ಇಲ್ಲಿಗೆ ಬರುವಂತೆಯೂ ಕೇಳಿಕೊಂಡು ಬರುವ ಯೀಚನೆಯಲ್ಲಿದ್ದಾಳೆ. ಅಲ್ಲಿಗೆ ದಿವ್ಯಾ ಸತ್ಯ ಮನೆಯಲ್ಲಿ ಟಿಕಾಣಿ ಹೂಡುವ ಲೆಕ್ಕಾಚಾರದಲ್ಲಿರುವುದು ಪಕ್ಕಾ ಆಗಿದೆ.
ಸೊಸೆಗೆ ಕಥೆ ಹೇಳಿದ ಅತ್ತೆ
ಸೀತಾ ನಿಧಾನವಾಗಿ ಸತ್ಯಳನ್ನು ಒಪ್ಪಿಕೊಂಡಿದ್ದಾಳೆ. ಸತ್ಯ ಬಗ್ಗೆ ಕಾಳಜಿ ತೋರುತ್ತಿದ್ದಾಳೆ. ಆಗಾಗ ಸತ್ಯಳನ್ನು ವಿಚಾರಿಸುತ್ತಿರುತ್ತಾಳೆ. ಆದರೆ, ಈಗ ಸತ್ಯಳಿಗೆ ಜ್ವರ ಬಂದಿದೆ. ಇದರಿಂದ ಸೀತಾ ಕೂಡ ಗಾಬರಿಯಾಗಿದ್ದಾಳೆ. ಹಗಲು-ರಾತ್ರಿ ಸತ್ಯ ಜೊತೆಗೆ ಇದ್ದುಕೊಂಡು ಸೀತಾ ನೋಡಿಕೊಂಡಿದ್ದಾಳೆ. ಮಕ್ಕಳಿಗೆ ಕಥೆ ಹೇಳುವಂತೆ ಸತ್ಯಳಿಗೂ ಸೀತಾ ರಾಮನ ಪಟ್ಟಾಭಿಷೇಕದ ಕಥೆಯನ್ನು ಹೇಳಿ ಮಲಗಿಸುತ್ತಾಳೆ. ಇದನ್ನೆಲ್ಲಾ ನೋಡಿದ ಮನೆಯವರಿಗೂ ಖುಷಿಯಾಗುತ್ತದೆ. ಇನ್ನು ಮನೆಯವರು ಇದನ್ನೆಲ್ಲಾ ನೋಡಿ ಕೊನೆಗೂ ಸತ್ಯಳನ್ನು ಸೀತಾ ಒಪ್ಪಿಕೊಂಡಿದ್ದಾಳೆ ಎಂದು ಖುಷಿಯಾಗಿದ್ದಾರೆ.

ಹೊಟ್ಟೆ ಉರಿಯಲ್ಲಿ ಬೇಯುತ್ತಿರುವ ಕೀರ್ತನಾ
ಸೀತಾ ಕೂಡ ಸತ್ಯಳನ್ನು ಒಪ್ಪಿಕೊಂಡಿರುವುದಕ್ಕೆ ಕೀರ್ತನಾಳಿಗೆ ಹೊಟ್ಟೆ ಉರಿ ತಾಳಲಾಗುತ್ತಿಲ್ಲ. ಸೀತಾ ಸತ್ಯಳನ್ನು ಸಪೋರ್ಟ್ ಮಾಡುತ್ತಿದ್ದಾಳೆ. ಇದು ಕೀರ್ತನಾಳ ಆಲೋಚನೆಗಳು ತಲೆಕೆಳಗಾಗುವಂತೆ ಮಾಡಿದೆ. ಹೀಗಾಗಿ ಈಗ ಕೀರ್ತನಾ ತನ್ನ ಮನೆಗೆ ದಿವ್ಯಾಳನ್ನು ಕರೆಸಿಕೊಳ್ಳುವ ಪ್ಲಾನ್ ಮಾಡಿದ್ದಾಳೆ. ದಿವ್ಯಾ ಬಂದರೆ, ಸತ್ಯ ಆಟ ಏನೂ ನಡೆಯುವುದಿಲ್ಲ ಎಂದು ಭಾವಿಸಿದ್ದಾಳೆ.
ನಿಜ ಸಂಗತಿ ತಿಳಿದ ಲಕ್ಷ್ಮಣ
ಮನೆಯಲ್ಲಿ ಎಲ್ಲರೂ ಸೀತಾ ಹಾಗೂ ಸತ್ಯಳನ್ನು ನೋಡಿ ಖುಷಿಯಾಗಿದ್ದಾರೆ. ಸೀತಾಳೇ ನೇರವಾಗಿ ಕಾರ್ತಿಕ್ ಬಳಿ ಹೋಗಿ ಸತ್ಯಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಾಳೆ. ಇನ್ನು ಸತ್ಯಗೋಸ್ಕರ ದೇವಸ್ಥಾನಕ್ಕೂ ಹೊರಟಿದ್ದಾಳೆ. ಸತ್ಯ ಇತ್ತೀಚೆಗೆ ಬಹಳ ಯೋಚನೆ ಮಾಡುತ್ತಿರುತ್ತಾಳೆ. ಅವಳಿಗೆ ಏನೋ ಆಗಿದೆ. ಆ ದೇವಸ್ಥಾನಕ್ಕೆ ಹೋಗಿ ಬಂದಾಗಿನಿಂದ ಹೀಗಿದ್ದಾಳೆ ಎಂದು ಸೀತಾ ಹೇಳುತ್ತಾಳೆ. ಲಕ್ಷ್ಮಣ ಕುತೂಹಲದಿಂದ ಯಾವತ್ತು ಯಾವ ದೇವಸ್ಥಾನ ಎಂದು ಕೇಳುತ್ತಾನೆ. ಸೀತಾ ಮಂಜುನಾಥ ದೇವಸ್ಥಾನಕ್ಕೆ ಊರ್ಮಿಳಾ ಹುಟ್ಟು ಹಬ್ಬದ ದಿನ ಹೋಗಿದ್ದೆವು. ಅಲ್ಲಿಂದ ಬಂದಾಗಿನಿಂದ ಸತ್ಯ ವಿಚಿತ್ರವಾಗಿ ಆಡುತ್ತಿದ್ದಾಳೆ ಎಂದು ಸೀತಾ ಹೇಳುತ್ತಾಳೆ. ಈ ಮಾತು ಕೇಳಿದ ಕೂಡಲೇ ಲಕ್ಷ್ಮಣನಿಗೆ ಶಾಕ್ ಆಗುತ್ತದೆ.


Click it and Unblock the Notifications











