ಮಂಗಳೂರಿನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಸತ್ಯ ಅಂಡ್ ಟೀಂ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿ ಆರಂಭವಾದಾಗಿನಿಂದ ಅದರ ಕ್ರೇಜ್ ಎಷ್ಟಿದೆ ಎಂದರೆ, ಮಕ್ಕಳು ಸತ್ಯ ಪಾತ್ರಧಾರಿಯಂತೆ ಡ್ರೆಸ್ ಮಾಡಿಸಿಕೊಳ್ಳುತ್ತಾರೆ. ಸೀರಿಯಲ್‌ ಡೈಲಾಗ್‌ಗಳನ್ನು ಹೇಳುತ್ತಾ, ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ ಲೋಡ್‌ ಮಾಡುತ್ತಿರುತ್ತಾರೆ. ಈ ಬಗ್ಗೆ ಧಾರಾವಾಹಿ ತಂಡ ಸಂತಸವನ್ನು ವ್ಯಕ್ತಪಡಿಸುತ್ತಲೇ ಇರುತ್ತದೆ.

ಇನ್ನು ಸತ್ಯ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಧಾರಾವಾಹಿಯಲ್ಲಿ ಬರುವ ಕೆಲ ಪಾತ್ರಗಳಿಗೆ ಬಿಟ್ಟರೆ, ಪ್ರೇಕ್ಷಕರಂತೂ ಸತ್ಯಳನ್ನು ಒಪ್ಪಿಕೊಂಡಿದ್ದಾರೆ. ಹೆಣ್ಣು ಮಕ್ಕಳು ಕೂಡ ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಬದುಕಬೇಕು ಎಂಬುದನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಸತ್ಯ ಪಾತ್ರವನ್ನು ಪ್ರತಿಯೊಬ್ಬರೂ ಇಷ್ಟಪಟ್ಟಿದ್ದಾರೆ.

ಸತ್ಯ ನಟಿ ತೆರೆಮೇಲೆ ಒರಟಾಗಿ ಕಾಣಿಸಿಕೊಂಡರೂ, ಆಕೆಯ ಜವಾಬ್ದಾರಿಯ ನಡೆ, ನ್ಯಾಯ ಆಲೋಚನೆಗಳು, ಸತ್ಯ ಗಂಡು ಬೀರಿಯಂತೆ ಬೆಳದಿರುವುದು ಎಲ್ಲವೂ ಚೆನ್ನಾಗಿಯೇ ಮೂಡಿ ಬರುತ್ತಿದೆ. ಸತ್ಯ ಎಂದರೆ ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ಸಿಕ್ಕಾಪಟ್ಟೆ ಇಷ್ಟ.

ಸ್ವಪ್ನಾ ಕೃಷ್ಣ ಸತ್ಯ ಧಾರಾವಾಹಿ !

ಸ್ವಪ್ನಾ ಕೃಷ್ಣ, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ಮಾಪಕಿ ಮತ್ತು ನಿರ್ದೇಶಕಿ. ಅಲ್ಲದೇ ಈ ಹಿಂದೆ ಸ್ವಪ್ನಾ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ಪ್ರಸಿದ್ಧ ಚಲನಚಿತ್ರ ಛಾಯಾಗ್ರಾಹಕ ಮತ್ತು ನಿರ್ದೇಶಕ ಕೃಷ್ಣ ಅವರ ಪತ್ನಿ. ಕೆಲ ಚಿತ್ರಗಳನ್ನು ಈ ದಂಪತಿಗಳು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಇನ್ನು ಸ್ವಪ್ನಾ ಅವರು ಸತ್ಯ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದು, ಅವರು ಬಯಸಿದಂತೆಯೇ ಸೀರಿಯಲ್‌ ನಿರ್ದೇಶನ ಮಾಡುತ್ತಿದ್ದಾರೆ.

ಸತ್ಯ ಪಾತ್ರಕ್ಕೂ ಸ್ವಪ್ನಾ ಅವ್ರಿಗೂ ಕನೆಕ್ಷನ್!

ಸತ್ಯ ಧಾರಾವಾಹಿಯಲ್ಲಿ ಮೂಡಿ ಬರುತ್ತಿರುವ ಸತ್ಯ ಪಾತ್ರಧಾರಿ ಬೇರೆಯಾರೂ ಅಲ್ಲವಂತೆ. ಸ್ವತಃ ಸ್ವಪ್ನಾ ಕೃಷ್ಣ ಅವರೇ ಅಂತೆ. ಟಾಮ್ ಬಾಯ್‌ನಂತೆ ನಡೆದುಕೊಳ್ಳುತ್ತಾರಂತೆ. ತಮ್ಮನ್ನೇ ತಾವು ಸತ್ಯ ರೂಪದಲ್ಲಿ ನೋಡುತ್ತಿದ್ದಾರಂತೆ. ನಿರ್ದೇಶಕಿ ಸ್ವಪ್ನಾ ಕೃಷ್ಣ ರಿಯಲ್ ಲೈಫ್‌ನಲ್ಲೂ ಸತ್ಯಳಂತೆ ಇರುತ್ತಾರೆ ಎಂದು ನಟಿ ಗೌತಮಿ ಜಾಧವ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸ್ವಪ್ನಾ ಮೇಡಂ ಅವರು ಡೈರೆಕ್ಷನ್ ಮಾಡುವ ಸತ್ಯ ಪಾತ್ರದಂತೆಯೇ ಕಾಣುತ್ತಾರೆ.

ಜಾಲಿ ಮೂಡ್‌ನಲ್ಲಿ ಸತ್ಯ ಟೀಂ!

ಸತ್ಯ ಧಾರಾವಾಹಿಯಲ್ಲಿ ಬರುವ ಸತ್ಯ, ದಿವ್ಯಾ ಹಾಗೂ ಜಾನಕಿ ಮತ್ತು ನಿರ್ದೇಶಕಿ ಸ್ವಪ್ನಾ ಕೃಷ್ಣ ಅವರು ಈಗ ಜಾಲಿ ಮೂಡ್‌ನಲ್ಲಿದ್ದಾರೆ. ನಟಿಯರಾದ ಗೌತಮಿ, ಪ್ರಿಯಾಂಕಾ ಶಿವಣ್ಣ, ಶೈಲಶ್ರೀ ಅರಸ್‌ ಎಲ್ಲರೂ ಧಾರಾವಾಹಿಯಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ಇದೀಗ ಇವರೆಲ್ಲಾ ಸೇರಿಕೊಂಡು ನಿರ್ದೇಶಕಿ ಸ್ವಪ್ನಾ ಕೃಷ್ಣ ಅವರ ಜೊತೆಗೆ ಪ್ರವಾಸ ಕೈಗೊಂಡಿದ್ದಾರೆ. ನಾಲ್ಕು ಜನರೂ ಒಂದೇ ತರಹದ ಬಟ್ಟೆಯನ್ನು ಧರಿಸಿ ಫೋಟೋ ಹಂಚಿಕೊಂಡಿದ್ದಾರೆ.

ಟೆಂಪಲ್‌ ರನ್‌, ಬೀಚ್‌ ಫನ್!

ನಾಲ್ಕು ಜನರು ಕೂಡ ಈಗ ಜಾಲಿ ಮೂಡ್ ನಲ್ಲಿದ್ದು, ಶೂಟಿಂಗ್‌ನಿಂದ ಬ್ರೇಕ್‌ ಪಡೆದುಕೊಂಡು ಮಂಗಳೂರಿಗೆ ಹಾರಿದ್ದಾರೆ. ಮಂಗಳೂರಿನಲ್ಲಿ ಟೆಂಪಲ್‌ ರನ್‌, ಬೀಚ್‌ ಫನ್ ಎನ್ನುತ್ತಿದ್ದಾರೆ. ಈ ವೀಕೆಂಡ್‌ನಲ್ಲಿ ಪ್ರವಾಸ ಹೊರಟ ನಾಲ್ವರೂ ಕುಂದಾಪುರ ದೇವಸ್ಥಾನ, ಬೀಚ್‌ ಗಳಿಗೆ ತೆರಳಿದ್ದಾರೆ. ಎಲ್ಲರೂ ಬ್ಲಾಕ್‌ ಟಿ ಶರ್ಟ್ ಧರಿಸಿ ಬೀಚ್‌ ನಲ್ಲಿ ಮಸ್ತ್ ಮಜಾ ಮಾಡಿದ್ದಾರೆ. ಇದರ ಫೋಟೋಗಳನ್ನು ಪ್ರಿಯಾಂಕ ಶಿವಣ್ಣ, ಸ್ವಪ್ನ ಕೃಷ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

More from Filmibeat

English summary
Sathya Serial Team In Bindas Mood, Sathya Mangalore Trip
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X