Sathya Serial: 'ಸತ್ಯ' ಹೀರೊ ಕಾರ್ತಿಕ್ ಆ್ಯಕ್ಟಿಂಗ್ ಹಿನ್ನೆಲೆಯೇನು?

By ಪ್ರಿಯಾ ದೊರೆ

ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಸತ್ಯ' ಧಾರಾವಾಹಿ ಇತ್ತೀಚೆಗಷ್ಟೇ ಒಂದು ವರ್ಷ ಕಂಪ್ಲೀಟ್ ಮಾಡಿದೆ. 'ಸತ್ಯ' ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ಬರುವ ಕಾರ್ತಿಕ್ ಪಾತ್ರಧಾರಿಯ ಸಾಗರ್ ಬಿಳಿ ಗೌಡ ಅವರ ಕಿರುತೆರೆ ಜರ್ನಿ ಬಗ್ಗೆ ತಿಳಿಯೋಣ ಬನ್ನಿ..

ಕಿರುತೆರೆಯಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚಿದ ಸಾಗರ್ ಬಿಳಿ ಗೌಡ ಅವರಿಗೆ 'ಸತ್ಯ' ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿದೆ. ಸಾಗರ್ ಬಿಳಿ ಗೌಡಗೆ ಈಗ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ನಟನೆಯನ್ನು ಇಷ್ಟ ಪಡುವ ಸಾಗರ್ ಬಿಳಿ ಗೌಡ, 'ಸತ್ಯ' ಸೀರಿಯಲ್ ಕೂಡ ಸಿನಿಮಾ ಮಾದರಿಯಲ್ಲೇ ಶೂಟಿಂಗ್ ನಡೆಯುತ್ತೆ ಎನ್ನುತ್ತಾರೆ.

ಸಾಗರ್ ಅವರ ಫ್ಯಾಮಿಲಿಯಲ್ಲಿ ಯಾರೊಬ್ಬರೂ ನಟನೆಯಲ್ಲಿದ್ದವರಲ್ಲ. ಆದರೆ ಸಾಗರ್‌ಗೆ ಮಾತ್ರ ಚಿಕ್ಕ ವಯಸ್ಸಿನಿಂದಲೂ ತಾನೊಬ್ಬ ನಟನಾಗಬೇಕು ಅನ್ನೋ ಹಂಬಲವಂತೂ ಇತ್ತು. ತನ್ನ ಕನಸನ್ನು ಈಗ ಸಾಗರ್ ಬಿಳಿ ಗೌಡ ನನಸು ಮಾಡಿಕೊಂಡಿದ್ದಾರೆ.

ಓದುವುದು ಸಾಗರ್‌ಗೆ ಟಾರ್ಚರ್ ಅಂತೆ!

ಸಾಗರ್ ಬಿಳಿ ಗೌಡ ಅವರ ತಾತ ಅಸಿಸ್ಟೆಂಟ್ ಕಮಿಷನರ್ ಆಗಿದ್ದರು. ಇನ್ನು ಅವರ ತಂದೆಯೂ ಒಳ್ಳೆಯ ಹುದ್ದೆಯಲ್ಲಿದ್ದವರು. ಡೆಪ್ಯೂಟಿ ಸೆಕ್ರೆಟರಿಯಾಗಿ ಸಾಗರ್ ಬಿಳಿ ಗೌಡ ಅವರ ತಂದೆ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಅವರ ತಾಯಿ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಇಂತಹ ಕುಟುಂಬದಿಂದ ಬಂದ ಸಾಗರ್‌ಗೆ ಇದ್ದದ್ದು ಒಂದೇ ಕನಸು. ಅದು ತಾನು ನಟನಾಗಬೇಕು ಎಂಬುದು. ಆದರೆ ಸಾಗರ್‌ಗೆ ಕುಟುಂಬದಲ್ಲಿ ಕೊಡ್ಡುತ್ತಿದ್ದ ಟಾರ್ಚರ್ ಎಂದರೆ ಅದು ಓದುವುದು. ಓದು.. ಓದು ಎಂದು ಮನೆಯಲ್ಲಿ ಸದಾ ಹೇಳುತ್ತಿದ್ದರಂತೆ. ಲಂಡನ್‌ನಲ್ಲಿ ಸಾಗರ್ ಎಂಬಿಎ ಓದಿ, ಮಾಸ್ಟರ್ ಇನ್ ಬಿಸಿನೆಸ್ ಲಾ ಮಾಡಿಕೊಂಡಿದ್ದಾರೆ.

ಕನಸು ನನಸು ಮಾಡಿಕೊಂಡ ಅಮೂಲ್ ಬೇಬಿ!

ಇಷ್ಟೆಲ್ಲಾ ಓದಿದ ಮೇಲೂ ಮನಸೆಲ್ಲಾ ಇದ್ದದ್ದು ಮಾತ್ರ ಅಭಿನಯರಂಗದಲ್ಲಿ. ಕನಸನ್ನು ಹೇಗಾದರೂ ನನಸು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದ ಸಾಗರ್, ಅಭಿನಯ ತರಬೇತಿ ಕೇಂದ್ರಕ್ಕೆ ಸೇರಿಕೊಂಡರು. ನಟನಾ ಶಾಲೆಗೆ ಸೇರಿಕೊಂಡ ಸಾಗರ್, ಕಿರುತೆರೆಗೂ ಎಂಟ್ರಿ ಕೊಟ್ಟರು. ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಾಗರ್, ಮನೆ ಕೆಲಸದವನ ಪಾತ್ರ ಮಾಡಿದ್ದರು. ನಂತರ ಸಾಗರ್‌ಗೆ ಉದಯ ಟಿವಿಯಲ್ಲಿ ಮೂಡಿ ಬಂದ 'ಮನಸಾರೆ' ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಇದರಲ್ಲಿ ಸಾಗರ್ ತಲೆಹರಟೆ, ತುಂಟಾಟ, ತಮಾಷೆ ಮಾಡಿಕೊಂಡು ನಟಿಸಿದ್ದರು. ಸಾಗರ್ ನಿಜ ಜೀವನದಲ್ಲಿ ಇರೋದು ಕೂಡ ಹೀಗೆ ಎಂದು ಅವರೇ ಹೇಳಿಕೊಂಡಿದ್ದಾರೆ.

ಸಾಗರ್‌ಗೆ ಈ 5 ನಟರು ಫೇವರಿಟ್!

ಚಿಕ್ಕ ವಯಸ್ಸಿನಿಂದಲೂ ನಟನಾಗಬೇಕು ಎಂದು ಕನಸು ಕಾಣುತ್ತಿದ್ದ ಸಾಗರ್ ಬಿಳಿ ಗೌಡಗೆ ಫೇವರಿಟ್ ನಟ ಯಾರು ಗೊತ್ತಾ..? ಸಾಗರ್‌ಗೆ ಒಬ್ಬರಲ್ಲ ಐವರು ಫೇವರಿಟ್ ನಟರಿದ್ದಾರೆ. ಮೊದಲಿಗೆ ಡಾ.ವಿಷ್ಣುವರ್ಧನ್. ಡಾ.ವಿಷ್ಣುದಾದಾ ನಟಿಸಿದ ಒಂದೊಂದು ಪಾತ್ರವೂ ಡಿಫರೆಂಟ್ ಆಗಿರುತ್ತೆ. ನನಗೆ ಅವರ ಅಭಿನಯ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಎರಡನೇಯ ಫೇವರಿಟ್ ಹೀರೊ ವಜ್ರಮುನಿ. ವಜ್ರಮುನಿ ಎಲ್ಲಾ ಪಾತ್ರಗಳೂ ನೆಗೆಟಿವ್ ಇದ್ದರೂ ಕೂಡ ಅದ್ಭುತವಾಗಿ ನಟಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು ದರ್ಶನ್ ಎಂದ್ರೆ ಸಾಗರ್ ತುಂಬಾನೇ ಇಷ್ಟವಂತೆ. ನಂತರ ನಸಿರುದ್ದೀನ್ ಶಾ ಚಿತ್ರಗಳನ್ನು ಸಾಗರ್ ಇಷ್ಟ ಪಟ್ಟು ನೋಡುತ್ತಾರಂತೆ. ಕ್ರಿಶ್ಚಿಯನ್ ಬೇಲ್, ಲಿಯೋನಾರ್ಡೋ ಡಿಕಾಪ್ರಿಯೋ, ರಾಬರ್ಟ್ ಡಿ ನಿರೋ ಹಾಗೂ ಅಪ್ ಪಸಿನೋ ಅವರ ನಟನೆಯನ್ನು ಸಾಗರ್ ಇಷ್ಟ ಪಡುತ್ತಾರಂತೆ.

ವಿದೇಶದಲ್ಲಿ ಆಕ್ಟಿಂಗ್ ಕೋರ್ಸ್

ಸಾಗರ್ ವಿದೇಶಕ್ಕೆ ತೆರಳಿ ಅಲ್ಲಿಯೂ ಆಕ್ಟಿಂಗ್ ಕಲಿತು ಬಂದಿದ್ದಾರೆ. ಆರು ತಿಂಗಳ ಕಾಲ ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಮಾಡಿದ್ದಾರೆ. ಇದರಲ್ಲಿ ಒಬ್ಬ ನಟ ಹೇಗೆ ಕ್ಯಾಮರಾ ಎದುರಿಸಬೇಕು. ಕ್ಯಾಮರಾ ಎದುರು ಇರುವಾಗ ನಟನಿಗೆ ಏನೇನು ನೈಪುಣ್ಯತೆ ಇರಬೇಕು. ಆತ ತನ್ನ ವಾಯ್ಸ್ ಮಾಡ್ಯುಲೇಶನ್ ಹೇಗೆ ಮಾಡಿಕೊಳ್ಳಬೇಕು. ಬಾಡಿ ಲ್ಯಾಂಗ್ವೇಜ್, ನೋಡುವ ನೋಟ ಹೀಗೆ ಮೊದಲಾದ ವಿಚಾರಗಳನ್ನು ಕಲಿತು ಬಂದಿದ್ದಾರೆ. ಈಗ ಈ ಎಲ್ಲಾ ಕಲೆಯನ್ನೂ 'ಸತ್ಯ' ಧಾರಾವಾಹಿಯಲ್ಲಿ ಅಳವಡಿಸಿಕೊಂಡು ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ.

More from Filmibeat

English summary
Sathya Tv Serial Hero Karthik Real Name And Life Story Is Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X