ಪ್ರೀತಿ ಒಪ್ಪಿಕೊಂಡ ಸತ್ಯ, ನಾಯಕ ಕಾರ್ತಿಕ್ ಮದುವೆಗೆ ದೊಡ್ಡ ಆತಂಕ!
'ಸತ್ಯ' ಕನ್ನಡ ಕಿರುತೆರೆಯಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಧಾರಾವಾಹಿ. ಸತ್ಯ ಸೀಯಲ್‌ಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅದರಲ್ಲೂ ಧಾರಾವಾಹಿಯಲ್ಲಿನ ಸತ್ಯಳ ಪಾತ್ರ ಜನಮನ ಗೆದ್ದಿದೆ. ಸದ್ಯ ರೋಚಕ ತಿರುವುಗಳಿಂದ ಧಾರಾವಾಹಿ ಸಾಗುತ್ತಿದ್ದು, ಮುಂದೆ ಏನಾಗಬಹುದು ಎನ್ನುವ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.
'ಸತ್ಯ' ಧಾರಾವಾಹಿಯಲ್ಲಿ ನಾಯಕಿ ಸತ್ಯ ಮದುವೆ ಸನ್ನಿವೇಷ ನಡೆಯುತ್ತಿದೆ. ಇಲ್ಲಿ ನಾಯಕ ಕಾರ್ತಿಕ್ ಸತ್ಯಳನ್ನು ಬಿಟ್ಟು ಆಕೆಯ ಸಹೋದರಿಯನ್ನು ಮದುವೆ ಆಗುತ್ತಿದ್ದಾನೆ. ಆದರೆ ಮದುವೆಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು, ಮದುವೆ ನಿಲ್ಲುವ ಸೂಚನೆಗಳು ಮೂಡಿ ಬರುತ್ತಿವೆ. ಈಗ ಸತ್ಯ ತೆಗೆದುಕೊಂಡಿರುವ ನಿರ್ಧಾರ ಒಂದು ದೊಡ್ಡ ತಿರುವು ಕೊಡುವ ಸಾಧ್ಯತೆ ಇದೆ.
ಸತ್ಯ ಧಾರಾವಾಹಿಯಲ್ಲಿ ಮುಖ್ಯವಾದ ಅಂಶ ಅಂದರೆ ಅದು ನಾಯಕ ಕಾರ್ತಿಕ್ ಮತ್ತು ಸತ್ಯ ಪ್ರೀತಿ. ಆದರೆ ಈ ಜೋಡಿ ಪ್ರೀತಿ ಹೇಳುವ ಮುನ್ನವೇ ಕಾರ್ತಿಕ್ ಬೇರೆ ಮದುವೆ ಆಗುತ್ತಿದ್ದಾನೆ. ಕಾರ್ತಿಕ್ ಮನೆಯವರ ಸಂತೋಷಕ್ಕಾಗಿ ತನ್ನ ಪ್ರೀಯಿತನ್ನು ತ್ಯಾಗ ಮಾಡಿ ಸತ್ಯಳಿಗೆ ಸುಳ್ಳು ಹೇಳಿದ್ದಾರೆ.

ಪ್ರೀತಿ ಒಪ್ಪಿಕೊಂಡ ನಾಯಕಿ ಸತ್ಯ!
ನಾಯಕ ಕಾರ್ತಿಕ್ ಸತ್ಯಳ ಪ್ರೀತಿ ಬಲೆಗೆ ಬೀಳುತ್ತಾನೆ. ಆದರೆ ಆ ನಿಜವನ್ನು ಹೇಳುವ ಮುನ್ನ ಪರಿಸ್ಥಿತಿ ಕೈಗೊಂಬೆ ಆಗಿ ಬೇರೆ ಮದುವೆ ಆಗುತ್ತಿದ್ದಾನೆ. ನಟಿ ಸತ್ಯ ತನಗೆ ಅಮೂಲ್ ಬೇಬಿ ಕಾರ್ತಿಕ್ ಮೇಲೆ ಪ್ರೀತಿ ಆಗಿದೆ ಎಂದು ತಿಳಿದುಕೊಳ್ಳಲು ಹೆಚ್ಚು ತಡಮಾಡುತ್ತಾಳೆ. ಹಾಗಾಗಿ ಸತ್ಯ ಪ್ರೀತಿ ಹೇಳಿಕೊಳ್ಳಲು ಸಾಧ್ಯವೆ ಆಗುವುದಿಲ್ಲ. ಆದರೆ ಕೊನೆಗೂ ಸತ್ಯ ಕಾರ್ತಿಕ್‌ಗೆ ನಿಜ ಹೇಳಿ ಪ್ರಪೋಸ್ ಮಾಡಿ ಬಿಡುತ್ತಾಳೆ. ಆದರೆ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ.

ಕಾರ್ತಿಕ್ ಮನಸ್ಸು ಬದಲಾಗುತ್ತಾ?
ಇನ್ನು ನಟ ಕಾರ್ತಿಕ್, ಸತ್ಯ ಎಷ್ಟೇ ಹೇಳಿದರು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಸತ್ಯ ಹೋದ ಬಳಿಕ ತನಗೆ ಆಕೆಯ ಮೇಲಿದ್ದ ಪ್ರೀತಿಯನ್ನು ನೆನೆದು ಕಣ್ಣೀರು ಹಾಕುತ್ತಾನೆ ಕಾರ್ತಿಕ್. ಆದರೆ ಕಾರ್ತಿಕ್ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಇನ್ನು ಮತ್ತೊಂದು ಕಡೆ ಸತ್ಯ ಸಹೋದರಿ ದಿವ್ಯಾ ತನ್ನದೇ ಆದ ಪ್ಲ್ಯಾನ್ ಮಾಡುತ್ತಿದ್ದಾಳೆ. ಕಾರ್ತಿಕ್ ಮತ್ತು ಮನೆಯವರು ಇಷ್ಟ ಇಲ್ಲವಾದರೂ ದಿವ್ಯಾ ಬಲವಂತಗವಾಗಿ ಮದುವೆಗೆ ಓಕೆ ಅಂದಿದ್ದಾಳೆ. ಹಾಗಾಗಿ ಮದುವೆ ಮನೆಯಲ್ಲಿ ಮಾಜಿ ಪ್ರೇಮಿ ಬಾಲನ ಜಪ ಮಾಡುತ್ತಿದ್ದಾಳೆ.

ಬಾಲನ ಹಿಂದೆ ಓಡಿ ಹೋಗ್ತಾಳ ದಿವ್ಯಾ?
ದಿವ್ಯಾ ಮಾಜಿ ಪ್ರೇಮಿ ಬಾಲ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾನೆ. ದಿವ್ಯಾಗೆ ನಕಲಿ ಆಸ್ತಿ ತೋರಿಸಿ, ಮತ್ತೆ ಹಳ್ಳಕ್ಕೆ ತಳ್ಳಿದ್ದಾನೆ. ಹಾಗಾಗಿ ಕಾರ್ತಿಕ್ ಜೊತೆಗೆ ಮದುವೆ ಆಗುತ್ತಿದ್ದರೂ ಕೂಡ ದಿವ್ಯಾ ಮನಸ್ಸು ಬಾಲನ ಕಡೆಗೆ ವಾಲಿದೆ. ಅಷ್ಟೇ ಅಲ್ಲ ದಿವ್ಯಾ ಕಾರ್ತಿಕ್‌ಗೆ ಕೈ ಕೊಟ್ಟು ಬಾಲನ ಹಿಂದೆ ಓಡಿಹೋಗುವ ಯೋಚನೆಯಲ್ಲಿ ಇದ್ದಾಳೆ. ಹಾಗಾಗಿ ಕಾರ್ತಿಕ್ ಮದುವೆ ನಿಲ್ಲುವ ಸೂಚನೆಗಳು ದಟ್ಟವಾಗಿವೆ. ಆದರೆ ಬಾಲ ಏನು ಪ್ಲ್ಯಾನ್ ಮಾಡಿದ್ದಾನೆ ಎನ್ನುವ ಬಗ್ಗೆ ಇನ್ನು ಗೌಪ್ಯವಾಗಿ ಇಡಲಾಗಿದೆ.

ಕೊನೆ ಕ್ಷಣದಲ್ಲಿ ರೋಚಕ ಟ್ವಿಸ್ಟ್!
ಇನ್ನು ಮದುವೆ ಕೊನೆಯಲ್ಲಿ ದೊಡ್ಡ ಟ್ವಿಸ್ಟ್ ಎದುರಾಗುವ ಸಾಧ್ಯತೆ ಇದೆ. ಯಾಕೆಂದರೆ ಒಂದು ವೇಳೆ ದಿವ್ಯಾಗೆ ಬಾಲನ ಬಗ್ಗೆ ನಿಜ ಗೊತ್ತಾದರೆ, ಬಾಲನನ್ನು ಬಿಟ್ಟು ಕಾರ್ತಿಕ್ ಜೊತೆಯೇ ಮದುವೆ ಆಗುತ್ತಾಳೆ. ಅಲ್ಲದೇ, ಸತ್ಯ ಬಗ್ಗೆ ಕಾರ್ತಿಕ್ ತಾಯಿಗೆ ಉತ್ತಮ ಅಭಿಪ್ರಾಯ ಇಲ್ಲ. ಹಾಗಾಗಿ ಕಾರ್ತಿಕ್ ಒಪ್ಪಿದರು ಕೂಡ, ಸತ್ಯಳನ್ನು ಮನೆಯವರು ಒಪ್ಪಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಹಾಗಾಗಿ ಕಾರ್ತಿಕ್ ಮತ್ತು ಸತ್ಯ ಒಂದಾಗೋದು ಅನುಮಾನವೆ.


Click it and Unblock the Notifications











