Sathya Serial: ಸತ್ಯ ಕೈಗೆ ಸಿಕ್ಕಿ ಬಿದ್ದ ದಿವ್ಯಾಗೆ ಕಪಾಳ ಮೋಕ್ಷ!

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಈಗ ದಿನಕ್ಕೊಂದು ಟ್ವಿಸ್ಟ್ ಬರುತ್ತಿದೆ. ಸತ್ಯ ಕಾರ್ತಿಕ್ ತಾಯಿ ಸೀತಾ ಹಾಕಿದ ಶರತ್ತಿಗೆ ಒಪ್ಪಿಕೊಂಡಿದ್ದಾಳೆ. ಕಾರ್ತಿಕ್ ಮನೆಯಲ್ಲಿ ಈಗ ಮತ್ತೆ ಮದುವೆ ಸಂಭ್ರಮ ಮನೆ ಮಾಡುತ್ತಿದೆ. ಆದರೆ ಇತ್ತ ದಿವ್ಯಾ ಓಡಿ ಹೋಗೋದಕ್ಕೆ ಎಲ್ಲಾ ತಯಾರಿಯನ್ನೂ ನಡೆಸಿದ್ದಾಳೆ.

ದಿವ್ಯಾ ಮನೆಯಿಂದ ಬಾಲ ಜೊತೆಗೆ ಓಡಿ ಹೋಗಲು ಮುಂದಾಗಿದ್ದಾಳೆ. ಹಾಗಾಗಿ ಎರಡು ಸೂಟ್ ಕೇಸ್ ಗಳಲ್ಲಿ ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡಿದ್ದಾಳೆ. ಮನೆಯವರಿಗೆ ತಿಳಿಯದಂತೆ ಬಟ್ಟೆಗಳ ಜೊತೆಗೆ ಒಡವೆ ಹಾಗೂ ಹಣವನ್ನು ಕೂಡ ತೆಗೆದುಕೊಂಡಿದ್ದಾಳೆ. ಅಷ್ಟೊತ್ತಿಗೆ ದಿವ್ಯಾ ತಾಯಿ ರೂಮಿಗೆ ಬಂದಿದ್ದಾಳೆ.

ದಿವ್ಯಾ ಬಟ್ಟೆಗಳನ್ನು ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿಕೊಂಡಿರುವುದನ್ನು ನೋಡಿ ಶಾಕ್ ಆಗಿದ್ದಾಳೆ. ಯಾಕೆ ಹೀಗೆಲ್ಲಾ ಪ್ಯಾಕ್ ಮಾಡಿಕೊಂಡಿದ್ದೀಯಾ? ಎಲ್ಲಿಗೆ ಹೊರಟಿದ್ದೀಯಾ? ಎಂದಿದ್ದಾಳೆ. ಶಾಕ್ ಆದ ದಿವ್ಯಾ, ಯಾವಾಗಲೂ ತಲೆಯಲ್ಲಿ ಪ್ರಶ್ನೆಗಳ ಬ್ಯಾಂಕ್ ಇಟ್ಟುಕೊಂಡಿರುತ್ತೀಯಾ ಎಂದು ಪ್ರಶ್ನೆ ಮಾತ್ತಾಳೆ.

ಅಮ್ಮನ ಮೇಲೆ ರೇಗಿದ ದಿವ್ಯಾ!

ಅಮ್ಮನ ಮೇಲೆ ರೇಗಿದ ದಿವ್ಯಾ!

ನಾನು ಬಟ್ಟೆಗಳನ್ನು ಕ್ಲೀನ್ ಮಾಡಿಕೊಳ್ತಿದ್ದೀನಿ ಅಷ್ಟೇ. ಇವೆಲ್ಲಾ ಮದುವೆಗೆ ತೆಗೆದುಕೊಂಡು ಹೋಗಿದ್ದ ಬಟ್ಟೆಗಳು. ಡ್ರೈವಾಶ್‌ಗೆ ಕೊಡಬೇಕು ಎನ್ನುತ್ತಾಳೆ. ನನ್ನನ್ನು ನನ್ನ ಪಾಡಿಗೆ ಇರಲು ಬಿಡಿ ಎಂದು ರೇಗುತ್ತಾಳೆ. ಅವರ ಅಮ್ಮನನ್ನು ರೂಮಿನಿಂದ ಆಚೆಗೆ ಕಳಿಸುತ್ತಾಳೆ. ಹೇಗಾದರೂ ಸೇಫ್ ಆಗಿ ಹೋಗಬೇಕು ಎಂದುಕೊಳ್ಳುತ್ತಾಳೆ. ಇತ್ತ ಸತ್ಯಾಗೆ ಸ್ನೇಹಿತರು ಕರೆ ಮಾಡಿ ಬೇಗ ಬಾ. ವಿಷಯ ಬೇರೆನೇ ಇದೆ ಎಂದು ಕರೆಸಿಕೊಳ್ಳುತ್ತಾರೆ. ವಿಚಾರ ಏನು ಎಂದು ಕೇಳಿದಾಗ ಸತ್ಯ ಶಾಕ್ ಆಗುತ್ತಾಳೆ. ಇನ್ನು ರಾಜೀ ಹಾಗೂ ಗಿರಿಜಮ್ಮ ಕೂತಿರುವಾಗ ಚಿಕ್ಕ ಮಗ ಬಂದು ಮಗಳ ಮದುವೆಯಾಗುತ್ತಿರುವುದಕ್ಕೆ ಖುಷಿನಾ. ಎಲ್ಲಿ ಇನ್ನೂ ಸತ್ಯ ಬಂದಿಲ್ಲ ಎಂದು ಕೆದಕುತ್ತಾನೆ. ಹಾಗೆ ದಿವ್ಯಾಳನ್ನು ಮತ್ತೆ ಕಾರ್ತಿಕ್ ಜೊತೆ ಮದುವೆಯಾಗುವುದಕ್ಕೆ ತಾನೇ ಒಪ್ಪಿಸಿದ್ದು ಎನ್ನುತ್ತಾನೆ.

ದಿವ್ಯಾ ಪ್ಲ್ಯಾನ್‌ಗೆ ಸತ್ಯ ಅಡ್ಡಿ!

ದಿವ್ಯಾ ಪ್ಲ್ಯಾನ್‌ಗೆ ಸತ್ಯ ಅಡ್ಡಿ!

ದಿವ್ಯಾ ಮನೆಯಿಂದ ಓಡಿ ಹೋಗೋದಕ್ಕೆ ರೆಡಿಯಾಗಿ ಕಾಯುತ್ತಿರುತ್ತಾಳೆ. ರಾಜೀ ಈ ಮದುವೆ ನಡೆಯುತ್ತಾ ಅನ್ನೋ ಗೊಂದಲದಲ್ಲಿದ್ದರೆ, ಗಿರಿಜಮ್ಮ ಕಾನ್ಫಿಡೆನ್ಸ್‌ನಲ್ಲಿ ಮದುವೆ ನಡೆದೇ ನಡೆಯುತ್ತೆ ಎಂದು ಹೇಳುತ್ತಿರುತ್ತಾರೆ. ಈಗಲೇ ಬೀಗರ ಮನೆಗೆ ಹೋಗಿ ಕಡ್ಡಿ ಎರಡು ತುಂಡಾಗುವಂತೆ ಮಾತನಾಡುವುದಷ್ಟೇ ಎಂದು ಹೇಳುತ್ತಾ ಹೋಗುತ್ತಾನೆ. ಇದೇ ಸರಿಯಾದ ಸಮಯ ಎಂದುಕೊಂಡ ದಿವ್ಯಾ ಹಿಂದಿನ ಬಾಗಿಲಿನಿಂದ ಲಗೇಜ್ ಸಮೇತ ಮನೆಗೆ ಹೋಗುತ್ತಾಳೆ.

ಕಾರ್ತಿಕ್‌ಗೆ ಅಮ್ಮ, ಸತ್ಯ ಭೇಟಿ ವಿಚಾರ ರಿವೀಲ್!

ಕಾರ್ತಿಕ್‌ಗೆ ಅಮ್ಮ, ಸತ್ಯ ಭೇಟಿ ವಿಚಾರ ರಿವೀಲ್!

ಇನ್ನು ಕಾರ್ತಿಕ್ ಹಾಗೂ ಮಂಜು ಡ್ರಿಂಕ್ಸ್ ಪಾರ್ಟಿ ಮಾಡುತ್ತಾ ಕೂತಿರುತ್ತಾರೆ. ಆಗ ಮಂಜುನಾ ಕಾರ್ತಿಕ್ ಅಮ್ಮ ನೀನು ಎಲ್ಲಿಗೆ ಹೋಗಿದ್ದು ಎಂದು ಹೇಳು ಅಂತ ಕೇಳುತ್ತಾನೆ. ಆದರೆ ಕಾರ್ತಿಕ್ ಎಷ್ಟೇ ಪ್ರಯತ್ನ ಪಟ್ಟರೂ, ಮಂಜು ಮಾತ್ರ ಹೇಳುವುದಿಲ್ಲ. ಅಮ್ಮನಿಗೆ ಮಾತು ಕೊಟ್ಟಿದ್ದೀನಿ ಯಾರಿಗೂ ಹೇಳಲ್ಲ ಎನ್ನುತ್ತಾನೆ. ಆಗ ಕಾರ್ತಿಕ್ ಮುಂದಿನ ವಾರ ಫಾರಿನ್ ಬ್ರ್ಯಾಂಡ್ ತರಿಸಬೇಕು ಅಂತಿದ್ದೆ ಬೇಡ ಬಿಡು ಅನ್ನುತ್ತಾನೆ. ಆಗ ಮಂಜು ನೀನು ಏನ್ ತರಿಸಿಕೊಟ್ಟರು ಹೇಳಲ್ಲ ಎನ್ನುತ್ತಾನೆ. ಹಾಗೆ ಮಾತನಾಡುತ್ತಾ ಯಾವುದೇ ಕಾರಣಕ್ಕೂ ನಾನು ನಿಮ್ಮಮ್ಮ ಸತ್ಯನನ್ನು ಮೀಟ್ ಮಾಡೋಕೆ ಹೋಗಿದ್ದರು ಅಂತ ಮಾತ್ರ ಹೇಳಲ್ಲ ಅನ್ನುತ್ತಾನೆ. ಈ ಮಾತನ್ನು ಕೇಳಿ ಕಾರ್ತಿಕ್ ಶಾಕ್ ಆಗುತ್ತಾನೆ.

ಸತ್ಯ ಕೈಗೆ ಸಿಕ್ಕಿ ಬಿದ್ದಳು ದಿವ್ಯಾ!

ಸತ್ಯ ಕೈಗೆ ಸಿಕ್ಕಿ ಬಿದ್ದಳು ದಿವ್ಯಾ!

ಮನೆಯಿಂದ ಹೊರಟ ದಿವ್ಯಾ ಬಾಲಾಗೆ ಕರೆ ಮಾಡುತ್ತಾಳೆ. ಆದರೆ, ಅವನ ಫೋನ್ ನಾಟ್ ರೀಚಬಲ್ ಬರುತ್ತೆ. ಅವಳು ಹೇಳಿದ ಸ್ಪಾಟ್‌ಗೆ ಹೋದಾಗ ಅಲ್ಲಿ ಸತ್ಯ ನಿಂತಿರುತ್ತಾಳೆ. ಆದರೆ ಗೊತ್ತಾಗದೇ ದಿವ್ಯಾ ಬಾಲಾ ಎಂದು ಕೊಂಡು ಹತ್ತಿರ ಹೋಗುತ್ತಾಳೆ. ಬಾಲ ನಾನು ಬಂದು ಬಿಟ್ಟೆ ಎನ್ನುತ್ತಾಳೆ. ಆಗ ಸತ್ಯ ತಿರುಗುತ್ತಾಳೆ. ಸತ್ಯಳನ್ನು ನೋಡಿ ದಿವ್ಯಾ ಶಾಕ್ ಆಗುತ್ತಾಳೆ. ನಾನು ಬಂದುಬಿಟ್ಟಿದ್ದೀನಿ ಅಕ್ಕ ಎಂದು ಸತ್ಯ ಹೇಳುತ್ತಾಳೆ ಅಲ್ಲಿಗೆ ಸೀರಿಯಲ್ ಮುಗಿಯುತ್ತದೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

More from Filmibeat

English summary
Sathya Tv Serial Written Update On April 11th, Major Twist
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X