Sathya Serial: ಅಕ್ಕ ದಿವ್ಯಾಗೆ ಬಾರಿಸಿ ಮನೆಗೆ ಎಳೆದು ತಂದ ಸತ್ಯ!
ಸತ್ಯ ಧಾರಾವಾಹಿಯಲ್ಲಿ ಲವ್ ಮಾಡಿ ಓಡಿ ಹೋಗಲು ಮುಂದಾದ ದಿವ್ಯಾಗೆ ಶಾಕ್ ಕೊಟ್ಟ ಸತ್ಯ, ಕಾರ್ತಿಕ್ ಜೊತೆಗೆ ಮದುವೆ ಮಾಡೋದಕ್ಕೆ ತಯಾರಿ ನಡೆಸಿದ್ದಾಳೆ. ದಿವ್ಯಾಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದು, ಅಕ್ಕನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ದಿವ್ಯಾ ಪ್ಲಾನ್ ಎಲ್ಲಾ ತಲೆಕೆಳಗಾಗಿದೆ. ಇತ್ತ ಬಾಲ ಕಂಬಿ ಎಣಿಸುತ್ತಿದ್ದಾನೆ.
ದಿವ್ಯಾ ಓಡಿ ಹೋಗುವಾಗ ಅವಳ ದಾರಿಗೆ ಅಡ್ಡ ಬಂದ ಸತ್ಯ, ಮಳ್ಳಿತರ ಮನೆ ಹಾಳು ಕೆಲಸ ಮಾಡುತ್ತಿದ್ದೀಯಾ. ನೀನೇನಾದರೂ ನನ್ನ ಅಕ್ಕ ಆಗಿರದಿದ್ದರೆ ನಿನ್ನ ಇಲ್ಲೇ ಸಿಗಿದು ಹಾಕಿ ಬಿಡುತ್ತಿದ್ದೆ ಎಂದು ಹೇಳುತ್ತಾಳೆ ಸತ್ಯ. ಇದಕ್ಕೆ ದಿವ್ಯಾ ಬಿಡೇ ನನ್ ದಾರಿನೇ ಬೇರೆ, ನಿನ್ ದಾರಿನೇ ಬೇರೆ, ನಿನಗೂ ನನಗೂ ಸಂಬಂಧ ಇಲ್ಲ ಎಂದು ದಿವ್ಯಾ ಹೇಳುತ್ತಾಳೆ.
ಇದಕ್ಕೆ ಸತ್ಯ, ಏನು ಸಂಬಂಧ ಇಲ್ವಾ? ನಿನಗೆ ಇಷ್ಟ ಇಲ್ಲದಿರುವ ಸಂಬಂಧ ಬಂದಾಗ ಅದನ್ನು ತಪ್ಪಿಸೋದಕ್ಕೆ ನನಗೂ ನಿನಗೂ ಸಂಬಂಧ ಇತ್ತು. ನೀನು ಇಷ್ಟ ಪಡುವ ಹುಡುಗನ ಜೊತೆಗೆ ಮದುವೆ ಮಾಡೋದಕ್ಕೆ ನನಗೂ ನಿನಗೂ ಸಂಬಂಧ ಇತ್ತು. ದುಡ್ಡಿನ ಹಿಂದೆ ಹೊರಟಿದ್ಯಾ ನೀನು. ಬರೀ ದುಡ್ಡೇ ಅಲ್ಲ, ಮನುಷತ್ವ ಇಲ್ವಾ ಎಂದಾಗ, ಸತ್ಯಗೆ ದಿವ್ಯಾ ಸಾಕು ನಿಲ್ಸು ಲೆಕ್ಚರರ್ ಕೊಡಬೇಡ. ನಿನ್ ದಾರಿನೇ ಬೇರೆ, ನನ್ನ ಪಾಡಿಗೆ ನನ್ನ ಬಿಡು ಎಂದು ದಿವ್ಯಾ ಹೇಳುತ್ತಾಳೆ.

ದಿವ್ಯಾಗೆ ಬೈದು ಬುದ್ಧಿ ಹೇಳಿದ ಸತ್ಯ!
ಆಗ ಸತ್ಯ, ಬಿಡು ಅಂದರೆ ಬಿಟ್ಟು ಬಿಡಬೇಕಾ? ಅಲ್ಲಿ ಅಮ್ಮ ನಿನ್ ಮದುವೆ ಮಾಡೋದಕ್ಕೋಸ್ಕರ ಯಾರ ಯಾರದ್ದೋ ಕೈ-ಕಾಲು ಹಿಡಿಯೋದಕ್ಕೆ ರೆಡಿಯಾಗಿದ್ದಳು. ನಾನು, ಅಮ್ಮ ಹಾಗೂ ಅಜ್ಜಿ ನಿನ್ ಖುಷಿಗೋಸ್ಕರ ಏನೆಲ್ಲಾ ಮಾಡ್ತಿದ್ದೀವಿ. ಆದರೆ ನೀನು ಯಾರದೋ ಜೊತೆ ಓಡಿ ಹೋಗೋಕೆ ನಿಂತಿದ್ಯಾ ಎಂದು ಕಣ್ಣೀರು ಹಾಕುತ್ತಾಳೆ. ಇದಕ್ಕೆ ದಿವ್ಯಾ ನನಗೆ ಈ ಮದುವೆ ಇಷ್ಟ ಇಲ್ಲ. ನಾನು ಪ್ರೀತಿಸಿದ್ದು ಬಾಲನನ್ನು. ನನ್ನನ್ನು ಅವನ ಜೊತೆಗೆ ಹೋಗುವುದಕ್ಕೆ ಬಿಡು. ಅಷ್ಟು ಬೇಕಿದ್ದರೆ ಕಾರ್ತಿಕ್‌ನ ನೀನೇ ಮದುವೆಯಾಗು ಎಂದು ಹೇಳುತ್ತಾಳೆ. ಆಗ ಸತ್ಯ, ಬಾಲ ಒಬ್ಬ ಫ್ರಾಡ್, ಅವನನ್ನು ನೀನು ಪ್ರೀತಿಸ್ತಿದ್ಯಾ? ಹಾಗೇನಾದರೂ ಇದ್ದಿದ್ದರೆ ನಾನು ಕೇಳಿದಾಗಲೇ ಸತ್ಯ ಹೇಳಬೇಕಿತ್ತು. ಯಾಕೆ ಹೇಳಲಿಲ್ಲ ಎಂದು ಸತ್ಯ ಬೈಯುತ್ತಾಳೆ. ಅದಕ್ಕೆ ದಿವ್ಯ, ಭಯ ಆಯ್ತು ಅದಕ್ಕೆ ಹೇಳಲಿಲ್ಲ. ನಾನು ಆಗ ಹೇಳಿದ್ದರೆ, ನೀನು ಇಷ್ಟು ಕೂಲ್ ಆಗಿ ಇರುತ್ತಿರಲಿಲ್ಲ. ನಮ್ಮಪ್ಪ ಅಂತೂ ನನ್ ಜೀವನನಾ ರೂಪಿಸಲಿಲ್ಲ. ನಾನಾದರೂ ನನ್ನ ಬದುಕನ್ನು ರೂಪಿಸಿಕೊಳ್ಳುತ್ತೀನಿ ಬಿಡು ಎಂದು ಹೇಳುತ್ತಾಳೆ.

ದಿವ್ಯಾ, ಕಾರ್ತಿಕ್ ಮದುವೆ ಮಾಡಲು ಸತ್ಯ ಸಿದ್ಧ!
ಆಗ ಸತ್ಯ, ದಿವ್ಯಾ ಕನ್ನೆಗೆ ಭಾರಿಸುತ್ತಾಳೆ. ನಮಗೆ ಜೀವ ಕೊಟ್ಟಿರೋ ಅಪ್ಪ-ಅಮ್ಮ ಇನ್ನು ಏನ್ ಕೊಡಬೇಕು ಎಂದು ಮಾತು ಮಾತಿಗೂ ಕಪಾಳಮೋಕ್ಷ ಮಾಡುತ್ತಾಳೆ. ಓಡಿ ಹೋಗಿ ಅಮ್ಮ, ಅಜ್ಜಿ ನಾಳೆ ಸಮಾಜದಲ್ಲಿ ತಲೆ ಎತ್ತಿಕೊಂಡು ಓಡಾಡೋಕೆ ಆಗುತ್ತಾ.? ಅಪ್ಪನ ಹೆಸರಿಗೆ ಮಸಿ ಬಳಿಯುತ್ತಿದೆ. ಕಾರ್ತಿಕ್ ಮನೆಯವರನ್ನು ಮತ್ತೆ ಮದುವೆಗೆ ಒಪ್ಪಿಸೋದಕ್ಕೆ ನಾನೆಷ್ಟು ಒದ್ದಾಡಿದ್ದೀನಿ ಗೊತ್ತಾ? ಈ ತಪ್ಪನ್ನು ನಾನ್ ಸರಿ ಮಾಡುತ್ತೀನಿ ಎನ್ನುತ್ತಾಳೆ. ಮಧ್ಯೆ ಬಾಯಿ ಹಾಕಿದ ಸತ್ಯ ನಿನಗೂ ಕಾರ್ತಿಕ್‌ಗೂ ಮದುವೆ ಮಾಡಿಸುತ್ತೀನಿ ಎನ್ನುತ್ತಾಳೆ. ಇಲ್ಲ ನಾನು ಮದುವೆಯಾದರೆ, ಅದು ಬಾಲನನ್ನೇ ಎಂದು ದಿವ್ಯಾ ಹೇಳುತ್ತಾಳೆ. ಆಗ ಸತ್ಯ, ಇನ್ಮೇಲೆ ನಾನು ಹೇಳಿದಂತೆಯೇ ನಡೆಯೋದು. ಕಾರ್ತಿಕ್‌ಗೂ ನಿನಗೂ ಮದುವೆ ಮಾಡಿಸುತ್ತೀನಿ ಎಂದು ಸತ್ಯ ಹೇಳುತ್ತಾಳೆ.

ಕಾರ್ತಿಕ್ ಮದುವೆ ಬಗ್ಗೆ ಅಪ್ಪ, ಅಮ್ಮ ಚಿಂತೆ!
ಕಾರ್ತಿಕ್ ಮನೆಯಲ್ಲಿ ಸೀತಾ ಹಾಗೂ ರಾಮಚಂದ್ರ ಕೂತು ಮದುವೆ ಬಗ್ಗೆ ಮಾತನಾಡುತ್ತಿರುತ್ತಾರೆ. ಆಗ ಸೀತಾ ಕುಲದೇವರು ಕೋಟೆಮನೆಯಲ್ಲಿ ಕಾರ್ತಿಕ್ ಮದುವೆ ಮಾಡೋಣ. ಕೀರ್ತನಾ ಅದನ್ನೆಲ್ಲಾ ಬಿಟ್ಟು ಓಡಿ ಹೋಗಿ ಮದುವೆಯಾದಳು. ನಾವೂ ಕಾರ್ತಿಕ್ ಮದುವೆಯನ್ನು ಕುಲದೇವರನ್ನೇ ಮರೆತು ಮಾಡೋದಕ್ಕೆ ಹೊರಟಿದ್ವಿ. ಈಗಲಾದರೂ ಆ ತಪ್ಪನ್ನು ಮತ್ತೆ ಮಾಡೋದು ಬೇಡ. ಅಷ್ಟೇ ಅಲ್ಲ ಕಳೆದ ಸಾರಿ ನಾವು ಕಾರ್ತಿಕ್ ಮದುವೆ ಬಗ್ಗೆ ಮಠಕ್ಕೆ ತಿಳಿಸೇ ಇಲ್ಲ. ಈ ಸಲ ಹಾಗೆ ಮಾಡೋದು ಬೇಡ ಎಂದು ಹೇಳಿದ್ದಾರೆ. ಇನ್ನು ಮದುವೆಗೆ ಮೂಹೂರ್ತ ಇರೋದು ನಾಡಿದ್ದೇ ಎಂದು ಮಾತನಾಡಿಕೊಂಡಿದ್ದರು.

ಪೊಲೀಸ್ ವಶದಲ್ಲಿ ಬಾಲ!
ಇತ್ತ ಬಾಲ ಪೊಲೀಸ್ ಸ್ಟೇಷನ್‌ನಿಂದ ಕೀರ್ತನಾಗೆ ಫೋನ್ ಮಾಡುತ್ತಾನೆ. ಕೀರ್ತನಾ ಯಾರು ಎಂದು ಕೇಳಿದಾಗ, ನಾನು ಬಾಲ, ಪೊಲೀಸ್ ಸ್ಟೇಷನ್‌ನಿಂದ ಮಾತನಾಡುತ್ತಿದ್ದೇನೆ. ಪೊಲೀಸ್‌ನನ್ನು ಅರೆಸ್ಟ್ ಮಾಡಿದ್ದಾರೆ. ಪ್ಲೀಸ್ ನನ್ನ ಕಾಪಾಡಿ ಮೇಡಂ ಎಂದು ಹೇಳುತ್ತಾನೆ. ಆಗ ಕೀರ್ತನಾ ಶಾಕ್ ಆಗುತ್ತಾಳೆ. ಈ ನಡುವೆ ಸತ್ಯ ಮನೆಗೆ ಬಂದು ಕಾರ್ತಿಕ್ ಮನೆಯವರು ದಿವ್ಯಾನ ಮದುವೆ ಆಗೋದಕ್ಕೆ ಒಪ್ಪಿದ್ದಾರೆ ಎಂದು ಹೇಳುತ್ತಾಳೆ. ಆಗ ಸತ್ಯ ಮನೆಯವರು ಖುಷಿ ಪಡುತ್ತಾರೆ.


Click it and Unblock the Notifications











