Sathya Serial: ತಾಂಬೂಲ ಹಿಡಿದು ಸತ್ಯ ಮನೆಗೆ ಬಂದ ಸೀತಾ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಈಗ ಮತ್ತೆ ಮದುವೆ ಸಂಭ್ರಮ ಮನೆ ಮಾಡಿದೆ. ರೂಮಿನಲ್ಲಿ ದಿವ್ಯಾ ಬಂಧಿಯಾಗಿದ್ದಾಳೆ. ಅತ್ತ ಪೊಲೀಸ್ ಠಾಣೆಯಲ್ಲಿ ಬಾಲ ಸಿಕ್ಕಾಕಿಕೊಂಡಿದ್ದಾನೆ. ಕಾರ್ತಿಕ್ ಮನೆಯವರು ಮದುವೆ ಕಾರ್ಯದಲ್ಲಿ ತೊಡಗಿದ್ದಾರೆ.

Recommended Video

Puneeth Rajkumar ಗೆ ಫ್ರೆಂಡ್ ತರ ಮಾತನಾಡಿಸಿದ ಪುಟಾಣಿ | Filmibeat Kannada

ಸದ್ಯ ಸೀತಾ ಈಗ ಮತ್ತೆ ಗಿರಿಜಮ್ಮನ ಮನೆಗೆ ಬಂದಿದ್ದಾರೆ. ಮದುವೆಯ ಮಾತು-ಕತೆಯನ್ನು ಮುಂದುವರಿಸಲು ಮುಂದಾಗಿದ್ದಾರೆ. ಸತ್ಯ ಈಗ ಫುಲ್ ಖುಷಿಯಾಗಿದ್ದಾಳೆ. ತನ್ನ ನೇತೃತ್ವದಲ್ಲೇ ಯಾವ ಅನಾಹುತವೂ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಳೆ.

ಈಗ ಕಾರ್ತಿಕ್ ಗೆ ಸೀತಾ ಸತ್ಯಾಳನ್ನ ಮೀಟ್ ಮಾಡಿದ ವಿಷಯ ಗೊತ್ತಾಗಿದೆ. ಈ ಬಗ್ಗೆ ಕಾರ್ತಿಕ್ ಸೀತಮ್ಮನನ್ನು ಯಾಕೆ ನೀನು ಸತ್ಯ ಬಳಿ ಹೋಗಿದ್ದೆ ಎಂದು ಕೇಳಿದ್ದಾನೆ. ಸತ್ಯ ಸರಿಯಿಲ್ಲ, ನೀನು ಅಲ್ಲಿಗೆ ಹೋಗಿ ತಪ್ಪು ಮಾಡಿಬಿಟ್ಟೆ. ಆ ಸತ್ಯನ ನೆರಳು ನಮ್ಮ ಮನೆಯ ಮೇಲೆ ಬೀಳಬಾರದು ಅಂತ ನಾನ್ ಇದ್ದರೆ ನೀನು ಅಲ್ಲಿಗೆ ಹೋಗಿದ್ಯಾ ಎನ್ನುತ್ತಾನೆ. ಆಗ ಸೀತಾ, ಅದಕ್ಕೆ ಹೋಗಿದ್ದು, ನಾನು ಏನೇ ಮಾಡಿದರೂ ಈ ಮನೆಯ ಒಳ್ಳೆಯದಕ್ಕೆ ಮಾಡುತ್ತೀನಿ. ನಮ್ಮ ಮನೆ ಮೊದಲಿನಂತಾಗಬೇಕು ನೀನು ಚೆನ್ನಾಗಿರಬೇಕು ಅಂತ ಬಯಸೋಳು ನಾನು. ನನ್ನ ಮೇಲೆ ನಂಬಿಕೆ ಇಡು. ಸತ್ಯ ನನ್ ಕಂಟ್ರೋಲ್‌ನಲ್ಲಿ ಇದ್ದಾಳೆ ಎಂದು ಸೀತಾ ಹೇಳುತ್ತಾಳೆ.

Sathya Tv Serial Written Update On April 14th

ಸತ್ಯ ಮನೆಯಲ್ಲಿ ಇನ್ನೂ ಆಗಷ್ಟೇ ಎದ್ದೇಳುತ್ತಾರೆ. ಹುಡುಗರೆಲ್ಲಾ ದಿವ್ಯಾ ರೂಮ್ ಬಾಗಿಲಲ್ಲೇ ಕಾವಲು ಕಾಯುತ್ತಾ ಮಲಗಿರುತ್ತಾರೆ. ಅಮಾಟೆಯನ್ನು ರಾಜಿ ಎಬ್ಬಿಸಲು ಬಂದಾಗ ಸತ್ಯ ಎದ್ದು ಎಬ್ಬಿಸುತ್ತಾಳೆ. ನಾನು ಹೇಳಿದ್ದೇನು.? ಯಾಕೆ ನಿದ್ದೆ ಮಾಡುತ್ತಿದ್ದೀಯಾ ಎಂದು ಕೇಳುತ್ತಾಳೆ. ಹೀಗೆ ಮಾತನಾಡುವಾಗ ಮನೆಗೆ ಸೀತಾ ತಾಂಬೂಲ ಸಮೇತ ಬರುತ್ತಾಳೆ. ಇವರನ್ನು ನೋಡಿದ ಸತ್ಯ ಶಾಕ್ ಆಗಿ, ಅವರನ್ನು ಅಲ್ಲೇ ನಿಲ್ಲಿಸಿ ಹೋಗಿ, ಮನೆಯಲ್ಲಿ ಎಲ್ಲರನ್ನೂ ಎಬ್ಬಿಸಿ ಬರುತ್ತಾಳೆ. ನಂತರ ಸೀತಾ, ಕೀರ್ತನಾ ಹಾಗೂ ಊರ್ಮಿಳಾ ಒಳಗೆ ಬಂದು ಕೂರುತ್ತಾರೆ.

Sathya Tv Serial Written Update On April 14th

ಮಾತು ಶುರು ಮಾಡುವ ಸೀತಾ, ಆಗಿದ್ದೆಲ್ಲವೂ ಆಗಿ ಹೋಯ್ತು. ಈಗ ಮುಂದೇನು ಮಾತನಾಡಬೇಕು ಎನ್ನುವುದನ್ನು ನೋಡೋಣ. ನಾವು ನಮ್ಮ ಮನೆಗೆ ದಿವ್ಯ ನೇ ನಮ್ಮನೆ ಸೊಸೆಯನ್ನಾಗಿ ಮಾಡಿಕೊಳ್ಳೋದಕ್ಕೆ ತೀರ್ಮಾನಿಸಿದ್ದೇವೆ. ನನ್ನ ಮಗ ದಿವ್ಯನ ಪ್ರೀತಿಸಿದ್ದಾನೆ, ನನ್ನ ಮನೆಯವರಿಗೆ ದಿವ್ಯಾನೇ ಸೊಸೆಯಾಗಬೇಕು ಅಂತ ಆಸೆ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಸತ್ಯ ತಿಂಡಿ ತಂದು ಕೊಡುತ್ತಾಳೆ. ತಾಂಬೂಲ ಕೊಡೋದಕ್ಕೆ ಮುಂದಾದಾಗ ಅವರ ಚಿಕ್ಕಪ್ಪ ಬಂದು ತಾಂಬೂಲವನ್ನು ಸ್ವೀಕರಿಸುತ್ತಾರೆ. ನಂತರ ದಿವ್ಯಾಳನ್ನ ಕೇಳಿ ಎಲ್ಲರಿಗೂ ನೆನಪು ಮಾಡುತ್ತಾನೆ. ಕೀರ್ತನಾ ದಿವ್ಯಾಳನ್ನ ಮಾತನಾಡಿಸಿಕೊಂಡು ಬರುತ್ತೀನಿ ಎಂದು ಹೋಗುತ್ತಾಳೆ.

ಮಲಗಿರುವ ದಿವ್ಯಾಳನ್ನ ಎಬ್ಬಿಸುತ್ತಾಳೆ. ದಿವ್ಯಾ ಕೀರ್ತನಾಳನ್ನ ನೋಡಿ ಶಾಕ್ ಆಗುತ್ತಾಳೆ. ದಿವ್ಯಾ ನೀನೇನಿಲ್ಲಿ ಎಂದು ದಿವ್ಯಾ ಕೇಳುತ್ತಾಳೆ. ಕೀರ್ತನಾ ನಾಡಿದ್ದೇ ನಿನ್ನ ಕಾರ್ತಿಕ್ ಮದುವೆ ಮಾಡಲು ಡೇಟ್ ಫಿಕ್ಸ್ ಮಾಡಿದ್ದಾರೆ. ನನಗೆ ಕಾರ್ತಿಕ್ ಹಾಗೂ ನಿಶಾ ಮದುವೆಯಾಗಬೇಕು. ನೀನು ಬಾಲನ ಜೊತೆ ಮದುವೆಯಾಗಬೇಕು. ಸೋ ಇಬ್ಬರೂ ಒಂದೇ ದೋಣಿಯಲ್ಲಿ ಟ್ರಾವೆಲ್ ಮಾಡುತ್ತಿದ್ದೇವೆ ಎಂದಾಗ. ದಿವ್ಯಾ ಸದ್ಯ ಈಗಲಾದರೂ ಅರ್ಥವಾಯ್ತಲ್ವಾ. ನನಗೆ ಏನು ಮಾಡಬೇಕೋ ಒಂದೂ ಗೊತ್ತಾಗುತ್ತಿಲ್ಲ. ಈ ಬಾಲ ಬೇರೆ ಕೈಗೆ ಸಿಗುತ್ತಿಲ್ಲ ಎಂದು ದಿವ್ಯ ಹೇಳುತ್ತಾಳೆ. ಆಗ ಕೀರ್ತನಾ, ಬಾಲ ಈಗ ಅರೆಸ್ಟ್ ಆಗಿದ್ದು, ಪೊಲೋಸ್ಟೇಷನ್ ನಲ್ಲಿದ್ದಾನೆ. ಬಾಲನನ್ನ ಅರೆಸ್ಟ್ ಮಾಡಿಸಿದ್ದು ನಿನ್ನ ತಂಗಿ ಸತ್ಯ ಎಂದು ಕೀರ್ತನಾ ಹೇಳಿದ್ದಾಲೆ. ಈ ಮಾತನ್ನು ಕೇಳಿ ದಿವ್ಯಾ ಶಾಕ್ ಆಗಿದ್ದಾಳೆ.

More from Filmibeat

English summary
Sathya Tv Serial Written Update On April 14th, Major Twist
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X