ಸತ್ಯ ಧಾರಾವಾಹಿ: ಬಾಲನ ಜೊತೆಗೆ ಓಡಿ ಹೋಗಲು ಮತ್ತೆ ದಿವ್ಯಾ ಮಾಸ್ಟರ್ ಪ್ಲ್ಯಾನ್!

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಮದುವೆ ತಯಾರಿಗಳು ನಡೆಯುತ್ತಿವೆ. ಮದುವೆ ಮಾತುಕತೆಯಾಡಲು ಮನೆಗೆ ಸೀತಾ ಬಂದಿದ್ದರೆ, ದಿವ್ಯಾ ಅರಾಮಾಗಿ ಮಲಗಿದ್ದಾಳೆ. ಅವಳನ್ನು ಎಬ್ಬಿಸಿ ಮಾತನಾಡಿದ ಕೀರ್ತನಾ ಈಗ ಇಬ್ಬರೂ ಒಂದಾಗಿದ್ದಾರೆ. ಹೇಗಾದರೂ ಮಾಡಿ ದಿವ್ಯಾ ಬಾಲ ಜೊತೆಗೆ ಹೋಗಲು ಸಹಾಯ ಮಾಡುವುದಾಗಿ ಕೀರ್ತನಾ ಹೇಳಿದ್ದಾಳೆ.

ಇನ್ನು ಇತ್ತ ಸೀತಾ ಮದುವೆಯ ಮಾತುಕತೆಯನ್ನು ಮಾತನಾಡುತ್ತಾ, ನಾಡಿದ್ದೇ ಮದುವೆ ಎಂದು ಹೇಳುತ್ತಾಳೆ. ಕೋಟೆ ಮನೆಯಲ್ಲಿ ಮದುವೆಯಾಗಲಿದ್ದು, ನಿಮ್ಮ ಮನೆಯಿಂದ ಎಷ್ಟು ಜನ ಬರುತ್ತಾರೆ ಎಂದು ಸೀತಾ ಕೇಳುತ್ತಾಳೆ. ಆಗ ರಾಜೇಶ್ವರಿ ಮಾತನಾಡಿ, ನಮ್ಮ ಮನೆಯಿಂದ ಹೆಚ್ಚೇನು ಇಲ್ಲ. ಅಬ್ಬಬ್ಬಾ ಎಂದರೆ ಇಪ್ಪತ್ತು ಜನ ಬರಬಹುದು ಎಂದು ಹೇಳಿದ್ದಾರೆ. ದಿವ್ಯಾ ಎದ್ದು ಬಂದು ಅತ್ತೆಯ ಆಶೀರ್ವಾದ ಪಡೆದಿದ್ದಾಳೆ. ಇತ್ತ ಬಾಲ ಲಾಕಪ್‌ನಲ್ಲಿ ಒದೆ ತಿಂದು ಒದ್ದಾಡುತ್ತಿದ್ದಾನೆ. ಕಾನ್‌ಸ್ಟೇಬಲ್ ಹಾಗೂ ಪೊಲೀಸರ ಬಳಿ ಫೋನ್ ಕೊಡಿ ಸರ್. ಒಂದೇ ಒಂದು ಸಲ ಫೋನ್ ಕೊಡಿ ಸರ್ ಅಂತೆಲ್ಲಾ ಅಂಗಲಾಚಿ ಬೇಡುತ್ತಿರುತ್ತಾನೆ.

ಕಾನ್ ಸ್ಟೇಬಲ್ ಫೋನ್ ಕೊಟ್ಟಾಗ ಸುಹಾಸ್‌ಗೆ ಕರೆ ಮಾಡಿದರೆ, ಸುಹಾಸ್ ರಿಸೀವ್ ಮಾಡುವುದಿಲ್ಲ ಎನ್ನುತ್ತಾ ಕಾಲ್ ರಿಸೀವ್ ಮಾಡುತ್ತಾನೆ. ನೋಡು ನಾವು ನಿನ್ ಕೆಲಸವನ್ನೇ ಮಾಡುತ್ತಿದ್ದೇನೆ. ಪದೇ ಪದೆ ಕಾಲ್ ಮಾಡಿದರೆ ಕೆಲಸ ಆಗಲ್ಲ. ಮತ್ತೆ ಕಾಲ್ ಮಾಡಬೇಡ ಎಂದು ಹೇಳಿ ಕರೆ ಕಟ್ ಮಾಡುತ್ತಾನೆ.

Sathya Tv Serial Written Update On April 18th

ಇನ್ನು ರಾಮಚಂದ್ರ ಮನೆಯಲ್ಲಿ ಮನೆಯಲ್ಲಿ ಮದುವೆಗೆ ಯಾರು ಯಾರನ್ನು ಕರೆಯಬೇಕು ಎಂದು ಲಿಸ್ಟ್ ಮಾಡುತ್ತಿರುತ್ತಾರೆ. ಇನ್ವಿಟೇಷನ್ ಎಲ್ಲರಿಗೂ ಕೊಡು, ಯಾರನ್ನೂ ಮರೆಯಬೇಡಿ ಎಂದು ಕಾರ್ತಿಕ್‌ಗೆ ಹೇಳುತ್ತಾರೆ. ಆಗ ಕಾರ್ತಿಕ್ ಕೀರ್ತನಾಳನ್ನು ಸಂಬಂಧಿಕರಿಗೆ ಫೋನ್ ಮಾಡಲು ಸಹಾಯ ಮಾಡು ಎಂದು ಕೇಳುತ್ತಾನೆ. ಆಗ ಕೀರ್ತನಾ, ಸಾಧ್ಯ ಇಲ್ಲ. ಮುರಿದು ಹೋದ ಹುಡುಗಿಯ ಜೊತೆಗೆ ಮದುವೆ ಯಾಕೆ ಫಿಕ್ಸ್ ಮಾಡಿದ್ದೀರಾ ಅಂತೆಲ್ಲಾ ಹೇಳಿ ಎಸ್ಕೇಪ್ ಆಗುತ್ತಾಳೆ. ಮಾತನಾಡುತ್ತಾ ರಾಮಚಂದ್ರ, ಮರೆಯದೇ ಸತ್ಯಳನ್ನು ಮದುವೆಗೆ ಕರೆದಿದ್ದೀರಾ ತಾನೆ ಎಂದಾಗ ಕಾರ್ತಿಕ್ ಬೇಡ ನಾನು ಕರೆಯೊಲ್ಲ ಎನ್ನುತ್ತಾನೆ.

Sathya Tv Serial Written Update On April 18th

ಆಗ ಸೀತಾ, ಸತ್ಯ ಮದುವೆಗೆ ಬರುತ್ತಿದ್ದಾಳೆ. ಅವಳನ್ನು ಕರೆಯದಿದ್ದರೆ, ಮತ್ತೆ ಬಂದು ಅವಾಂತರವಾಗುತ್ತೆ. ಅದಕ್ಕೆ ಖುದ್ದಾಗಿ ನಾನೇ ಹೋಗಿ ಅವಳನ್ನು ಮದುವೆಗೆ ಕರೆದಿದ್ದೀನಿ ಎನ್ನುತ್ತಾಳೆ ಸೀತಾ. ಇದಕ್ಕೆ ಕಾರ್ತಿಕ್ ಪ್ಲೀಸ್ ಬೇಡ ಅಂತ ಹೇಳಮ್ಮ ಎಂದಾಗ, ಸೀತಾ ಇಲ್ಲ ಸತ್ಯ ಮದುವೆಗೆ ಬಂದೇ ಬರುತ್ತಾಳೆ. ಇದು ನನ್ನ ನಿರ್ಧಾರ ಎಂದು ಹೇಳುತ್ತಾಳೆ. ರಾಮಚಂದ್ರ ನೀನು ಸತ್ಯನ ಮದುವೆಗೆ ಕರೆದು ತುಂಬಾ ಒಳ್ಳೆಯದು ಮಾಡಿದೆ ಎಂದು ಹೇಳುತ್ತಾರೆ. ಆದರೆ ಈ ನಡುವೆ ಕೀರ್ತನಾ ಅಮ್ಮ ಸತ್ಯನ ಮದುವೆಗೆ ಕರೆದಿರುವ ಹಿಂದಿನ ಉದ್ದೇಶ ಏನಿರಬಹುದು ಎಂದು ಯೋಚಿಸುತ್ತಿರುತ್ತಾಳೆ.

ಸತ್ಯಗೆ ಅವರ ಸ್ನೇಹಿತೆ ಬ್ಯಾಗ್ ಎಲ್ಲಾ ಪ್ಯಾಕ್ ಮಾಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ಹೊರಡಿ ಎಂದು ಹೇಳಿದಾಗ, ಸತ್ಯ, ನೀವಿಲ್ಲದೇ ಅದೆಂಥಾ ಸಂಭ್ರಮ. ನೀವೂ ಮದುವೆಗೂ ಬರುತ್ತೀರಾ? ಎಂದು ಕೇಳುತ್ತಾಳೆ. ಇಲ್ಲ ನಮ್ಮಿಂದ ಮದುವೆಗೆ ಅಡ್ಡಿಯಾಗಬಾರದು ಅದಕ್ಕೆ ಎಂದು ಹೇಳುತ್ತಾರೆ. ಆಗ ಸತ್ಯ ಇಲ್ಲ ನೀವಿರಲೇಬೇಕು. ಅದಲ್ಲದೇ, ದಿವ್ಯಾ ಹೇ ನಿಮಗೆ ಸ್ಪೆಷಲ್ ಕೆಲಸ ಕೊಟ್ಟಿರುವ ಕೆಲಸವನ್ನು ಮರೆತು ಬಿಟ್ರಾ? ಬರ್ಲೇಬೇಕು. ಮದುವೆ ಮನೆಯಲ್ಲಿ ನಮ್ಮದೇ ಸಂಭ್ರಮ ಅಂತ ಸತ್ಯ ಹೇಳುತ್ತಾಳೆ. ನಂತರ ಮನಸ್ಸಲ್ಲಿ ಇದೇ ಕೊನೆ ನಾನು ನಿಮ್ಮ ಜೊತೆಗೆ ಇರೋದು. ಆಮೇಲೆ ಆಗೋದಿಲ್ಲ ಎಂದು ಹೇಳಿಕೊಂಡು. ಈ ಅವತಾರದಲ್ಲಿ ಮದುವೆಗೆ ಬರುತ್ತೀರಾ? ನಡೀರಿ ಶಾಪಿಂಗ್ ಮಾಡೋಣ ಎಂದು ಸತ್ಯ ಎಲ್ಲರನ್ನೂ ಕರೆದುಕೊಂಡು ಹೊರಡುತ್ತಾಳೆ. ಇತ್ತ ಕೀರ್ತನಾ ಬಾಲಾ ಇರುವ ಪೊಲೀಸ್ ಠಾಣೆಗೆ ಬರುತ್ತಾಳೆ.

More from Filmibeat

English summary
Sathya Tv Serial Written Update On April 18th, Major Twist
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X