Sathya Serial: ಬಾಲನ ಜೊತೆ ಓಡಿ ಹೋಗಲು ಗಂಟು ಮೂಟೆ ಕಟ್ಟಿದ ದಿವ್ಯಾ!
ಸತ್ಯ ಧಾರಾವಾಹಿಯಲ್ಲಿ ಈಗ ಮೆಗಾ ಟ್ವಿಸ್ಟ್ ಶುರುವಾಗಿದೆ. ಮದುವೆಯೇ ಬೇಡ ಎಂದು ಗಲಾಟೆ ಮಾಡಿದ್ದ ಕಾರ್ತಿಕ್, ಈಗ ಮತ್ತೆ ದಿವ್ಯಾ ಜೊತೆಗೆ ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾನೆ. ಇತ್ತ ದಿವ್ಯಾ ಮದುವೆ ಕ್ಯಾನ್ಸಲ್ ಆದ ಖುಷಿಯಲ್ಲಿದ್ದು, ಹೇಗಾದರೂ ಬಾಲನ ಕೈ ಹಿಡಿಯಬೇಕೆಂದು ಯೋಚಿಸುತ್ತಿದ್ದಾಳೆ.
ಹೀಗಿರುವಾಗಲೇ ಕಾರ್ತಿಕ್‌ಗೆ ಕರೆ ಮಾಡಿದ ದಿವ್ಯಾ ಮಾತುಗಳನ್ನು ಆಡಿರುವುದು ಕಾರ್ತಿಕ್ ಗೆ ಆಕೆಯನ್ನೇ ಮದುವೆಯಾಗುವ ಆಲೋಚನೆ ಬಂದಾಗಿದೆ. ಮನೆಯವರ ಎದುರಿಗೆ ಕೂತು ದಿವ್ಯಾಳ ಜೊತೆಗೆ ಮದುವೆ ಮಾಡಿಕೊಡಿ ಎಂದು ಕೇಳಿದ್ದಾನೆ. ಇದಕ್ಕೆ ಮನೆಯವರೆಲ್ಲಾ ಶಾಕ್ ಆಗಿದ್ದಾರೆ.
ಕಾರ್ತಿಕ್ ತಾಯಿ ಕೊಲೆಗಡುಕರಿರೊ ಮನೆಯಿಂದ ನಮ್ಮ ಮನೆಗೆ ಹೆಣ್ಣು ತರುವುದು ಅಸಾಧ್ಯವಾದ ಮಾತು ಎಂದು ಹೇಳಿದ್ದಾರೆ. ಗುಣವೇ ಇಲ್ಲದಿರೊ ಮನೆಯಿಂದ ಹುಡುಗಿಯನ್ನು ತರಬೇಕಾ ಎಂದು ಪ್ರಶ್ನಿಸಿದ್ದಾರೆ. ಕಾರ್ತಿಕ್ ಅವರ ತಂದೆ ದಿವ್ಯಾಳನ್ನು ಮನೆಗೆ ತಂದುಕೊಳ್ಳುವ ಬಗ್ಗೆ ಒಲವು ತೋರಿದ್ದಾರೆ.

ಅಕ್ಕ ದಿವ್ಯಾಳನ್ನು ಗದರಿದ ಸತ್ಯ!
ಇತ್ತ ಸತ್ಯಳಿಗೆ ಬಾಲ ಮದುವೆ ಮನೆಗೆ ಬಂದ ವಿಚಾರ ಗೊತ್ತಾಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಪಡೆಯಲು ಮುಂದಾಗುತ್ತಾಳೆ. ಬಾಲ ಹಾಗೂ ನಿನಗೂ ಏನು ಸಂಬಂಧ.? ಅವನ್ಯಾಕೆ ಮದುವೆ ಮನೆಗೆ ಬಂದಿದ್ದ ಎಂದು ಕೇಳಿದಾಗ ದಿವ್ಯಾ ತನಗೇನು ಗೊತ್ತೇ ಇಲ್ಲ ಎಂದು ಹೇಳುತ್ತಾಳೆ. ಆದರೂ ಬೆವರುತ್ತಿರುವುದು ಯಾಕೆ ಎಂದು ದಿವ್ಯಾಳನ್ನು ಸತ್ಯ ಕೇಳುತ್ತಾಳೆ. ನಿಜ ಏನಿದ್ಯೋ ಅದನ್ನೆ ಹೇಳು, ಎಲ್ಲರೂ ಮದುವೆ ನಿಲ್ಲೋಕೆ ಸತ್ಯಾಳೆ ಕಾರಣ ಅಂತ ಗೂಬೆ ಕೂರಿಸುತ್ತಿದ್ದಾರೆ. ಆದರೆ ರೆಸಾರ್ಟ್ ಗೆ ಬಂದ ಬಾಲ ನಿನ್ನನ್ನ ಕಿಡ್ನ್ಯಾಪ್ ಮಾಡಲು ಪ್ರಯತ್ನಿಸಿದ್ಯಾಕೆ. ನನ್ನ ಬಳಿ ಎಲ್ಲಾ ಸಾಕ್ಷಿಗಳೂ ಇವೆ ಎನ್ನುತ್ತಾಳೆ.

ಮೊಸಳೆ ಕಣ್ಣೀರು ಹಾಕಿದ ದಿವ್ಯಾ!
ಆದರೂ ದಿವ್ಯಾ ತನಗೇನು ಗೊತ್ತೇ ಇಲ್ಲ ಅನ್ನೋ ಹಾಗೆ ನಟಿಸಿದ್ದಾಳೆ. ಸಿಟ್ಟು ಬಂದ ಸತ್ಯ ನೀನು ಮತ್ತೆ ಬಾಲಾ ಮಾತನಾಡಿದ್ದು ಸಿಸಿಟಿವಿಯಲ್ಲಿ ಸಿಕ್ಕಿದೆ. ಏನಾಯ್ತು ಅಂತ ನಿಜ ಹೇಳು ಎಂದು ಕೇಳಿದ್ದಾಳೆ. ಆಗ ದಿವ್ಯಾ ಬಾಲ ನನ್ನನ್ನು ಈಗಲೂ ಪ್ರೀತಿಸುತ್ತಿದ್ದಾನೆ. ನಾನು ಬೇಡ ನನ್ನನ್ನು ನನ್ನ ಪಾಡಿಗೆ ಬಿಟ್ಟು ಹೋಗು ಎಂದು ಬೇಡ್ಕೊಳ್ತಿದ್ದೆ ಎಂದು ದಿವ್ಯಾ ಹೇಳಿದ್ದಾಳೆ. ಕಿರುಚಾಡಿ, ಕಣ್ಣೀರು ಹಾಕಿ ನಾಟಕ ಮಾಡುತ್ತಾ, ಸುಳ್ಳು ಹೇಳಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾಳೆ.

ದುಡ್ಡಿಲ್ಲದೆ ಕಕ್ಕಾಬಿಕ್ಕಿ ಆಗಿರುವ ಬಾಲ!
ಈಗ ಸತ್ಯ ಸರಿ ಬಿಡು ಬಾಲನ ವಿಚಾರವನ್ನ ನಾನು ನೋಡಿಕೊಳ್ಳುತ್ತೀನಿ ಅಂತ ಹೇಳಿ ಸತ್ಯ ಸೀದಾ ಗ್ಯಾರೇಜ್ ಗೆ ಹೋಗಿದ್ದಾಳೆ. ಭಯ ಬಿದ್ದಿರುವ ದಿವ್ಯಾ ಬಾಲನಿಗೆ ಕರೆ ಮಾಡಿದ್ದಾಳೆ. ನಮ್ಮಿಬ್ಬರ ವಿಚಾರ ಸತ್ಯಗೆ ಗೊತ್ತಾಗಿದೆ. ನಮಗಿನ್ನು ಹೆಚ್ಚು ಸಮಯವಿಲ್ಲ. ನಾವಿಬ್ಬರೂ ಇಲ್ಲಿಂದ ಓಡಿ ಹೋಗೋಣ ಎಂದಿದ್ದಾಳೆ. ಈ ಮಾತುಗಳನ್ನು ಕೇಳಿದ ಬಾಲಾ ಶಾಕ್ ಆಗಿದ್ದಾನೆ. ಓಡಿ ಹೋಗಲು ಹಣವಿಲ್ಲದೆ ಏನು ಮಾಡೋದು ಅನ್ನೋ ಯೋಚನೆ ಬಾಲನದ್ದು. ಆದರೆ ಇದ್ಯಾವುದೂ ದಿವ್ಯಾಳಿಗೆ ಗೊತ್ತಿಲ್ಲ.

ರಾತ್ರಿ ಓಡಿ ಹೋಗಲು ದಿವ್ಯಾ, ಬಾಲ ಸಂಚು!
ಸರಿ ಇಂದು ರಾತ್ರಿಯೇ ಓಡಿ ಹೋಗೋಣ ಎಂದು ಹೇಳಿ ಬಾಲ ಫೋನ್ ಕಟ್ ಮಾಡುತ್ತಾನೆ. ಇತ್ತ ಸತ್ಯ ಬಾಲನನ್ನು ಹುಡುಕುವಂತೆ ತನ್ನ ಸ್ನೇಹಿತರಿಗೆ ಹೇಳುತ್ತಿದ್ದಾಳೆ. ಸತ್ಯ ಅದೇ ಏರಿಯಾದವನಾಗಿದ್ದು, ಕೆಲ ಮಾಹಿತಿ ತಂದು ಕೊಟ್ಟಿದ್ದಾಳೆ. ಇದೇ ಸಂದರ್ಭದಲ್ಲಿ ಕಾರ್ತಿಕ್ ತಾಯಿ ಸೀತಮ್ಮ ಗ್ಯಾರೇಜ್ ಗೆ ಬಂದಿದ್ದಾಳೆ. ಸೀತಮ್ಮ ಗ್ಯಾರೇಜ್ ಗೆ ಬಂದಿರೋದು ಸತ್ಯ ಹಾಗೂ ಆಕೆಯ ಸ್ನೇಹಿತರಿಗೆ ಶಾಕ್ ಆಗಿದೆ. ಮುಂದೆ ಏನಾಗುತ್ತೆ ಅನ್ನೋದನ್ನ ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.


Click it and Unblock the Notifications











