For Quick Alerts
  ALLOW NOTIFICATIONS  
  For Daily Alerts

  ಸತ್ಯ, ಕಾರ್ತಿಕ್ ವಿಚ್ಛೇದನಕ್ಕೆ ಸೀತಾ ಯೋಜನೆ!

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ದಿವ್ಯಾಗೆ ಪ್ರಾಣ ಸಂಕಟ. ಬಾಲ ಆಕೆಯನ್ನು ಹಳ್ಳಿಗೆ ಕರೆದುಕೊಂಡು ಹೋಗುತ್ತಿದ್ದಾನೆ. ದಾರಿಯಲ್ಲಿ ಟೆಂಪೋ ಏರಿ ಕೂತ ದಿವ್ಯಾಗೆ ತಾನಿದ್ದ ಬದುಕೇ ಸುಂದರವಾಗಿತ್ತಲ್ಲ ಎಂಬ ಭಾವ ಸೃಷ್ಟಿಯಾಗಿದೆ. ಬಾಲನಿಗೆ ದಿವ್ಯ ತನಗೆ ಸಂಪೂರ್ಣವಾಗಿ ಒಲಿದರೆ ಸಾಕು ಎಂಬಂತಾಗಿದೆ.

  ಸೀತಾಗೆ ಮಗನ ಬದುಕಿನದ್ದೇ ಯೋಚನೆಯಾಗಿದೆ. ಕಾರ್ತಿಕ್ ಬದುಕು ಸತ್ಯಳನ್ನು ಮದುವೆಯಾಗಿದ್ದರಿಂದ ಹಾಳುಗುತ್ತಿದೆ. ನಿತ್ಯ ಕಾರ್ತಿಕ್ ಒಬ್ಬನೇ ಕೊರಗುತ್ತಿದ್ದಾನೆ. ಹೇಗಾದರು ಮಾಡಿ ಮಗನ ಬದುಕನ್ನು ಸರಿ ಪಡಿಸಬೇಕು ಎಂದುಕೊಂಡಿದ್ದಾಳೆ.

  ಟ್ರಿಪ್‌ನಲ್ಲಿ ಪುಟ್ಟಕ್ಕನ ಮಕ್ಕಳು & ಬಾವಿ ಅಳಿಯಂದಿರ ಮೋಜು, ಮಸ್ತಿ..!ಟ್ರಿಪ್‌ನಲ್ಲಿ ಪುಟ್ಟಕ್ಕನ ಮಕ್ಕಳು & ಬಾವಿ ಅಳಿಯಂದಿರ ಮೋಜು, ಮಸ್ತಿ..!

  ಸತ್ಯ ಅತ್ತೆ ಎಷ್ಟೇ ಕೋಪ ಮಾಡಿಕೊಂಡರೂ, ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಹೀಗಾಗಿ ಎಲ್ಲಾ ಸಂಪ್ರದಾಯವನ್ನು ಒಂದೊಂದಾಗಿಯೇ ಕಲಿಯುತ್ತಿದ್ದಾಳೆ. ರಂಗೋಲಿ ಹಾಕುವುದು. ದೇವರ ಪೂಜೆ ಮಾಡುವುದನ್ನು ಶುರು ಮಾಡಿಕೊಂಡಿದ್ದಾಳೆ.

  ಕಾರ್ತಿಕ್ ಬಗ್ಗೆ ಸುಹಾಸ್ ಸುಳ್ಳು!

  ಕಾರ್ತಿಕ್ ಬಗ್ಗೆ ಸುಹಾಸ್ ಸುಳ್ಳು!

  ಸುಹಾಸ್ ಡ್ರಿಂಕ್ಸ್ ತೆಗೆದುಕೊಂಡು ಬಂದು ಕಾರ್ತಿಕ್ ನನ್ನು ಹಬ್ಬದ ದಿನವೇ ಬೆಳಗ್ಗೆ ಬೆಳಗ್ಗೆಯೇ ಕುಡಿಯಲು ಇನ್ವೈಟ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಕಾರ್ತಿಕ್, ಸಹಾಸ್ ಕೊರಳ ಪಟ್ಟಿ ಹಿಡಿದು ವಾರ್ನಿಂಗ್ ಕೊಟ್ಟಿದ್ದಾನೆ. ನಾನು ನೀವೆಂದುಕೊಂಡ ಹಾಗಲ್ಲ. ನನಗೆ ಸತ್ಯ ಮೇಲೆ ಬೇಸರವಿದೆ. ಬಟ್ ಮನೆಯಲ್ಲಿ ಹಬ್ಬದ ದಿನ ಹೀಗೆಲ್ಲಾ ಮಾಡೋದಕ್ಕೆ ಮನಸಾದರೂ ಹೇಗೆ ಬರುತ್ತೆ ಎಂದು ಬೈದಿದ್ದಾನೆ. ಇದನ್ನು ನೋಡಿದ ಸೀತಾ ಶಾಕ್ ಆಗಿದ್ದಾಳೆ. ಕಾರ್ತಿಕ್ ಅಲ್ಲಿಂದ ಹೊರಟು ಹೋಗಿದ್ದಾನೆ. ಆಗ ಅದೇ ಸಮಯವನ್ನೇ ಬಳಸಿಕೊಂಡ ಸುಹಾಸ್, ಕಾರ್ತಿಕ್ ಕುಡಿಯೋದಕ್ಕೆ ಡ್ರಿಂಕ್ಸ್ ಕೇಳಿದ. ಅವನಿಷ್ಟದ ಬ್ರ್ಯಾಂಡ್ ತಂದುಕೊಟ್ಟಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ ಎಂದು ಹೇಳುತ್ತಾನೆ.

  ಹಳ್ಳಿಗೆ ಬಂದ ದಿವ್ಯ!

  ಹಳ್ಳಿಗೆ ಬಂದ ದಿವ್ಯ!

  ಟೆಂಪೋದಿಂದ ಇಳಿದು ಕೊನೆಗೂ ಹಳ್ಳಿ ಕಡೆಗೆ ದಿವ್ಯ ಹೆಜ್ಜೆ ಹಾಕಿದ್ದಾಳೆ. ಬಾಲ ದಿವ್ಯಳನ್ನು ನಡೆಸಿಕೊಂಡು ಊರಿಗೆ ಬಂದಿದ್ದಾನೆ. ಊರಿನಲ್ಲಿ ಹಣ ಕೊಟ್ಟ ಸೆಲಬ್ರೇಷನ್‌ಗೆ ವ್ಯವಸ್ಥೆ ಮಾಡಿಸಿದ್ದಾನೆ. ಹೀಗಾಗಿ ಎಲ್ಲರೂ ಬಾಲನಿಗೆ ಜೈ ಕಾರ ಕೂಗಿ ವೆಲ್ಕಂ ಮಾಡಿದ್ದಾರೆ. ಈ ವೇಳೆ ದಿವ್ಯಗೆ ತುಂಬಾ ಮುಜುಗರ ಆಗಿದೆ. ನಿನ್ನ ಯಾಕೆ ದುಬೈ ಬಾಬು ಎನ್ನುತ್ತಾರೆ ಎಂದೆಲ್ಲಾ ಕೇಳಿದ್ದಾರೆ. ಇದಕ್ಕೆ ಬಾಲ ಸುಳ್ಳಿನ ಮೇಲೆ ಸುಳ್ಳು ಹೇಳಿ ನಿಭಾಯಿಸಿದ್ದಾನೆ. ದಿವ್ಯಾಗಂತೂ ಈ ಹಾಳು ಕೊಂಪೆಗೆ ಬರುವ ಬದಲು, ನಮ್ಮ ರಾಜಹುಲಿ ಏರಿಯಾನೇ ಚೆನ್ನಾಗಿತ್ತು ಎಂದು ಒಳಗೊಳಗೆ ಬೇಸರ ಮಾಡಿಕೊಂಡಿದ್ದಾಳೆ. ಇನ್ನು ಮುಂದೆ ದಿವ್ಯಗೆ ಏನೆಲ್ಲಾ ಕಾದಿದ್ಯೋ ಗೊತ್ತಿಲ್ಲ.

  ಸಂಪ್ರದಾಯಗಳನ್ನು ಕಲಿತ ಸತ್ಯ!

  ಸಂಪ್ರದಾಯಗಳನ್ನು ಕಲಿತ ಸತ್ಯ!

  ಸತ್ಯ ಈಗ ಮನೆಯ ಸಂಪ್ರದಾಯವನ್ನು ಒಂದೊಂದಾಗಿಯೇ ಕಲಿಯುತ್ತಿದ್ದಾಳೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಪೂಜೆಗೆ ತಯಾರಿಸಿ, ನೈವೇದ್ಯ ಮಾಡಿ ಎಲ್ಲರಿಂದ ಮೆಚ್ಚುಗೆಯನ್ನು ಗಳಿಸಿದ್ದಾಳೆ. ಈಗ ಬೆಳಗೆದ್ದು ರಂಗೋಲಿ ಹಾಕಿ, ದೇವರ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಿದ್ದಾಳೆ. ಇದನ್ನೆಲ್ಲಾ ನೋಡಿದ ಸೀತಾ ಯಾರು ಮಾಡಿರುವುದು ಎಂದು ಯೋಚಿಸುತ್ತಾ ಸುಮ್ಮನಾಗಿದ್ದಾಳೆ. ಆದರೆ ಅತ್ತೆ ಸೀತಾಳ ಮನವನ್ನು ಗೆಲ್ಲುವುದಕ್ಕೆ ತನ್ನ ಕೈಲಾದ ಪ್ರಯತ್ನವನ್ನೆಲ್ಲಾ ಸತ್ಯ ಮಾಡುತ್ತಿದ್ದಾಳೆ.

  ಡಿವೋರ್ಸ್ ಕೊಡಿಸಲು ಮುಂದಾದ ಸೀತಾ!

  ಡಿವೋರ್ಸ್ ಕೊಡಿಸಲು ಮುಂದಾದ ಸೀತಾ!

  ಸೀತಾ ಈಗ ಕಾರ್ತಿಕ್ ಸ್ಥಿತಿಯನ್ನು ನೋಡಿ ಹೇಗಾದರೂ ಮಾಡಿ ಸತ್ಯಗೂ, ಕಾರ್ತಿಕ್‌ಗೂ ಡಿವೋರ್ಸ್ ಕೊಡಿಸಲು ಮುಂದಾಗಿದ್ದಾಳೆ. ಹೀಗಾಗಿ ಸತ್ಯಳನ್ನು ಸಪರೇಟ್ ಆಗಿ ಮಾತನಾಡಬೇಕು ಬಾ ಎಂದು ಕರೆದಿದ್ದಾಳೆ. ಡಿವೋರ್ಸ್ ಪೇಪರ್ಸ್‌ಗೆ ಸಹಿ ಹಾಕಿಸುತ್ತಾಳಾ..? ಸತ್ಯ ಮನೆಯಿಂದ ಮತ್ತೆ ದೂರ ಹೋಗಿ ಬಿಡುತ್ತಾಳಾ..? ಇಲ್ಲವೇ ಇಲ್ಲೇ ಇದ್ದು, ಎಲ್ಲರ ಮನಸ್ಸನ್ನುನ್ನು ಜಯಿಸುತ್ತಾಳಾ ಎಂಬುದು ಕಥೆಯ ಕೂತೂಹಲವಾಗಿದೆ.

  English summary
  Sathya Tv Serial Written Update On August 10th Episode, Big Twist In Sathya Life,
  Thursday, August 11, 2022, 22:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X