ಸತ್ಯಗೆ ಮೋಸ ಮಾಡಿದ ದಿವ್ಯಾ ತಾತನ ಕಾಲು ಹಿಡಿಯಬೇಕಾಯ್ತು!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ದಿವ್ಯಾಗೆ ಬಾಲನ ಜೊತೆ ಮುಂದೆ ಸಂಸಾರ ಮಾಡುವುದು ಹೇಗೆ ಎಂಬ ಚಿಂತೆ ಶುರುವಾಗಿದೆ. ಆದರೆ ಅವಳಿಗೆ ಈ ಬಾಲ ಬಿಟ್ಟರೆ ಬೇರೆ ಯಾರೂ ಗತಿ ಇಲ್ಲ ಎಂಬ ಸತ್ಯದ ಅರಿವೂ ಆಗಿದೆ. ಈಗ ದಿವ್ಯಾ, ಬಾಲನ ತಾತನ ಮನವೊಲಿಸಿಕೊಳ್ಳಬೇಕಾಗಿದೆ.

ಸೀತಾಗೆ ಸತ್ಯ ನಿಜಕ್ಕೂ ಡಿವೋರ್ಸ್ ಪೇಪರ್ಸ್ ಗೆ ಸಹಿ ಹಾಕುತ್ತಾಳಾ..? ಇಲ್ಲಾ ಏನಾದರೂ ತಕರಾರು ತೆಗೆಯುತ್ತಾಳಾ..? ಒಂದು ದಿನ ಸಮಯ ಯಾಕೆ ಕೇಳಿದಳು.? ಒಂದು ದಿನದಲ್ಲಿ ಅದೇನು ಮಾಡುತ್ತಾಳೋ ಎಂದು ಯೋಚಿಸುತ್ತಿದ್ದಾಳೆ.

ಸತ್ಯಗೆ ಈಗ ಡಿವೋರ್ಸ್ ಪೇಪರ್ಸ್ ಗಳಿಗೆ ಸಹಿ ಹಾಕದೇ ಬೇರೆ ದಾರಿ ಇಲ್ಲ ಎಂಬಂತಾಗಿದೆ. ಆದರೆ ಹಾಗೊಂದು ವೇಳೆ ಸಹಿ ಹಾಕಿದರೆ, ಇನ್ನು 6 ತಿಂಗಳಲ್ಲಿ ಸತ್ಯ ಹಾಗೂ ಕಾರ್ತಿಕ್ ಬೇರೆ ಆಗುತ್ತಾರೆ.]

ದಿವ್ಯಾಗೆ ಕ್ಲಾಸ್ ತೆಗೆದುಕೊಂಡ ತಾತ!

ದಿವ್ಯಾಗೆ ಕ್ಲಾಸ್ ತೆಗೆದುಕೊಂಡ ತಾತ!

ಮನೆಗೆ ಬಂದ ಬಾಲನ ತಾತ ಕಾಫಿ ಮಾಡಿಕೊಡುವಂತೆ ದಿವ್ಯಾಳನ್ನು ಕೇಳಿದ್ದಾರೆ. ದಿವ್ಯಾ ಕಾಫಿ ಮಾಡಲು ಹೋದಾಗ, ಬಾಲ ತಾತನಿಗೆ ಹೇಗೆಲ್ಲಾ ಬೈಬೇಕು ಎಂದು ಹೇಳಿಕೊಟ್ಟಿದ್ದಾನೆ. ಅದರಂತೆಯೇ ತಾತ ಕಾಫಿ ಒಂದು ಚೂರು ಚೆನ್ನಾಗಿ ಮಾಡಿಕೊಟ್ಟಿಲ್ಲ. ಕಾಫಿನೇ ಮಾಡಲು ಬರುವುದಿಲ್ಲ. ಇನ್ನು ಸಂಸಾರ ಹೇಗೆ ಮಾಡುತ್ತಾಳೆ. ಎಂದೆಲ್ಲಾ ಬೈದಿದ್ದಾನೆ. ಅಲ್ಲದೇ, ಇವಳನ್ನು ಈಗಲೇ ಬಿಟ್ಟು ಬಿಡು. ನನ್ನ ಮೊಮ್ಮಗನ ಜೀವನವನ್ನ ಹಾಳು ಮಾಡುವುದಕ್ಕಾಗಿಯೇ ಇವಳು ಬಂದಿದ್ದಾಳೆ. ಇದೆಲ್ಲವನ್ನೂ ನನ್ನ ಮಗನಿಗೆ ಹೇಳುತ್ತೀನಿ ಎಂದು ಬೈಯುತ್ತಾನೆ.

ತಾತನ ಕಾಲು ಹಿಡಿದ ದಿವ್ಯಾ!

ತಾತನ ಕಾಲು ಹಿಡಿದ ದಿವ್ಯಾ!

ಕೊನೆಗೆ ದಿವ್ಯಾ ಬೇರೆ ದಾರಿ ಕಾಣದೆ ತಾತನ ಕಾಲನ್ನು ಹಿಡಿದುಕೊಂಡಿದ್ದಾಳೆ. ಆದರೂ ಕೇರ್ ಮಾಡದ ತಾತ ಮನೆಯಿಂದ ಹೊರಗೆ ಹೋಗಿದ್ದಾನೆ. ಇನ್ನು ದಿವ್ಯಾ ನನಗೆ ಇಲ್ಲಿರೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಬಾಲ ಮತ್ತಷ್ಟು ತುಪ್ಪ ಸುರಿದಿದ್ದು, ನಾನು ಮೊದಲು ತಾತನನ್ನು ಸಮಾಧಾನ ಮಾಡಬೇಕು. ಇಲ್ಲ ಅಂದರೆ, ಅಪ್ಪನಿಗೆ ಏನೇನೋ ಹೇಳಿಬಿಡುತ್ತಾರೆ. ಆಗ ಕೈ ಸೇರಬೇಕಿರುವ ಕೋಟಿ ಕೋಟಿ ಆಸ್ತಿಯೂ ಕೈ ತಪ್ಪಿ ಹೋಗುತ್ತದೆ ಎಂದು ಹೇಳಿ ಅಲ್ಲಿಂದ ಕಾಲ್ಕೀಳುತ್ತಾನೆ. ದಿವ್ಯಾ ಒಬ್ಬಳೇ ಅತ್ತು ಕರೆದು, ಮುಂದೇನು ಮಾಡೋದು ಎಂದು ಯೋಚಿಸುತ್ತಿದ್ದಾಳೆ.

ಸತ್ಯ ಬಗ್ಗೆ ತಲೆ ಕೆಡಿಸಿಕೊಂಡ ಕಾರ್ತಿಕ್!

ಸತ್ಯ ಬಗ್ಗೆ ತಲೆ ಕೆಡಿಸಿಕೊಂಡ ಕಾರ್ತಿಕ್!

ಸತ್ಯ ರಾತ್ರಿಯೆಲ್ಲಾ ನಿದ್ದೆಗೆಟ್ಟು ಡಿವೋರ್ಸ್ ಕೊಡುವುದರ ಬಗ್ಗೆಯೇ ಯೋಚಿಸುತ್ತಿದ್ದಾಳೆ. ಸತ್ಯ, ಎಷ್ಟೇ ಮಾತನಾಡಿಸಿದರೂ ಏನೂ ಹೇಳದೆ, ಜಗಳವಾಡದೇ, ಮೌನವಾಗಿರುವುದು ಕಾರ್ತಿಕ್‌ಗೆ ಅನುಮಾನ ಮೂಡಿಸಿದೆ. ಅದರ ಜೊತೆಗೆ ಸತ್ಯ ನಿದ್ದೆ ಗೆಟ್ಟು ಹೀಗೆ ಏನು ಯೋಚಿಸುತ್ತಿದ್ದಾಳೆ, ಎಂದು ತಿಳಿದುಕೊಳ್ಳುವ ಕುತೂಹಲವೂ ಮೂಡಿದೆ. ಆದರೆ, ಸತ್ಯ ಮಾತ್ರ ಎಷ್ಟೇ ಕೇಳಿದರೂ ಬಾಯಿ ಬಿಡುತ್ತಿಲ್ಲ. ಸತ್ಯಗೆ ಹುಷಾರಿಲ್ಲವಾ ಎಂದು ಕೂಡ ಕಾರ್ತಿಕ್ ಯೋಚಿಸುತ್ತಿದ್ದಾನೆ.

ದಿವ್ಯಾಗೆ ಶಾಕ್!

ದಿವ್ಯಾಗೆ ಶಾಕ್!

ಇನ್ನು ಕಾವೇರಿ ಬಂದು ದಿನಚರಿಯ ಬಗ್ಗೆ ದಿವ್ಯಾಗೆ ಹೇಳಿದ್ದಾಳೆ. ಎರಡು ದಿನಕ್ಕೊಮ್ಮೆ ನೀರು ಬರುತ್ತದೆ. ಆ ನೀರೆ, ಕುಡಿಯಲು, ಅಡುಗೆಗೆ, ಸ್ನಾನಕ್ಕೆ, ಕೊಟ್ಟಿಗೆ ತೊಳೆಯಲು ಎಲ್ಲದಕ್ಕೂ ಬಳಸಬೇಕು. ಹಾಗಾಗಿ ತಪ್ಪದೇ ನೀರನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ಹೇಳುತ್ತಾಳೆ. ಇನ್ನು ಬೆಳಗ್ಗೆ ಬೇಗ ಎದ್ದು ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳಬೇಕು ಎಂದು ಹೇಳುತ್ತಾಳೆ. ಇದನ್ನೆಲ್ಲಾ ಕೇಳುವ ದಿವ್ಯಾ ಶಾಕ್ ಆಗುತ್ತಾಳೆ. ತಾನೊಬ್ಬಳೇ ಇದೆಲ್ಲಾ ಕೆಲಸವನ್ನು ಮಾಡಬೇಕಾ ಎಂದುಕೊಳ್ಳುತ್ತಾಳೆ.

More from Filmibeat

English summary
Sathya Tv Serial Written Update On August 24rd Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X