ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿದ ಸತ್ಯ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಈಗ ದಿವ್ಯಾಗೆ ಬ್ಯಾಡ್ ಲಕ್ ಶುರುವಾಗಿದೆ. ಮದುವೆಗೂ ಮುನ್ನ ತಾನು ಹೇಳಿದಂತೆ ಅವರ ಅಕ್ಕ-ಅಮ್ಮ ಕೇಳುತ್ತಿದ್ದರು. ತನಗೆ ಬೇಕಾದಂತೆ ದರ್ಬಾರ್ ನಡೆಸುತ್ತಿದ್ದಳು. ಬಾಲನನ್ನು ಗೋಳಾಡಿಸುತ್ತಿದ್ದಳು. ಆದರೆ ಈಗ ಚೆಂಡು ಬಾಲನ ಕೈ ಸೇರಿದೆ. ಬಾಲ ಹೇಳಿದಂತೆ ದಿವ್ಯಾ ಕೇಳುವಂತಾಗಿದೆ.

ರಾಮಚಂದ್ರ ರಾಯರಿಗೆ ಸತ್ಯ ಹಾಗೂ ಕಾರ್ತಿಕ್ ನಡುವೆ ಇನ್ನೂ ಹೊಂದಾಣಿಕೆ ಮೂಡಿ ಬಂದಿಲ್ಲ ಎಂಬುದೇ ತಲೆ ನೋವಾಗಿದೆ. ಹೀಗಾಗಿ ರಾಮಚಂದ್ರ ರಾಯರು ಹಾಗೂ ಲಕ್ಷ್ಮಣ ಸೇರಿ ಪ್ಲ್ಯಾನ್ ಒಂದನ್ನು ಮಾಡಿದ್ದಾರೆ. ಹೇಗಾದರೂ ಮಾಡಿ ಸತ್ಯ ಹಾಗೂ ಕಾರ್ತಿಕ್ ಒಂದಾಗಲಿ ಎಂದು ಬಯಸಿದ್ದಾರೆ.

ಸತ್ಯಗೆ ಈಗ ಡಿವೋರ್ಸ್ ಪೇಪರ್‌ಗಳಿಗೆ ಸಹಿ ಹಾಕದೇ ಬೇರೆ ದಾರಿ ಕಾಣುತ್ತಿಲ್ಲ. ಮನೆಯವರ ಜೊತೆಗೆ ಹೊಂದಿಕೊಂಡು ಬಾಳಬೇಕು ಎಂದು ಕನಸು ಕಂಡ ಕೆಲವೇ ದಿನಗಳಲ್ಲಿ ಅದೆಲ್ಲವೂ ನುಚ್ಚು ನೂರಾಗುವ ಸಂದರ್ಭ ಬಂದಿದೆ. ಆದರೂ ಕುಗ್ಗದ ಸತ್ಯ ಒಂದು ನಿರ್ಧಾರವೊಂದನ್ನು ಮಾಡಿದ್ದಾಳೆ.

ಡಿವೋರ್ಸ್ ಪೇಪರ್ಸ್ ಗಳಿಗೆ ಸಹಿ ಹಾಕಿದ ಸತ್ಯ!

ಡಿವೋರ್ಸ್ ಪೇಪರ್ಸ್ ಗಳಿಗೆ ಸಹಿ ಹಾಕಿದ ಸತ್ಯ!

ಸೀದಾ ಅವರ ಅತ್ತೆಯ ಬಳಿ ಹೋದ ಸತ್ಯ ಡಿವೋರ್ಸ್ ಪೇಪರ್‌ಗಳಿಗೆ ಸಹಿ ಹಾಕಿ ಕೊಟ್ಟಿದ್ದಾಳೆ. ಇದನ್ನು ನೋಡಿದ ಸೀತಾ ತುಂಬಾ ಖುಷಿ ಪಟ್ಟಿದ್ದಾಳೆ. ಕೊನೆಗೂ ಡಿವೋರ್ಸ್ ಪೇಪರ್‌ಗಳಿಗೆ ಸಹಿ ಹಾಕಿದ್ಯಲ್ಲ ಅಷ್ಟು ಸಾಕು. ನನಗೆ ನನ್ನ ಮಗನ ಭವಿಷ್ಯ ಮುಖ್ಯ ಎಂದು ಹೇಳಿದ್ದಾರೆ. ಈ ನಡುವೆ ಮಾತನಾಡಿದ ಸತ್ಯ, 6 ತಿಂಗಳ ಸಮಯವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು 6 ತಿಂಗಳಲ್ಲಿ ನೀವು ಮೆಚ್ಚುವಂತಹ ಸೊಸೆಯಾಗದಿದ್ದರೆ ಡಿವೋರ್ಸ್ ಪೇಪರ್‌ಗಳನ್ನು ಮೂವ್ ಮಾಡುವುದಾಗಿ ಬರೆದಿರುವುದು ಖುಷಿ ಆಯ್ತು. ನನಗೂ ಒಂದು ಅವಕಾಶ ಕೊಟ್ಟಿದ್ದು ಸಂತೋಷವಾಯ್ತು. ನನಗೆ ಅಷ್ಟು ಸಮಯ ಕೊಟ್ಟಿದ್ದೀರಲ್ಲ ಸಾಕು ಎಂದು ಹೇಳುತ್ತಾಳೆ.

ಸತ್ಯ ನಿರ್ಧಾರಕ್ಕೆ ತಲೆ ಕೆಡಿಸಿಕೊಂಡ ರಾಕೇಶ್!

ಸತ್ಯ ನಿರ್ಧಾರಕ್ಕೆ ತಲೆ ಕೆಡಿಸಿಕೊಂಡ ರಾಕೇಶ್!

ಸೀತಾಗೆ ಸತ್ಯ ಯಾವುದೇ ತಕರಾರು ಮಾಡದೇ ಸಹಿ ಹಾಕಿರುವುದು ಖುಷಿಯಾಗಿದೆ. ಹೀಗಾಗಿ ಮುಂದೆ ಸತ್ಯಾಳಿಂದ ಕಾರ್ತಿಕ್‌ಗೆ ಬಿಡುಗಡೆ ಸಿಗುತ್ತೆ ಅನ್ನೋ ಸಮಾಧಾನದಿಂದ ಲಾಯರ್‌ಗೆ ಕರೆ ಮಾಡಿ ಮಾತನಾಡಿದ್ದಾಳೆ. ಲಾಯರ್ ಆಕೆಯನ್ನು ಮನೆಯವರು ಮೆಚ್ಚಿಕೊಳ್ಳದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಖಂಡಿತವಾಗಿಯೂ ಸತ್ಯಳನ್ನು ನಮ್ಮ ಮನೆಯಲ್ಲಿ ಯಾರೂ ಒಪ್ಪಲ್ಲ ಎಂಬ ಕಾನ್ಫಿಡೆನ್ಸ್ ಸೀತಾಳದ್ದು. ಆದರೆ ರಾಕೇಶ್‌ಗೆ ಇದು ತಲೆನೋವಾಗಿದೆ. ಡಿವೋರ್ಸ್ ಪೇಪರ್ ಅಂತ ಗೊತ್ತಿದ್ದರೂ ಯಾಕೆ ಸಹಿ ಹಾಕಿದೆ ಸತ್ಯ ? ಎಂದು ಪ್ರಶ್ನಿಸಿದ್ದಾನೆ. ಸತ್ಯಳ ನಡೆಯನ್ನು ಅರ್ಥ ಮಾಡಿಕೊಳ್ಳಲಾಗದ ರಾಕಿಗೆ ಭಯ ಶುರುವಾಗಿದೆ.

ದಿವ್ಯಾಗೆ ಕಷ್ಟಗಳ ಸುರಿಮಳೆ!

ದಿವ್ಯಾಗೆ ಕಷ್ಟಗಳ ಸುರಿಮಳೆ!

ಇನ್ನು ದಿವ್ಯಾ ಹಳ್ಳಿಯ ಬದುಕನ್ನು ರೂಢಿಸಿಕೊಳ್ಳಲು ಮುಂದಾಗಿದ್ದಾಳೆ. ಹಳ್ಳಿಯವರಂತೆ ಸೀರೆಯನ್ನು ಉಟ್ಟಿದ್ದು, ಅಲ್ಲಿನ ದಿನಚರಿಗೆ ಒಗ್ಗಿಕೊಳ್ಳುತ್ತಿದ್ದಾಳೆ. ಬಾಲ ದಿನವೂ ಒಂದೊಂದು ಶಾಕ್ ಕೊಡುತ್ತಿದ್ದಾನೆ. ದಿವ್ಯಾಗೆ ಇಲ್ಲಿಂದ ಓಡಿ ಹೋಗುವ ಅವಕಾಶವೂ ಇಲ್ಲದಂತಾಗಿದೆ. ಬಾಲ ಹೇಳಿದ್ದಕ್ಕೆಲ್ಲಾ ದಿವ್ಯಾ ತಲೆಯಾಡಿಸುತ್ತಿದ್ದಾಳೆ.

ತೀರ್ಥಯಾತ್ರೆಗೆ ಹೊರಟ ರಾಯರು!

ತೀರ್ಥಯಾತ್ರೆಗೆ ಹೊರಟ ರಾಯರು!

ಕಾರ್ತಿಕ್ ಹಾಗೂ ಸತ್ಯ ಇಬ್ಬರೂ ಇನ್ನು ಒಂದಾಗಿಲ್ಲ. ಇಬ್ಬರು ಮದುವೆಯಾದ ಮೇಲೆ ಹೊಂದಿಕೊಳ್ಳುತ್ತಾರೆ. ಸತ್ಯ-ಕಾರ್ತಿಕ್ ಹೊಂದಿಕೊಂಡರೆ ಸೀತಾ ಕೂಡ ಬದಲಾಗುತ್ತಾಳೆ ಎಂದು ರಾಯರು ಅಂದುಕೊಂಡಿದ್ದರು. ಆದರೆ ಈಗ ರಾಯರ ಲೆಕ್ಕಾಚಾರ ಉಲ್ಟಾ ಆಗಿದೆ. ಹೀಗಾಗಿ ರಾಯರು ಹಾಗೂ ಲಕ್ಷ್ಮಣ ಇಬ್ಬರೂ ಸೇರಿ ಪ್ಲಾನ್ ಒಂದನ್ನು ಮಾಡಿದ್ದಾರೆ. ಅದೇನೆಂದರೆ, ರಾಯರು ಮತ್ತು ಸೀತಾ ಇಬ್ಬರೂ ತೀರ್ಥ ಯಾತ್ರೆಗೆ ಹೊರಟಿದ್ದಾರೆ. ಈ ಬಗ್ಗೆ ಮನೆಯವರೆಲ್ಲರನ್ನೂ ಕೂರಿಸಿಕೊಂಡು ಹೇಳಿದ್ದಾರೆ. ಈ ಮಾತನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

More from Filmibeat

English summary
Sathya Tv Serial Written Update On August 25th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X