ಹಳ್ಳ ಹಿಡಿದ 'ಸತ್ಯ' ಸೀರಿಯಲ್: ಸಿಕ್ಕಾಪಟ್ಟೆ ಬೋರ್ ಎನ್ನುತ್ತಿರೋ ಪ್ರೇಕ್ಷಕರು!
ಸತ್ಯ ಧಾರಾವಾಹಿ ಹೊಸ ದಿಕ್ಕನ್ನು ಪಡೆದುಕೊಂಡಿದೆ. ಸತ್ಯ ಹಾಗೂ ಕಾರ್ತಿಕ್ ಮದುವೆಯಾದಾಗಿನಿಂದಲೂ ಕಥೆಯಲ್ಲಿ ಸ್ವಲ್ಪ ಅಸ್ಪಷ್ಟತೆ ಕಾಣುತ್ತಿದೆ. ನಿತ್ಯವೂ ಸತ್ಯ-ಕಾರ್ತಿಕ್ ಕಿತ್ತಾಟ, ಸೀತಾಳ ಸಿಡಿಮಿಡಿತನವೇ ಧಾರಾವಾಹಿಯನ್ನು ರಬ್ಬರ್ ಎಳೆದಂತೆ ಆಗುತ್ತಿದೆ.
ಪ್ರೇಕ್ಷಕರು ಸತ್ಯ ಮನೆಯಲ್ಲಿ ಹೇಗೆ ಹೊಂದಿಕೊಳ್ಳುತ್ತಾಳೆ.? ಮನೆಯವರೆಲ್ಲಾ ಸತ್ಯಳನ್ನು ಹೇಗೆ ಒಪ್ಪಿಕೊಳ್ಳುತ್ತಾಳೆ.? ಇತ್ತ ದಿವ್ಯಾಗೆ ಯಾವಾಗ ಬಾಲನ ಬಗ್ಗೆ ಗೊತ್ತಾಗುತ್ತದೆ ಎಂದು ತಿಳಿಯಲು ಕಾತುರರಾಗಿದ್ದಾರೆ. ಆದರೆ, ಧಾರಾವಾಹಿ ಮಾತ್ರ ಆಮೆ ಹೆಜ್ಜೆ ಇಡುತ್ತಿರುವುದು ಎಲ್ಲರಿಗೂ ಬೇಸರ ತಂದಿದೆ.
ಯಾವ ವಿಚಾರವೇ ಇಲ್ಲದೇ, ಧಾರಾವಾಹಿಯನ್ನು ಸುಖಾ ಸುಮ್ಮನೆ ಅಗತ್ಯವಿಲ್ಲದ ಡೈಲಾಗ್ ಗಳಿಂದ ತುಂಬಲಾಗುತ್ತಿದೆ. ಇದು ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ಬೋರ್ ಹೊಡೆಸುತ್ತಿದೆ.

ದೊಡ್ಡಪ್ಪನ ಜೊತೆ ಸತ್ಯ ಕಿತ್ತಾಟ!
ಕಾರ್ತಿಕ್‌ನನ್ನು ರೂಮಿಗೆ ಕರೆದುಕೊಂಡು ಹೋಗುವಾಗ ಸತ್ಯಳ ದೊಡ್ಡಪ್ಪ, ಅದು ನಮ್ಮ ರೂಮ್ ಎಂದು ಹೇಳುತ್ತಾರೆ. ಈ ವಿಚಾರಕ್ಕೆ ಕಿತ್ತಾಡಿದಾಗ ಕಾರ್ತಿಕ್, ಒಂದು ರೂಮಿಗಾಗಿ ಇಷ್ಟೆಲ್ಲಾ ಕಿತ್ತಾಡಬೇಕಾ ಎಂದು ಮನಸಲ್ಲೇ ಅಂದುಕೊಳ್ಳುತ್ತಾನೆ. ನಂತರ ಸತ್ಯ ಹಾಗೂ ಕಾರ್ತಿಕ್ ಇಬ್ಬರೂ ರೂಮಿಗೆ ಹೋದಾಗ ರೂಮಿಗಾಗಿ ಕಿತ್ತಾಡಿದ ವಿಚಾರ ಕಾರ್ತಿಕ್ ಕೇಳಿದ್ದಕ್ಕೆ. ಸತ್ಯ, ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದು ಹೇಳುತ್ತಾಳೆ. ಇನ್ನು ಕಾರ್ತಿಕ್ ಬಟ್ಟೆಗಳನ್ನು ತಂದಿರುವುದಿಲ್ಲ. ಹೀಗಾಗಿ ಪಂಚೆ ತಂದುಕೊಡುತ್ತಾಳೆ. ಕಾರ್ತಿಕ್ ಪಂಚೆ ಉಟ್ಕೊಳ್ಬೇಕಾ ಎಂದು ಯೋಚಿಸುತ್ತಿರುತ್ತಾನೆ.

ಅಮ್ಮನಿಗೆ ಸತ್ಯ ಸಂಸಾರದ ಬಗ್ಗೆ ಚಿಂತೆ!
ಸತ್ಯ ಹಾಗೂ ಕಾರ್ತಿಕ್ ಗಂಡ-ಹೆಂಡತಿಯಂತೆ ಇಲ್ಲ. ಸುಮ್ಮನೆ ನಮ್ಮ ಎದುರಿಗೆ ನಾಟಕವಾಡುತ್ತಿದ್ದಾರೆ ಅಷ್ಟೇ ಎಂದು ಜಾನಕಿ ಗಿರಿಜಮ್ಮನಿಗೆ ಹೇಳುತ್ತಾಳೆ. ಈ ಬಗ್ಗೆ ಮೊದಲು ತಮಾಷೆ ಮಾಡುವ ಗಿರಿಜಮ್ಮ, ಜಾನಕಿ ಮಾತುಗಳನ್ನು ಕೇಳಿ ಶಾಕ್ ಆಗುತ್ತಾಳೆ. ಇದು ಹೀಗೆ ಮುಂದುವರೆದರೆ ಕಷ್ಟವಾಗುತ್ತೆ ಎಂದು ಜಾನಕಿ ತನ್ನ ಆತಂಕವನ್ನು ವ್ಯಕ್ತಪಡಿಸುತ್ತಾಳೆ. ಆಗ ಗಿರಿಜಮ್ಮ, ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರವೂ ಇರುತ್ತದೆ ಎಂದು ಹೇಳಿ, ನಾನು ಎಲ್ಲವನ್ನೂ ಸರಿ ಮಾಡುತ್ತೀನಿ ಎಂದು ಹೇಳುತ್ತಾಳೆ.

ಸತ್ಯ ಕಾಲುಗುಣದ ಬಗ್ಗೆ ಮಾವನಿಗೆ ಹೆಮ್ಮೆ!
ಕಳೆದ 25 ವರ್ಷಗಳಿಂದ ಕೋರ್ಟ್‌ನಲ್ಲಿದ್ದ ಬಿಡದಿ ಪ್ರಾಪರ್ಟಿಯ ಕೇಸ್ ತೀರ್ಪು ಬಂದಿದ್ದು, ಅದು ರಾಮಚಂದ್ರ ರಾಯರ ಪರವಾಗಿಯೇ ಆಗಿರುತ್ತದೆ. ಅದಕ್ಕೆ ಸತ್ಯ ಕಾಲು ಗುಣವೇ ಕಾರಣ ಎಂದು ರಾಯರು ಹೇಳುತ್ತಾರೆ. ಆಗ ಕೀರ್ತನಾ ಸತ್ಯಳನ್ನು ಬೀದಿ ಬಿಕಾರಿ ಎಂದೆಲ್ಲಾ ಬೈದಾಗ, ಲಕ್ಷ್ಮಣ ವಿಷಯ ಗೊತ್ತಿಲ್ಲದೇ ಏನು ಮಾತನಾಡಬೇಡ ಎಂದು ಹೇಳುತ್ತಾರೆ. ಬೆಳಿಗ್ಗೆ ಯೋಚಿಸುತ್ತಾ ಕೂತಿರುವಾಗ ಸತ್ಯ ಬಂದು ಆ ಆಸ್ತಿ ನಿಮಗೆ ಸಿಗುತ್ತದೆ. ದೇವರ ಬಳಿ ಕೇಳಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಲಕ್ಷ್ಮಣ ಹೇಳಿ, ಕೀರ್ತನಾಳನ್ನು ಬೈದು ಕಳಿಸುತ್ತಾನೆ.

ಸತ್ಯಗೆ ಅಜ್ಜಿಯ ಧೈರ್ಯ!
ಗಿರಿಜಮ್ಮ ಸತ್ಯಳನ್ನು ಕರೆದು ಮಾತನಾಡಿಸುತ್ತಾಳೆ. ಖುಷಿ ಖುಷಿಯಾಗಿ ಮಾತನಾಡುವ ಸತ್ಯಳನ್ನು ಗಿರಿಜಮ್ಮ ಪ್ರಶ್ನೆ ಮಾಡುತ್ತಾಳೆ. ನೀನು ಆ ಮನೆಯಲ್ಲಿ ಸುಖವಾಗಿದ್ದೀಯಾ ಎಂದು ಕೇಳುತ್ತಾಳೆ. ಆಗ ಸತ್ಯ ಸುಳ್ಳು ಹೇಳುತ್ತಾಳೆ. ಆಗ ಗಿರಿಜಮ್ಮ ಆಣೆ ಮಾಡಿಸಿಕೊಂಡು ಕೇಳಿದಾಗ, ಸತ್ಯ ಇಲ್ಲ ಎಂದು ಹೇಳುತ್ತಾಳೆ. ಸತ್ಯ ಮಾತು ಕೇಳಿ ಮೊದಲು ಬೇಸರ ಮಾಡಿಕೊಂಡ ಗಿರಿಜಮ್ಮ, ಅವಳಿಗೆ ಸಮಾಧಾನದ ಜೊತೆಗೆ ಬುದ್ಧಿಯನ್ನೂ ಹೇಳುತ್ತಾಳೆ. ನೀನು ನೀನಾಗಿರು ಎಂದು ಹೇಳಿ ಧೈರ್ಯ ತುಂಬುತ್ತಾಳೆ.


Click it and Unblock the Notifications











