ಸತ್ಯಗೆ ಮತ್ತೊಂದು ತಲೆನೋವು: ತವರು ಮನೆಯಲ್ಲಿ ಕಿರಿಕ್!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕೀರ್ತನಾ ಹಾರಾಟ ಜೋರಾಗಿದೆ. ಸತ್ಯ ಮನೆಗೆ ಕಾಲಿಟ್ಟಾಗಿನಿಂದ ಸೀತಾಗೆ ಸಪೋರ್ಟ್ ಮಾಡುವ ನೆಪದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾಳೆ. ಸತ್ಯಳನ್ನು ಪದೇ ಪದೆ ಬೈಯುತ್ತಾ.? ಎಲ್ಲಾ ವಿಚಾರಕ್ಕೂ ಮಾತನಾಡುತ್ತಿದ್ದಾಳೆ.

ಇತ್ತ ಸತ್ಯ ದೊಡ್ಡಪ್ಪ ಕಾರ್ತಿಕ್ ಬಳಿ ಗುಟ್ಟಾಗಿ ಮಾತನಾಡಲು ಕಾಯುತ್ತಿದ್ದಾನೆ. ಅವಕಾಶ ಒದಗಿ ಬಾರದೇ ಒದ್ದಾಡುತ್ತಿದ್ದಾನೆ. ಹೇಗಾದರೂ ಮಾಡಿ ಕಾರ್ತಿಕ್‌ನನ್ನು ತನ್ನ ಪರ ಮಾಡಿಕೊಂಡು ಮನೆಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಬೇಕೆಂಬುದೇ ಅವರ ಪ್ಲ್ಯಾನ್.

ಕಾರ್ತಿಕ್‌ಗೆ ಯಾಕಾದರೂ ಇವರ ಮನೆಗೆ ಬಂದೆನೋ ಅಂತ ಅನಿಸಿದೆ. ಒಬ್ಬೊಬ್ಬರು ಒಂದೊಂದು ರೀತಿ ಆಡುತ್ತಾರೆ. ವಿಚಿತ್ರವಾಗಿ ಸಂಭ್ರಮಿಸುತ್ತಾರೆ. ನೆಮ್ಮದಿಯಾಗಿ ರೆಸ್ಟ್ ಮಾಡುವುದಕ್ಕೂ ಬಿಡುವುದಿಲ್ಲ ಎಂದು ಮನಸಲ್ಲೇ ಬೇಸರ ಮಾಡಿಕೊಂಡಿದ್ದಾನೆ.

ಮಗಳಿಗೆ ರಾಯರ ವಾರ್ನಿಂಗ್!

ಮಗಳಿಗೆ ರಾಯರ ವಾರ್ನಿಂಗ್!

ರಾಮಚಂದ್ರ ರಾಯರು ಕೀರ್ತನಾ ಮಾತುಗಳಿಂದ ಬೇಸರಗೊಂಡಿದ್ದಾರೆ. ಸತ್ಯಳನ್ನು ಕೀರ್ತನಾ ಬಿಕಾರಿ ಎಂದಿದ್ದಕ್ಕೆ ಅರ್ಧ ಆಸ್ತಿಯನ್ನು ಸತ್ಯ ಹೆಸರಿಗೆ ಮಾಡಲು ರಾಯರು ನಿರ್ಧರಿಸಿದ್ದಾರೆ. ಇನ್ನು ಸೀತಾ ಬಳಿ ಮಾತನಾಡುವಾಗ ಸತ್ಯಗೆ ಸಂಪ್ರದಾಯ ಗೊತ್ತಿಲ್ಲದೇ ಇರಬಹುದು. ಆದರೆ ನಿನ್ನ ಮಗಳಿಗೆ ಏನು ಗೊತ್ತು. ಮದುವೆಯಾದ ಮೇಲೂ ತಾಯಿ ಮನೆಯಲ್ಲಿ ಯಾಕಿರಬೇಕು. ಮೊದಲು ಅವಳಿಗೆ ತಾಯಿಯಾಗಿ ನೀನೇನು ಹೇಳಿಕೊಟ್ಟಿದ್ದೀಯಾ ಎಂಬುದನ್ನು ಅರ್ಥ ಮಾಡಿಕೋ. ಆಮೇಲೆ ಸತ್ಯಳನ್ನು ಬೈಯುವುದರಲ್ಲಿ ಅರ್ಥವಿರುತ್ತದೆ. ನನ್ನ ಸೊಸೆಗೆ ಸಂಪ್ರದಾಯ ಗೊತ್ತಿಲ್ಲದೇ ಇರಬಹುದು ಆದರೆ ಮನುಷ್ಯತ್ವ ಇದೆ. ನಾಳೆ ನಾವೆಲ್ಲರೂ ಸತ್ಯ ಮನೆಗೆ ಬೀಗರ ಊಟಕ್ಕೆ ಹೋಗುತ್ತಿದ್ದೇವೆ. ನೀನು ಕೂಡ ಬರುತ್ತಿದ್ದೀಯಾ ಎಂದು ಖಡಕ್ ಆಗಿ ರಾಯರು ಹೇಳಿದ್ದಾರೆ.

ಸತ್ಯ ಬಗ್ಗೆ ಮಾತನಾಡಿದ ದೊಡ್ಡಪ್ಪ!

ಸತ್ಯ ಬಗ್ಗೆ ಮಾತನಾಡಿದ ದೊಡ್ಡಪ್ಪ!

ಕಾರ್ತಿಕ್ ಜೊತೆಗೆ ಗುಟ್ಟಾಗಿ ಮಾತನಾಡಲು ಬಯಸುತ್ತಿದ್ದ ಸತ್ಯ ದೊಡ್ಡಪ್ಪನಿಗೆ ಅವಕಾಶ ಈಗ ಬಂದೊದಗಿದೆ. ಇಬ್ಬರು ಮನೆಯಾಚೆ ಕೂತು ಮಾತನಾಡುತ್ತಿದ್ದಾರೆ. ಈ ವೇಳೆ ಕಾರ್ತಿಕ್‌ಗೆ ಸತ್ಯ ಬಗ್ಗೆ ಇಲ್ಲ-ಸಲ್ಲದ ವಿಚಾರಗಳನ್ನು ತಲೆಗೆ ತುಂಬುತ್ತಿದ್ದಾನೆ. ಸತ್ಯ ಒರಟು ಹುಡುಗಿ, ನಯ ನಾಜೂಕು ಗೊತ್ತಿಲ್ಲದವಳು. ಅದು ಹೇಗೆ ಅವಳನ್ನು ಮದುವೆಯಾದರೋ ಎಂದೆಲ್ಲಾ ಹೇಳಿದ್ದಾನೆ. ಆದರೆ, ಕಾರ್ತಿಕ್ ಸತ್ಯ ಮೇಲಿನ ಕೋಪವನ್ನು ತೋರಿಸಿಕೊಳ್ಳದೇ, ಅವಳ ಪರವಾಗಿಯೇ ಇದ್ದಾನೆ. ಈ ವೇಳೆ, ಮನೆ ಡೀಲ್ ವಿಚಾರವನ್ನು ಹೇಳಲು ಹೊರಟಾಗ ಸತ್ಯ ಬಂದು ತಡೆದಿದ್ದಾಳೆ.

ಸತ್ಯಗೆ ಗ್ಯಾರೇಜ್ ತಲೆನೋವು!

ಸತ್ಯಗೆ ಗ್ಯಾರೇಜ್ ತಲೆನೋವು!

ಇತ್ತ ಗ್ಯಾರೇಜ್‌ನಲ್ಲಿ ಹುಡುಗರು ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆಗೆ ಬಂದ ಫೈನಾನ್ಸರ್ ಸತ್ಯ ಎಲ್ಲಿ ಎಂದು ಕೇಳಿದ್ದಾರೆ. ಗ್ಯಾರೇಜ್ ಮತ್ತು ಮನೆಯನ್ನು ಅಡವಿಟ್ಟು, ಹಣ ತೆಗೆದುಕೊಂಡು ಬಡ್ಡಿ ಕಟ್ಟದೇ ತಿರುಗಾಡುತ್ತಿದ್ದಾಳೆ. ಅಕ್ಕನಿಗೆಂದು ಸಾಲ ತೆಗೆದುಕೊಂಡು ತಾನೇ ಮದುವೆಯಾಗಿದ್ದಾಳೆ ಎಂದು ಹೀಯಾಳಿಸಿದ್ದಾನೆ. ಆದರೆ ಹುಡುಗರು ನಾಳೆ ನಾವೇ ಬಡ್ಡಿ ಹಣ ತಂದು ಕೊಡುತ್ತೇವೆ. ಈಗ ಸತ್ಯಗೆ ತೊಂದರೆ ಕೊಡಬೇಡಿ ಎಂದು ಕೇಳಿಕೋಂಡಿದ್ದಾರೆ. ಹುಡುಗರ ಮಾತನ್ನು ಒಪ್ಪಿದ ಆತ ನಾಳೆ ಬರುವುದಾಗಿ ಹೇಳಿ ಹೊರಟಿದ್ದಾನೆ.

ಕಾರ್ತಿಕ್‌ ಜೊತೆ ಗಿರಿಜಮ್ಮ ಮಾತು!

ಕಾರ್ತಿಕ್‌ ಜೊತೆ ಗಿರಿಜಮ್ಮ ಮಾತು!

ಇನ್ನು ಗಿರಿಜಮ್ಮ ಕಾರ್ತಿಕ್‌ನನ್ನು ಕರೆದು ಮದುವೆಯಾ ಪಾಠ ಮಾಡಲು ಹೊರಟಿದ್ದಾಳೆ. ಇದಕ್ಕಾಗಿ ಕಷಾಯವನ್ನು ಕುಡಿಸಿದ್ದಾಳೆ. ಜೊತೆಗೆ ಲೇಹ್ಯ ಕೊಟ್ಟು ತಿನ್ನಲು ಹೇಳಿದ್ದಾಳೆ. ಕಾರ್ತಿಕ್ ಕಷ್ಟಪಟ್ಟುಕೊಂಡು ಕಷಾಯ ಕುಡಿದು, ಲೇಹ್ಯ ತಿಂದಿದ್ದಾನೆ. ಮದುವೆ ಎಂದರೇನು? ಪ್ರೀತಿ ಹೇಗೆ ಹುಟ್ಟುತ್ತೆ? ಎಂಬ ಪಾಠ ಮಾಡಲು ಗಿರಿಜಮ್ಮ ಮುಂದಾಗಿದ್ದಾಳೆ. ಕಾರ್ತಿಕ್ ಗಿರಿಜಮ್ಮನ ಮಾತುಗಳಿಗೆ ಹೇಗೆ ರಿಯಾಕ್ಟ್ ಮಾಡುತ್ತಾನೆ. ಗಿರಿಜಮ್ಮನ ಮಾತುಗಳನ್ನು ಕೇಳಿದ ಮೇಲೆ ಕಾರ್ತಿಕ್ ಸತ್ಯ ಜೊತೆಗೆ ಮುಂದಿನ ಜೀವನ ನಡೆಸುತ್ತಾನಾ? ಎಂದು ಕಾದು ನೋಡಬೇಕಿದೆ.

More from Filmibeat

English summary
Sathya Tv Serial Written Update On July 14th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X