ದಿವ್ಯಾಗೆ ಮತ್ತೆ ಕಲರ್-ಕಲರ್ ಕಾಗೆ ಹಾರಿಸುತ್ತಿರುವ ಬಾಲ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕಥೆ ಮುಂದಕ್ಕೆ ಹೋಗುವುದೇ ಕಷ್ಟ ಎಂಬಂತೆ ಕಾಣುತ್ತಿದೆ. ಬೀಗರ ಊಟಕ್ಕೆ ಎಂದು ಸತ್ಯ ಹಾಗೂ ಕಾರ್ತಿಕ್ ಜಾನಕಿ ಮನೆಗೆ ಬಂದಿದ್ದಾರೆ. ಜಾನಕಿ ಮನೆಯಲ್ಲಿ ಅಳಿಯನಿಗಾಗಿ ಊಟೋಪಚಾರಗಳು ಜೋರಾಗಿಯೇ ನಡೆದಿದೆ.

ಕಾರ್ತಿಕ್ ಹಾಗೂ ಸತ್ಯ ಇಬ್ಬರೂ ಶತ್ರುಗಳಂತೆ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಗಿರಿಜಮ್ಮ ಹಾಗೂ ಜಾನಕಿ ಹೇಗಾದರೂ ಮಾಡಿ ಸತ್ಯ ಮತ್ತು ಕಾರ್ತಿಕ್ ಸಂಬಂಧವನ್ನು ಗಟ್ಟಿಗೊಳಿಸಬೇಕು. ಇಬ್ಬರೂ ಒಂದಾಗುವಂತೆ ಮಾಡಬೇಕು ಎಂದು ಆಲೋಚಿಸಿದ್ದಾರೆ.

ದಿವ್ಯಾ ಬಾಲನ ಮಾತುಗಳನ್ನು ಕೇಳಿ ತುಂಬಾನೇ ಹೆದರಿದ್ದಾಳೆ. ದುಡ್ಡಿನ ಮುಖ ನೋಡಿ, ಬಾಲನನ್ನು ಮದುವೆಯಾಗಿದ್ದೇ ಜೀವಕ್ಕೆ ಕುತ್ತು ಬಂತಲ್ಲ ಎಂದು ಸಂಕಟದಲ್ಲಿ ಸಿಲುಕಿದ್ದಾಳೆ. ಎಲ್ಲಿ ತನ್ನನ್ನು ಬಾಲನ ತಂದೆ ಕೊಂದು ಬಿಡುತ್ತಾರೋ ಎಂದು ಹೆದರಿಕೊಂಡಿದ್ದಾಳೆ.

ಕಾರ್ತಿಕ್‌ಗೆ ಗಿರಿಜಮ್ಮ ಪಾಠ!

ಕಾರ್ತಿಕ್‌ಗೆ ಗಿರಿಜಮ್ಮ ಪಾಠ!

ಕಾರ್ತಿಕ್ ಹಾಗೂ ಸತ್ಯ ನಡುವಿನ ಸಂಬಂಧವನ್ನು ಸರಿಪಡಿಸಲು ಗಿರಿಜಮ್ಮ ಏನೇನೋ ಪ್ಲಾನ್ ಹಾಕಿಕೊಂಡಿದ್ದಾಳೆ. ಮೊದಲು ಸತ್ಯಳನ್ನು ಕರೆದು ವಿಚಾರಿಸಿದ್ದಾಳೆ. ಆ ಮನೆಯಲ್ಲಿ ಚೆನ್ನಾಗಿದ್ದಾಳಾ ಎಂದೆಲ್ಲಾ ವಿಚಾರಿಸಿದ್ದಾಳೆ. ಸತ್ಯಗೆ ಕಾರ್ತಿಕ್‌ನನ್ನು ಹೇಗೆ ತನ್ನತ್ತ ಕರೆಸಿಕೊಳ್ಳಬೇಕು ಎಂಬುದ ಹೇಳಿಕೊಟ್ಟಿದ್ದಾಳೆ. ಬಳಿಕ ಕಾರ್ತಿಕ್ ಕರೆದು ಆತನಿಗೂ ಮದುವೆ, ಸಂಸಾರದ ಬಗ್ಗೆ ಪಾಠ ಹೇಳಿದ್ದಾಳೆ. ಮದುವೆ ಮಾಡುವುದೇ ವಂಶೋದ್ಧಾರಕ್ಕಾಗಿ ಎಂದು ಅರ್ಥ ಮಾಡಿಸಲು ಪ್ರಯತ್ನಿಸಿದ್ದಾಳೆ. ಕಾರ್ತಿಕ್ ಜಾನಕಿ ಮಾತುಗಳನ್ನು ಕೇಳಿ ತಬ್ಬಿಬ್ಬಾಗಿದ್ದಾನೆ.

ಪ್ರಸ್ತಕ್ಕೆ ಸಿದ್ಧತೆ ಮಾಡುತ್ತಿರುವ ಗಿರಿಜಮ್ಮ!

ಪ್ರಸ್ತಕ್ಕೆ ಸಿದ್ಧತೆ ಮಾಡುತ್ತಿರುವ ಗಿರಿಜಮ್ಮ!

ಜಾನಕಿ ಮನೆಯಲ್ಲಿ ಎಲ್ಲರಿಗೂ ಊಟ ಬಡಿಸಿದ್ದು, ನುಗ್ಗೆಕಾಯಿ ಸಾಂಬಾರು, ನುಗ್ಗೆಕಾಯಿ ಪಲ್ಯ, ಗೊಜ್ಜು ಎಲ್ಲವನ್ನೂ ನುಗ್ಗಿಕಾಯಿಯಲ್ಲಿ ಮಾಡಿದ್ದಾರೆ. ಇದನ್ನು ನೋಡಿ ಎಲ್ಲರೂ ಪ್ರಶ್ನಿಸಿದ್ದಾರೆ. ಇದಕ್ಕೆಲ್ಲಾ ಗಿರಿಜಮ್ಮ ಒಂದೇ ಉತ್ತರ ಕೊಟ್ಟಿದ್ದು, ಮಾಡಿದ್ದನ್ನು ತಿನ್ನಿ ಎಂದು ಹೇಳಿದ್ದಾರೆ. ಕಾರ್ತಿಕ್ ಎಲೆಗೆ ಬರೀ ನುಗ್ಗೆಕಾಯಿಯನ್ನು ಬಡಿಸಲಾಗಿದೆ. ಇನ್ನು ಹುಡುಗರಿಗೆ ಪ್ರಸ್ತಕ್ಕೆ ಸಿದ್ಧತೆ ನಡೆಸಲು ಹೂ ತರಲು ಗಿರಿಜಮ್ಮ ಹೇಳಿದ್ದಾಳೆ. ಇನ್ನು ತವರು ಮನೆಯಲ್ಲೂ ಪ್ರಸ್ತದ ಕಾರ್ಯಕ್ರಮ ನಡೆಯುತ್ತದೆ ಎಂದು ಗಿರಿಜಮ್ಮ ಹೇಳಿದ್ದು, ಕಾರ್ತಿಕ್‌ಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ.

ಬಾಲನ ತಾಳಕ್ಕೆ ಕುಣಿಯುತ್ತಿರುವ ದಿವ್ಯಾ!

ಬಾಲನ ತಾಳಕ್ಕೆ ಕುಣಿಯುತ್ತಿರುವ ದಿವ್ಯಾ!

ಬಾಲ ದಿವ್ಯಾಳನ್ನು ನಂಬಿಸುವುದಕ್ಕಾಗಿ ಸುಳ್ಳಿನ ಕೋಟೆಯನ್ನೇ ಕಟ್ಟಿದ್ದಾನೆ. ಇಲ್ಲದ ತಂದೆ ತಾಯಿಯನ್ನು ಸೃಷ್ಟಿಸಿದ್ದಾನೆ. ಕೋಟಿ ಕೋಟಿ ಹಣದ ಒಡೆಯ ಎಂದು ನಂಬಿಸಿದ್ದಾನೆ. ಈಗ ಹೇಳದೇ ಮದುವೆಯಾಗಿರುವುದಕ್ಕೆ ಅವರ ತಂದೆ ಕೋಪ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಂಬಿಸಲು ಯಾರಿಂದಲೋ ಕರೆ ಮಾಡಿಸಿ ಮಾತನಾಡಿಸಿದ್ದಾನೆ. ಇದರಿಂದ ದಿವ್ಯಾ ಹೆದರಿಕೊಂಡಿದ್ದಾಳೆ. ಬಾಲನನ್ನು ಕುರಿತು ನನ್ನನ್ನು ಬಿಟ್ಟು ಎಲ್ಲೂ ಹೋಗಬೇಡ ಎಂದು ಹೇಳಿದ್ದಾಳೆ. ಬಾಲನಿಗೆ ಈಗ ಖುಷಿಯಾಗುತ್ತಿದೆ. ಸದ್ಯ ದಿವ್ಯಾ ದಾರಿಗೆ ಬರುತ್ತಿದ್ದಾಳೆ ಎಂದು ನೆಮ್ಮದಿಯಾಗಿದ್ದಾನೆ.

ಮಾತಿಗೆ ಕಟ್ಟು ಬಿದ್ದ ಸೀತಾ!

ಮಾತಿಗೆ ಕಟ್ಟು ಬಿದ್ದ ಸೀತಾ!

ಇತ್ತ ಸೀತಾಗೆ ರಾಮಚಂದ್ರ ರಾಯರ ಮಾತುಗಳೇ ಗೂಯ್ ಗುಡುತ್ತಿದೆ. ಕೀರ್ತನಾ ಬದುಕಿನ ರೀತಿಯೇ ತನ್ನ ಕಡೆ ಬೊಟ್ಟು ಮಾಡುವಂತಾಯಿತಲ್ಲ. ಅಷ್ಟು ಸಂಪ್ರದಾಯ, ಶಾಸ್ತ್ರಗಳನ್ನು ನಂಬಿ ಬದುಕಿದ್ದ ತನ್ನ ಬದುಕನ್ನೇ ಪ್ರಶ್ನಿಸುವಂತಾಯಿತಲ್ಲ ಎಂದು ಯೋಚಿಸುತ್ತಿದ್ದಾಳೆ. ತನಗೆ ಏನೂ ಮಾತನಾಡುವ ಅಧಿಕಾರವೇ ಇಲ್ಲದಂತೆ ರಾಮಚಂದ್ರ ರಾಯರು ಮಾತನಾಡಿದ ಮಾತುಗಳೆಲ್ಲವೂ ಸೀತಾಳನ್ನು ಕಟ್ಟಿ ಹಾಕಿವೆ.

More from Filmibeat

English summary
Sathya Tv Serial Written Update On July 15th Episode, Big Twist In Sathya Life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X