ಸತ್ಯ ಸೀರಿಯಲ್‌ನಲ್ಲಿ ಬೀಗರ ಊಟದ ಕಥೆ ಇನ್ನೂ ಮುಗಿದಿಲ್ಲ, ಮುಂದೇನಾಯ್ತು!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕಳೆದ ಹದಿನೈದು ದಿನದಿಂದ ಬೀಗರ ಊಟದ ಕಥೆಯೇ ಸಾಗುತ್ತಿದೆ. ನೂರೆಂಟು ಪ್ರಾಬ್ಲಂಗಳ ನಡುವೆ ಸತ್ಯ ಹಾಗೂ ಕಾರ್ತಿಕ್ ಮದುವೆ ನಡೆದು ಹೋಗಿದೆ. ಈಗ ಸಮಸ್ಯೆಗಳನ್ನು ಬಗೆಹರಸುವುದೇ ಕಷ್ಟವಾಗುತ್ತಿದೆ.

ಶತಾಯಗತಾಯ ಪ್ರಯತ್ನ ಪಟ್ಟರೂ ಸೀತಾ ಸತ್ಯಳನ್ನು ಸೊಸೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ರಾಮಚಂದ್ರ ರಾಯರು ಕೂಡ ತಮಗೆ ಅನಿಸಿದ್ದನ್ನೆಲ್ಲಾ ಸೀತಾಗೆ ಹೇಳೀ ಆಯ್ತು ಅದರೂ, ಸೀತಾ ಮಾತ್ರ ಸತ್ಯಳನ್ನು ಒಪ್ಪಿಕೊಳ್ಳುತ್ತಿಲ್ಲ. ಕೀರ್ತನಾ ಬೇರೆ ಸೀತಾ ಬೇಸರಕ್ಕೆ ತುಪ್ಪ ಸುರಿಯುತ್ತಿದ್ದಾಳೆ.

ಇತ್ತ ಸತ್ಯಗೆ ಅರ್ಥವಾಗಿದೆ. ತಾನು ಏನೇ ಮಾಡಿದರೂ, ಸೀತಾ ಹಾಗೂ ಕಾರ್ತಿಕ್ ಕಣ್ಣಿಗೆ ನೆಗೆಟಿವ್ ಆಗಿಯೇ ಕಾಣುತ್ತೆ. ಕಾರ್ತಿಕ್ ತನ್ನನ್ನು ಹೆಂಡತಿ ಎಂದು ಒಪ್ಪುವುದಿಲ್ಲ ಎಂದು ಅರ್ಥ ಮಾಡಿಕೊಂಡಿದ್ದಾಳೆ. ಇದೇ ಮನಸ್ಥಿತಿ ಇದ್ದರೆ ಮುಂದೆ ಜೀವನ ಹೇಗೆ ನಡೆಸುವುದು ಎಂಬುದು ಸತ್ಯಳ ಯೋಚನೆಯಾಗಿದೆ.

ಕಾರ್ತಿಕ್‌ಗೆ ಗಿರಿಜಮ್ಮನ ಕಾಟ!

ಕಾರ್ತಿಕ್‌ಗೆ ಗಿರಿಜಮ್ಮನ ಕಾಟ!

ಗಿರಿಜಮ್ಮ ಕಾರ್ತಿಕ್ ಹಾಗೂ ಸತ್ಯ ಒಂದಾಗಲಿ ಎಂದು ಕಶಾಯ, ಲೇಹ್ಯ ಮಾಡಿ ಕಾರ್ತಿಕ್‌ಗೆ ತಿನ್ನಿಸಿದ್ದರು. ಆದರೆ, ಗಿರಿಜಮ್ಮನ ಪ್ಲಾನ್ ಉಲ್ಟಾ ಆಗಿದೆ. ರಾತ್ರಿಯೆಲ್ಲಾ ಭಯದಲ್ಲಿ ಕಾರ್ತಿಕ್ ಮಲಗೇ ಇಲ್ಲ. ಆತನ ಕಣ್ಣುಗಳು ಕೆಂಪಗಾಗಿವೆ. ಇದನ್ನು ನೋಡಿದ ಗಿರಿಜಮ್ಮ ತನ್ನ ಪ್ಲಾನ್ ಸಕ್ಸಸ್ ಎಂದು ತಿಳಿದಿದ್ದಾರೆ. ಕಾರ್ತಿಕ್ ಬಳಿ ವಿಚಾರಿಸಿದ್ದಕ್ಕೆ, ಕಾರ್ತಿಕ್ ಬೇಕಂತಲೇ ಅಜ್ಜಿಗೆ ಉಲ್ಟಾ ಉತ್ತರ ಕೊಟ್ಟಿದ್ದಾನೆ. ಇದರಿಂದ ಮೊದಲು ಬೇಸರ ಮಾಡಿಕೊಂಡ ಅಜ್ಜಿ, ಬಳಿಕ ಮತ್ತೆ ಕಾರ್ತಿಕ್ ಜೀವ ಹಿಂಡಿದ್ದಾರೆ. ಕಾರ್ತಿಕ್ ಯಾಕಾದರೂ ಇಲ್ಲಿಗೆ ಬಂದೆನೋ ಎಂದು ಒಳಗೊಳಗೆ ಅಂದುಕೊಂಡಿದ್ದಾನೆ.

ರಾಯರ ಹೊಸ ನಿರ್ಧಾರ!

ರಾಯರ ಹೊಸ ನಿರ್ಧಾರ!

ರಾಮಚಂದ್ರ ರಾಯರು ಬೀಗರ ಊಟಕ್ಕೆ ಯಾರೂ ಹೋಗುವುದು ಬೇಡ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಲಕ್ಷ್ಮಣ ಶಾಕ್ ಆಗಿದ್ದಾನೆ. ಅದಕ್ಕೆ ರಾಮಚಂದ್ರ ರಾಯರು ಮಾತನಾಡುವ ಮುನ್ನವೇ ಬಂದ ಕೀರ್ತನಾ ಸತ್ಯ ಮನೆಗೆ ಫ್ರಿಡ್ಜ್, ಎಸಿ ಅನ್ನು ಬುಕ್ ಮಾಡಿದ್ದಾಳೆ. ಲಕ್ಷ್ಮಣ ಯಾಕೆ ಎಂದು ಕೇಳಿದ್ದಕ್ಕೆ ಅವರ ಮನೆಗೆ ಹೋಗಿ ಇರಲು ಸಾಧ್ಯವಿಲ್ಲ ಹಾಗಾಗಿ ಎಂದಾ ರಾಯರು, ಇದಕ್ಕೆ ಬೇಡ ಅಂದಿದ್ದು. ನಾವು ಹೀಗೆಲ್ಲಾ ಮಾಡಿದರೆ ಬೀಗರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಅಲ್ಲದೇ, ಮನಸ್ಸಿಲ್ಲದ ಮನಸ್ಸಿನಿಂದ ಹೋಗುವುದು ಕೂಡ ತಪ್ಪು. ನಮ್ಮ ನಡವಳಿಕೆಯಿಂದಾಗಿ ಕಾರ್ತಿಕ್ ಸತ್ಯಗೂ ತೊಂದರೆ ಆಗುತ್ತದೆ. ಅವರಿಬ್ಬರು ಅಲ್ಲೇ ಇದ್ದು, ಹೊಂದಾಣಿಕೆ ಮಾಡಿಕೊಳ್ಳಲಿ. ನಮ್ಮಿಂದ ತೊಂದರೆ ಬೇಡ ಎಂದು ಹೇಳಿದ್ದಾನೆ. ಲಕ್ಷ್ಮಣ ಕೀರ್ತನಾ ನಡವಳಿಕೆಗೆ ಬೇಸರಗೊಂಡಿದ್ದಾನೆ.

ದಿವ್ಯಾಗೆ ಮಂಕುಬೂದಿ ಎರಚಿದ ಬಾಲ

ದಿವ್ಯಾಗೆ ಮಂಕುಬೂದಿ ಎರಚಿದ ಬಾಲ

ಬಾಲ ಈಗ ಸುಳ್ಳಿನ ಕೋಟೆಯನ್ನೇ ಕಟ್ಟಿದ್ದಾನೆ. ಫೋನ್‌ನಲ್ಲಿ ಸುಖಾ ಸುಮ್ಮನೆ ದಿವ್ಯಾ ಹೆಸರಿಗೆ ಸದಾಶಿವನಗರದಲ್ಲಿರುವ ಇನ್ನೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಟ್ರಾನ್ಸ್ ಫರ್ ಮಾಡುವಂತೆ ಹೇಳಿದ್ದಾನೆ. ಈ ಮಾತುಗಳನ್ನು ದಿವ್ಯಾ ಕೇಳಿಸಿಕೊಳ್ಳುವಂತೆ ಮಾತನಾಡಿದ್ದು, ಇದು ದಿವ್ಯಾಗೆ ಖುಷಿ ಕೊಟ್ಟಿದೆ. ಈ ಖುಷಿಯ ಬೆನ್ನಲ್ಲೇ ತನ್ನ ತಂದೆ ಬಗ್ಗೆ ಬಾಲ ಮಾತನಾಡಿದ್ದು, ಈಗ ತಾತ ಎಂಬ ಹೊಸ ಪಾತ್ರವನ್ನು ಸೃಷ್ಟಿಸಿದ್ದಾನೆ. ಮುಂದೇನಾಗುತ್ತೋ ಗೊತ್ತಿಲ್ಲ.

ಮನೆಯಿಂದ ಕಾರ್ತಿಕ್ ನಾಪತ್ತೆ!

ಮನೆಯಿಂದ ಕಾರ್ತಿಕ್ ನಾಪತ್ತೆ!

ಇತ್ತ ಮನೆಯಲ್ಲಿ ಕಾರ್ತಿಕ್ ಕಾಣಿಸುತ್ತಿಲ್ಲ. ಬೀಗರು ಬರುವ ಹೊತ್ತಾಯಿತು. ಇದೇ ಸಮಯದಲ್ಲಿ ಕಾರ್ತಿಕ್ ಕಾಣಿಸದಿರುವುದು ಮನೆಯವರಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಕಾರ್ತಿಕ್ ಒಬ್ಬನೇ ಅಲ್ಲದೇ, ಸತ್ಯ ದೊಡ್ಡಪ್ಪ ಕೂಡ ಕಾಣಿಸುತ್ತಿಲ್ಲ. ಇಬ್ಬರೂ ಎಲ್ಲಾದರೂ ಹೋಗಿದ್ದಾರಾ ಎಂದು ಸತ್ಯ ಅಂದುಕೊಳ್ಳುತ್ತಿದ್ದಾಳೆ. ಸತ್ಯ ದೊಡ್ಡಪ್ಪ ಕಾರ್ತಿಕ್ ಬಳಿ ಏನು ಹೇಳಿ ಎಡವಟ್ಟು ಮಾಡುತ್ತಾರೋ ಮುಂದೇ ನೋಡಬೇಕಿದೆ.

More from Filmibeat

English summary
Sathya Tv Serial Written Update On July 21st Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X