ಹೊಸ ಸಂಕಷ್ಟಕ್ಕೆ ಸಿಲುಕಿದ ಸತ್ಯ!

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಕಾರ್ತಿಕ್ ಮನೆಯಿಂದ ಕಾಣೆಯಾಗಿದ್ದಾನೆ. ಕಾರ್ತಿಕ್ ಎಲ್ಲಿಗೆ ಹೋಗಿದ್ದಾನೆ? ಯಾರ ಜೊತೆಗೆ ಹೋಗಿದ್ದಾನೆ ಎಂಬುದೇ ಗೊತ್ತಿಲ್ಲ. ಸತ್ಯ ಫೋನ್‌ಗೂ ರೆಸ್ಪಾನ್ಸ್ ಮಾಡುತ್ತಿಲ್ಲ. ಇದು ಸತ್ಯ, ಜಾನಕಿ ಹಾಗೂ ಗಿರಿಜಮ್ಮನಿಗೆ ಆತಂಕವನ್ನು ಸೃಷ್ಟಿಸಿದೆ.

ದಿವ್ಯಾಗೆ ಈ ಹಣದಾಸೆಗಿಂತಲೂ ಜೀವ ಭಯ ಹೆಚ್ಚಾಗಿದೆ. ಯಾಕಾದರೂ ಬಾಲನನ್ನು ಮದುವೆಯಾದೆನೋ ಎಂದು ತಲೆ ಕೆಡಿಸಿಕೊಂಡಿದ್ದಾಳೆ. ತನ್ನ ಆಯ್ಕೆಯೇ ತಪ್ಪಾಗಿತ್ತಾ ಅನ್ನೋ ಗೊಂದಲದಲ್ಲಿ ದಿವ್ಯಾ ಇದ್ದಾಳೆ. ಆದರೆ ಇದ್ಯಾವುದೂ ಬಾಲನಿಗೆ ಬೇಕಿಲ್ಲ. ದಿವ್ಯಾ, ತನ್ನ ಜೊತೆಗಿದ್ದರೆ ಅಷ್ಟೇ ಸಾಕು ಎಂಬಂತಾಗಿದೆ.

ಜಾನಕಿ ಮನೆಯಲ್ಲಿ ಬೀಗರು ಬರುತ್ತಾರೆ. ಅವರಿಗೆ ಅಡುಗೆ ಮಾಡಬೇಕು. ಬೀಗರೂಟ ಚೆನ್ನಾಗಿ ಆಗಬೇಕು ಎಂದು ಅಂದುಕೊಂಡಿದ್ದಾರೆ. ಆದರೆ, ರಾಯರು ಬೀಗರ ಊಟಕ್ಕೆ ಯಾರೂ ಹೋಗುವುದು ಬೇಡ ಎಂಬ ತೀರ್ಮಾನವನ್ನು ಮಾಡಿದ್ದಾರೆ.

ಕಾರ್ತಿಕ್ ಹುಡುಕುತ್ತಿರುವ ಸತ್ಯ!

ಕಾರ್ತಿಕ್ ಹುಡುಕುತ್ತಿರುವ ಸತ್ಯ!

ಮನೆಯಲ್ಲಿ ಇದ್ದಕ್ಕಿದ್ದಂತೆ ಕಾರ್ತಿಕ್ ಕಾಣಿಸುತ್ತಿಲ್ಲ. ಸತ್ಯ ಗಾಬರಿಯಾಗಿದ್ದು, ಫೋನ್ ಮಾಡಿದರೆ, ಕಾರ್ತಿಕ್ ಸತ್ಯಗೆ ರೆಸ್ಪಾನ್ಸ್ ಕೂಡ ಮಾಡುತ್ತಿಲ್ಲ. ಇದರಿಂದ ಜಾನಕಿ ಹಾಗೂ ಗಿರಿಜಮ್ಮ ಕೂಡ ಗಾಬರಿಗೊಂಡಿದ್ದಾರೆ. ಬೀಗರು ಬರುವ ಹೊತ್ತಾಯಿತು. ಇದೇ ಸಮಯದಲ್ಲಿ ಕಾರ್ತಿಕ್ ಕಾಣಿಸುತ್ತಿಲ್ಲವಲ್ಲ ಎಂದು ಗಾಬರಿ ಮಾಡಿಕೊಂಡಿದ್ದಾರೆ. ಆದರೆ ಕಾರ್ತಿಕ್ ಸತ್ಯ ಅವರ ದೊಡ್ಡಪ್ಪನ ಜೊತೆಗೆ ಆಚೆ ಹೋಗಿದ್ದಾರೆ. ಅದೂ ಕೂಡ ಪಾರ್ಟಿ ಮಾಡಲು ಹೋಗಿದ್ದಾರೆ ಎಂಬುದು ತಿಳಿದಿದ್ದು, ಸತ್ಯ ಇನ್ನಷ್ಟು ಗಾಬರಿಗೊಂಡಿದ್ದಾಳೆ. ಕಾರ್ತಿಕ್ ಮನೆಯವರು ಬರುವ ವೇಳೆಗೆ ಹೀಗಾಯ್ತಲ್ಲ ಎಂದು ತಾನೇ ಊರೆಲ್ಲಾ ಹುಡುಕಾಡಿದ್ದಾಳೆ. ಆದರೆ, ಕಾರ್ತಿಕ್ ಎಲ್ಲೂ ಕಾಣಿಸಿಲ್ಲ. ಹೀಗಾಗಿ ಸತ್ಯ ಹುಡುಗರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಊಟಕ್ಕೆ ಬರಲ್ಲ ಎಂದ ಬೀಗರು!

ಊಟಕ್ಕೆ ಬರಲ್ಲ ಎಂದ ಬೀಗರು!

ಕಾರ್ತಿಕ್ ಸತ್ಯ ಅವರ ದೊಡ್ಡಪ್ಪನ ಜೊತೆಗೆ ಆಚೆ ಹೋಗಿದ್ದಾನೆ. ಕಂಠ ಪೂರ್ತಿ ಕುಡಿದಿದ್ದಾನೆ. ಕುಡಿದು ಏನೇನೋ ಮಾತಾಡಿದ್ದಾನೆ. ಸತ್ಯಳನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ. ಅವಳೇನು ಲೇಡಿ ಡಾನ್? ಅವಳಿಗೆ ಇವತ್ತು ಗ್ರಹಚಾರ ಬಿಡಿಸುತ್ತೇನೆ ಎಂದೆಲ್ಲಾ ಮಾತನಾಡಿದ್ದಾನೆ. ಇನ್ನು ಇತ್ತ ಜಾನಕಿಗೆ ರಾಮಚಂದ್ರ ರಾಯರು ಕರೆ ಮಾಡಿ, ನಾವು ಬೀಗರ ಊಟಕ್ಕೆ ಬರುವುದಿಲ್ಲ. ಹಾಗಂತ ನಿಮ್ಮ ಬೀಗರ ಊಟವನ್ನು ನಿಲ್ಲಿಸಬೇಡಿ. ಇನ್ನೂ ಎರಡು ಮೂರು ದಿನ ಕಾರ್ತಿಕ್ ಕೂಡ ಇರಲಿ ಪರವಾಗಿಲ್ಲ ಎಂದು ಹೇಳಿದ್ದಾರೆ.

ದಿವ್ಯಾಗೆ ಭಯ ಶುರುವಾಯ್ತು!

ದಿವ್ಯಾಗೆ ಭಯ ಶುರುವಾಯ್ತು!

ಇತ್ತ ಬಾಲ ದಿವ್ಯಾಳನ್ನು ನಂಬಿಸಲು ಏನೆಲ್ಲಾ ಕಥೆ ಕಟ್ಟಿ ಹೇಳಿದ್ದಾನೆ. ನನ್ನ ಅಪ್ಪ ನಿನ್ನನ್ನು ಕೊಲ್ಲಬಾರದು ಎಂದರೆ, ನಾವೀಗ ನಮ್ಮ ತಾತನ ಆಸರೆಯನ್ನು ಪಡೆಯಬೇಕು. ನಮ್ಮ ತಾತ ಇರುವುದು ಹಳ್ಳಿಯಲ್ಲಿ. ನಾವೀಗ ತಾತನಿರುವ ಹಳ್ಳಿಗೆ ಹೋಗಿ ಆಶ್ರಯ ಪಡೆಯಬೇಕು. ನೀನು ನಮ್ಮ ತಾತನನ್ನು ಒಲಿಸಿಕೊಳ್ಳಬೇಕು. ಅವರೊಬ್ಬರು ನಮ್ಮನ್ನು ನಂಬಿ ನಮಗೆ ಸಪೋರ್ಟ್ ಮಾಡಿದರೆ, ನಮ್ಮ ಅಪ್ಪ ನಮಗೆ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಇದನ್ನೆಲ್ಲಾ ನಂಬಿದ ದಿವ್ಯಾ, ಹಳ್ಳಿಗೆ ಹೋಗುವುದಕ್ಕೆ ಹಿಂಜರಿದಿದ್ದಾಳೆ.

ಸತ್ಯಾಗೆ ಸಾಲದವರ ಕಾಟ!

ಸತ್ಯಾಗೆ ಸಾಲದವರ ಕಾಟ!

ಇನ್ನು ಫೈನಾನ್ಷಿಯರ್ ಮತ್ತೆ ಗ್ಯಾರೇಜ್‌ಗೆ ಬಂದಿದ್ದು, ಬಡ್ಡಿ ಹಣವನ್ನು ಕೇಳಿದ್ದಾರೆ. ಆದರೆ ಹುಡುಗರು ಹಣ ಹೊಂದಿಸಲು ಸಾಧ್ಯವಾಗಿಲ್ಲ. ಇನ್ನು ಎರಡು ದಿನ ಟೈಂ ಕೊಡಿ, ನಾವು ಮಿಸ್ ಮಾಡದೇ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಇವರ ಮಾತು ಕೇಳದ ಫೈನಾನ್ಸರ್ ಮನೆಗೆ ಬಂದು ಗಲಾಟೆ ಮಾಡಿದ್ದಾರೆ.

More from Filmibeat

English summary
Sathya Tv Serial Written Update On July 22st Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X