ಕೀರ್ತನಾ ಹೊಸ ಕುತಂತ್ರಕ್ಕೆ ಸತ್ಯ ಸಿಕ್ಕಿ ಬೀಳ್ತಾಳ?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್‌ಗೆ ಅತ್ತೆ ಮನೆಗೆ ಹೋಗುವುದಕ್ಕೆ ಇಷ್ಟವಿಲ್ಲ. ಅದರಲ್ಲೂ ಸತ್ಯ ಜೊತೆಗೆ ಹೋಗಬೇಕಲ್ಲ ಎಂಬುದೇ ಕಾರ್ತಿಕ್‌ ಚಿಂತೆಯಾಗಿದೆ. ಆದರೆ ಏನು ಮಾಡಿದರೂ ಕಾರ್ತಿಕ್‌ಗೆ ಬೇರೆ ದಾರಿಯೇ ಕಾಣುತ್ತಿಲ್ಲ. ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ಯೋಚಿಸುತ್ತಿದ್ದಾನೆ.

ಸತ್ಯಗೆ ಬಹಳ ದಿನಗಳ ನಂತರ ತನ್ನ ತಾಯಿ ಮನೆಗೆ ಹೋಗುವ ಸಂಭ್ರಮ. ಅದರಲ್ಲೂ ಕಾರ್ತಿಕ್‌ ಅನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಬೇಕು. ಎಲ್ಲಿ ಸೀತಮ್ಮ ಕಾರ್ತಿಕ್‌ ಗೆ ಸಪೋರ್ಟ್ ಮಾಡುತ್ತಾರೋ ಅನ್ನೋ ಭಯವೂ ಇತ್ತು. ಆದರೆ, ಸೀತಮ್ಮ, ಸಂಪ್ರದಾಯ ಹೋಗಲೇಬೇಕು ಹೋಗು ಎಂದಿದ್ದಾರೆ.

ಸತ್ಯಗೆ ಮನೆಗೆ ಬೀಗರ ಊಟಕ್ಕೆ ಹೋಗಬೇಕಾ ಎಂದು ಸುಹಾಸ್ ಯೋಚಿಸುತ್ತಿದ್ದಾನೆ. ಆದರೆ ಈ ಬಾರಿ ಕೀರ್ತನಾ ಮಾಸ್ಟರ್‌ ಪ್ಲಾನ್ ಮಾಡಲು ಮುಂದಾಗಿದ್ದು, ಸತ್ಯ ಮನೆಗೆ ಬೀಗರ ಊಟಕ್ಕೆ ಹೋಗುವ ನಿರ್ಧಾರ ಮಾಡಿದ್ದಾರೆ.

ಕಾರ್ತಿಕ್‌ಗೆ ಬುದ್ಧಿವಾದ ಹೇಳಿದ ಲಕ್ಷ್ಮಣ

ಕಾರ್ತಿಕ್‌ಗೆ ಬುದ್ಧಿವಾದ ಹೇಳಿದ ಲಕ್ಷ್ಮಣ

ಕಾರ್ತಿಕ್‌ ನನಗೆ ಜಾನಕಿ ಅವರ ಮನೆಗೆ ಸತ್ಯ ಜೊತೆಗೆ ಹೋಗಲು ಇಷ್ಟವಿಲ್ಲ ಎಂದು ಹಠ ಮಾಡುತ್ತಾನೆ. ಆಗ ಲಕ್ಷ್ಮಣ, ನಿನಗೆ ಬೇರೆ ದಾರಿ ಇಲ್ಲ. ಹೋಗಲೇ ಬೇಕು. ಅದೂ ದಾರಿಯಲ್ಲಿ ಹಣ್ಣು-ಹೂವು ಮತ್ತೆ ಸ್ವೀಟ್ಸ್ ತಗೊಂಡು ಹೋಗು ಎಂದು ಬುದ್ಧಿವಾದ ಹೇಳಿದ್ದಾನೆ. ಇತ್ತ ಊರ್ಮಿಳಾ ಸತ್ಯಗೆ ಕಾರ್ತಿಕ್‌ ಗೆ ಈಗ ನೀನೇ ಗತಿ. ಸರಿ ಹೋಗುತ್ತಾನೆ. ಆತನನ್ನು ಹೇಗೆ ಒಲಿಸಿಕೊಳ್ಳಬೇಕು. ಮತ್ತೆ ಪ್ರೀತಿ ಹುಟ್ಟುವಂತೆ ಏನು ಮಾಡಬೇಕು ಎಂದು ಹೇಳಿದ್ದಾರೆ. ಸತ್ಯ ಖುಷಿಯಿಂದ ಟಾಟಾ ಮಾಡಿ ಹೊರಟಿದ್ದಾಳೆ.

ಸತ್ಯಗೆ ಡ್ರೈವರ್‌ ಆದ ಕಾರ್ತಿಕ್‌!

ಸತ್ಯಗೆ ಡ್ರೈವರ್‌ ಆದ ಕಾರ್ತಿಕ್‌!

ಇನ್ನು ಇಂದು ಕಾರ್ತಿಕ್‌ ಮನೆಗೆ ಡ್ರೈವರ್‌ ಕೂಡ ಬಂದಿಲ್ಲ. ಕಾರ್ತಿಕ್‌ ಡ್ರೈವ್‌ ಮಾಡಿಕೊಂಡು ಸತ್ಯಳನ್ನು ಕರೆದುಕೊಂಡು ಹೋಗಬೇಕಿದೆ. ಡ್ರೈವ್‌ ಮಾಡುತ್ತಾ ಹೋಗುವಾಗ ಕಾರ್ತಿಕ್‌ ಸತ್ಯ ಖುಷಿಯನ್ನು ನೋಡಿ ಸಂಕಟಪಟ್ಟಿದ್ದಾನೆ. ಇತ್ತ ಸತ್ಯ ಕಾರ್ತಿಕ್‌ ನನನ್ನು ಮಾತನಾಡಿಸುತ್ತಿದ್ದಾಳೆ. ಅದಕ್ಕೆ ಕಾರ್ತಿಕ್‌ ಇರಿಟೇಟ್ ಆಗಿದ್ದು, ಮಾತಾಡಿಸಿಲ್ಲ ಅಂದರೆ ನನ್ನ ಡ್ರಾಪ್‌ ಮಾಡುವ ಡ್ರೈವರ್‌ ಎನಿಸುತ್ತದೆ ಅಂತ ಮಾತನಾಡಿಸಿದೆ ಎಂದು ರೇಗಿಸುತ್ತಾಳೆ. ಇನ್ನು ಸತ್ಯ ಮನೆಗೆ ಬರುತ್ತಿರುವುದಕ್ಕೆ ಥ್ಯಾಂಕ್ಸ್ ಹೇಳುತ್ತಾಳೆ. ಆಗ ಕಾರ್ತಿಕ್‌ ನಾನು ಚಿಕ್ಕಪ್ಪ ಹಾಗೂ ಅಮ್ಮನ ಮಾತಿಗೆ ಬೆಲೆ ಕೊಟ್ಟು ಬರುತ್ತಿದ್ದೀನಿ. ನಿನಗೋಸ್ಕರ ಬರುತ್ತಿಲ್ಲ. ಬರಲಿಲ್ಲ ಅಂದರೆ ನಿಮ್ಮ ಅಮ್ಮ, ಅಜ್ಜಿ ಹಾಗೂ ಚಿಕ್ಕಪ್ಪ, ನಮ್ಮಮ್ಮನಿಗೆ ಬೇಜಾರಾಗುತ್ತೆ ಎಂದು ಹೇಳುತ್ತಾನೆ.

ಮತ್ತೊಂದು ಪ್ಲಾನ್ ಮಾಡುತ್ತಿರುವ ಕೀರ್ತನಾ!

ಮತ್ತೊಂದು ಪ್ಲಾನ್ ಮಾಡುತ್ತಿರುವ ಕೀರ್ತನಾ!

ಇತ್ತ ಸುಹಾಸ್ ಟೆಂಷನ್ ಮಾಡಿಕೊಂಡಿದ್ದಾನೆ. ಬೀಗರ ಊಟಕ್ಕೆ ನಾವು ಆ ಕೊಂಪೆಗೆ ಹೋಗಬೇಕಾ.? ಅದರಲ್ಲೂ ಆ ಸತ್ಯ ಮನೆಗೆ ಎಂದು ಯೋಚಿಸುತ್ತಿದ್ದಾನೆ. ಈ ನಡುವೆ ಕೀರ್ತನಾ ಬಳಿ ಬಂದು ಇದೇ ಪ್ರಶ್ನೆಯನ್ನು ಮಾಡುತ್ತಾನೆ. ಆದರೆ ಕೀರ್ತನಾ ಎಸ್‌ ನಾವು ಹೋಗಲೇಬೇಕು. ಇದು ನಮಗೆ ಸಿಕ್ಕಿರುವ ಎರಡನೇ ಅವಕಾಶ. ಹೇಗಾದರೂ ಮಾಡಿ ಸತ್ಯಗೆ ಈ ಮನೆಯಿಂದ ಗೇಟ್‌ ಪಾಸ್‌ ಮಾಡಿಸಬೇಕು ಎಂದರೆ ನಾವು ಹೋಗಲೇಬೇಕು ಎಂದು ಹೇಳುತ್ತಾಳೆ.

ಕಾರ್ತಿಕ್‌ಗೆ ಅವಮಾನ!

ಕಾರ್ತಿಕ್‌ಗೆ ಅವಮಾನ!

ಸ್ವಿಟ್ಸ್ ತೆಗೆದುಕೊಳ್ಳಲು ಕಾರ್ತಿಕ್‌ ಅಂಗಡಿಗೆ ಹೋಗಿರುತ್ತಾನೆ. ಈ ವೇಳೆ ಸತ್ಯ ಎಳನೀರು ಕುಡಿದಿರುತ್ತಾಳೆ. ಆದರೆ ಹಣ ಕೊಟ್ಟಿರುವುದಿಲ್ಲ. ಕಾರ್ತಿಕ್‌ ಕಾರ್‌ ಬಳಿ ಬಂದಾಗ ಎಳನೀರಿನವನು ಬಾಯಿಗೆ ಬಂದಂತೆ ಬೈಯುತ್ತಾನೆ. ದುಡ್ಡು ಕೊಡದೇ ಹೋಗುತ್ತಿದ್ದೀಯಾ ಎನ್ನುತ್ತಾನೆ. ಕಾರ್ತಿಕ್‌ಗೆ ಬೈದಿದ್ದನ್ನು ಕೇಳಿಸಿಕೊಂಡ ಸತ್ಯ ಎಳನೀರಿನವನಿಗೆ ಗ್ರಹಚಾರ ಬಿಡಿಸುತ್ತಾಳೆ. ಸೀರೆ ಉಟ್ಟಿದ್ದೀನಿ ಅಂತ ಕನ್‌ಫ್ಯೂಸ್ ಆಗಬೇಡ. ನಿನ್ನ 40 ರೂಪಾಯಿಯಲ್ಲಿ ತಾಜ್‌ ಮಹಲ್‌ ಕಟ್ಟಿಸೋಕೆ ಆಗೋದಿಲ್ಲ. ನಿನ್ನ ಹಣಬೇಕಾಗಿಲ್ಲ. ಅವರು ನನ್ನ ಯಜಮಾನರು ಹುಷಾರ್‌ ಎನ್ನುತ್ತಾಳೆ. ನಂತರ ಆತ ಕಾರ್ತಿಕ್‌ನನ್ನು ಕ್ಷಮೆ ಕೇಳುತ್ತಾನೆ.

More from Filmibeat

English summary
Sathya Tv Serial Written Update On July 2nd Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X