For Quick Alerts
  ALLOW NOTIFICATIONS  
  For Daily Alerts

  ಸತ್ಯ ಏರಿಯಾದಲ್ಲಿ ಜಾತ್ರೆ: ಕಾರ್ತಿಕ್‌ ಗೆ ತಡೆಯಲಾರದ ಸಿಟ್ಟು

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಈಗ ಬೀಗರ ಊಟದ ಸಂಭ್ರಮ ಮನೆ ಮಾಡಿದೆ. ಕಾರ್ತಿಕ್ ಹಾಗೂ ಸತ್ಯ ಇಬ್ಬರೂ ಜಾನಕಿ ಮನೆಗೆ ಹೊರಟಿದ್ದಾರೆ. ಸತ್ಯಗೆ ತವರು ಮನೆಗೆ ಹೋಗುತ್ತಿರುವ ಖುಷಿ ದುಪ್ಪಟ್ಟಾಗಿದೆ. ಆದರೆ, ಕಾರ್ತಿಕ್‌ಗೆ ಸತ್ಯ ಜೊತೆಗೆ ಹೋಗಬೇಕಲ್ಲ ಅನ್ನೋ ತಲೆ ನೋವಿದೆ.

  ದಾರಿ ಮಧ್ಯೆ ಹೋಗುತ್ತಾ ಸತ್ಯ ಹಾಗೂ ಕಾರ್ತಿಕ್‌ ಇಬ್ಬರೂ ಕಿತ್ತಾಡಿಕೊಂಡೇ ಹೋಗುತ್ತಿದ್ದಾರೆ. ಇಬ್ಬರೂ ಬಾಯಿ ಮುಚ್ಚದೆ ಜಗಳವಾಡುತ್ತಿದ್ದಾರೆ. ಕಾರ್ತಿಕ್‌ ಸ್ವೀಟ್ಸ್ ತರಲು ಹೋದಾಗ ಸತ್ಯ ಎಳನೀರು ಕುಡಿದು ಎಡವಟ್ಟು ಮಾಡಿಕೊಂಡಿದ್ದಾಳೆ. ಸತ್ಯ ಮಾಡಿದ ಕೆಲಸಕ್ಕೆ ಕಾರ್ತಿಕ್‌ ಬೈಯಿಸಿಕೊಂಡಿದ್ದಾನೆ.

  ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!

  ಮತ್ತೆ ದಾರಿಯಲ್ಲಿ ಕಾರ್ತಿಕ್‌ ಹಾಗೂ ಸತ್ಯ ಇಬ್ಬರೂ ಕಿತ್ತಾಡಿದ್ದಾರೆ. ಅಂತೂ ಇಂತೂ ಕಿತ್ತಾಡಿಕೊಂಡೇ ಸತ್ಯ ತವರು ಮನೆಯತ್ತ ಹೊರಟಿದ್ದಾಳೆ. ಅಲ್ಲಾದರೂ ಕಾರ್ತಿಕ್‌ ಹಾಗೂ ಸತ್ಯ ಒಬ್ಬರನ್ನೊಬ್ಬರು ಹೊಂದಿಕೊಂಡು ಸುಖ ಸಂಸಾರ ಶುರು ಮಾಡುತ್ತಾರಾ ಎನ್ನುವುದನ್ನು ನೋಡಬೇಕಿದೆ.

  ಸತ್ಯ ಏರಿಯಾ ತುಂಬಾ ಕಟೌಟ್‌ಗಳೇ!

  ಸತ್ಯ ಏರಿಯಾ ತುಂಬಾ ಕಟೌಟ್‌ಗಳೇ!

  ಸತ್ಯ ಹಾಗೂ ಕಾರ್ತಿಕ್‌ ಇಬ್ಬರು ನಡೆದುಕೊಂಡು ದಾರಿಯಲ್ಲಿ ಹೋಗುತ್ತಿದ್ದಾರೆ. ಈ ವೇಳೆ ಸತ್ಯ ಏರಿಯಾ ತುಂಬಾ ಅವರದ್ದೇ ಕಟೌಟ್‌ಗಳನ್ನು ಹಾಕಲಾಗಿದೆ. ನಮ್ ಏರಿಯಾದ ಅಳಿಯನಿಗೆ ಸ್ವಾಗತ ಕೋರಿ ಕಟೌಟ್ ಹಾಕಿದ್ದಾರೆ. ಕಾರ್ತಿಕ್‌ ಮತ್ತು ಸತ್ಯ ಫೋಟೋ ಇರುವ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿ ಸ್ವಾಗತ ಕೋರಿದ್ದಾರೆ. ಇದು ಕಾರ್ತಿಕ್‌ಗೆ ಇಷ್ಟವಾಗುತ್ತಿಲ್ಲ. ಸತ್ಯ ಅಂತೂ ಫುಲ್‌ ಖುಷ್ ಆಗಿದ್ದಾಳೆ. ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಎಂದು ಸಂತಸ ಪಟ್ಟಿದ್ದಾಳೆ.

  ಕಿರುತೆರೆಯಲ್ಲಿ ಒಟ್ಟಿಗೆ ನಟಿಸಿ ಮದುವೆಯಾದ ಜೋಡಿಗಳು ಇವರು!ಕಿರುತೆರೆಯಲ್ಲಿ ಒಟ್ಟಿಗೆ ನಟಿಸಿ ಮದುವೆಯಾದ ಜೋಡಿಗಳು ಇವರು!

  ದಿವ್ಯಾಗಾಗಿ ಬಾಲ ಹೊಸ ಪ್ಲ್ಯಾನ್!

  ದಿವ್ಯಾಗಾಗಿ ಬಾಲ ಹೊಸ ಪ್ಲ್ಯಾನ್!

  ಬಾಲನಿಗೆ ಈಗ ದಿವ್ಯಾಳನ್ನು ಸಂಬಾಳಿಸುವುದೇ ಕಷ್ಟವಾಗಿದೆ. ಒಂದು ಕಡೆ ದಿವ್ಯಾಗೆ ಸಮಾಧಾನ ಹೇಳುವುದು ಕಷ್ಟವಾಗುತ್ತಿದ್ದರೆ, ಮತ್ತೊಂದು ಕಡೆ ಜೇಬು ಪೂರ ಖಾಲಿಯಾಗಿದೆ. ಹಣಕ್ಕಾಗಿ ಏನೇನೋ ಸರ್ಕಸ್‌ ಮಾಡಿದರೂ ಆಗುತ್ತಿಲ್ಲ. ಈಗ ಅಪ್ಪನನ್ನ ಕರೆದುಕೊಂಡು ಬಂದು ನಿನ್ನ ಜೊತೆಗೆ ಮಾತನಾಡಿಸುತ್ತೇನೆ ಎಂದು ಹೇಳಿದ್ದಾನೆ. ಆದರೆ ಒನ್ ಡೇ ಕಲಾವಿದರು ಬೇರೆ ಇವನು ಹಣ ಕೊಟ್ಟಿಲ್ಲ ಎಂದು ಕೈ ಕೊಟ್ಟಿದ್ದಾರೆ. ಆದರೆ, ಬಾಲನ ಮಾತುಗಳನ್ನು ಕದ್ದು ಆಲಿಸಿದ ಸರ್ವರ್‌, ಲಡ್ಡು ಬಂದಂತೆ ಬಂದಿದ್ದಾನೆ. ಬಾಲನನ್ನು ಡೈರೆಕ್ಟರ್‌ ಎಂದುಕೊಂಡ ಸರ್ವರ್‌ ನನಗೆ ಆಕ್ಟಿಂಗ್ ಅಂದರೆ ಇಷ್ಟ. ಒಂದು ಚಾನ್ಸ್ ಕೊಡಿ ಎಂದು ಕೇಳಿದ್ದಾನೆ. ಇದು ಬಾಲನಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗಿದ್ದು, ಈಗ ದಿವ್ಯಾಳನ್ನು ಸಂಬಾಳಿಸಲು ಹೊಸ ಪ್ಲಾನ್ ಮಾಡುತ್ತಿದ್ದಾನೆ.

  ಕಾರ್ತಿಕ್ ಸ್ನೇಹಿತನೂ ಅದ್ಧೂರಿ ಸ್ವಾಗತ!

  ಕಾರ್ತಿಕ್ ಸ್ನೇಹಿತನೂ ಅದ್ಧೂರಿ ಸ್ವಾಗತ!

  ಸತ್ಯನ ಹುಡುಗರು, ಏರಿಯಾ ಮಗಳು ಹಾಗೂ ಅಳಿಯನನ್ನು ಬರ ಮಾಡಿಕೊಳ್ಳಲು ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ. ಕಾರ್ತಿಕ್‌ ಭಾಮೈದುನ ಮಂಜನಿಗೂ ಅದ್ಧೂರಿ ಸ್ವಾಗತ ಕೋರಿದ್ದಾರೆ. ಮಂಜನನ್ನು ಎತ್ತಿಕೊಂಡು ಕುಣಿದು ಕುಪ್ಪಳಿಸಿದ್ದಾರೆ. ತಮಟೆ ಭಾರಿಸಿ ಖುಷಿ ಪಟ್ಟಿದ್ದಾರೆ. ಇದರಿಂದ ಮೊದಲು ಇರಿಟೇಟ್ ಆಗಿ ಭಯಗೊಂಡ ಮಂಜ, ತನಗೂ ಮರಿಯಾದಿ ಕೊಡುವವರು ಇದ್ದಾರಲ್ಲಾ ಎಂದು ಸಂತಸಗೊಂಡಿದ್ದಾನೆ. ಮಂಜ ಕೂಡ ಹುಡುಗರ ಜೊತೆಗೆ ಸೇರಿಕೊಂಡು ಕುಣಿದು ಕುಪ್ಪಳಿಸಿದ್ದಾನೆ.

  ಗಂಡಿನ ಕಡೆಯವರ ಮೇಲೆ ಹರಿಹಾಯ್ದಿದ್ದೇಕೆ ಸ್ನೇಹಾ?ಗಂಡಿನ ಕಡೆಯವರ ಮೇಲೆ ಹರಿಹಾಯ್ದಿದ್ದೇಕೆ ಸ್ನೇಹಾ?

  ನವ ದಂಪತಿಗಳಿಗೆ ಸ್ವಾಗತ ಕೋರಿದ ಏರಿಯಾ ಜನ!

  ನವ ದಂಪತಿಗಳಿಗೆ ಸ್ವಾಗತ ಕೋರಿದ ಏರಿಯಾ ಜನ!

  ಇನ್ನು ಸತ್ಯ ಹಾಗೂ ಕಾರ್ತಿಕಕ್‌ಗೆ ಏರಿಯಾ ಜನ ಕೂಡ ಸ್ವಾಗತ ಕೋರಿದ್ದಾರೆ. ಹಾರ, ಹೂವು ತರಾಯಿಗಳನ್ನು ತಂದು ಜೋಡಿಗಳನ್ನು ಹಾಡಿ ಹೊಗಳಿದ್ದಾರೆ. ಇದು ಕಾರ್ತಿಕ್‌ ಗೆ ಹೆಚ್ಚೆಚ್ಚು ಕಿರಿಕಿರಿ ಉಂಟು ಮಾಡಿದೆ. ಕಾರ್ತಿಕ್‌ ಗೆ ಹಾರ ಹಾಕಿ ಪೇಟಾ ಹಾಕಿದ್ದಾರೆ. ಜೋಡಿಗಳಿಗೆ ದೃಷ್ಟಿ ತೆಗೆದು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ, ಕಾರ್ತಿಕ್‌ ಗೋಸ್ಕರ ಹಾಡು ಕೂಡ ಹೇಳಿದ್ದಾರೆ. ಇದೆಲ್ಲವೂ ಕಾರ್ತಿಕ್‌ ಗೆ ತಡೆದುಕೊಳ್ಳಲಾರದಷ್ಟು ಸಿಟ್ಟು ಬಂದರೂ, ಬೇರೆ ದಾರಿ ಇಲ್ಲದೇ, ಕಂಟ್ರೋಲ್‌ ಮಾಡಿಕೊಂಡಿದ್ದಾನೆ.

  English summary
  Sathya Tv Serial Written Update On July 5th Episode, Big Twist In Sathya Life,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X