ಬಾಲನ ಪ್ಲ್ಯಾನ್ ಸಕ್ಸಸ್: ದಿವ್ಯಾ ಈಗ ಇಂಗು ತಿಂದ ಮಂಗ!

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ದಿವ್ಯಾಗೆ ಇನ್ನೂ ಸತ್ಯದ ಅರಿವಾಗಿಲ್ಲ. ಬಾಲ ಹೇಳಿದ್ದನ್ನೆಲ್ಲಾ ನಂಬಿಕೊಂಡಿದ್ದಾಳೆ. ಆದರೆ, ಐಶಾರಾಮಿ ಜೀವನವನ್ನು ನಡೆಸಲು ಬಯಸುತ್ತಿರುವ ದಿವ್ಯಾ ಬಾಲನ ಬಳಿ ಮನೆಗೆ ಹೋಗೋಣ ಎಂದು ಹಠ ಮಾಡುತ್ತಿದ್ದಾಳೆ.

ಬಾಲ ಈಗ ದಿವ್ಯಾ ಬಳಿ ಸಿಕ್ಕಾಕಿಕೊಂಡಿದ್ದಾನೆ. ಹೇಗೆ ದಿವ್ಯಾಳನ್ನು ಯಾಮಾರಿಸಿ, ತನಗೆ ಸಂಪೂರ್ಣವಾಗಿ ಸ್ವಂತ ಮಾಡಿಕೊಳ್ಳಲು ಹೊಸ ಪ್ಲಾನ್ ಮಾಡಿದ್ದಾನೆ. ಹೋಟೆಲ್‌ ಸರ್ವರ್‌ಗೆ ಆಕ್ಟಿಂಗ್ ಚಾನ್ಸ್ ಅನ್ನು ನೀಡಿದ್ದಾನೆ. ಬಾಲನ ಪ್ಲಾನ್ ಸಕ್ಸಸ್ ಗೊತ್ತಿಲ್ಲ.

ಇತ್ತ ಸತ್ಯ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮನೆಗೆ ಅಳಿಯ ಬಂದಿದ್ದು, ಹುಡುಗರು ಆಟವಾಡಿಸಲು ಮುಂದಾಗಿದ್ದಾರೆ. ಆದರೆ, ಇದೆಲ್ಲವೂ ಕಾರ್ತಿಕ್‌ಗೆ ತೀರಾ ಮುಜುಗರವನ್ನುಂಟು ಮಾಡಿದೆ. ಸತ್ಯ ಕೂಡ ಎಲ್ಲರ ಎದುರಿಗೆ ಏನೂ ಮಾತನಾಡಲಾಗದೇ ಸುಮ್ಮನಾಗಿದ್ದಾಳೆ.

ದಿವ್ಯಾಳನ್ನು ಹೆದರಿಸಿದ ಬಾಲ!

ದಿವ್ಯಾಳನ್ನು ಹೆದರಿಸಿದ ಬಾಲ!

ದಿವ್ಯಾ ಮನೆಗೆ ಹೋಗೋಣ ಎಂದು ಐಶಾರಾಮಿ ಬದುಕಿನೆಡೆಗೆ ದಿವ್ಯಾ ಮನಸ್ಸು ತುಡಿಯುತ್ತಲೇ ಇದೆ. ಬಾಲ ಮನೆಗೆ ಕರೆದುಕೊಂಡು ಹೋಗುತ್ತಿಲ್ಲವಲ್ಲ ಎಂದು ಇರಿಟೇಟ್ ಆಗುತ್ತಿದ್ದಾಳೆ. ಆದರೆ ಬಾಲ ಸುಳ್ಳಿನ ಕಥೆ ಕಟ್ಟಲು ಒಂದಲ್ಲ ಒಂದು ಐಡಿಯಾಗಳನ್ನು ಹುಡುಕುತ್ತಿದ್ದಾನೆ. ಈಗ ತನಗೊಬ್ಬ ಅಕ್ಕ ಇದ್ದಳು. ಅವಳು ಓಡಿ ಹೋಗಿ ಮದುವೆಯಾಗಿದ್ದಕ್ಕೆ ಅಪ್ಪ ಆಕೆಯನ್ನು ಕೊಲೆ ಮಾಡಿದ್ದರು. ಈಗ ನನ್ನ ಬಗ್ಗೆಯೂ ಅದೇ ಭಯ ಎಂದು ಹೇಳಿ ಹೆದರಿಸಿದ್ದಾನೆ.

ಸುಳ್ಳು ಕರೆ ಮಾಡಿದ ಸರ್ವರ್‌!

ಸುಳ್ಳು ಕರೆ ಮಾಡಿದ ಸರ್ವರ್‌!

ಎಲ್ಲಿ ನಿನ್ನನ್ನು ಅಪ್ಪ ಕೊಲೆ ಮಾಡುತ್ತಾರೋ ಎಂದು ಭಯವಾಗುತ್ತಿದೆ ದಿವ್ಯಾ. ಈಗ ಅಪ್ಪನಿಗೆ ಸಮಾಧಾನ ಮಾಡುವುದು ಹೇಗೋ ಗೊತ್ತಾಗುತ್ತಿಲ್ಲ ಎಂದು ತನ್ನ ಆತಂಕವನ್ನು ವ್ಯಕ್ತಪಡಿಸುತ್ತಾನೆ. ಆಗ ದಿವ್ಯಾ ಸ್ವಲ್ಪ ಅನುಮಾನಗೊಳ್ಳುತ್ತಾಳೆ. ಅಷ್ಟರಲ್ಲಿ ಹೋಟೆಲ್‌ ಸರ್ವರ್‌ ಬಾಲನಿಗೆ ಕರೆ ಮಾಡುತ್ತಾನೆ. ಬಾಲನ ತಂದೆಯಂತೆ ಮಾತನಾಡುತ್ತಾನೆ. ಆಗ ದಿವ್ಯಾ ಸ್ಪೀಕರ್‌ ಹಾಕುತ್ತಾಳೆ. ಆ ಕಡೆಯಿಂದ ಸರ್ವರ್‌ ಬಾಲ ಮತ್ತು ದಿವ್ಯಾ ಓಡಿ ಬಂದು ಮದುವೆಯಾಗಿದ್ದು ಮಹಾಪರಾಧ ಎಂಬಂತೆ ಮಾತನಾಡುತ್ತಾನೆ.

ಭಯಗೊಂಡ ದಿವ್ಯಾ!

ಭಯಗೊಂಡ ದಿವ್ಯಾ!

ದಿವ್ಯಾ ನಿಜವಾಗಲೂ ತಮ್ಮ ಮಾವನೇ ಎಂದು ತಿಳಿದು ಮಾತನಾಡುತ್ತಾಳೆ. ಮದುವೆಯಾಗಿ ತಪ್ಪು ಮಾಡಿದ್ದೀವಿ. ನಮ್ಮನ್ನು ಕ್ಷಮಿಸಿ ಬಿಡಿ ಮಾವ. ಇದು ಬಿಟ್ಟರೆ ನಮಗೆ ಬೇರೆ ದಾರಿ ಇರಲಿಲ್ಲ. ಇದರಲ್ಲಿ ಬಾಲನ ತಪ್ಪಿರಲಿಲ್ಲ ಎನ್ನುತ್ತಾಳೆ. ಇತ್ತ ಬಾಲ ಕೂಡ, ನನಗೆ ದಿವ್ಯಾನ ಬಿಟ್ಟಿರೋದಕ್ಕೆ ಆಗೋದಿಲ್ಲ. ಅದಕ್ಕೆ ಹೀಗೆ ಓಡಿ ಹೋಗಿ ಮದುವೆಯಾಗಬೇಕಾಯ್ತು. ನಾನು ದಿವ್ಯಾನ ಬಿಟ್ಟು ಒಂದು ಕ್ಷಣವೂ ಇರುವುದಿಲ್ಲ ಎಂದು ಹೇಳುತ್ತಾನೆ. ಅತ್ತ ಕಡೆಯಿಂದ ಮಾವನಂತೆ ಮಾತನಾಡಿದ ಸರ್ವರ್‌, ಗರಂ ಆಗಿ ಫೋನ್‌ ಕಟ್‌ ಮಾಡುತ್ತಾನೆ.

ಕಾರ್ತಿಕ್‌ಗೆ ಸತ್ಯ ಮನೆಯಲ್ಲಿ ಕಿರಿಕಿರಿ!

ಕಾರ್ತಿಕ್‌ಗೆ ಸತ್ಯ ಮನೆಯಲ್ಲಿ ಕಿರಿಕಿರಿ!

ಇನ್ನು ರಾಜಾಹುಲಿ ಗಲ್ಲಿಗೆ ಬಂದಿದ್ದಾಗಿದೆ. ಜಾತ್ರೆ ಎಂಬಂತೆ ಸಂಭ್ರಮಾಚರಣೆ ಮಾಡುತ್ತಿರುವ ಸತ್ಯ ಹುಡುಗರು, ನವ ಜೋಡಿಗಳಿಗಾಗಿ ವಿಶೇಷವಾಗಿ ಆಟಗಳನ್ನು ಏರ್ಪಡಿಸಿದ್ದಾರೆ. ಇದ್ಯಾವುದೂ ಕಾರ್ತಿಕ್‌ ಹಾಗೂ ಸತ್ಯ ಇಬ್ಬರಿಗೂ ಇಷ್ಟವಿಲ್ಲ. ಆದರೆ, ಇಬ್ಬರಿಗೂ ಬೇರೆ ದಾರಿಯೂ ಇಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಆಟದಲ್ಲಿ ಸತ್ಯ ಗೆಲ್ಲುತ್ತಾಳೆ. ಬಲೂನ್‌ ಹೊಡೆಯುವುದರಲ್ಲೂ ಸತ್ಯ ಗೆಲ್ಲುತ್ತಾಳೆ. ವಡೆ ತಿನ್ನುವ ಆಟ ಬಂದಾಗ ಕಾರ್ತಿಕ್‌ ಸಿಟ್ಟು ಮಾಡಿಕೊಳ್ಳುತ್ತಾನೆ.

More from Filmibeat

English summary
Sathya Tv Serial Written Update On July 8th Episode, Big Twist In Sathya Life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X