ಸೀರೆಗಾಗಿ ಪತಿಯನ್ನು ಪೀಡಿಸಿದ ಸತ್ಯ!
ಸತ್ಯ ಧಾರಾವಾಹಿಯಲ್ಲಿ ಬೆಳಗ್ಗೆ ಲೇಟ್ ಆದರೂ ಮಲಗೇ ಇದ್ದಾಳೆ. ಇನ್ನು ಸತ್ಯ ಏಳುತ್ತಿದ್ದಂತೆ ಜಾನಕಿ ಕರೆ ಮಾಡಿದ್ದಾಳೆ. ಮಗಳ ಧ್ವನಿ ಕೇಳಿ ಮನೆಯಲ್ಲಿ ಎಲ್ಲವೂ ಸರಿ ಹೋಗಿದೆ ಎಂದು ಕೊಳ್ಳುತ್ತಾಳೆ. ಸತ್ಯ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿಸಿ ಹೇಳುತ್ತಾಳೆ.
ಆದರೆ, ಜಾನಕಿ ಸತ್ಯಗೆ ಎಲ್ಲವನ್ನೂ ಅರ್ಥ ಮಾಡಿಕೊಂಡು ಮುಂದೆ ಸಾಗುವಂತೆ ಹೇಳುತ್ತಾಳೆ. ಸೀತಮ್ಮ ಅಂತ ಕರೆಯಬೇಡ. ಅತ್ತೆ ಅಂತ ಕರಿ ಎಂದು ಕೂಡ ಹೇಳಿಕೊಡುತ್ತಾಳೆ. ಅವರಿಗೆ ಹೇಗೆ ಬೇಕೋ ಹಾಗೆಯೇ ನಡೆದುಕೋ ಆಗ ಎಲ್ಲಾ ಸರಿ ಹೋಗುತ್ತೆ ಎಂದು ಹೇಳುತ್ತಾಳೆ.

ಕಾರ್ತಿಕ್‌ನ ಗೋಳು ಹಾಕಿಕೊಳ್ಳುವ ಸತ್ಯ!
ಕಾರ್ತಿಕ್ ಮಲಗಿರುವಾಗ ಬೆಡ್ ಶೀಟ್ ಸುತ್ತಿಕೊಂಡು ಬರುವ ಸತ್ಯ, ಕಾರ್ತಿಕ್‌ನ ಎಬ್ಬಿಸುತ್ತಾಳೆ. ಇಬ್ಬರೂ ಹಾಗೆ ಸ್ವಲ್ಪ ಹೊತ್ತು ಕಚ್ಚಾಡುತ್ತಾರೆ. ನಂತರ ಬೆಡ್ ಶೀಟ್ ತೆಗೆಯುತ್ತಿದ್ದಂತೆ ಕಾರ್ತಿಕ್ ಕಣ್ಣು ಮುಚ್ಚಿಕೊಳ್ಳುತ್ತಾನೆ. ನಂತರ ಕಣ್ಣು ತೆರೆದು ನೋಡಿದರೆ, ಸತ್ಯ ಕಾರ್ತಿಕ್ ಬಟ್ಟೆಯನ್ನು ಧರಿಸಿರುತ್ತಾಳೆ. ಸೀರೆ ತಂದು ಕೊಡು ಎಂದು ಪೀಡಿಸುತ್ತಾಳೆ. ಕಾರ್ತಿಕ್ ನಾನು ತಂದುಕೊಡಲ್ಲ ಎಂದು ಹೇಳಿದ್ದಕ್ಕೆ, ಪ್ಯಾಂಟ್ ಶರ್ಟ್ ನಲ್ಲೇ ಆಚೆ ಬರುತ್ತೀನಿ ಎನ್ನುತ್ತಾಳೆ. ನಂತರ ಕೀರ್ತನಾ ಬಳಿ ಒಂದು ಸೀರೆ ಕೇಳಿ ತಂದುಕೊಡಿ ಎಂದು ಕೇಳುತ್ತಾಳೆ. ಮೊದಲು ಇಲ್ಲ ಎಂದು ವಾದ ಮಾಡುವ ಕಾರ್ತಿಕ್ ಬಳಿಕ ಒಪ್ಪಿಕೊಳ್ಳುತ್ತಾನೆ.

ಸತ್ಯಗಾಗಿ ಕೀರ್ತನಾ ಸೀರೆ ಕೇಳುವ ಕಾರ್ತಿಕ್!
ಕಾರ್ತಿಕ್ ಕೀರ್ತನಾ ರೂಮಿಗೆ ಹೋಗುತ್ತಾನೆ. ಹೋಗಿ ಕೀರ್ತನಾಳನ್ನು ಒಂದು ಸೀರೆ ಕೊಡು ಅಕ್ಕ ಎಂದು ಕೇಳುತ್ತಾನೆ. ಆದರೆ ಕೀರ್ತನಾ ಸೀರೆ ಕೊಡುವುದಕ್ಕೂ ಮೊದಲು ಹಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಆಗ ಕಾರ್ತಿಕ್ ಸತ್ಯ ಗೋಸ್ಕರ, ಅವಳ ಬಳಿ ಯಾವ ಸೀರೆಯೂ ಇಲ್ಲ. ಈಗ ಯಾವ ಅಂಗಡಿಯೂ ತೆಗೆದಿರುವುದಿಲ್ಲ. ಹಾಗಾಗಿ ಒಂದು ಸೀರೆ ಕೊಡು ಎಂದು ಕೇಳುತ್ತಾನೆ. ಒಂದಷ್ಟು ಪ್ರಶ್ನೆಗಳನ್ನು ಕೇಳಿದ ಕೀರ್ತನಾ ನಂತರ ಸೀರೆ ಕೊಡುತ್ತಾಳೆ. ಸೀರೆ ಕೊಡುತ್ತಿದ್ದಂತೆಯೇ ಕಾರ್ತಿಕ್ ತೆಗೆದುಕೊಂಡು ಓಡಿ ಹೋಗುತ್ತಾನೆ.

ಅಮ್ಮನ ಮೇಲೆ ದಿವ್ಯಾಗೆ ಬೇಸರ!
ಜಾನಕಿ ದಿವ್ಯಾಗೆ ಫೋನ್ ಮಾಡುತ್ತಾಳೆ. ಆಗ ದಿವ್ಯಾ ಮಾತನಾಡುವ ಬದಲು, ತೊಂದರೆ ಕೊಡಬೇಡ. ನಾನು ರಾಯಲ್ ಲೈಫ್ ಲೀಡ್ ಮಾಡುತ್ತಿದ್ದೇನೆ ಎಂದು ಹೇಳುತ್ತಾಳೆ. ಯಾಕೆ ಇಂತಹ ಕೆಲಸ ಮಾಡಿದೆ. ಮದುವೆ ಇಷ್ಟವಿರಲಿಲ್ಲ ಎಂದು ಮೊದಲೇ ಹೇಳಬೇಕಿತ್ತು ಎಂದೆಲ್ಲಾ ಹೇಳುತ್ತಾಳೆ. ಅದಕ್ಕೆ ದಿವ್ಯಾ ಸುಮ್ಮನೇ ಶಾಪ ಎಲ್ಲಾ ಹಾಕಬೇಡ. ಅಲ್ಲದೇ, ನನ್ನನ್ನು ಹುಟ್ಟಿಸಿದ್ದು ಬಿಟ್ಟು, ನೀನೇನೂ ಮಾಡಿಲ್ಲ. ನೀನು ತಂದು ಕೊಟ್ಟಿದ್ದನ್ನು ನಾನು ತಿನ್ನಬೇಕಿತ್ತು, ಹಾಕೋಬೇಕಿತ್ತು. ಈಗ ನಾನು ಮಾಡಿದ್ದೆಲ್ಲಾ ಸರಿಯಾಗೇ ಇದೆ ಎಂದು ಹೇಳುತ್ತಾಳೆ. ಈ ಮಾತುಗಳನ್ನೆಲ್ಲಾ ಕೇಳಿದ ಜಾನಕಿ ತುಂಬಾ ನೊಂದುಕೊಳ್ಳುತ್ತಾಳೆ. ದಿವ್ಯಾ ಫೋನ್ ನಂಬರ್ ಚೇಂಜ್ ಮಾಡಬೇಕು ಎಂದು ಯೋಚಿಸುತ್ತಾಳೆ.

ಬಾಲನನ್ನು ಎಬ್ಬಿಸುವ ದಿವ್ಯಾ!
ದಿವ್ಯಾ ಹಸಿವಾಗುತ್ತಿದೆ ಎಂದು ಮಲಗಿರುವ ಬಾಲನನ್ನು ಎಬ್ಬಿಸುತ್ತಾಳೆ. ಆದರೆ ಅವನು ಎದ್ದೇಳುವುದಿಲ್ಲ. ಹಸಿವಾಗಿದೆ ಎಂದು ಹೋಟೆಲ್‌ಗೆ ಕಾಲ್ ಮಾಡುತ್ತಾಳೆ. ಅವರು ಕಾಂಟಿನೆಂಟಲ್ ಅಥವಾ ನಾನ್ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್ ಬೇಕಾ ಎಂದು ಕೇಳುತ್ತಾರೆ. ಆಗ ಅದು ದಿವ್ಯಾಗೆ ಅರ್ಥವಾಗುವುದಿಲ್ಲ. ಕಾಲ್ ಕಟ್ ಮಾಡಿ ಬಿಡುತ್ತಾಳೆ. ಆಗ ಮತ್ತೆ ಬಾಲನನ್ನು ಎಬ್ಬಿಸುತ್ತಾಳೆ. ಅವನು ಬೇಸರ ಮಾಡಿಕೊಂಡು ಎದ್ದು ಹೋಗುತ್ತಾನೆ.


Click it and Unblock the Notifications











