ದೇವರ ಪೂಜೆಗೂ ಯೋಗ್ಯಳಲ್ಲ ಎಂದ ಸೀತ: ಸತ್ಯಗೆ ಕೆಂಡದಂತಾ ಕೋಪ!
ಸತ್ಯ ಧಾರಾವಾಹಿಯಲ್ಲಿ ಬಾಲನಿಗೆ ಈಗ ರೆಸಾರ್ಟ್ ಬಿಲ್ ಕಟ್ಟುವ ಯೋಚನೆಯಾದರೆ, ದಿವ್ಯಾಗೆ ಇನ್ನು ಎರಡು ದಿನ ಇಲ್ಲೇ ಇರುವ ಆಸೆ. ಇತ್ತ ಸತ್ಯಗೆ ಸೀರೆ ಉಡೋಕೆ ಪರದಾಟ, ಸೀತಮ್ಮನನ್ನು ಇಂಪ್ರೆಸ್ ಮಾಡುವ ಒದ್ದಾಟ. ಈಗ ಪ್ರೇಕ್ಷಕರಿಗೆ ಸತ್ಯ ಹೇಗೆ ಆ ಮನೆಗೆ ಹೊಂದಿಕೊಳ್ಳುತ್ತಾಳೆ, ದಿವ್ಯಾಗೆ ಸತ್ಯ ಗೊತ್ತಾದ ಮೇಲೆ ಏನಾಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ.
ಕಾರ್ತಿಕ್ ಸತ್ಯಾಗಾಗಿ ಕೀರ್ತನಾಳಿಂದ ಸೀರೆಯನ್ನು ತೆಗೆದುಕೊಂಡು ಬಂದಿದ್ದಾನೆ. ಇದನ್ನು ನೋಡಿದ ಸುಹಾಸ್ ಅನುಮಾನಗೊಂಡಿದ್ದಾನೆ. ಕಾರ್ತಿಕ್ ಒಂದೇ ರಾತ್ರಿಗೆ ಸತ್ಯಗೆ ತಲೆ ಬಾಗಿದ್ದಾನೆ. ಈಗ ಅವನು ಅಮ್ಮವರ ಗಂಡ ಆಗಿದ್ದಾನೆ ಎಂದು ಸುಹಾಸ್ ಹೇಳುತ್ತಿದ್ದಾನೆ. ಆದರೆ, ಸುಹಾಸ್ ಮಾತುಗಳನ್ನು ಕೇಳಲು ಬಯಸದ ಕೀರ್ತನಾಳ ತಲೆಯೂ ಕೂಡ ಇದೇ ವಿಚಾರವನ್ನೇ ಯೋಚಿಸುತ್ತಿದೆ.
ಇನ್ನು ಕಾರ್ತಿಕ್ ಸತ್ಯಗೆ ಸೀರೆಯನ್ನು ತಂದುಕೊಟ್ಟಿದ್ದಾನೆ. ಸಿಡುಕು ಮುಖದಲ್ಲಿ ಸೀರೆ ಕೊಡುತ್ತಿರುವುದಕ್ಕೆ ಸತ್ಯ ಸ್ವಲ್ಪ ನಗು. ಯಾಕೆ ಹೀಗೆ ಸಿಡುಕುತ್ತೀಯಾ. ಹೀಗೆ ಎಷ್ಟು ದಿನ ಅಂತ ನಾವು ಹೀಗೆ ಜಗಳವಾಡಿಕೊಂಡು ಇರುವುದು ಸ್ವಲ್ಪ ನಗು ನಗುತಾ ಸೀರೆ ಕೊಡಬಾರದಾ? ಯಾವಾಗ ನಾವು ನೆಮ್ಮದಿಯಾಗಿ ಇರೋದು ಎನ್ನುತ್ತಾಳೆ. ಆದರೆ, ಕಾರ್ತಿಕ್ ಇಲ್ಲ ನನ್ನ ನೆಮ್ಮದಿ ಯಾವತ್ತೋ ಸತ್ತೋಯ್ತು. ಇನ್ಯಾವತ್ತು ಸಿಗೋದಿಲ್ಲ ಎಂದು ಕಿರುಚುತ್ತಾನೆ. ಈ ಮಾತಿನಿಂದ ಸತ್ಯ ಕೂಡ ಬೇಸರ ಮಾಡಿಕೊಳ್ಳುತ್ತಾಳೆ.

ಸೀರೆ ಉಟ್ಟುಕೊಳ್ಳಲು ಪರದಾಡಿದ ಸತ್ಯ!
ಸತ್ಯ ಕಾರ್ತಿಕ್ ತಂದುಕೊಟ್ಟ ಸೀರೆಯನ್ನು ಉಟ್ಟುಕೊಳ್ಳಲು ಮುಂದಾಗುತ್ತಾಳೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಸತ್ಯಳಿಂದ ಸೀರೆ ಉಡಲು ಆಗುವುದಿಲ್ಲ. ಯೂಟ್ಯೂಬ್ ವೀಡಿಯೋ ನೋಡಿ ಸೀರೆ ಉಡಲು ಪ್ರಯತ್ನಿಸುತ್ತಾಳೆ. ಸೀರೆಗೆ ನೆರಿಗೆ ತೆಗೆಯಲು ಆಗುವುದಿಲ್ಲ. ಒಂದು ಕಡೆಯಿಂದ ನೆರೆಗೆ ತೆಗೆದರೆ, ಮತ್ತೊಂದು ಕಡೆಯಿಂದ ಬಿಚ್ಚಿಕೊಳ್ಳುತ್ತಿದೆ. ಇದರಿಂದ ಸಾಕಾದ ಸತ್ಯ, ಸೀರೆ ಉಡೋಕೆ ಆಗೋದಿಲ್ಲ ಎಂದು ಅಂದುಕೊಳ್ಳುತ್ತಾಳೆ. ನಂತರ ತಾಳ್ಮೆ ತೆಗೆದುಕೊಂಡ ಸತ್ಯ, ನಿಧಾನವಾಗಿ ಸೀರೆ ಉಡುತ್ತಾಳೆ.

ಬಾಲನಿಗೆ ರೆಸಾರ್ಟ್ ಬಿಲ್ ಯೋಚನೆ!
ದಿವ್ಯಾ ಹಾಗೂ ಬಾಲ ಇಬ್ಬರೂ ರೆಸಾರ್ಟ್ ನಲ್ಲಿ ಆರಾಮವಾಗಿದ್ದಾರೆ. ದಿವ್ಯಾ ಅಂತೂ ತಾನು ಮಾಡಿಕೊಂಡ ಆಯ್ಕೆಯೇ ಸರಿ ಎಂಬ ಆಲೋಚನೆಯಲ್ಲಿ ತೇಲುತ್ತಿದ್ದಾಳೆ. ಆದರೆ ಈಗ ರೂಮಿಗೆ ಬಂದ ಮ್ಯಾನೇಜರ್ ಹಣ ಕಟ್ಟುವಂತೆ ಕೇಳುತ್ತಿದ್ದಾರೆ. ಬಾಲನನ್ನು ಇನ್ನು ಉಳಿದುಕೊಳ್ಳುವುದಾದರೆ, ಅಡ್ವಾನ್ಸ್ ಹಣ ಕಟ್ಟಿ ಇಲ್ಲವೇ ಈಗಲೇ ಪೂರ ಹಣ ಕಟ್ಟಿ ಹೊರಡಿ ಎಂದು ಹೇಳುತ್ತಾರೆ. ಬಾಲ ಒಟ್ಟಿಗೆ ಹಣ ಕಟ್ಟಿದರೆ ಆಗುವುದಿಲ್ಲವಾ ಎಂದು ಕೇಳಿದ್ದಕ್ಕೆ, ಇಲ್ಲ ಆಗುವುದಿಲ್ಲ ನಮ್ಮ ಪಾಲಿಸಿ ಪ್ರಕಾರ ಅಡ್ವಾನ್ಸ್ ಕಟ್ಟಬೇಕು ಎಂದು ಹೇಳುತ್ತಾರೆ. ಇನ್ನು ರೂಮ್ ಚೆಕ್ ಔಟ್ ಮಾಡೋಣ ಎಂದು ಬಾಲ ದಿವ್ಯನಿಗೆ ಹೇಳಿದರೆ, ದಿವ್ಯಾ ಇಲ್ಲ ಇನ್ನೂ ಎರಡು ದಿನ ಇಲ್ಲೇ ಇರೋಣ ಎಂದು ಹೇಳುತ್ತಾಳೆ. ಇದರಿಂದ ಬಾಲ ಪೇಚಿಗೆ ಸಿಲುಕಿದ್ದಾನೆ.

ಮಗಳ ಬಗ್ಗೆ ಜಾನಕಿ ಯೋಚನೆ!
ಜಾನಕಿಗೆ ಮನಸೆಲ್ಲಾ ಸತ್ಯ ಬಳಿಯೇ ಇದೆ. ಆದರೆ, ಗಿರಿಜಮ್ಮ ಮಾತ್ರ ಸ್ವಲ್ಪವೂ ಚಿಂತಿಸುತ್ತಿಲ್ಲ. ಯಾಕೆಂದರೆ, ಗುರುಗಳು ಹೇಳಿದಂತೆ ಸತ್ಯಗೆ ಆ ಮನೆಯಲ್ಲಿ ಎಲ್ಲಾ ಒಳ್ಳೆಯದೇ ಆಗುತ್ತದೆ. ಅಲ್ಲದೇ, ಸತ್ಯಳಿಂದ ಆ ಮನೆಯ ಸಮೃದ್ಧಿ ಆಗುತ್ತದೆ. ಸತ್ಯಗೆ ಆ ಮನೆಯಲ್ಲಿ ಏನೂ ತೊಂದರೆ ಆಗುವುದಿಲ್ಲ. ದಿನ ಕಳೆಯುತ್ತಾ ಸತ್ಯಾನೇ ಎಲ್ಲವನ್ನೂ ಕಲಿಯುತ್ತಾಳೆ. ನನಗೆ ನಂಬಿಕೆ ಇದೆ ಎಂದು ಗಿರಿಜಮ್ಮ ಹೇಳುತ್ತಾಳೆ. ಇದಕ್ಕೆ ಸಾಕ್ಷಿ ಎಂದರೆ, ಗುರುಗಳು ಹೇಳಿದಂತೆಯೇ ಸತ್ಯ, ಕಾರ್ತಿಕ್ ಮದುವೆಯಾಗಿದ್ದು ಎಂದು ಹೇಳುತ್ತಾಳೆ.

ಸತ್ಯಳಿಗೆ ಮತ್ತೆ ವಾರ್ನ್ ಮಾಡಿದ ಸೀತಾ!
ಇನ್ನು ಸತ್ಯ ಸೀತಮ್ಮನನ್ನು ಇಂಪ್ರೆಸ್ ಮಾಡಬೇಕು ಎಂದು ಸೀರೆ ಉಟ್ಟುಕೊಂಡು ಬಂದಿದ್ದಾಳೆ. ಅಲ್ಲದೇ, ದೇವರ ಮನೆಗೆ ಹೋಗಿ ದೀಪ ಹಚ್ಚಲು ಮುಂದಾಗಿದ್ದಾಳೆ. ಆದರೆ, ಸೀತಾ ಸತ್ಯಳನ್ನು ದೇವರ ಮನೆಯಿಂದ ಹೊರಗೆ ಬರುವಂತೆ ಹೇಳಿದ್ದಾಳೆ. ಅಲ್ಲದೇ, ಆಕೆಗೆ ದೇವರ ಮನೆಗೆ ಹೋಗುವ ಮತ್ತು ತಮ್ಮ ಮನೆಯ ಸೊಸೆಯಾಗಲು ಕೂಡ ಅರ್ಹತೆ ಇಲ್ಲ ಎಂದು ಹೇಳುತ್ತಾಳೆ. ಇನ್ಯಾವತ್ತೂ ಸತ್ಯಳನ್ನು ಯಾವತ್ತೂ ದೇವರ ಮನೆಗೆ ಹೋಗ ಬಾರದು ಎಂದು ಖಡಕ್ ಆಗಿ ವಾರ್ನಿಂಗ್ ಕೊಡುತ್ತಾಳೆ.


Click it and Unblock the Notifications











