ದೇವಸ್ಥಾನದಲ್ಲೂ ಸತ್ಯ ಯಡವಟ್ಟು: ರೇಗಾಡಿದ ಸೀತಾ!
ತಿಂಡಿ ತಿನ್ನುವ ವಿಚಾರಕ್ಕಾಗಿ ಸೀತಾಳಿಂದ ಸತ್ಯ ಬೈಯಿಸಿಕೊಳ್ಳುತ್ತಾಳೆ. ಸತ್ಯ ಜೊತೆಗೆ ಊರ್ಮಿಳಾಗೂ ಸೀತಾ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಇದೆಲ್ಲವನ್ನೂ ನೋಡುತ್ತಿದ್ದರೆ, ಸೀತಾ ಸತ್ಯಳನ್ನು ಸೊಸೆ ಎಂದು ಒಪ್ಪಿಕೊಳ್ಳುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇದು ಹೀಗೆ ಮುಂದುವರಿದರೆ, ಹೇಗೆ ಮುಂದಿನ ದಿನಗಳಲ್ಲಿ ಸತ್ಯಗೆ ಕಷ್ಟವಾಗುವುದಂತೂ ಸತ್ಯ.
ಸತ್ಯಗೆ ಸಂಪ್ರದಾಯ, ಶಾಸ್ತ್ರಗಳ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ. ಸಣ್ಣ ಸಣ್ಣ ವಿಚಾರದಲ್ಲೂ ಸತ್ಯ ತಪ್ಪು ಮಾಡುತ್ತಿದ್ದಾಳೆ. ದೇವರಿಗೆ ಕಾಯಿ ಹೊಡೆಯುವುದರಿಂದ ಹಿಡಿದು, ಸೀರೆ ಉಡುವುದೂ ಗೊತ್ತಿಲ್ಲ. ಒಲೆ ಹಚ್ಚುವುದು ಹೇಗೆ ಎಂಬುದನ್ನು ಕೂಡ ಸತ್ಯ ಕಲಿಯಬೇಕಿದೆ. ಆದರೆ ಸೀತಾ, ಸತ್ಯಳನ್ನು ದೇವರ ಮನೆ ಹಾಗೂ ಅಡುಗೆ ಮನೆಗೆ ಬರಬಾರದು ಎಂದು ವಾರ್ನಿಂಗ್ ಕೊಟ್ಟಿದ್ದಾಳೆ. ಹೀಗಿರುವಾಗ ಸತ್ಯ ಎಲ್ಲವನ್ನೂ ಹೇಗೆ ಕಲಿಯುತ್ತಾಳೋ ಗೊತ್ತಿಲ್ಲ.
ಇತ್ತ ಬಾಲ ರೆಸಾರ್ಟ್ ಬಿಲ್ ಕಟ್ಟಲಾಗದೇ ಒದ್ದಾಡುತ್ತಿದ್ದಾನೆ. ಕೀರ್ತನಾ ಅಂತೂ ಇನ್ಯಾವತ್ತೂ ಹಣ ಕೊಡುವುದಿಲ್ಲ ಎಂದು ಹೇಳಿ ಖಡಕ್ ಆಗಿ ಫೋನ್ ಕಾಲ್ ಕಟ್ ಮಾಡಿದ್ದಾಳೆ. ಈಗ ಬಾಲನಿಗೆ ಹಣ ಹೊಂದಿಸುವುದೇ ಕಷ್ಟವಾಗಿ ಬಿಟ್ಟಿದೆ. ಹಣ ಹೊಂದಿಸಲಾಗದೇ ಒದ್ದಾಡುತ್ತಿದ್ದಾನೆ. ಆದರೆ ದಿವ್ಯಾ ಮಾತ್ರ ಜುಮ್ ಅಂತ ರಾಯಲ್ ಲೈಫ್ ಲೀಡ್ ಮಾಡುತ್ತಿದ್ದಾಳೆ.

ದೇವಸ್ಥಾನದಲ್ಲಿ ಕಾರ್ತಿಕ್ ಮನೆಯವರು!
ಕಾರ್ತಿಕ್ ಮನೆಯವರೆಲ್ಲಾ ಮನೆ ದೇವರ ಪೂಜೆಗೆ ಬಂದಿದ್ದಾರೆ. ಮೇಲುಕೋಟೆಯಲ್ಲಿ ಪೂಜೆಗೆ ಬಂದಿದ್ದು, ಕಲ್ಯಾಣಿ ಬಳಿ ಬರುತ್ತಿದ್ದಂತೆಯೇ ಸೀತಾ ನಮಸ್ಕಾರ ಮಾಡಿದಂತೆಯೇ ಮಾಡುತ್ತಾಳೆ. ಸತ್ಯಳ ನಡೆಯನ್ನು ಕಂಡು ಊರ್ಮಿಳಾ ಮನಸೊಳಗೇ ನಗುತ್ತಾಳೆ. ಇನ್ನು ಅಲ್ಲಿ ಸತ್ಯನಾ ನೋಡಿದ ಪರಿಚಿತರು ಮಾತನಾಡಿಸುತ್ತಾರೆ. ಮುದ್ದಾಗಿ ಕಾಣಿಸುತ್ತಿದ್ದೀಯಾ ಎಂದು ಹೇಳಿ ಮಾತನಾಡಿಸುತ್ತಿರುತ್ತಾರೆ. ಅಲ್ಲದೇ, ಸತ್ಯ ಹಾಗೂ ಆಕೆಯ ತಂದೆ ಬಗ್ಗೆ ಗುಣಗಾನ ಮಾಡುತ್ತಾರೆ. ಮದುವೆ ಬಗ್ಗೆ ಕೇಳಿದ ಅವರಿಗೆ ಗಡಿಬಿಡಿಯಲ್ಲಿ ಮದುವೆಯಾಯಿತು ಎಂದು ಹೇಳುತ್ತಾಳೆ. ಹೇಗಾದರೂ ಸರಿ ಚೆನ್ನಾಗಿರು ಎಂದು ದಂಪತಿಗಳಿಗೆ ಹೇಳುತ್ತಾರೆ.

ಸತ್ಯ ಹಾಗೂ ತಂದೆ ಬಗ್ಗೆ ಹೊಗಳಿಕೆ!
ಸತ್ಯ ತಂದೆಯಂತೆ ಯಾವಾಗಲೂ ನ್ಯಾಯಕ್ಕೆ ನಿಲ್ಲುತ್ತಾಳೆ ಎಂದೆಲ್ಲಾ ಮಾತನಾಡುತ್ತಿರುತ್ತಾರೆ. ಸತ್ಯ ನೀನು ಎಲ್ಲೇ ಇರು, ಮೊದಲಿನ ಸತ್ಯ ಆಗೇ ಇರು. ಯಾವುದೇ ಕಾರಣಕ್ಕೂ ಬದಲಾಗಬೇಡ ಎಂದು ಹೇಳುತ್ತಾರೆ. ಇದನ್ನೆಲ್ಲಾ ಕೇಳಿಸಿಕೊಳ್ಳುವ ಸೀತಾ ಹಾಗೂ ಕಾರ್ತಿಕ್ ಮನದೊಳಗೆ ಕೋಪವಿದ್ದರೂ ತೋರಿಸಿಕೊಳ್ಳುವುದಿಲ್ಲ. ಇನ್ನು ದೇವರಿಗೆ ಹಾಕಿದ ಹಾರ ಎಂದು ಹೇಳಿ ಕಾರ್ತಿಕ್ ಹಾಗೂ ಸತ್ಯಗೆ ಹಾರ ಹಾಕಿ ಕಳಿಸುತ್ತಾರೆ. ಇವರಿಬ್ಬರ ಅವತಾರಕ್ಕೆ ಬೇಸರ ವ್ಯಕ್ತಪಡಿಸಿದರೂ, ಪ್ರಸಾದ ಎಂದು ಸುಮ್ಮನಿರುತ್ತಾರೆ.

ರೆಸಾರ್ಟ್‌ನಿಂದ ಓಡಿ ಹೋಗ್ತಾರಾ ದಿವ್ಯಾ-ಬಾಲ!
ಇನ್ನು ದಿವ್ಯಾ ರೆಸಾರ್ಟ್‌ನಲ್ಲಿ ತನಗೆ ಬೇಕಾದ ತಿಂಡಿ, ಜ್ಯೂಸ್ ಎಲ್ಲವನ್ನೂ ತೆಗೆದುಕೊಂಡು ಎಂಜಾಯ್ ಮಾಡುತ್ತಿರುತ್ತಾಳೆ. ಆದರೆ ಇತ್ತ ಬಾಲ ಹಣ ಕಟ್ಟಲು ಒದ್ದಾಡುತ್ತಿರುತ್ತಾನೆ. ಹಾಗಾಗಿ, ತನ್ನ ಸೂಟ್ ಕೇಸ್ ಗೆ ಬಟ್ಟೆಗಳ ಜೊತೆಗೆ ಹೋಟೆಲ್ ನಲ್ಲಿ ಏನೇನು ಸಿಗುತ್ತೋ ಅದನ್ನೆಲ್ಲಾ ಬ್ಯಾಗ್ ನಲ್ಲಿ ತುಂಬಿಕೊಳ್ಳುತ್ತಾನೆ. ದಿಂಬು, ಟವೆಲ್ ಅನ್ನು ಕೂಡ ಬಿಡುವುದಿಲ್ಲ. ಎಲ್ಲವನ್ನು ತೆಗೆದು ತನ್ನ ಬ್ಯಾಗ್‌ನಲ್ಲಿ ತುಂಬಿ ಕೊಂಡು ಪ್ಯಾಕ್ ಮಾಡಿರುತ್ತಾನೆ.

ಜನ್ಮ ನಕ್ಷತ್ರ, ರಾಶಿ ಗೊತ್ತಿಲ್ಲ ಎಂದ ಸತ್ಯ!
ದೇವಸ್ಥಾನಕ್ಕೆ ಬಂದ ಕಾರ್ತಿಕ್ ಕುಟುಂಬದವರನ್ನು ಅರ್ಚಕರು ಮದುವೆ ಹೇಗಾಯ್ತು ಎಂದು ಕೇಳಿದಾಗ, ಸೀತಮ್ಮ ಹೇಗೋ ಆಯ್ತು ಎಂದು ಅಸಡ್ಡೆಯಾಗಿ ಉತ್ತರಿಸುತ್ತಾರೆ. ಸತ್ಯ ಹಾಗೂ ಕಾರ್ತಿಕ್ ಹೆಸರಿನಲ್ಲಿ ಅರ್ಚನೆ ಮಾಡಲು ಹೇಳುತ್ತಾರೆ. ಆಗ ಅರ್ಚಕರು ಹೆಸರು, ಜನ್ಮ ರಾಶಿ, ನಕ್ಷತ್ರವನ್ನು ಕೇಳುತ್ತಾರೆ. ಕಾರ್ತಿಕ್ ಹೇಳುತ್ತಾನೆ. ಆದರೆ, ಸತ್ಯ ತನಗೆ ಗೊತ್ತಿಲ್ಲ ಎಂದು ಉತ್ತರ ಕೊಡುತ್ತಾಳೆ. ಇದರಿಂದ ಸೀತಾ ಕೋಪಕ್ಕೆ ಮತ್ತೆ ಗುರಿಯಾಗಿದ್ದಾಳೆ.


Click it and Unblock the Notifications











