ಸತ್ಯ: ಅಮೂಲ್ ಬೇಬಿ ಹಾಗೂ ರೌಡಿ ಬೇಬಿ ಕಿತ್ತಾಟ ನಿಲ್ಲೋದ್ಯಾವಾಗ?
ಸತ್ಯ ಧಾರಾವಾಹಿಯಲ್ಲಿ ಅಮೂಲ್ ಬೇಬಿ ಹಾಗೂ ರೌಡಿ ಬೇಬಿ ಇಬ್ಬರೂ ರೂಮಿನಲ್ಲಿ ಜಗಳವಾಡುತ್ತಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ರಾಮಚಂದ್ರ ರಾಯರು ಮನೆಗೆ ಬಂದಿದ್ದಾರೆ. ಇದರಿಂದ ಸತ್ಯ ಹಾಗೂ ಕಾರ್ತಿಕ್ ಇಬ್ಬರೂ ಶಾಕ್ ಆಗಿದ್ದಾರೆ.
ಇನ್ನು ರಾಮಚಂದ್ರ ರಾಯರು ಹೇಳಿದ್ದು ಕೇಳಿ ಕಾರ್ತಿಕ್ ಹಾಗೂ ಸತ್ಯ ಡಬಲ್ ಶಾಕ್ ಆಗಿದ್ದಾರೆ. ರಾಮಚಂದ್ರ ರಾಯರು ಈ ಜಗಳವೆಲ್ಲಾ ಇನ್ನು ಸ್ವಲ್ಪ ಹೊತ್ತು ಮಾತ್ರ. ನಂತರ ಎಲ್ಲವೂ ಸರಿ ಹೋಗುತ್ತದೆ ಎಂದು ನಾಚಿಕೆಯಿಂದ ಹೇಳಿದ್ದಾರೆ.
ಇತ್ತ ಅಡುಗೆ ಮನೆಯಲ್ಲಿ ಸತ್ಯ ಕೈಯಲ್ಲಿ ಹಾಲು ಉಕ್ಕಿಸುವ ಶಾಸ್ತ್ರವನ್ನು ಮಾಡಿಸಲಾಗುತ್ತಿದೆ. ಆದರೆ ಸತ್ಯಗೆ ಅಡುಗೆಯ ಮನೆಯಲ್ಲಿ ಮಾಡುವ ಯಾವ ಕೆಲಸವೂ ಗೊತ್ತಿಲ್ಲ. ಹೀಗಾಗಿ ಸತ್ಯ ಅಡುಗೆ ಮನೆಯಲ್ಲಿ ಎಡವಟ್ಟು ಒಂದನ್ನು ಮಾಡಿದ್ದಾಳೆ.

ಸತ್ಯ ಕೈಯಲ್ಲಿ ಶಾಸ್ತ್ರ ಮಾಡಿಸುತ್ತಿರುವ ಊರ್ಮಿಳಾ!
ಅಡುಗೆ ಮನೆಯಲ್ಲಿ ಸತ್ಯ ಹಾಲು ಉಕ್ಕಿಸುವ ಶಾಸ್ತ್ರ ಮಾಡಲು ಬಂದಿದ್ದಾಳೆ. ಊರ್ಮಿಳಾ ಸತ್ಯಳಿಗೆ ಹಾಲು ಉಕ್ಕಿಸುವಾಗ ಸೀತಾಳನ್ನು ಕರೆದಿದ್ದಾಳೆ. ಆದರೆ ಸೀತಾ ಇದಕ್ಕೆ ಬರಲು ಒಪ್ಪುವುದಿಲ್ಲ. ನಂತರ ಸತ್ಯ ಏನು ಮಾಡಬೇಕು ಎಂದು ಕೇಳಿದ್ದಾಳೆ. ಇದಕ್ಕೆ ಊರ್ಮಿಳಾ ಪಾತ್ರೆಗೆ ಹಾಲು ಹಾಕಿ ಉಕ್ಕಿಸುವುದು ಅಷ್ಟೇ ಅಲ್ವಾ ಅಕ್ಕ ಎಂದು ಸೀತಾಳನ್ನು ಕೇಳುವ ನೆಪದಲ್ಲಿ ಸತ್ಯಗೆ ಹೇಳಿಕೊಟ್ಟಿದ್ದಾಳೆ. ಈ ಬಗ್ಗೆ ತಿಳಿದ ಸೀತಾ, ಸಾಕು ಅವಳಿಗೆ ಹೇಳಿಕೊಟ್ಟಿದ್ದು ಎನ್ನುತ್ತಾಳೆ. ಇನ್ನು ಒಲೆಗೆ ಪೂಜೆ ಮಾಡುವುದನ್ನು ಸತ್ಯಗೆ ಊರ್ಮಿಳಾನೇ ಹೇಳಿಕೊಡುವುದಿಲ್ಲ. ಸೀತಾ ಊರ್ಮಿಳಾಗೆ ಬೈದು ಹೇಳುತ್ತಾಳೆ. ಆಗ ಊರ್ಮಿಳಾ ಒಲೆಗೆ ರಂಗೋಲಿ ಬಿಟ್ಟು ಪೂಜೆ ಮಾಡುವಂತೆ ಸತ್ಯಗೆ ಹೇಳುತ್ತಾಳೆ.

ಹಾಲಿನ ಪ್ಯಾಕೆಟ್ ಎಂಜಲು ಮಾಡಿದ ಸತ್ಯ!
ಸತ್ಯ ಒಲೆಗೆ ಪೂಜೆ ಮಾಡಿ ಪಾತ್ರೆ ಇಡುತ್ತಾಳೆ. ಹಾಲಿನ ಪ್ಯಾಕೆಟ್ ಅನ್ನು ಸತ್ಯ ಬಾಯಿಯಿಂದ ಕಚ್ಚುತ್ತಾಳೆ. ಇದನ್ನು ನೋಡಿದ ಸೀತಾ ದೇವರಿಗೆ ನೈವೇದ್ಯ ಮಾಡುವ ಹಾಲನ್ನು ಎಂಜಲು ಮಾಡಿದ್ಯಲ್ಲ ಎಂದು ಬೈಯುತ್ತಾಳೆ. ಬಳಿಕ ಬೇರೆ ಹಾಲನ್ನು ತಂದು ಪಾತ್ರೆಗೆ ಹಾಕಲಾಗುತ್ತದೆ. ಪಾತ್ರೆಗೆ ಹಾಲು ಹಾಕುವಾಗ ಸತ್ಯ ಗಾಬರಿಯಿಂದ ಚೆಲ್ಲುತ್ತಾಳೆ. ಇದಕ್ಕೆ ಕೀರ್ತನಾ ಆಡಿಕೊಳ್ಳುತ್ತಾಳೆ. ಆಗ ಸತ್ಯ ಕೋಪದಲ್ಲಿ ಕೀರ್ತನಾಳನ್ನು ನೋಡುತ್ತಾಳೆ. ಆದರೆ ಊರ್ಮಿಳಾ ಕೋಪ ಮಾಡಿಕೊಳ್ಳಬೇಡ ಎಂದು ಸನ್ನೆ ಮಾಡುತ್ತಾಳೆ.

ಕೈ ಸುಟ್ಟುಕೊಂಡು ಹಾಲು ಚೆಲ್ಲಿದ ಸತ್ಯ!
ಸತ್ಯ ಒಲೆ ಹಚ್ಚಲು ಮ್ಯಾಚ್ ಬಾಕ್ಸ್ ಅನ್ನು ಕೇಳುತ್ತಾಳೆ. ಆಗ ಊರ್ಮಿಳಾ ಲೈಟರ್ ಅನ್ನು ತೆಗೆದುಕೊಳ್ಳಲು ಹೇಳುತ್ತಾಳೆ. ಕಿಚನ್ ಡ್ರಾ ಓಪನ್ ಮಾಡುವಾಗ ಜೋರಾಗಿ ಎಳೆಯುತ್ತಾಳೆ. ಅದಕ್ಕೆ ಸೀತಾ ಮತ್ತೆ ಬೈಯುತ್ತಾಳೆ. ಎಲ್ಲಾ ಒಂದೇ ದಿನ ಹಾಳು ಮಾಡು. ಎಷ್ಟೇ ಆದರೂ ಗ್ಯಾರೇಜ್‌ನಲ್ಲಿ ಕೆಲಸ ಮಾಡಿದವಳು ಅಲ್ವಾ ಎಂದು ನೋವಾಗುವ ಹಾಗೆ ಮಾತನಾಡುತ್ತಾಳೆ. ಒಲೆ ಹಚ್ಚಿದ ಸತ್ಯ ಹಾಲನ್ನು ಉಕ್ಕಿಸುತ್ತಾಳೆ. ಅದನ್ನು ದೇವರ ಮನೆಯಲ್ಲಿ ಇಟ್ಟು ನಮಸ್ಕರಿಸಿ ಬರಲು ಹೇಳಿದಾಗ ಸತ್ಯ ಗೊತ್ತಾಗದೇ ಬರಿಗೈಯಲ್ಲಿ ಹಾಲಿನ ಪಾತ್ರೆಯನ್ನು ಎತ್ತುತ್ತಾಳೆ. ಆಗ ಸತ್ಯ ಕೈ ಬಿಸಿಯಾಗಿ ಹಾಲನ್ನು ಚೆಲ್ಲುತ್ತಾಳೆ.

ಸತ್ಯ ಮೇಲೆ ಕೂಗಾಡಿದ ಕಾರ್ತಿಕ್!
ಆಗ ಎಲ್ಲರೂ ಸೇರಿ ಸತ್ಯಳನ್ನು ಬೈಯುತ್ತಾರೆ. ಸತ್ಯ ಬಿಸಿ ಇತ್ತು ಎಂದು ಹೇಳುವುದನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಸತ್ಯ ದಾರಿ ಇಲ್ಲದೇ ಜೋರಾಗಿ ಬಿಸಿ ಆಯ್ತು ಎನ್ನುತ್ತಾಳೆ. ಆಗ ಅಲ್ಲೇ ಇದ್ದ ಕಾರ್ತಿಕ್ ಸತ್ಯಗೆ ಬೈಯುತ್ತಾನೆ. ಇದು ನಮ್ಮ ಮನೆ. ಇವರು ನನ್ನ ತಾಯಿ. ವಾಯ್ಸ್ ರೈಸ್ ಮಾಡಬೇಡ ಇಲ್ಲಿ ನಾವು ಹೇಳಿದಂತೆ ನಡೆಯಬೇಕೆ ಹೊರತು. ನಿನ್ನ ಇಷ್ಟದಂತಲ್ಲ. ಬೇಕಿದ್ದರೆ ಇರು. ಇಲ್ಲದಿದ್ದರೆ ಈಗಲೇ ಹೋಗುತ್ತಿರು ಎಂದು ಹೇಳುತ್ತಾನೆ. ಸತ್ಯ ಅಳಲು ಶುರು ಮಾಡುತ್ತಾಳೆ.


Click it and Unblock the Notifications











