ಸತ್ಯಳ ಬಗ್ಗೆ ಸತ್ಯ ಹೇಳಿದ ಗುರುಗಳು!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಗುರುಗಳು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಅದೂ ಕೂಡ ಮೇಲು ಕೋಟೆಯಲ್ಲಿ ಕಾಣಿಸಿಕೊಂಡಿದ್ದು, ಸತ್ಯಗೆ ಆಶೀರ್ವಾದ ಮಾಡಿದ್ದಾರೆ. ಸತ್ಯ ತನ್ನ ಬದುಕಿನಲ್ಲಿ ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದ್ದಾರೆ. ಇದರಿಂದ ಸತ್ಯ ಶಾಕ್ ಆಗಿದ್ದಾಳೆ. ಇದೇ ವಿಚಾರವನ್ನು ಸೀತಾ ಬಳಿ ಹೇಳಿದ್ದಾಳೆ.

ಆದರೆ, ಸತ್ಯ ಮಾತನ್ನು ನಂಬದ ಸೀತಾ ವ್ಯಂಗ್ಯವಾಡಿದ್ದು, ಊರ್ಮಿಳಾ ಅವರನ್ನು ತೋರಿಸು ನಾವೂ ಆಶೀರ್ವಾದ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆಗ ಸತ್ಯ ಗುರುಗಳ ಬಳಿ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಮಂಜು, ಸೀತಾ, ಊರ್ಮಿಳಾ ಹಾಗೂ ಕಾರ್ತಿಕ್ ತಮ್ಮ ಗುರುಗಳು ಇವರು ಎಂದು ನೋಡಿ ಹೇಳಿದ್ದಾರೆ.

ನಿಮ್ಮ ಸೊಸೆ ನಿಮ್ಮ ಮನೆಯ ದೀಪ. ದೀಪ ಸದಾ ನಂದಾದೀಪವಾಗಿ ಬೆಳಗುವಂತೆ ನೀವು ನೋಡಿಕೊಳ್ಳಬೇಕು. ಆಗ ನಿಮ್ಮ ಮನೆಗೆ ಒಳ್ಳೆಯದಾಗುತ್ತೆ ಎಂದು ಹೇಳುತ್ತಾರೆ. ಆದರೆ ಸೀತಾ ಇದಕ್ಕೆ ಒಪ್ಪದೆ, ಇಲ್ಲ ಇವಳು ಮನೆಗೆ ಬಂದಾಗಿನಿಂದಲೂ ಮನೆಯಲ್ಲಿ ಯಾರಿಗೂ ನೆಮ್ಮದಿಯಿಲ್ಲ ಎನ್ನುತ್ತಾಳೆ.

ಸತ್ಯ ಗುಣಗಳನ್ನು ಹೊಗಳಿದ ಗುರುಗಳು

ಸತ್ಯ ಗುಣಗಳನ್ನು ಹೊಗಳಿದ ಗುರುಗಳು

ಅಷ್ಟಕ್ಕೂ ಮನೆಗೆ ಬರುವ ಸೊಸೆ ಮನೆಯ ಮಹಾಲಕ್ಷ್ಮೀ ಆಗಿರಬೇಕು. ಆದರೆ ಇವಳು ಕಾಳಿ ಎಂದು ಹೇಳುತ್ತಾರೆ. ಆಗ ಗುರುಗಳು, ಯಾಕೆ ಕಾಳಿ ದೇವಿ ಅಲ್ಲವೇ. ದೇವಿಗೆ ಯಾವಾಗ ಕಾಳಿಯಾಗಿರಬೇಕು. ಯಾವಾಗ ತಾಯಿಯಾಗಬೇಕು ಎಂಬುದು ಗೊತ್ತಿರುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಊರ್ಮಿಳಾ ಖುಷಿ ಪಟ್ಟು. ಇಷ್ಟು ಹೇಳಿದಿರಲ್ಲ ಅಷ್ಟೇ ಸಾಕು ಎಂದು ಹೇಳುತ್ತಾರೆ.

ಕಾರ್ತಿಕ್‌ಗೆ ಸತ್ಯ ವಿವರಿಸಿದ ಗುರುಗಳು

ಕಾರ್ತಿಕ್‌ಗೆ ಸತ್ಯ ವಿವರಿಸಿದ ಗುರುಗಳು

ಕಾರ್ತಿಕ್‌ನನ್ನು ಈ ಮದುವೆಯ ಬಗ್ಗೆ ಆತನ ಅಭಿಪ್ರಾಯವನ್ನು ಕೇಳುತ್ತಾರೆ. ಕಾರ್ತಿಕ್ ಬೇಸರ ಮಾಡಿಕೊಳ್ಳುತ್ತಾನೆ. ಅದಕ್ಕೆ ಗುರುಗಳು ನಿನ್ನ ಹಣೆಯಲ್ಲಿ ಆಕೆಯ ಹೆಸರನ್ನೇ ಬರೆದಿದೆ ಎಂದು ಹೇಳುತ್ತಾರೆ. ಯಾಕೆ ಅವಳು ನಿನ್ನ ರೀತಿ ಇಲ್ಲ ಅಂತಾನಾ. ನೀನೇ ಅವಳಂತೆ ಇದ್ದು ಬಿಡು ಎಂದು ಹೇಳುತ್ತಾರೆ. ಅವಳ ಜೊತೆಗೆ ಸ್ನೇಹದಿಂದ ಇರು. ಇವತ್ತಲ್ಲ ನಾಳೆ ನೀನು ಅವಳನ್ನು ಒಪ್ಪಿಕೊಳ್ಳಲೇಬೇಕು. ಈ ಜನ್ಮಕ್ಕೆ ಅವಳೇ ನಿನ್ನ ಹೆಂಡತಿ. ಅಷ್ಟೇ ಅಲ್ಲದೇ, ನಿನಗೆ ದಾರಿ ತೋರಿಸುವ ಗುರುವಾಗಿ ಬಂದಿದ್ದಾಳೆ. ನಿನ್ನ ಹೆಸರನ್ನು ಹಾಗೂ ಅವಳಿಂದ ನಿಮ್ಮ ಮನೆ ಹೆಸರು ತುಂಬಾ ಎತ್ತರಕ್ಕೆ ಹೋಗುತ್ತದೆ. ನೀನು ಅದೃಷ್ಟವಂತ ಅದಕ್ಕೆ ನೀನು ಆಕೆಯನ್ನು ಹೆಂಡತಿಯಾಗಿ ಪಡೆದಿದ್ದೀಯಾ ಎಂದು ಹೇಳುತ್ತಾರೆ.

ಸೀತಾಗೆ ಬುದ್ಧಿ ಹೇಳಿದ ಗುರುಗಳು!

ಸೀತಾಗೆ ಬುದ್ಧಿ ಹೇಳಿದ ಗುರುಗಳು!

ಇನ್ನು ಸೀತಾ, ನಾವೊಂದುಕೊಂಡ ಹುಡುಗಿ ನಮ್ಮ ಮನೆಗೆ ಸೊಸೆಯಾಗಿ ಬರಲಿಲ್ಲ ಅನ್ನೋ ಬೇಸರವಿದೆ. ಇಂತಹವಳು ನಮ್ಮ ಮನೆಗೆ ಬಂದಳಲ್ಲ ಅನ್ನೋ ಸಂಕಟ. ನಾವು ಇಷ್ಟು ಪೂಜೆ ಪುನಸ್ಕಾರವನ್ನು ಮಾಡಿದರೂ ಆ ದೇವರು ನಮ್ಮ ಕೈ ಹಿಡಿಯಲಿಲ್ಲವಲ್ಲ ಅದೇ ಬೇಸರ ಎಂದು ಹೇಳುತ್ತಾರೆ. ಇದಕ್ಕೆ ಗುರುಗಳು, ಆ ದೇವರ ಪೂಜೆ ಮಾಡುವ ನೀವು ಆ ದೇವರ ಈ ನಿರ್ಧಾರವನ್ನು ನಂಬಿ. ಮುಂದೆ ನಡೆಯುವ ಯುದ್ಧಕ್ಕೆ ಈಗಲೇ ತಯಾರಿ ನಡೆಯುತ್ತಿದೆ ಎಂದು ಹೇಳುತ್ತಾರೆ. ಯಾರನ್ನು ನೀವು ಇಂದು ತಿರಸ್ಕಾರ ಮಾಡುತ್ತಿದ್ದೀರೋ, ನಾಳೆ ಅವಳನ್ನೇ ನೀವು ಪುರಸ್ಕಾರ ಮಾಡುತ್ತೀರಾ. ಆ ದಿನಗಳು ಬಂದೇ ಬರುತ್ತದೆ ಎಂದು ಹೇಳಿ ಕಳುಹಿಸುತ್ತಾರೆ.

ಸತ್ಯ ವಿರುದ್ಧ ಕೀರ್ತನಾ ಪ್ಲ್ಯಾನ್!

ಸತ್ಯ ವಿರುದ್ಧ ಕೀರ್ತನಾ ಪ್ಲ್ಯಾನ್!

ಇತ್ತ ಸತ್ಯ ಮಾಡುವ ಪ್ರಸಾದಕ್ಕೆ ಏನಾದರೂ ಎಡವಟ್ಟು ಮಾಡಬೇಕು ಎಂದು ಕೀರ್ತನಾ ಲೆಕ್ಕಾಚಾರ ಹಾಕಿಕೊಂಡಿದ್ದಾಳೆ. ಇದರಿಂದ ಸತ್ಯ ಮಾಡುವ ಪೊಂಗಲ್ ಅನ್ನು ದೇವರಿಗೆ ನೈವೇದ್ಯ ಮಾಡಲು ಆಗುವುದಿಲ್ಲ. ಆಗ ಅಮ್ಮನಿಗೆ ಕೋಪ ಬರುತ್ತದೆ. ಶಾಸ್ತ್ರ ಸಂಪ್ರದಾಯವನ್ನು ನಂಬುವ ಅಮ್ಮ ಸತ್ಯ ಮೇಲೆ ಇನ್ನಷ್ಟು ಕೋಪಗೊಳ್ಳುತ್ತಾಳೆ ಎಂದು ಹೇಳುತ್ತಾಳೆ.

More from Filmibeat

English summary
Sathya Tv Serial Written Update On May 20th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X